Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಇಲ್ಲದಾಗ..

ಅನ್ನದಗಳು ಕೈಗೆ ಸೇರುವ ಮುನ್ನ
ಬೆವರ ಹನಿ ನೆಲವ ಕಂಡಿರುತ್ತದೆ
ಅಭಿಮಾನವಿಲ್ಲ ದುಡ್ಡಿಗೆ, ದುಡಿಮೆಗೆ,
ಜನರಿಗೆ, ಜಗತ್ತಿಗೆ!

ಬೋಧನೆಗಳು ಇತರರಿಗೆ ಮಾತ್ರ
ತಮ್ಮ ಪಾಲಿಗೆ ಅವು ಕಷ್ಟಗಳು
ದಾಟಬೇಕಾದ ಮುಳ್ಳಿನ ದಾರಿಗಳು!

ಎತ್ತಲಿಂದ ಬಂದೀತು ಕರುಣೆ
ಸ್ವಾರ್ಥದ ಪೊರೆ ಕಣ್ಣಿಗೆ ಕಟ್ಟಿರುವಾಗ,
ಇನ್ನೊಬ್ಬರ ನೋವಿಗೆ ಸ್ಪಂದಿಸುವ ಮನಸ್ಸಿರದಾಗ!

- ಚುಕ್ಕಿ

05 Apr 2023, 06:54 am

ಬಂಧದ ಬಂಧನ....

ಎಲ್ಲಿಯ ಬಂಧ, ಎಲ್ಲಿಯ ಬಾಂಧವ್ಯದಾ ಕಾಂತ,
ಬಂಧ ಬಾಂಧವ್ಯಕೂ ಮಿಗಿಲಾದುದು ಏಕಾಂತದಾ ಹಂತ,
ಬಂಧ ಬಾಂಧವ್ಯದ ಬಂಧನವಳಿದ ಮೇಲೆ,
ತೋರದಿಹುದೆ ಏಕಾಂತವದು ತನ್ನ ಕರಿ ಛಾಯೆಯಾ ಲೀಲೆ?,
ಏಕಾಂತವಳಿದು ಬಂಧದ ಬಂಧನಕ್ಕೆ ಸಿಲುಕಿದ ಮೇಲೂ,
ಸಮಯ ಸಾಲದು ಏಕಾಂತವದು ಮರಳಿ ತನ್ನ ಜಾಗಕ್ಕೆ ಬರಲು,
ಅನಿಸಬಹುದು ಇದು ಬರಿಯ ಸೊಲ್ಲು,
ಎಲ್ಲರಿಗೂ ಸುಲಭವಲ್ಲ ಈ ಕವನ ಅರ್ಥೈಸಲು,
ಏಕೆಂದರಿದರ ಸಂಪೂರ್ಣ ಭಾವ, ಅರಿತು ಬರೆದವನ ಮನಕೆ ಮೀಸಲು.....

----- tippu -----

- tippu

02 Apr 2023, 11:01 pm

ನನ್ನಪ್ಪನಿಗೊಂದು ಮಾತು

ಜೀವನ ಎಂಬ ರಥದ ಸಾರಥಿ
ಸಂಸಾರ ಎಂಬ ಸಾಮ್ರಾಜ್ಯದ ಅಧಿಪತಿ

ಎಷ್ಟೆ ಕಷ್ಟ ಬಂದರೂ ಮಕ್ಕಳ ನಗುವಲ್ಲಿ ನೋವನ್ನು ಮರೆಯುವ ಗುಣವಂತ
ಪ್ರೀತಿಯ ಲೋಕಕ್ಕೆ ನೀನೇ ಸಿರಿವಂತ

