Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬಂದ ಚೈತ್ರದ ಹಾದಿ ತೆರೆದಿದೆ
ಬಣ್ಣ ಬಣ್ಣದ ಮೋಡಿಗೆ;
ಹೊಸತು ವಷ೯ದ ಹೊಸತು ಹರ್ಷದ
ಬೇವು-ಬೆಲ್ಲದ ಬೀಡಿಗೆ;
ಕೊಂಬೆ ಕೊಂಬೆಯ ತುಂಬ ಪುಟಿದಿದೆ
ಅಂತರಂಗದ ನಂಬಿಕೆ;
ಚಿಗುರು ಹೂವಿನ ಬಣ್ಣದಾರತಿ
ಯಾವುದೋ ಆನಂದಕೆ;
- *RS*
29 Mar 2017, 11:23 am
ಬಾಳಿದು ಕನಸಲ್ಲ , ಗೋಳಿನ ತಿನಿಸಲ್ಲ.
ನಾನೊಂದು ಮಾಮರ , ನೀ ಮಲ್ಲಿಗೆಯ ಬಳ್ಳಿ.
ನನ್ನ-ಹಿಗ್ಗಿನ ಹೊಸ ತೋಟ;
ನೋಡು ಬರುವ ಸುಗ್ಗಿಯಾಟ!
*RS*
- *RS*
29 Mar 2017, 11:15 am
ಮಾವು ನಾವು, ಬೇವು ನಾವು;
ನೋವು ನಲಿವು ನಮ್ಮವು.
ಹೂವು ನಾವು, ಹಸಿರು ನಾವು;
ಬೇವು ಬೆಲ್ಲ ನಮ್ಮವು.
ಹೊಸತು ವರುಷ, ಹೊಸತು ಹರುಷ;
ಹೊಸತು ಬಯಕೆ ನಮ್ಮವು.
ತಳಿರ ತುಂಬಿದಾಸೆಯಲ್ಲ , ಹರಕೆಯಲ್ಲ ನಮ್ಮವು.
*RS*
- *RS*
29 Mar 2017, 11:11 am
ಕವಿದ ಮೋಡ ಕರಗುತ್ತಿದೆ
ಕತ್ತಲೆಯ ಸರೆದು ಬೆಳಕಿನೆಡೆಗೆ
ನಡೆದಿದೆ ಭೂಮಂಡಲ ಬಾನೆತ್ತರದಿ
ಬೋರ್ಗವೇದ ಬಾಳಲ್ಲಿ ಹೊಳಪು ಬೀರಲಿ
ಯುಗ ಕಳೆಯುತಿದೆ ಜಗ ನಡಿಯುತಿದೆ
ಮನ ಚಿಲುಮುತ್ತಿದೇ.ಯುಗಾದಿ ಜಗಕುಲವ ಸೆರೆಹಿಡಿದಿದೆ
ಕಹಿ ನೋವ ಬದಿಗಿರಿಸಿ
ಸಿಹಿ ನೋವ ಜೊತೆಯಲಿ ಬೆರೆಸಿ
ಹರುಷವ ಹೊನಲ್ಲೂ ಇದರೊಡನೆ
ಕಲಿಸಿ ಬೆರೆಸಿ
ಸವಿದು ನೋಡ ಸವಿಯಾಗಿಹುದು
ಜೀವನದ ರಸವ
ಯುಗ ನಲಿಯುತಿದೆ ಜಗ ಉರುಳುತಿದೆ
ಮನ ಮಿಡಿಯುತಿದೆ .ಯುಗಾದಿ ಮನಕುಲವ ಬೆಸೆಯುತಿದೆ.
ಸಸಿ ಮೊಳಕೆ ಹೊಡೆಯುತ್ತಿದೆ
ಗಿಡ ಮರ ಚಿಗುರುತಿದೆ
ಗುಡಿನಾಚೆ ಹಕ್ಕಿ ಹಾರುತಿದೆ
ಗಾಳಿ ಸಂಪು ಸುಗಂದವ ಸುರಿಸುವ
ಕಾಲಕವಿಯುವ ಸಮಯ ಇದಾಗಿದೆ
ಯುಗ ಜನಿಸಿದೆ ಜಗ ನಲುಮಿಸಿದೆ
ಮನ ದುಂಬಿಸಿದೆ ..ಯುಗಾದಿ ಪರಿಸರವ
ಕುಡಿಸಿದೆ.
