Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕವನಗಳ ಗೀಳು

ಕವನಗಳ ಬರೆಯಲು ಮನಸ್ಸಿಲ್ಲ ಇಂದು..
ಬರೆಯದಿದ್ದರೂ ಸಮಾಧಾನವಾಗದು ನನಗದು..
ಹುಚ್ಚು ಕನಸುಗಳ ಬೆನ್ನೇರಿದ್ದೆ ಅಂದು..
ವಾಸ್ತವದ ಬದುಕೇ ಶಾಶ್ವತವಾಗಿ ಉಳಿಯೋದು..

ತೊರೆದು ಸಾಗಲು ನೋವುಗಳಿವೆ..
ಬರಡಾದ ಬದುಕಲಿ ಬರಿ ನೆನಪಿನ ಸಾಲುಗಳೆ...
ಸುಮ್ಮನಿದ್ದರರೂ ಬಿಡದು ಕವನಗಳ ಗೀಳು ನನ್ನ..
ತೋಚಿದ್ದು ಗೀಚಿದರೆ ಅದೇ ಎಷ್ಟೋ ಸಮಾಧಾನ..


ತನುಮನಸು✍️

- Tanuja.K

30 Apr 2023, 11:12 pm

ನನ್ನವಳೇ.....

ಹೇ ನನ್ನವಳೇ ನನ್ನಲ್ಲೇ ಉಳಿದವಳೆ
ನನ್ನ ಎದೆಯಾಳಕೆ ಇಳಿದು ಕವಿತೆಯಾದವಳೆ
ಪದಗಳ ಬಿಡಸಿ ಭಾವವ ಹರಿಸಿ
ಪ್ರೇಮದ ಪದಮಾಲೆಯಾದವಳೆ
ನನ್ನಲ್ಲಿ ಹೊಸತನದ ಹುರುಪನ್ನು ತಂದವಳೆ
ದಹಿಕ ಸ್ವರ್ಶಕಿಂತ ಮಣ ಸ್ವರ್ಶ ಬೇರತವಳೆ
ನೀನು ನನ್ನ ಜೊತೆ ಇರದಿದ್ದರೂ ಈ ಕವಿತೆಯಲ್ಲಿ
ಜೀವಂತವಾಗಿ ಇರುಸುವೇನು
ನೀನು ಮೂಡಿಸಿದ ಈ ಪ್ರೇಮಭಾವ
ನನ್ನಲ್ಲಿ ಶಾಶ್ವತವಾಗಿದೇ
ಸಂಭ್ರಮಿಸಲು ಇನ್ನೇನು ಬೇಕು...
ಎಮ್.ಎಸ್.ಭೋವಿ...✍️

- mani_s_bhovi

29 Apr 2023, 10:49 pm

ಕವಿತೇ....

"ಕವಿತೆಯ ಸಾಲು ನಿಂತಿದೆ ಏಕೋ...?
ಕಾದಿದೆ ನಿನ್ನಯ ಅನುಮತಿ ಕೋರಿ..!
ಗೀಚುವ ನನ್ನನೇ ಗಾಳಿಗೆ ತೂರಿ..!!"
"ಭಾವದ_ಗೀತೆ ಕುರಿತಿದೆ ನಿನ್ನ !
ತವಕದಿ ಕಾದಿದೆ ಸೇರಲು ನಿನ್ನ !
ಬಯಕೆಯ ಚಿಗುರಿಗೆ ಬೆಳಕದು ನೀನೆ !
ಬಯಸುವ ಬಯಕೆಯು ಆಗಿಹೆ ನೀನೆ !
ಒಲವ ರಾಗವೇ ನೀ ಇಲ್ಲದೇ...
ಕವಿತೆಯ ಸಾಲು ನಿಂತಿದೆ ಏಕೋ ?!"
ಎಮ್.ಎಸ್.ಭೋವಿ...✍️