ಮಕ್ಕಳ ಏಳ್ಗೆಗೆ ದಾರಿದೀಪ
ಮುಂದೆ ನಮ್ಮ ಜೀವನಕ್ಕೆ ನೀನೇ ನಂದಾದೀಪ

ಕಲ್ಮಶವಿಲ್ಲದ ಮನಸುಳ್ಳ ದಿಗ್ಗಜ
ನಮ್ಮ ಪಾಲಿಗೆ ನೀನೇ ರಾಜ

ದುಡಿಯುತ್ತಾನೆ ಮೈಯಲ್ಲಿ ರುಧಿರ ಸುರಿಯುವಂತೆ
ಲೆಕ್ಕಿಸದೇ ತನ್ನ ಪ್ರಾಣದ ಚಿಂತೆ

ಆಕಾಶಕ್ಕೂ ಮಿಗಿಲು ನಿನ್ನ ಮೇಲೆ ಪ್ರೀತಿ
ದೇವರಿಗಿಂತ ಹೆಚ್ಚು ನಿನ್ನ ಮೇಲೆ ಪ್ರತೀತಿ

ದಾರುಣ ಸ್ಥಿತಿಯಲ್ಲೂ ಧೈರ್ಯಗೆಡದ ಧೀರ
ಜಗತ್ತನ್ನೇ ಎದುರಿಸುವ ಶಕ್ತಿ ಹೊಂದಿರುವ ರಣಧೀರ

ಚಾಣಕ್ಯನಿಗಿಂತಲೂ ಚಾತುರ್ಯ ಹೊಂದಿರುವ ನನ್ನಪ್ಪ
ಯಾರೂ ಹೋಲಿಕೆ ಇಲ್ಲ ನಿನಗಪ್ಪ

ಸಂಸಾರ ಎಂಬ ರಣಾಜಿರದಲ್ಲಿ ಸೋಲನ್ನು ಕಲ್ಪನೆ ಕೂಡಾ ಮಾಡಿಕೊಳ್ಳದವನು
ಕಗ್ಗತ್ತಲೆಯಲ್ಲೂ ನಮಗೆ ಬೆಳಗಾಗಿ ನಿಂತಿರುವವನು

ಹಗಲು ರಾತ್ರಿ ಎನ್ನದೆ ದುಡಿಯುವ ಕಾಯಕ ಯೋಗಿ
ನಿರುದ್ಯೋಗಿಯಾದರೂ, ಸರ್ವಲೋಕವನ್ನೇ ಕೊಳ್ಳುವ ಉದ್ಯೋಗಿ

ಓ ಸ್ನಾತಕೋತ್ತರ ಪದವೀಧರ
ಹರಿಯುವದು ಜ್ಞಾನ ನನ್ನಲ್ಲಿ ನಿರಂತರ

ನಕ್ಷತ್ರಗಳು ನಾಚುವಂತೆ
ಸುನಾಮಿಗಳು ಅಬ್ಬರಿಸುವಂತೆ
ವಿಶ್ವವೇ ಬೆರಗಾಗುವಂತೆ
ದೈವವೇ ಕಣ್ತೆರೆಯುವಂತೆ
ನಮ್ಮ ಜೀವನಕ್ಕೆ ತನ್ನ ಪ್ರಾಣವನ್ನೇ ಪಣವಿಡುವ ನನ್ನಪ್ಪನಿಗೊಂದು ನಮನ.....

- Laxmi Mujagond

02 Apr 2023, 08:36 am

ಭಾವಯಾನ

ಕಾವಲು ಹಾದಿಯಲ್ಲಿ ಕನವರಿಸ
ನಿಂತ ನೆನಪುಗಳ ನರ್ತನ. ..
ಇರುಳ ಅಂಗಳದ ನಿದಿರೆಗೆ
ಅಪ್ಪಲಾಗದೆ ನೆನಪಿಗೊಂದರಂತೆ
ಕಣ್ಣ ನೀರ ಹನಿಗಳ ಅರ್ಪಣ!!
ಭಾವನೆಗಳು ಬಣ್ಣದ ಮಾತುಗಳಡಿ
ತಗಡಿನ ತುತ್ತೂರಿಯಂತೆ"
ಉಸಿರ ಬಿಗಿ ಉದಿದಾಗಲಷ್ಟೆ
ಹೊರ ಬಂದ ಧ್ವನಿ ಕಿವಿಗಳನಪ್ಪಿ
ಸೇಳೆಯ ಹೊರಟದ್ದು
ಅದೊಂದು ಸದ್ದಿನ ಸಿಹಿ ಸಿಂಚನ::
ಭಾವಿಸಿ ಕೊಂಡತೆ ಇಲ್ಲಿ ಈ
ಭಾವನೆಗಳ ಕಥನ....
ಭಾವನೆಗಳಾಗದಿರಲಿ ಕಾಲಹರಣಕೊಂದು
ಬಳಸುವ ಸಾಧನ. ...@ ವಿಶ್ವ ರಾಜ್..