ರಾಮ ರಾವಣನನ್ನು ರಾಜ್ಯಭಾರವಾದ ಕಾಲ
ವಿಷ್ಣು ಮತ್ಸ್ಯವಾತರವನು ತಳೆದಕಾಲ
ವಿಕ್ರಮಾದಿತ್ಯ ಜಯಿಸಿ ಶಾಲಿವಾಹನ ಶಕೆ
ನಿರ್ಮಾಣವಾದ ನವಭರತದಕಾಲ
ಚಂದ್ರಸೂರ್ಯ ರಥಗಳಿಸಿದ ಕಾಲ
ಇದುವೇ ಯುಗ ಯುಗದಿ ಬಂದ ಯುಗಾದಿ ಕಾಲ..
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
✍✍✍✍✍ಪ್ರದೀಪ✍✍✍✍✍✍✍✍
- ಪ್ರದೀಪ.ಮ.ಪಾಡಮುಖೆ
29 Mar 2017, 09:32 am
ಹೊಸ ದಿಗಂತಕೆ ಹೊಸ ವರುಷದ ಆಗಮನ
ಚಿಮ್ಮಲಿ ಎಲ್ಲೆಲ್ಲೂ ನವೋನ್ಮೇಷ ಚೇತನ
ಇನ್ನೇಕೀ ಏಕತಾನತೆಯ ತಾಡನ
ಪ್ರಕೃತಿಗೆ ವಸಂತ ನೀಡುತಿರಲು ಚುಂಬನ
ನಮಗೆಂದೆಂದೂ ಇರಲಿ ಅವಳೊಲವ ಆಲಿಂಗನ
ಅವಳಿಂದಲೆ ತಾನೇ ನಮ್ಮಯ ಜೀವನ
ಸದಾ ತುಂಬಿ ತುಳುಕಲಿ ಭೂದೇವಿಯ ಹೃಣ್ಮನ
ದುಂಬಿಗಿರದ ಮಕರಂದದ ಮೂಲ ತಿಳಿಯುವಾ ಚಿಂತೆ ನಮಗೇಕೆ.?
ಕೋಗಿಲೆ ಓದಿದೆಯೇ ಶಾಸ್ತ್ರ ಪುರಾಣಗಳ ಕಂತೆ?
ಯಾರಿಗಿರದಾ ಜಾತಿ ಮತದ ಕಂತೆ ಮಾನವಾ ನಿನಗೇಕಂತೆ?
ಸುಮ್ಮನೆ ಕರಗು ಬಾ ರಸಿಕ ಪ್ರಕೃತಿಯಲಿ
ಮುಗ್ಧ ಮಗುವಿನಂತೆ
ಸೊರ್ಯಚಂದ್ರ ಗ್ರಹತಾರೆಗಳ ಗ್ರಹಚಾರ ಬಿಡಿಸಿ, ಮಾಡುವುದೇನಿದೆ ಭವಿಷ್ಯದ ಬಲೆಯನು ಬಿಡಿಸಿ
ವಿಜ್ಞಾನದ ಬೆಳಕಲ್ಲಿ ವೈಚಾರಿಕತೆಯ ಕಣ್ ತೆರೆದು ನೋಡು ಬಾರಾ
ಇಡೀವಿಶ್ವವೇ ಕಾಣುವುದು ವಿಸ್ಮಯದ ಮಹಾಪೂರ
ಹಸಿದವನಿಗೆ ಒಂದಗುಳು ನೀಡದೆ ಹಬ್ಬವ ಮಾಡಿ ಏನು ಫಲ
ಮರಗಿಡ ಕಡಿದು ಮನೆಮುಂದೆ ತಳಿರು ತೋರಣ ಕಟ್ಟಿದರೇನು ಫಲ
ಪೂರ್ವಜರು ಮಾಡಿಹರೆಂದು ಮಾಡದಿರಿ ಮೂಢತನದ ಪರಮಾವಧಿ
ಪ್ರಗತಿಯ ಹೆಸರಲಿ ತೋಡದಿರಿ ನಿಮ್ಮದೇ ಸಮಾಧಿ
ಪ್ರಗತಿಯು ಬೇಕಿದೆ ಪ್ರಾಕ್ತನ ಮನಸಿಗೆ ಇದುವೇ ಬದುಕಿಗೆ ಬುನಾದಿ
ಮಾಡಿದರೆ ಮಾಡಿ ಕಾರಣ ತಿಳಿದು
ಈ ಜ್ಞಾನ ಅನಾದಿ
ತರ್ಕದಿ ಒರೆದು ಪ್ರತಿಯೊಂದ ಅರಿತು
ಮಾಡೋಣ ವಿಚಾರವಾದಿ ಯುಗಾದಿ
ಹಂಸಿನಿ
- ವಿಸ್ಮಯ
29 Mar 2017, 06:47 am
ನನ್ನಯ ಬಾಳಲಿ ಬಂದೆ,
ಬಾಳಲಿ ಹೊಸ ನಗುವನು ತಂದೆ,
ಬಾಳಲಿ ಬಂದ ಆ ದಿನದಿಂದ ನನ್ನಲ್ಲಿದ್ದ ನಿರಾಸೆಯ ಕೊಂದೆ,
ಆದರೂ ತಿಳಿಯಲಿಲ್ಲ ನನ್ನ ಕನಸಲಿ ಬರುವ ನೀನ್ಯಾರೆಂದೆ.