- mani_s_bhovi

20 Apr 2023, 09:35 pm

ಮುಕ್ತಿಯ ಮಂತನ,,,,,

ಮಸಣದ ಹಾದಿಯುದ್ದುಕು ಕಣ್ಣಿರ
ಹನಿಗಳ ಮೌನ ಮಾತಿನ ನರ್ತನ "
ಆದರೆ ಚೇಲ್ಲುತಿದ್ದ ಅ ಕಂಗಳ
ನಿರು ಬಿಟ್ಟು ಹೋದ ನೋವಿಗೊ
ಖುಷಿಗೊ ಅದೊಂದು ಕಾಣದ
ಮನಸುಗಳ ಮರ್ಮ ಕಥನ,,
ಹಸಿವಿನಾಟಕೆ ಆಯ್ಕೆಯ
ಬಲದಲ್ಲಿ ಕಾಯಕ ಚಿಂತನ!
ಕಪಟ, ಮೋಸ, ಪ್ರಮಾಣಿಕತೆ,
ಆಯ್ಕೆಗಳ ಅನುಸಾರ ಕಷ್ಟ ನಷ್ಟಗಳಡಿ
ಹಗಲಿರುಳ ಜೀವನ
ಯೂವುದಕು ಅವನಿದಿಲ್ಲ ಮಾಪನ....
ಅವನ ನಿಲುವು ಓಂದೆ ಆಯ್ಕೆಗಳ ಮೇಲೆ
ಅವನತಿಯೆಂಬ ಮುಕ್ತಿಯ ಮಂತನ!!
✒ @ ವಿಶ್ವ ರಾಜ್....


- Vishwa Raj ನಾ ನಿನ್ನಾ ಮನಸು

19 Apr 2023, 12:27 am

ಹುಟ್ಟು ಹಬ್ಬದ ಶುಭಾಶಯಗಳು

"ಯೋಗಿತಾ....
ಅವಳ ಪಾಲಿರಲಿ ಎಂದಿಗೂ.. ಹರುಷ !
ನಗುವಿನಲೆ ತುಂಬಿರಲಿ.. ಪೂರ_ಹರುಷ !
ದೂರ ಇದ್ದರು..
ಎಂದಿಗೂ ಹತ್ತಿರದವಳು !
ಇಂದಿಗೂ_ಎಂದಿಗೂ..
ನನ್ನ ಆತ್ಮಿಯ ಗೆಳತಿ ಅವಳು !
ನಿನಗೆ ಸದಾ ಇರುವುದೆ..
ನಮ್ಮ ಶುಭಾಶಯಗಳು !
ಸದಾ ಬಯಸುವೆವು..
ನಿನ್ನಂತೆಯೆ ಇರಲಿ ಖುಷಿಯ ಹೊನಲು !!"
ಎಮ್.ಎಸ್.ಭೋವಿ...✍️

- mani_s_bhovi

16 Apr 2023, 11:43 pm

ನೀನೆಂದರೆ...

ನೀನೆಂದರೆ ಆಸೆಯಲ್ಲ..
ಆಕರ್ಷಣೆಯೂ ಅಲ್ಲ
ನೀನೆಂದರೆ ಮೋಹವಲ್ಲ..
ವ್ಯಾಮೋಹವೂ ಇಲ್ಲ
ನೀನಂದರೆ ಮನದಲ್ಲಿ ಮೂಡಿದ ಮಧುರ ಭಾವನೆ
ಆತ್ಮದಲ್ಲಿ ಒಂದಾದ ದಿವ್ಯ ಕಲ್ಪನೆ
ಪಡೆಯುವ ಹಂಬಲವಿಲ್ಲ..
ಕಳೆದು ಕೊಳ್ಳುವ ಭಯವಿಲ್ಲ
ಈ ನನ್ನ ಆರಾಧನೆ ನಿನಗಲ್ಲದೇ ಇನ್ಯಾರಿಗೂ ಇಲ್ಲ
ಎಮ್.ಎಸ್.ಭೋವಿ...✍️
.
..

- mani_s_bhovi

15 Apr 2023, 08:52 pm

ನೊಂದು ಬೆಂದ ಜೀವಕೆ....

