Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಾನೊಂದು ಗೊಂಬೆಯಲ್ಲಾ

ನಾನೊಂದು ಗೊಂಬೆಯಲ್ಲಾ
ನನಗೂ ಒಂದು ಮನಸಿದೆ........
ಅದು ಮಾರುಕಟ್ಟೆಯಲ್ಲಿ
ಮಾರಾಟವಾಗುವ ವಸ್ತುವಲ್ಲ.......

ಇಷ್ಟಪಟ್ಟು ಕೊಂಡುಕೊಳ್ಳಲು
ಬೆಲೆ ಕಟ್ಟಲಾಗಿದ ವಸ್ತುವದು........
ನೋಡುವ ಕಣ್ಣಿಗೆಲ್ಲಾ ಅದು ಇಷ್ಟವಾದರು
ಅದರ ನೋವು ಅದರದೇ............

ಮಾಮೂಲಿ ಮಾತಲ್ಲಿ ನಾ ಯಾರೆಂದು
ಕೇಳುವವರಿಗೆ ತಿಳಿಯಲ್ಲಾ..............
ಜೊತೆಗಿದ್ದು ದಿನನಿತ್ಯ ನೋಯಿಸುವವರಿಗೂ
ಅದರ ಗೋಳು ತಿಳಿಯಲ್ಲಾ.............

ಕಂಬನಿಯ ಸಾಗರದಲ್ಲಿ ತೇಲಿಬಿಟ್ಟ
ದೋಣಿಯಾದೆ ನಾನು..................
ಮಾತಿಲ್ಲದ ಧ್ವನಿಯ ಸದ್ದು ನಾನು.......

ನೊಂದ ಪುಟದಲಿ ಬರಿಯದೆ ಹಿಂಜರಿದ
ಲೇಖನಿಯು ನಾನೂ..............

- ಚುಕ್ಕಿ

28 Apr 2017, 12:16 am

ಓ ಹೆಣ್ಣೇ.........

ಸದಾ ಶಾಂತವಾದ ಸರೋವರದಂತಿದ್ದ ನನ್ನ ಮನಕೆ ,
ಪ್ರೀತಿಯೆಂಬ ಕಲ್ಲನೆಸೆದು
ಸದಾ ಅನುಮಾನವೆಂಬ ಅಲೆಯಂತೆ
ನನ್ನನ್ನು ಸುತ್ತಿ ಬಳಸಿ ಚುಚ್ಚಿ ಚುಚ್ಚಿ
(ಕೊಳದ) ಮನದ ಶಾಂತತೆಯನ್ನು ಕದಡಿದ
ಮೋಹಿನಿ ? ಮಾಯಾಂಗನೆ ? ನಾನು
ಪರಿತಪಿಸುವ ಸ್ಥಿತಿಯ ಕಂಡು
ಅಪಹಾಸ್ಯ ಮಾಡಿ ನಗುವಷ್ಟು
ವಿನೋದವಾಯಿತೇ ? ಈ ಬಾಳು
ಬರೀ ಗೋಳು, ಗೋಳು .........
ರಚನೆ ..... ಈರಣ್ಣ . ಹೆಚ್

- Eranna.HHamsa

27 Apr 2017, 11:37 pm

ಮರೆತೆ ನನ್ನ ಉಸಿರಲಿ...

ನನ್ನೊಳಗಿನ ಪ್ರತಿ ಭಾವಕ್ಕೂ
ಕನಸಿನ ರೂಪ ಕೊಟ್ಟಾಗ
ಹುಟ್ಟಿದ ಕವಿತೆಗಳು
ಬರೆಯಲು ಕುಳಿತರೆ ನನ್ನ ಮನಸ್ಸೇ ಖಾಲಿ
ಯೋಚಿಸಿದಾಗ ತಿಳಿಯಿತು
ನನ್ನ ಭಾವನೆಗಳೆ ನೀ ಕದ್ದಿರುವೆ 
ನಿನ್ನ ಸವಿಯಾದ ಮಾತು ಕೇಳಿ
ನಾ ಕವಿಯಾದೆ ಗೆಳತಿ
ಕ್ಷಣ ಕ್ಷಣಕೂ ನೆನಪಾದ ನಿನ್ನ ಹೆಸರು
ನಿನ್ನ ಹೆಸರೊಂದಿಗೆ
ನಾ ಮರೆತೆ ನನ್ನ ಉಸಿರು...!!!