- Vishwa Raj ನಾ ನಿನ್ನಾ ಮನಸು

02 Apr 2023, 07:31 am

ಉಲ್ಲಾಸ

ಉಲ್ಲಾಸ

ಮುಂದೆ ಬರುವ ಚುನಾವಣೆ
ಎಲ್ಲಿಗೆ ಹರುಷ ಯಾರಿಗೆ
ಉಲ್ಲಾಸ ತರುವುದೋ
ಯಾರಿಗೆ ಗೊತ್ತು

ನನಗೆ ಮುಜಾನೆಯ ಸಮಯದಲ್ಲಿ
ನಾನೆ ರಾಜ್ಯದ ರಾಜಕುಮಾರನಾಗಿ
ಪಟ್ಟ ಕಟ್ಟಿ ಜನ ಸಮೂಹವೆಲ್ಲಾ
ಉಲ್ಲಾಸದಿಂದ ಕುಣಿದು ಕುಪ್ಪಳಿಸಿತು

ಎಲ್ಲಿಲ್ಲದ ಆನೆ ಕುದುರೆ ಒಂಟೆ
ಹುಲಿ ಸಿಂಹ ನವಿಲುಗಳ
ಜೊತೆಯಲ್ಲಿ ಚಾರೋಟಿಯಲ್ಲಿ
ಮೆರವಣಿಗೆ ಸಾಗಿತ್ತು ನನ್ನ ಸಾಮ್ರಾಜ್ಯದಲ್ಲಿ

ಮುತ್ತು ರತ್ನ ವಜ್ರ ವೈಢೂರ್ಯಗಳು
ಪುಷ್ಪ ಮಾಲಿಕೆಗಳ ಸಾಲು ಸಾಲು
ಪ್ರೇಕ್ಷಕರ ಸವಾರಿ ಸಾಗರೋಪಾದಿಯಲ್ಲಿ
ಹರಿದು ಬರುತ್ತಿತ್ತು ನನ್ನದೊಂದು ಚಿಕ್ಕ ಕನಸಲ್ಲಿ

ಜಿ ಟಿ ಆರ್ ದುರ್ಗ
ಜಿ ಹೆಚ್ ಎಲ್
ಬಂಗಾರಪೇಟೆ

- Gtramachandrappa Ramachandrappa

30 Mar 2023, 05:28 pm

ಚೈತ್ರ ಮಾಸದ ಮೊದಲ ದಿನ.

ವಸಂತ ಕಾಲ ಬಂದಿತ್ತು.
ಎಲ್ಲೆಲ್ಲೂ ಹರುಷ ತಂದಿತ್ತು.
ಮರಗಳಲ್ಲಿ ಚಿಗುರೊಡೆಯಿತ್ತು.
ಕೋಗಿಲೆಯ ಹಾಡು ಇಂಪಾಯಿತ್ತು.
ಹೊಸ ಯುಗಾದಿ ನಿನಗೆ ಸ್ವಾಗತ.
ಹೊಸ ವರ್ಷ ನಿನಗೆ ಸುಸ್ವಾಗತ.
ಬಾ ಹೊಸ ರವಿಕಿರಣವ ಸೂಸುತ.
ಕವಿದಿರುವ ಅಂಧಕಾರವ ಓಡಿಸುತ.
ಬೇವು ಬೆಲ್ಲದ ಮಿಲನದ ಒಲವು.
ಮನಕೆ ಸಂತಸ ತಂದಿದೆ ಕೋಗಿಲೆಯ ಸ್ವರವು.
ತೋರಣಕೆ ಬೇಕು ಮಾವು,ಆರೋಗ್ಯಕೆ ಬೇಕು ಬೇವು.
ತಿಂದು ದೂರವಾಗಿಸೋಣ ನಮ್ಮೆಲ್ಲರ ನೋವು.
ಯುಗಾದಿ ಹಬ್ಬದ ಶುಭಾಶಯಗಳು