ಕಸಿದುಕೊಳ್ಳುವುದಾದರೆ ಏಕೆ
ಕೊಟ್ಟೆ ಭಗವಂತ...?
ಅತೀದೊಡ್ಡ ದುರಂತ ನೀನು....
ನಗುವನೆಲ್ಲಾ ಅಳಿಸಿ ಹಾಕಿ
ನೋವ ಉಳಿಸಿದೆ ಜೀವಂತ.
ಪ್ರತಿಬಿಂಬ ಕಾಣದ ಕನ್ನಡಿ ನೀನು....
ಎಲ್ಲದಿಕ್ಕು ನೀನೇ ಹೊಣೆ.
ಆದರೆ ನಮ್ಮ ಹೆಸರಾಕೆ...?
ತುಸು ತೋರಿಸುವುದ ಕಲಿ ಕರುಣೆ.
ನೊಂದು ಬೆಂದ ಜೀವಕೆ....
ಎಮ್.ಎಸ್.ಭೋವಿ...✍️

- mani_s_bhovi

13 Apr 2023, 11:25 pm

ಕೊಂಚ ಪ್ರೀತಿಯ ನೀಡುವೆಯಾ...?

ಬರೆದರು ಮುಗಿಯದ ನೀನೊಂದು ಅಧ್ಯಾಯ
ನಿನ್ನ ಮೊಗದ ಅಂಧವ ಹೊಗಳುವ ಆಶೆ,
ನೀಲಿ ಬಾನಿನ ಆ ಹಣೆಗೆ ಚಂದ್ರನಂತೆ
ಬಿಂದಿ ಇಡುವೆಯಾ...?
ಪದಗಳೇ ಸಿಗದ ಈ ನನ್ನ ಭಾವನೆಯ
ಹೇಗೆ ವರ್ಣಿಸಲಿ ಎಂದು ತಿಳಿಯುತ್ತಿಲ್ಲ,
ನಿನ್ನ ಮನದ ಕೊಂಚ ಪ್ರೀತಿಯ ನೀಡುವೆಯಾ...?
ಎಮ್.ಎಸ್.ಭೋವಿ...✍️

- mani_s_bhovi

12 Apr 2023, 03:17 pm

ಕೈ ಹಿಡಿದು ನನ್ನ ಜೊತೆ ಬರುವೆಯಾ...

ಕೂಗಿದರು ಕೆಳದಷ್ಟು ದೂರ ಸಾಗಿರುವೇ
ಸಂತೋಷವಾಗಿದ್ದ ಮನಸಲ್ಲಿ ನೋವು
ತುಂಬಿ ಹೋಗಿರುವೆ
ನೀನು ದೂರವಾಗಿದ್ದರೂ ನಿನ್ನ ನೆನಪುಗಳಿಂದ
ನನ್ನ ಮನಕ್ಕೆ ಹತ್ತಿರವಾಗಿರುವೆ
ಮತ್ತೊಮ್ಮೆ ಕೈ ಚಾಚಿ ಬೇಡುತ್ತಿರುವೇನು
ಮತ್ತೊಮ್ಮೆ ಬಿಟ್ಟಿರುವ ಕೈ ಹಿಡಿದು ನನ್ನ
ಜೊತೆ ಬರುವೆಯಾ ಗೆಳತಿಯಾಗಿ...
ಎಮ್.ಎಸ್.ಭೋವಿ...✍️
.
..

- mani_s_bhovi

11 Apr 2023, 01:35 pm

ನನ್ನೀ ಮುಗ್ಧ ಪ್ರೀತಿಗೆ ನಿನ್ನದೇ ಕರೆಯೋಲೆ...

ಬಿಳಿ ಕೆನ್ನೆಯ ಗುಳಿ ನಗೆಯ ಓ ಬಾಲೆ,
ಮನದ ತುಂಬೆಲ್ಲಾ ಮೂಡುತಿದೆ
ನಿನ್ನದೇ ಖಾಯಿಲೆ...!
ನಿನ್ನ ಪ್ರತೀ ನಡಿಗೆಯ ಮುಂದೆ ಹೂವ ಹಾಸಲೇ,
ಸಾಗುವ ಹೆಜ್ಜೆಯ ಹಿಂದೆಲ್ಲಾ
ಪನ್ನೀರ ಚೆಲ್ಲಲೇ...!
ನನ್ನೆದೆಯ ಪುಟದಲ್ಲಿ ನಿನ್ನ ಪಠವೊಂದ ಚಿತ್ರೀಸಲೇ,
ನನ್ನೀ ಮುಗ್ಧ ಪ್ರೀತಿಗೆ ನಿನ್ನದೇ ಕರೆಯೋಲೆ...!
ಎಮ್.ಎಸ್.ಭೋವಿ...✍️

- mani_s_bhovi

08 Apr 2023, 12:21 pm