- Pb

27 Apr 2017, 09:18 pm

ನಮಸ್ಕಾರಗಳು

ಅಂತರ್ಜಾಲದಲ್ಲಿ
ಮಾತಾಡಲು ಸ್ಥಳ ಕೊಟ್ಟ
ನಮ್ಮೊಳಗಿನ ಕವಿಯನ್ನು ಬಡಿದೆಬ್ಬಿಸಿದ
ನಮ್ಮ ಪಿಸುಮಾತುಗಳನ್ನು ಆಳಿಸಿದ
ನಮ್ಮ ಅರ್ಥವಿಲ್ಲದ ತರ್ಕವಿಲ್ಲದ ಪದ್ಯಗಳನ್ನು
ಆಕಳಿಸದೆ ಓದಿದ ಹಾಡಿದ
ಎಲ್ಲಾ ಓದುಗರಿಗೆ ಬರಹಗಾರರಿಗೆ
ಪಿಸುಮಾತು ತಂಡದವರಿಗೆ
ನನ್ನ ಹೃದಯಪೂರ್ವಕ ನಮಸ್ಕಾರಗಳು....

- HarshaHL

27 Apr 2017, 07:50 pm

ನಿರಾಸೆ

ಈ ನಗರದ ಸೀಮೆಂಟು ಮಹಡಿಗಳ ಮೇಲಿಂದ
ಹನಿಯಿಕ್ಕುತಿದೆ ತೊಟ್ಟಿಕ್ಕುತಿದೆ
ಮೇಲೆ ನಭದಲ್ಲಿ ಕರಿ ಮೋಡಗಳ ಸಾಲು
ಇರುವೆಗಳ ಸಾಲಂತೆ , ಗಡಿ ಇಲ್ಲದಂತೆ
ಸಾಗುತಿದೆ ಎತ್ತಲೋ ಗೊತ್ತಿಲ್ಲ ಗುರಿ ಇಲ್ಲದೆಡೆಗೆ
ಅಂತೂ ಹನಿ ಇಕ್ಕುತಿದೆ , ತೊಟ್ಟಿಕ್ಕುತಿದೆ
ಅಂತೂ ಇದೂ .................
ಸೀಮೆಂಟು ಮಹಡಿಗಳ ಮೇಲಿಂದಿಳಿಯುವ ಮಳೆ
ಇದು ಮಳೆಯೇ ?
ರಚನೆ..... ಈರಣ್ಣ .ಹೆಚ್

- Eranna.HHamsa

27 Apr 2017, 06:31 pm

ಮನಸ್ಸಿನ ಅರಿವು

ಬಿಚ್ಚು ಮನಸ್ಸಿಂದ ಮಾತಾಡಿದರೆ ಹುಚ್ಚರೆನ್ನುವರು
ಮುಚ್ಚು ಮನಸ್ಸಿಂದ ಮಾತಾಡಿದರೆ
ಮುಗ್ದರೆನ್ನುವರು
ಕಿಚ್ಚಿನಿಂದ ಮಾತಾಡಿದರೆ ಕೀಚಕ
ಕಿರಾತಕರೆನ್ನುವರು
ಹರಿಯುವ ಮನಸ್ಸಿಗೆ ಪರರ
ಅಪ್ಪಣೆಯೇಕೆ
ನೀನು ನೀನಾಗಿರು ಮನವೆ...
ಆದರೂ............
ಅರಿವಿನ ಅಣೆಕಟ್ಟಿರಲಿ ಜೋಕೆ....

ಮನಸ್ಸು ನಿಮ೯ಲವಾಗಿದ್ದರೆ ಅದೇ ಸಾಕ್ಷಾತ್ಕಾರ
ಮಾತು ಮೃದುವಾಗಿದ್ದರೆ ಅದೇ ಚಮತ್ಕಾರ
ನಡತೆ ಶುದ್ಧವಾಗಿದ್ದರೆ ಅದೇ ಪುರಸ್ಕಾರ
ಬದುಕು ಸರಳವಾಗಿದ್ದರೆ ಅವರಿಗೊಂದು ನಮಸ್ಕಾರ

- shabudin

27 Apr 2017, 03:59 pm

ಚಂಚಲ ಮನ

ಪ್ರೀತಿಯಲಿ ಆದ ಗಾಯ
ಮಾಸುವ ಮೊದಲು
ಹೊಸ ಪ್ರೀತಿಯ ಆಗಮನ
ಸಾಗುತಿದೆ ಅದರೆಡೆ ಗಮನ
ಎಲ್ಲದಕೂ ಕಾರಣ ಚಂಚಲ ಮನ

- Shreekanth

27 Apr 2017, 09:02 am

ಸೋತ ಮನಕೇ.......

ಯಾರಿಂದ ಈ ಸಂದರ್ಭದಲ್ಲಿ
ಮಾತನಾಡಿದ ಅಂತರಂಗ
ನನ್ನರಿಯದ ಭಾವತರಂಗ........

