Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಮತೆಯ ಲಾಲಿ

ಲಾಲಿ.... ಲಾಲಿ.... ಕಂದ
ಲಾಲಿ.... ಲಾಲಿ.... ಕಂದ
ನಿನ್ನ ಮುದ್ದು ಮಾತು
ಕೆಳಲೆಂತ ಚಂದ
‌ ||ಲಾಲಿ||
ಬರಿದಾದ ಬಾಳಿಗೆ
ಬೆಳಕಾಗಿ ಬಂದೆ
ತಾಯಿಯ ಮಡಿಲಿಗೆ
ಹರುಷವ ತಂದೆ

ಬರಿದಾದ ಮನೆಯು
ನಿನ್ನಿಂದ ಬೆಳಗಿತು
ಮನದ ತವಕವು
ಮಂಜಂತೆ ಕರಗಿತು

ನಿನ್ನ ಒಂದೊಂದು ಹೆಜ್ಜೆಯು
ಮುತ್ತಿನ ಹಚ್ಚೆಯು
ನೀನಿದ್ದ ಮನೆಯು
ತುಂಟರ ಸಂತೆಯು

ಬಂಧು-ಬಳಗವು
ಬೆನ್ನಟ್ಟಿ ಬರುವರು
ಮನೆಯ ಅಂಗಳಲಿ
ಮಂಗಳ ಕಾಯ್ರಗಳು

ಹತ್ತಾರು ಉಡುಗೊರೆಯ
ಹೊತ್ತು ತರುವರು
ಮುತ್ತಿನ ಸುರಿಮಳೆಯ
ಸುರಿಸುತ್ತ ಹರಸುವರು


-ಶಾರದ

- ಶಕುಂತಲಾ

21 Mar 2017, 04:13 pm

ಪ್ರೀತಿ

ಓಬ್ರನ್ನೂ ಜೀವಕಿನ್ತ ಜಾಸ್ತಿಯಾಗಿ ಇಷ್ಟಪಟ್ರೆ ಅವರಲ್ಲೀನ ಹೆಚ್ಚು ಕಡಿಮೆ ನೋಡಬಾರದು
ಪ್ರೀತಿ ಮಾತ್ರನೇ ಕಾಣಬೇಕು.
ಅವಾಗ ಮಾತ್ರ ಅದು ಪ್ರೀತಿ.

ಯಾರೊಬ್ಬರೂ ಪರಿಪೂರ್ಣರಲ್ಲ
ಸಾವಿರಾರು ಹೊಡೆತಗಳ ನಂತರವೇ
ಒಂದು ಶಿಲೆಯು ಶಿಲ್ಪವಾಗುವುದು.

ನೀವು ನಿಜವಾಗಿಯೂ ಪ್ರೀತಿಸಿದ್ದರೆ
ಆ ಗಗನ ತಾರೆಗಾಗಿ ಕಾಯಿರಿ
ಅದು ಒಂದು ದಿನ ನಿಮಗಾಗಿ ಭುವಿ ಸೇರುತ್ತದ್ದೆ.

- ಚುಕ್ಕಿ

21 Mar 2017, 01:21 pm

ಬಿಸಿಲ ಬೇಗೆ

ಮೇಲೆ ನೀನು
ಕೆಳಗೆ ನಾನು
ನಡುವೆ ಉಗುಳೊ ಬೆಂಕಿಯು
ಧರಣಿ ಕೆಂಪು
ಮಾಡು ತಂಪು
ಮಳೆರಾಯ ನೀ ಬಂದು


-ಶಾರದ

- ಶಕುಂತಲಾ

21 Mar 2017, 12:39 pm

ಸೀ..ನೀ....ರೆಯ ಸೊಬಗು

ಜರಿಯ ಸೀರೆಯಲಿ
ಕಟ್ಟಿಟ್ಟ ಸೌಂದರ್ಯ ಲಹರಿ
ರೇಷ್ಮೆಯಂಥಹ ನೀರೆಗೆ ಭಾವಗಳು ಜಾರಿ

ಹೂ ಅರಳಿದ ಸೊಬಗು
ಕಣ್ಣು ಮಿಂಚಿನ ಮೆರಗು
ಸಣ್ಣನೆಯ ಅದರಗಳು ಸೆಳೆದು

ಸೆರಗ ಸುಕ್ಕು ಮಾತಾಡಿ ಹಲವು
ನೆರಿಗೆಯು ನಲಿದಿತ್ತು ಮಡಿಕೆಯ ಒಲವು
ಕುಚ್ಚು ಬೀಸಿತ್ತು ತೋರಿ ಗೆಲುವು

-ಕನ್ನಡದ ಭಕ್ತ

- ಕನ್ನಡದ ಭಕ್ತ

21 Mar 2017, 12:05 pm

ನಿನ್ನ ನೆನಪು

ಮನಸಿನ ಪುಟದಲ್ಲಿ
ನೀ ಬರೆದ ಒಲವಿನ ಸಾಲು
ಮರುಕಳಿಸುತ್ತಿದೆ ಇಂದು
ಮರೆಯದ ನೆನಪಾಗಿ!!