- Ashoka
28 Mar 2017, 09:35 pm
ಅವ್ವ ಮಲಗಿದ್ದಳು
ಕುಡಿದೀಪದೆದುರು
ಬದುಕ ಬೆಳಕಾಗಿ ಸೂಸಿ
ಉರಿಉಂಡು ನೊಂದು...
ನೀರವ ಮೌನದ
ನಡುವೆ ಬೆಚ್ಚಿಸಿದ
ಮಿಂಚು ಗುಡುಗು
ಅವ್ವನ ಎಬ್ಬಿಸದಾದವು
ಕುಯ್ಗುಡ್ಲು ಹಿಡಿದು
ಹೊಲದಲ್ಲಿ ಕಳೆಕಿತ್ತು
ನೆತ್ತಿ ಸುಡುವ ಬಿಸಿಲಲ್ಲಿ
ಹಣೆ ತುಂಬ
ಹನಿಮುತ್ತ ಹೊತ್ತು
ಅವ್ವ ದಣಿದಿದ್ದಳು ಆಗ...
ಹನಿಮುತ್ತ ಚೆಲ್ಲೈತೆ
ಹೊಲವೆಲ್ಲಾ ರಾಶಿರಾಶಿ
ತೆನೆಹೊತ್ತು ನಿಂತೈತೆ
ತಲೆಬಾಗಿ;
ಅವ್ವ ಮಲಗಿದ್ದಾಳೆ
ಅಲ್ಲೀಗ...
ಹೊಲ ಕುಯ್ದು
ಹೊಲ ಕಟ್ಟಿ
ಉಸಿರ ಬಿಗಿಹಿಡಿದು
ಹೊರೆ ಹೊತ್ತಿದ್ದಳು
ಅವ್ವ ಪ್ರತಿಸಾರಿ...
ಈಗ ಹೀಗಿಲ್ಲ
ಈಗಷ್ಟೆ ಮಲಗವಳೇ
ಹೊತ್ತು ಮುಳುಗುವ ಮುನ್ನ
ಬೆಚ್ಚಗೆ ಈ ಮಣ್ಣಿನ ಒಡಲಲ್ಲಿ...
- ram purshi
28 Mar 2017, 12:05 pm
ಬದಲಾದದ್ದು
ಜಗತ್ತಲ್ಲ;
ನಾನು ನೀನು...
ಚಿವುಟಿದಷ್ಟು
ಗರ್ಭದ ಕಾವಿನಿಂದ
ಹಡೆಯುವ ಆಸೆಗಳು...
ಮೈಗೆ ಮೈ ಅಂಟಿ
ಉಸಿರುಗಟ್ಟುತ್ತಾ
ತೆರೆದುಕೊಳ್ಳುವ ಬಯಕೆಗಳು...
ಬದಲಾದದ್ದು;
ಎದೆಬಿರಿದು ನೊಂದ
ನಿನ್ನ ಕಣ್ಣಿನಲ್ಲಿ ಹರಿದ
ರಕ್ತಸಿಕ್ತ ಹನಿಗಳು..