- Yogitha T N

22 Mar 2023, 08:09 am

ಕೇಳೋ ಮಾನವ

ಬಿಟ್ಟ ಹೊಂಟಾನ
ಗಳಿಸಿದ್ದೆಲ್ಲವನ್ನ
ಗಟ್ಟಿ ಮನಸ ಮಾಡಿ
ಶಿವನ ದಾರಿ ಹಿಡದಾನ

ರುಪಾಯಕ ರೂಪಾಯ
ಲೆಕ್ಕ ಹಾಕಿ ಎಲ್ಲಾ ಕೂಡಿಸ್ಯಾನ
ಸಾವಿರ ಸಂಬಂದಿಗಳನ್ನ ಕೂಡಿ
ಸಡಗರದಿಂದ ಕೇಕಿ ಹಾಕ್ಯಾನ

ಮದುವಿ ಮುಂಜಿ ಮಾಡಿಕೆಂತ
ಅವ ಎಲ್ಲಾ ಮರತಾನ
ನಾಳಿನ ದಿನವೇ ಇವನಿಗಿಲ್ಲ
ಅಂತ ಆ ದೇವ ಗೀಚ್ಯಾನ

ಎಲ್ಲಿಂದೆಲ್ಲಿಗೆ ಯಾಕ ಒಡತಿ
ಯಾರಿಲ್ಲ ನಿನಗಿನ್ನ
ಉಳಿದಿದ್ದ ಒಂದ ದಾನ ಧರ್ಮ
ಮರಿಬ್ಯಾಡ ನೀ ಇದನ್ನ.

ನಾಗರಾಜ ಬಾರ್ಕೆರ್

- ನಾಗರಾಜ ಬಾಕೆ೯ರ್

21 Mar 2023, 09:03 am

ಕನಸು

ಹುಚ್ಚು ಆಸೆಯಿಂದ
ಮೆಚ್ಚಿ ಕೂತವನು ನಾನು
ಏಳು ಬೀಳುಗಳ ಎಣಿಯಲ್ಲಿ
ಬಿದ್ದರು ಮತ್ತೇಳುವವನು ನಾನು.

ನೂರು ಗುಡಿಯ ಮೇಲೆ
ನಂಬಿಕೆಯ ಕಳಸವಿತ್ತಿರುವೆ
ಜಾರಿಯಾಗಲು ನನ್ನ ಕನಸು
ಮತ್ತದೇ ಪ್ರಯತ್ನವನ್ನು ಸಾಗಿಸಿರುವೆ.

ಯುಗ ಯುಗಗಳ ಗೊಡವೆ
ಚೂರು ನನಗಿಲ್ಲ
ಇರುವ ಜನ್ಮದೊಳಗೆ ಹೆಸರ
ಉಳಿಸಿ ಹೋಗಬಹುದಲ್ಲವೆ.

- ನಾಗರಾಜ ಬಾಕೆ೯ರ್

20 Mar 2023, 03:59 pm

ಜಾತಿನಾ..? ಪ್ರೀತಿನಾ..?

ಮನದಾಳ ಮಾತ ಮನಸೇರಿ ಕುಂತ
ಮಾಡಿದ ಪ್ರೀತಿ ನೀರಾಗ ಹರದ ಹೋತ
ಮಾಡಕೊಂಡ ಮಾತ ಗಟ್ಟ್ಯಾಗಲಿಲ್ಲ
ಕಟಗೊಂಡ ಕನಸ ನನಸಾಗಿ ಉಳಿಲಿಲ್ಲ

