ಜಾತಿ ಜಾತಿ ಎನ್ನಬೇಡ ಹೆಣ್ಣು ಗಂಡೆರಡೆ ಜಾತಿ
ಜಾತಿಯ ಹೆಸರಿನಲ್ಲಿ ಲೋಕದ ಜನರಲ್ಲಿ ತುಂಬಿದೆ ಅನೀತಿ.
ಜಾತಿ ನಿಂದನೆಯಿಂದ ಹೆಚ್ಚುತ್ತಿಹರು ದಿನೆ ದಿನೆ ಶತ್ರು.
ಭಾರತದಲಿ ಭಾವೈಕ್ಯದಿಂದ ಬದುಕಿದರೆ ಎಲ್ಲರು ಭ್ರಾತೃ.
ಜಾತಿಯ ಬೀಜ ಬಿತ್ತುತ್ತಿರುವುದು ರಾಜಕೀಯ ನಾಯಕ.
ಜಾತಿಯ ಅನಿವಾರ್ಯತೆ ಇಲ್ಲ ಎಂದು ಹೇಳುತ್ತಿಹನು ನಾಗರಿಕ.
ಶಿಕ್ಷಣ, ಉದ್ಯೋಗದಲ್ಲಿ ಕಿತ್ತೊಗೆಯಬೆಕು ಜಾತಿಯ ಮೀಸಲಾತಿ.
ಮೀಸಲಾತಿ ಸಿಗಬೆಕು ಸರಿಯಿಲ್ಲದಿದ್ದರೆ ಮಾನವನ ಆರ್ಥಿಕ ಸ್ಥಿತಿ.
ಜನಸಾಮಾನ್ಯರಲ್ಲಿ ಮೂಡಿಸಬೆಕು ಜಾತಿಯ ಹಾನಿಯ ಜಾಗೃತಿ.
ಎಲ್ಲರನು ಸಮನಾಗಿ ಕಾಣುವುದೆ ನಮ್ಮ ಸಂವಿಧಾನದ ಸಂಸ್ಕೃತಿ.
ಆಗಬೆಕಾದರೆ ವಿಶ್ವಕ್ಕೆ ಹಿರಿಯಣ್ಣ ನಮ್ಮ ಹೆಮ್ಮಯ ಭಾರತ,
ಜಾತಿ ಪದ್ಧತಿ ರದ್ದತಿಗೆ ನೀಡಬೆಕು ನಮ್ಮ ದೇಶದ ಪ್ರಜೆಗಳು ಬಹುಮತ.
ಏಕೆಂದರೆ..
ಮೆಚ್ಚುಗೆ ತೋರುವವರಲ್ಲಿ..
ಆಲಿಸಿ ಆನಂದಿಸುವರಲ್ಲಿ..
ಬಣ್ಣಿಸುವರಲ್ಲಿ ಅಭಿನಂದಿಸುವರಲ್ಲಿ..
ಭಾಗವಹಿಸುವರಲ್ಲಿ ಇರುವ
ನಿಷ್ಕಲ್ಮಷ ಮನಸೇ ಇಷ್ಟ
ಆ ಸೃಷ್ಟಿಕರ್ತ ದೇವರಿಗೆ....
ಪ್ರೀತಿ ಎಂದರೆ ಮಕ್ಕಳಾಟವೇನು ಗೆಳೆಯ
ಸಾಕೆಂದು ಎದ್ದು ಹೋಗೋಕೆ
ನೀ ಹೋದೆಯೆಂದು ಕನಸ ಕೊಲ್ಲಲಾರೆ
ನಿನ್ನ ಮುಂದೆಯೇ ಬದುಕಿ ಬಾಳುವೆ
ನಾ ಚುಕ್ಕಿಇಟ್ಟು ಬಿಟ್ಟ ರಂಗೊಲಿಯ ಪೂರ್ಣಗೊಳಿಸದೆ ಹೋದೆ ನೀನು
ನಿನ್ನ ನೆನಪಲೇ ಕೊರಗಲು ಹೇಡಿಯಲ್ಲ ನಾನು
ಅದನೆ ಸರಿಪಡಿಸಿ ಹೊಸ ಚಿತ್ರವ ಬಿಡಿಸುವೆ
ನಾ ಹಾಡಿದ ರಾಗಕೆ ಶೃತಿಯ ಬರೆಸದೆ ಹೋದೆ ನೀನು
ನಿನ್ನ ಬರುವಿಕೆಗೆ ಕಾಯಲು ಮೂರ್ಖಳಲ್ಲ ನಾನು
ಹೊಸಶೃತಿಯನೆ ಬೆರೆಸಿ ಹೊಸ ರಾಗವ ಕಟ್ಟುವೆ
.
ನಾ ಬರೆದ ಕವಿತೆಗೆ ಭಾವವಾಗದೆ ಹರಿದು ಹೋದೆ ನೀನು
ನಿನ್ನ ನೆರಳಲೆ ಬದುಕಿರಲು ಅಬಲೆಯಲ್ಲ ನಾನು
ಹರಿದ ಭಾವವ ಹೊಲಿದು ಹೊಸ ಭಾಷ್ಯವ ಬರೆಯುವೆ
ನೀ ಗಂಡಾದರೇನು ನಾ ಹೆಣ್ಣಾದರೇನು
ನಿನ್ನಂತೆ ಸ್ವಾಭಿಮಾನ ನನಗಿಲ್ಲವೇ
ನೀ ಗೋರಿ ಕಟ್ಟಲು ಬಯಸಿದರೆ ನನಗೆ
ನಮಗಿಂತ ಮೊದಲು ಅದರಲಿ ನೀನಿರುವೆ
ಓ ನನ್ನ ಕಾವ್ಯಕನ್ನಿಕೆ
ನಿನ್ನ ಜಿಂಕೆ ಕಂಗಳ ಮಿಂಚು
ಸಾಟಿಯೇ ನೂರುದೀಪಗಳ ಬೆಳಕಿಗೆ ?
ನಿನ್ನೀ ಜೋಡಿ ನಕ್ಷತ್ರಗಳ ಕಾಂತಿಯಲಿ
ನಿನಗಾಗಿ ಕಾದು
ನಿನಗಾಗಿ ಕಾತರಿಸಿ
ನೀ ಬರುವ ಹಾದಿಯಲಿ
ಕಾಯುತ್ತ ಕುಳಿತಿರುವ
ಈ ನಿನ್ನಾರಾದಕನ ಮೇಲೂ
ನಿನ್ನ ಕಂಗಳ ಬೆಳಕ ಚೆಲ್ಲೇ ಗೆಳತಿ
ತಿಳಿನೀಲಿ ಆಕಾಶದ ಮಧ್ಯದಲ್ಲಿ ವಿುನುಗುವ ನಕ್ಷತ್ರದ ಹಾಗೆ ,
ಕಡಲಾಳದ ಮಧ್ಯದಲ್ಲಿರುವ ಕಪ್ಪೆಚಿಪ್ಪಿನ ಮುತ್ತಿನ ಹಾಗೆ ,
ಹಿಮಗಾಲದಲ್ಲಿ ಬಿದ್ದು ಜಿನುಗುವ ಇಬ್ಬನಿಯ ಹಾಗೆ ,
ನನ್ನ ತಾಯಿ ಪ್ರೀತಿಯು ಬೆಲೆಕಟ್ಟಲಾಗದ , ಹೃದಯದ ಆಸ್ತಿ ಇದ್ದ ಹಾಗೆ.........