ಬದುಕಿನ ಹಾದಿಯಲ್ಲಿ
ನೀ ನಡೆದ ಹೆಜ್ಜೆ ಗುರುತು
ಹಿಂಬಾಲಿಸಿ ಬರುತಿದೆ ನನ್ನ
ಈ ಏಕಾಂತದ ಪಯಣದಲ್ಲಿ!!

ಹೃದಯದಲಿ ನೀ ಇಟ್ಟ
ದರ್ಪಣವು ಚೂರಾಗಿ
ನೋವಲ್ಲೂ ತೋರುವುದು
ನಿನ್ನಯ ಸಾವಿರ ಮುಖವ!!

ಇರುಳಲ್ಲಿ ಕನಸಿನ ವರದಿ
ಹಗಲಲ್ಲಿ ನೆನಪಿನ ಸರದಿ
ದಿನವೆಲ್ಲ ಹೀಗೆಯೇ ಇರಲು
ಬೇರೆ ಏನಿಲ್ಲ ನಿನ್ನಯ ವಿನಹ!!

- ಪಿ.ಜಿ.ಜ್ಯೋತಿ

21 Mar 2017, 11:05 am

ಹೇಳು ನೀನು

ಒಮ್ಮೆ ಹೇಳು ನೀನು ನನಗೆ
ಏಕೆ ಹೀಗೆ ಮಾಡಿದೆ!!
ಪ್ರೀತಿಯಲ್ಲಿ ತುಂಬಿದ ನಗೆ
ಇಂದು ಯೇಕೆ ಮಾಸಿದೆ!!

ಮನದಿ ಮೂಡೋ ಸಾಲು ಪ್ರಶ್ನೆಗೆ
ಕೊಡಲಿ ಯಾವ ಉತ್ತರ!!
ಮೌನ ಮುರಿದು ಮಾತನಾಡಲು
ಬರುವುದಿಲ್ಲ‌ ಈ ಸ್ವರ!!

ನಿನ್ನ ಮರೆತು ಬಾಳಲಾರದೇ
ಚಡಪಡಿಸುತ್ತಿದೆ ಈ ಮನ!!
ನಿನ್ನ ಒಲವಿಗಾಗಿ ತಾನೇ
ಕಾದಿರುವುದು ಜೀವನ!!

ಒಂದು ಬಾರಿ ಬಂದು ಹೇಳು
ಹುಸಿಯಲ್ಲ ಈ ದಿನ!!
ನೀನು ನನ್ನ ಜೊತೆಯಲೇ ಇರು
ಮುಂದೆ ಬರುವ ಅನುದಿನ!!

- ಪಿ.ಜಿ.ಜ್ಯೋತಿ

21 Mar 2017, 10:46 am

ನವ ವಸಂತ

ಕಾಲದ ಕಡಲಲ್ಲಿ
ಹರುಷದ ಅಲೆಯಾಗಿ
ವರುಷವು ಮರಳುವೆ
ಹೊಸ ಹುರುಪಿನಲ್ಲಿ

ಸಿಹಿ-ಕಹಿಯ ದೋಣಿಯಲ್ಲಿ
ಕಳೆಯುವೆವು ಭಾಗಿಯಾಗಿದ್ದ
ನಾ-ನಿಂತರು,ನೀ-ನಿಲ್ಲದೆ
ನಡೆಸುವೆ ನಾವಿಕನಾಗಿ

ಹೊಸ ವಷ್ರವೆಂದು
ಮೂಡಣದಲ್ಲಿ ಮೂಡಲಿಲ್ಲ
ನವ ರವಿ,ಇದರ ಪರಿವೆ ಇಲ್ಲ
ಜೀವರಾಶಿಗಳ ಬದುಕಲ್ಲಿ

ದಿನ-ನಿತ್ಯದ ಬದುಕಲ್ಲಿ ಹೊಸತಿಲ್ಲ
ಹುಡುಕಲು ಅದು ಸಿಗುತಿಲ್ಲ
ಎಲ್ಲಿಗೊದರು?ಮನಸ್ಸಿಗೆ ಮುದವಿಲ್ಲ
ಹಳೆಯ ನೆನಪುಗಳು ನನ್ನ ಬಿಡುತಿಲ್ಲ