ನಿಂಬಿಯ ಗಿಡಕ ತುಂಬ್ಯಾವ ಬಾಳ ಮುಳ್ಳ
ಮಾಡಿದ ಪ್ರೀತಿ ನೋಡಿ ಹಚ್ಚ್ಯಾರ ಕುಳ್ಳ
ಮನಸ್ಸಿಗಿ ಇಲ್ಲ ಮನಿಯೋರು ಮದವಿಗಿ ಒಪ್ಪಲ್ಲ
ಜಾತಿ ಬ್ಯಾರಂತ ಬೇರಾಗಿದ್ದ ಪ್ರೀತಿ ಮುರದಾರಲ್ಲ

ಮನಸ್ಸೆಂಬ ಮನಿಯ ಬಾಗಿಲ ನೀ ತೆರದಿ
ಪ್ರೀತಿಯ ಸುದ್ದಿಕೇಳಿ ಬಿಡಿಸ್ಯಾರ ನಿಮ್ಮನಿ ಹಾದಿ
ತಗದೊಗ ಚೈನ ಬಡದಾರ ನನ್ನ ಬಾಳ
ಹಾದ್ಯಾಗ ಹೋಗಾಗ ಇನಕಿ ನೋಡ ನನ್ನ ಗೋಳ

ಹಾಳಾದ ಮನಸ್ಸ ಕಟಗೊಂಡ ಕುಂತ ನೂರಾರ ಕನಸ
ಮುಳ್ಳಿನ ಮನಸ್ಸು ಮನಿಯಾಗ ಮನಿಯವರಿಗಿ ಚುಚ್ಚಿ
ಮಾಡ್ಯಾದ ನಮ್ಮ ಪ್ರೀತಿಗಿ ಬಾಳ ದೂರ
ಒಂದೊಮ್ಮೆ ಬಂದ ನೋಡಿ ಹೋಗ ದೂರ

- Shankru Badiger

20 Mar 2023, 12:11 pm

ಹಗಲಿರುಳ ತಿರುಳ ತಿಳಿಯೋ ನೀ ದುರುಳ...

ಕತ್ತಲು ಬೆಳಕೊಳಗಿದೆ,
ಬೆಳಕು ಕತ್ತಲೊಳಗಿದೆ,
ಕತ್ತಲು ಬಂದಾಗ ಬೆಳಕು ಮರೆಯಾಗಿದೆ,
ಬೆಳಕು ಬಂದಾಗ ಕತ್ತಲು ಮರೆಯಾಗಿದೆ,
ಇರುವ ರವಿ ಅಲ್ಲೇ ಇರುವಲ್ಲೇ,
ಅಲೆವ ಶಶಿ ರವಿ ಇರುವಲ್ಲಿ,
ಹಗಲಲ್ಲೂ ಶಶಿ ಇರುವ ಮರೆಯಾಗಿರುವ,
ಇರುಳಲ್ಲೂ ರವಿ ಇರುವ ಮರೆಯಾಗಿರುವ,
ಹಗಲಿರುಳ ತಿರುಳ ತಿಳಿಯೋ ನೀ ದುರುಳ,
ತಿಳಿದವರಿಲ್ಲಿ ಇಹರು ವಿರಳಾತಿ ವಿರಳ,
ಅವರಿವರ ಸೊಲ್ಲ ಬಲ್ಲವರಿಲ್ಲಿ ಬಹಳ,
ಆದರವರದೇ ಅಂತರಾಳ ತಿಳಿಯದವರೇ ಹೇರಳ,
ನಿನ್ನಂತರಂಗದಲಿ ಕಾರ್ಮೋಡ ಕವಿದಿದೆ,
ಅದೇ ಅಂತರಂಗದಲಿ ದಿವ್ಯ ಜ್ಯೋತಿ ಬೆಳಗುತಿದೆ,
ಅಂತರಂಗ ಬಹಿರಂಗ ಅದು ಬೇರಿಲ್ಲ ನೀ ಕೇಳ,
ನಿನ್ನ ಮನದ ಮಾತು, ಅದ ಒಮ್ಮೆ ನೀ ಕೇಳ.....

----- tippu -----

- tippu

19 Mar 2023, 10:45 pm