ಅವಿತು ಕೂತ ತಳಮಳ
ಬಾಧಿಸುವ ಈ ಬಂಧನಾ.............

ಕರೆಯಲಾಗದ ಹೆಸರೋ
ಮರೆಯಲಾಗದ ಉಸಿರೋ
ತಿಳಿಯಲಿಲ್ಲ ನನ್ನ ಸೋತ ಮನಕೇ........

- ಚುಕ್ಕಿ

26 Apr 2017, 11:11 pm

ಜ್ಯೋತಿ ನಂದಿತು

ಸಂಭ್ರಮದಿ ಸಡಗರದಿ ಹೊರಟಿದ್ದೆ ನಾನು,
ಸಂತೋಷವ ಹಂಚಿಕೊಳ್ಳಲೆಂದು
ಹೊರಟಿದ್ದೆ ನಾನು, ಹೊರಟಿದ್ದೆ ನಾನು
ಹೊರಟಿದ್ದೆ , ಸ್ವಲ್ಪ ದೂರ ಸಾಗಿಯೂ ಸಾಗಿದ್ದೆ .
ಸವಿಕನಸ ಸಿಹಿ ಕನಸ ಕಾಣುತಲಿ
ಆಗಲೇ ನಂದಬೇಕೇ ಜ್ಯೋತಿ ? ಬೇಕೇ ? ಜ್ಯೋತಿ .
ಜ್ಯೋತಿ ನಂದಿತು ಕತ್ತಲೆ ಆವರಿಸಿತು .
ಆದರೂ ಸಾಗಿದ್ದೆ ತನ್ನ ಗುರಿಯತ್ತ.
ಗುರಿ ಸಮೀಪಿಸಿತ್ತು ಹತ್ತಿರಾಗಿತ್ತು.
ಅಕ್ಕ ಪಕ್ಕದ ಮನೆಯ ಮುಂದಣ ಬೆಳಕು,
ನಂದಿತು ಜ್ಯೊತಿ ನಂದಿತು.
ಆಸೆಯಿಂದ ತಂದುದ ಕೊಡಲು
ಮಾತನಾಡಿಸಿದೆ ಬಾಲೆಯ ಮುದ್ದು ಬಾಲೆಯ
ದನಿ ಮಾತ್ರ ಕೇಳುತಿತ್ತು, ಚಿತ್ರ ಕಾಣದಾಗಿತ್ತು.
ಹೇಳಲಿಲ್ಲವೇ ನಂದಿತು, ಜ್ಯೋತಿ ನಂದಿತು.
ಮಾತುಕತೆ ಸಾಗಿತ್ತು ಸ್ಮಶಾನ ಯಾತ್ರೆಯಂತೆ
ಬೆಳಕ ತಾ ಎಂದು ಕೂಗಿತ್ತು ಬಾಲೆಯಾ ದನಿ
ಅದಕುತ್ತರ ಬಂದಿತ್ತು ಪುಟ್ಟಿಯಿಂದ ..........
ಕತೆ ಅಲ್ಲಿಗೆ ಮುಗಿದಿತ್ತು , ಆದರೂ ಮನಸಿತ್ತು.
ರಚನೆ ..... ಈರಣ್ಣ . ಹೆಚ್.

- Eranna.HHamsa

26 Apr 2017, 10:04 pm

ಹೃದಯ ಕದ್ದ ಚೋರಿ...

ಅಂಕೆಯಿಲ್ಲದ ಮನಸಿಗೆ ಪ್ರೀತಿಯ ಅಂಕಣಿ ಹಾಕಿದೆ ನೀ
ಅಂಕೇತ್ರಿಣೇತ್ರನಾದ ನನಗೆ ಅಂಕದರ್ಪ ತೋರಿ ಅಂಕಕಾತಿಯಾದೆ ನೀ
ಏಕಾಂಗಿಯ ಗಾಯಕೆ ಆಲಿಂಗನದ ಅಂಕದೌಷದ ನೀಡಿದೆ ನೀ
ಬರಡಾದ ಹೃದಯದಲಿ ಭಾವನೆಗಳ ಅಂಕುರಣ ಮೂಡಿಸಿದೆ ನೀ
ಬಯಸಿ ಬೇಡಿದ ನನಗೆ ಅಂಗಕಲ್ಪಕುಜದಂತೆ ಒಲಿದೆ ನೀ
ಅಂಗಲೇಪವಿಲ್ಲದೆ ಅತಿ ಸರಳ ಕಾಣುವ ಅಂಗವಟಿ ನೀ
ಆಮಂತ್ರಣವಿಲ್ಲದೆ ನನ್ನರಮನೆಗೆ ಅರಸಿಯಾದೆ ನೀ..

- Irayya Mathad

26 Apr 2017, 09:23 pm