ಎಲ್ಲವು ಬಳಿಯಲ್ಲಿದ್ದರು
ಏನೋ, ಬೇಕೆಂದಿದೆ ಮನ
ಕಂಡ ಕನಸುಗಳು ಲೆಕ್ಕವಿಲ್ಲ
ಆದರು ಬಯಸಿದ ಹಾದಿ ಬಳಿಯಿಲ್ಲ

ಸಾದಕರ ಹಾದಿಯಲ್ಲಿ
ನಾನಾಗಿ ಸಾಗುವಾಸೆ
ಜಗದ ಅಕ್ಷಿಯಲ್ಲಿ
ನಾ,ಮೆರೆಯುವಾಸೆ
ನೀ, ನನ್ನೋಂದಿಲ್ಲದ ನಿರಾಸೆ

ಸಾಧಿಸಿ ಸಾಲಾಗಿ ನಡೆದರು
ಹಲವರು, ಪರ ಯಾತ್ರೆಯಲ್ಲಿ
ಅವರ ಹೆಜ್ಜೆಯ ಗೆಜ್ಜೆನಾದ
ಸದಾ ಮೊಳಗುತಲಿದೆ ಮನದಗುಡಿಯಲ್ಲಿ

ಗೆದ್ದ ನಾಯಕರೊಂದೆಡೆ
ಗೆದ್ದು ಸೊತವರು ಇನ್ನೊಂದೆಡೆ
ಗೆಲ್ಲದೆ ನಿನ್ನ ಶಪಿಸುವರು, ದಿಟ್ಟಿಸಿ
ನೋಡುತ್ತ ನಿನ್ನ ಕಡೆ

ಯಾರಿಗೂ ನೀ ಬಂದುವಲ್ಲ
ಎಂದಿಗೂ ನೀ ಸ್ತಿರವಲ್ಲ
ಎಲ್ಳರಿಗು ನೀ ನೀಡುತಿರು
ಹೊಸ-ವಸಂತದ ಸಿಹಿ ಜೇನ
ಇಂದಿಗೂ .... ಮುಂದಿಗೂ....ಎಂದೆಂದಿಗೂ....


ಶಾರದ

- ಶಕುಂತಲಾ

20 Mar 2017, 09:53 pm

ನಾಡ ದೇವಿಯ ಸೇವೆಗೆ ಬನ್ನಿ

||ನಾಡ ದೇವಿಯ ಸೇವೆಗೆ ಬನ್ನಿ
ನಾಡ ಗುಡಿಯ ಬೆಳಗುವೆನೆನ್ನಿ||

ಜಾತಿ ಪಂಥದ ಬೇಲಿಯ ನೀಗಿ
ಬಂಧು ಭಾವದ ತೊಟ್ಟಿಲ ತೂಗಿ
ಕಟ್ಟುವ ನಾವು ಭಾರತವ
‌‌‍ ||ನವ ಭಾರತ ನವ ಭಾರತ||
ಸೇವೆಯೆಂಬ ತೈಲವನೆರೆದು
ಸ್ವಾಭಿಮಾನದ ದೀಪವ ಉರಿದು
ಬೆಳಗುವ ನಾವು ಭಾರತವ
||ನವ ಭಾರತ ನವ ಭಾರತ||
ತ್ಯಾಗ ಭಾವದಸುಧೆಯನು ಹರಿಯುವ
ನಿಸ್ವಾರ್ಥ ಭಾವದ ಕಡಲನು ಸೇರುವ
ನಮಿಸುವ ನಾವು ಭಾರತವ
||ನವ ಭಾರತ ನವ ಭಾರತ||
ಸಾಧುಸಂತರ ತಪೋಭೂಮಿಯಿದು
ಮನುಜ ಜನ್ಮದ ಮೋಕ್ಷ ದ ಮಣ್ಣಿದು
ಸಂಘ ಮಂತ್ರವ ಮನದಲಿ ನನೆದು
ತರುಣರ ಹೃದಯದ ಗುಡಿಯನು ಬೆಳಗಿ
ಸಾರುವ ಐಕ್ಯದ ನವ ಸಂದೇಶ
||ನವ ಭಾರತ ನವ ಭಾರತ|| ||ನಾಡ ದೇವಿಯ ಸೇವೆಗೆ ಬನ್ನಿ
ನಾಡ ಗುಡಿಯ ಬೆಳಗುವೆನೆನ್ನಿ||