ಈಗ...
ಬಚ್ಚಿಟ್ಟ ನೋವು, ನಗು
ತುಂಬಿ ಹೇಸಿಗೆ ಹುಟ್ಟಿಸುತ್ತಿವೆ...
ಯಾಕೆ? ಏನು? ಹೇಗೆ?
ಎಂಬ ಪ್ರಶ್ನೆಗಳು ಪ್ರಶ್ನೆಗಳಾಗೇ
ಊಳಿಡುತ್ತಾ...
ಮತ್ತೆ ನಗಬೇಡ
ಗುಳಿಬಿದ್ದ ಕೆನ್ನೆಯ
ಮೇಲೆ ರಕ್ತ ಕಲೆಗಳಂಟಿವೆ!
ಮುಡಿಯೇರಿದ ಹೂ
ನರಳಿ ಘಮಲು ಕಳೆದು ಹೊಸಕಿವೆ!
ಗೂಡು ಕಟ್ಟಿದ ನಿನ್ನೆದೆಯಲಿ
ಮಾಗದ ಗಾಯಗಳೇ ಹೆಚ್ಚು
ಬರೀ ಎದೆಗಪ್ಪಿ ನಟಿಸಬೇಡ
ಒಂದಷ್ಟು ತಾ
ನೋವು, ಯಾತನೆ
ಕರಗಲಿ ನಿನ್ನ ದುಗುಡ
ಕತ್ತಲೊಳಗೆ ಬೆತ್ತಲಾಗುತ್ತಾ
ದಿಗಿಲುತನಗಳನ್ನು ಕೊಡವಿ
ಮನುಷ್ಯರಾಗುವ
ನಾನು ನೀನು..
ಮಳೆ ಹನಿ ತೊಯ್ದ ಕನಸುಗಳಲಿ
ಜೀವಂತ ಉಸಿರಾಟದಲಿ
ನೊಂದ ನೆನಪುಗಳಿಗೆ ಮುಲಾಮು ಹಚ್ಚುತ್ತಾ....
- ram purshi
28 Mar 2017, 12:01 pm
ನಿನ್ನ ನಗುವಿನಲಿ
ಇಲ್ಲದ ನಾನು
ಕಣ್ಣಂಚಿನಲಿ
ಕರಗುವ
ನಿರಾಸೆಯ
ಹನಿಗಳಲಿ
ಜಿನುಗುತಿರುವೆ....
-ಪುರು
- ram purshi
28 Mar 2017, 11:38 am
ಗೆಳತೀ.. ಮರೆಯಾದೆ ನೀನು..
ಮರಳಿ ಬರಬಾರದೇ…?
ತುಡಿತದೆದೆಯ ಬಡಿತದಲೂ
ತಡವರಿಸುವ ಕನಸಲೂ
ದೇಹದ ಸಕಲ ನರ ನಾಡಿಯಲೂ
ತುಂಬಿರುವೆ ನೀನು
ಹೆಸರಿಲ್ಲದೆ ಅಳಿದು ಹೋದ ಬಂಧವಿದು
ಹೊಸ ಹೆಸರ ಕೊಡಬೇಕು..
ಆ ಹೆಸರ ನಾ ಕೂಗಿ ಕರೆಯಲು
ಓ ಎನುತ ನೀನೋಡಿ ಬರಬೇಕು
ನಿನ್ನ ಸೆಳೆತವಿರದ ಕ್ಷಣವಿಲ್ಲ
ನಿನ್ನ ನೆನಪಿರದ ದಿನವಿಲ್ಲ..
ನಿನ್ನ ಮರೆತು ಬದುಕುವ
ಕ್ಷಣಗಳ ಕಲ್ಪನೆಯೂ ನನಗಿಲ್ಲ
ಬತ್ತಿದೆ ನನ್ನೆದೆಯ ಮಾತು
ಬಿಕ್ಕಳಿಸುತಿದೆ ಹೃದಯ
ಅಳಿವು ಉಳಿವು ನಿನ್ನಲ್ಲಿದೆ
ಉಳಿಸು ಕಣೆ.. ನನ್ನ ಪ್ರೀತಿಯ
ಅಲ್ಲ ನನ್ನ ಜೀವವ.. ಜೀವನವ.
-
28 Mar 2017, 09:01 am