- ಅರುಣ್. ಕೆ. ಗಟ್ಟಿ. ಕಾಪಿಕಾಡ್

20 Mar 2017, 09:12 pm

ಜನುಮ ದಿನದ ಶುಭಾಶಯ

ಕರಗಿಸು ಬಾನ್ನೇತ್ತರದಿ ಬಣ್ಣಗಳ  ಬಳಿದು 
ಕಪಟ ಕನಸುಗಳಾ ಕತ್ತಲೇಯ ಕಡೇಗಣೀಸು ಕಂಡ ಕಣ್ಣಗಳಾಚೆ 

ಕಾಣು ಕಾಮನಬಿಲ್ಲಿನ ಸ್ವಪ್ನವ ಬಿಡಿಸುನಿ ಬದುಕಿನ ರಂಗಿನ ರಂಗೋಲಿಯ ಜಿಟಿ ಮಳೆಯ ಮಳೆಯಂತೆ

ಮೆರಗಿಸು ಬದುಕಿನ
ಕಲೇಯಾ ಕಲ್ಪನೇಗೇ ಮಿರಿ
ಮೀನುಗು ನೀ ಮಿಂಚಿನಾರ್ಭಟದಿ
ಮನದ ಮನಸಿನ ಕನಸಿನಾಚೆ

ಸೂರ್ಯ ಉದಯಿಸಿದ ಪೂರ್ವದಿ
ಚಂದ್ರ ಜನಿಸಿದ ಪಶ್ಚಿಮದಿ
ಕಿರಣನ ಸಹೋದರ ಕಿಶನ ಜನಿಸಿದ
ಭೂಮಿಯಲ್ಲಿ

ಇದೋ ಇಗೋ ಇದೆ ನಿನ್ನಿ ಜನುಮ ದಿನದಿ
ನನ್ನಿ ನಲುಮೆಯ ಕವನದ ಕಾಣಿಕೆ

✍✍✍ಇಂತಿ ನಿಮ್ಮ್ ಪ್ರದೀಪ✍✍✍✍

- ಪ್ರದೀಪ.ಮ.ಪಾಡಮುಖೆ

20 Mar 2017, 09:10 pm

ಗಿಡವಾದಳಾ ಪ್ರೇಯಸಿ

ನನ್ನ ಮುದ್ದಾದ ಪ್ರೇಯಸಿ
ಬಂದಿಯಾದಳು ಆ ರಾಕ್ಷಸನ ಕೈಯಲ್ಲಿ.
ನೋಡಲಾಗಲಿಲ್ಲ ಅವಳ ನೋವು ನನ್ನಿಂದ.

ಆ ರಾಕ್ಷಸ ನಾಶವಾದ ನನ್ನ ಕೈಯಲ್ಲಿ
ಆದರೂ ಗಾಯಗೊಂಡೆನೆ ನಾನು.
ನನ್ನ ನೋಡಿ ಅತ್ತಳು ನನ್ನವಳು
ಅವಳ ರೋಧನೆ ಮುಗಿಲು ಮುಟ್ಟಿತು.

ಅವಳ ದುಃಖ ನೋಡಿ ಇಳಿದು
ಬಂದಳಾ ಪ್ರೇಮ ದೇವತೆಯು.
ಹೇಳಿದಳು ನಿನ್ನ ದುಃಖ ಪರಿಹಾರವಾಗಲು
ಒಂದು ಮಾರ್ಗವಿದೆ ಎಂದು.

ಹಾಗ ನನ್ನ ಪ್ರಿಯತಮೆಯು
ನನ್ನ ಜೀವಕ್ಕಿಂತ ಹೆಚ್ಚಾದ ಇವನು
ಬದುಕಿದರೆ ಸಾಕೆಂದಳು.
ಅದಕ್ಕಾಗಿ ನಾ ಸಾಯಲು ಸಿದ್ದವೆಂದಳು.

ಪ್ರೇಮ ದೇವತೆಯು ಹೇಳಿದಳು ನೀನೇ
ಆ ಔಷದಿ ನೀನು ನಿನ್ನ ಪ್ರೀತಿಯಲ್ಲಾ
ಸೇರಿಸಿ ಒಂದು ಗಿಡವಾಗು ಅದರಲ್ಲಿನ
ನಿನ್ನ ಪ್ರೀತಿ ಅವನನ್ನು ಬದುಕಿಸುತ್ತೆ ಎಂದಳು.

ಕ್ಷಣಮಾತ್ರ ಯೋಚಿಸದೆ ಗಿಡವಾದಲಾವಳು
ನಾನು ಮತ್ತೆ ಜೀವ ಪಡೆದನು.
ನನ್ನ ಉಸಿರಿನ ಪರಿಸ್ಥಿತಿ ನೋಡಿ
ಕಣ್ಣೀರಿನ ಮಳೆಯಲ್ಲಿ ಮಾಯವಾದೇನು.

ಅಂದಿನಿಂದ ಅವಳಿಗೆ ನಾ ಪ್ರೀತಿಯ
ಮಾಲೀಕನಾದೇನು ಅವಳು ನನ್ನ
ಜೀವವಾದಳು.......

ನನಗಾಗಿ ಗಿಡವಾದಳಾ ಪ್ರೇಯಸಿ............

- ಚುಕ್ಕಿ

20 Mar 2017, 08:35 pm