Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀ ಬಂದಾಗ

ಕಲ್ಪನೆಯ ಕಡಲಲ್ಲಿ
ಮಂಜಿನ ನಸುಕಿನ ಮಡಿಲಲ್ಲಿ
ಸೂರ್ಯಕಾಂತಿಯ ಬೆಳಕಿನಂತೆ ಹೊರಬಂದೆ

ರಾತ್ರಿಯ ಸೊಬಗಿನ ಆಕಾಶದ
ಮಿನುಗು ನಕ್ಷತ್ರಗಳ ನಡುವಲ್ಲಿ
ಬಿಳಿಯ ಚಂದಿರನ ಮೊಗದಂತೆ ನೀ ಕಂಡೆ

ಸದ್ದು ಗದ್ದಲಧ ಕೋಲಾಹಲ ಎಬ್ಬಿಸಿದೆ

ಓ ನನ್ನ ಕಂದಮ್ಮ ನಿನ್ನ ಚೆಲುವ ನಾ
ಹೇಗೆ ಬರೆಯಲಿ ಈ ನನ್ನ ಪುಟ್ಟ ಕವನದಲಿ
ನಿನ್ನ ಅ ಸದ್ದಲ್ಲು ಎನಗೆ ಏನೋ ಉಲ್ಲಾಸ ಮೂಡಿದೆ

ಸಂತಸದ ಕ್ಷಣ ಮುಗಿಲನ್ನು ಮುಟ್ಟಿ ಬಂದಂತೆ
ನಿಷ್ಕಲ್ಮಶ ನಿನ್ನ ನಗು ನನ್ನ ಮನಸೂರೆಗೊಂಡಿದೆ
ಕೂಸೆ ನೀ ನನ್ನ ಕನಸು...!

ನಗುತಲಿರು ನೀ ಎಂದೂ ,
ಜೊತೆಯಲಿರುವೆ ನಿನ್ನ ನೆರಳಂತೆ ನಾ ಎಂದೆಂದೂ...

- basavarajsirnayakpreethu

20 Mar 2017, 02:35 pm

ಪ್ರೀತಿಯ ಪಾಠ

ಕಾಣುತ ಹೊರಟಿಹೆ ಪ್ರೇಮದ ಜೋಡಿಯ ಪ್ರೇಮಿಗಳನ್ನು ದಾರಿಯಲಿ ,
ಕಾಣಲು ಕಾಡುವ ನನ್ನಯ ಪ್ರೇಮಿಯ ನೆನಪುಗಳೆಲ್ಲವೂ ನೆನಪಿನಲ್ಲಿ ,
ನೆನಪದು ಸುಮದುರ ಆದರೆ ಮುಜುಗರ ಅವಲಿಲ್ಲದಿರೋ ಈ ಬಾಳಿನಲಿ ,
ನೆನಪನು ಉಳಿಸಿ ನಡೆದು ಹೊರಟವಳು ತಿರುಗಿಯೂ ನೋಡದೆ ಹೊರಟವಳೆಲ್ಲಿ? ....
ಬೇಕಾಗಿರುವದು ಪ್ರೀತಿಯು ಮಾತ್ರವೇ ಪ್ರೀತಿಸಲೆಂದು ತಿಳಿದಿದ್ಧೆ , ಪ್ರೀತಿಗೆ ಬೇಕಿರೋ ಕಾಸಿನ ಕವಡೆಯು ಸಂಪಾದಿಸಲು ಮರೆತಿದ್ಧೆ , ಸಂಪಾದನೆಯನು ಮಾಡಲು ತಿಳಿಸಲು ಬಂದವಳೆನೋ ಅನುತಿದ್ಧೆ ,
ಕಾಂಚನವಿಲ್ಲದ ಪ್ರೇಮವು ಕುರುಡು ಎಂಬುವ ಪಾಠವ ಕಲಿತಿದ್ದೆ .

- basavarajsirnayakpreethu

20 Mar 2017, 02:02 pm

ಪ್ರೀತಿ...❤

ಮನದಾಳದ ಮಾತಿಗೆ,
ಹೃದಯದಾಳದ ಬಡಿತವಾಗಿ,
ಉದಯಿಸಿತು ಈ ಪ್ರೀತಿ.....

ಅವಳ ಕಣ್ಣೋಟಕೆ ಸಿಲುಕಿ,
ಕನಸಿನ ಲೋಕದಲಿ ಅಲೆದಾಗ,
ಎದುರಾದ ಮಧುರ ಕನಸು ಈ ಪ್ರೀತಿ.....

ಅವಳ ಅಂದಕೆ ಶರಣಾಗಿ,
ನನ್ನ ಮಾತೆಲ್ಲ ಮೌನವಾದಾಗ,
ಮೂಡಿದ ಸವಿ ಭಾವ ಈ ಪ್ರೀತಿ.....

ಅವಳ ತುಂಟ ನಗುವಿನಲ್ಲಿ,
ನಾ ಮರೆಯಾದ ಕ್ಷಣಗಳ ನೆನೆಯುತ,
ಮುಂದೆ ಸಾಗುವ ಪರಿಯೇ ಈ ಪ್ರೀತಿ.....

Raju❤

- Raju.

20 Mar 2017, 01:58 pm

ಸುಮ್ಮನೇ ಸತ್ತು ಬಿಡಿ.

ಸುಮ್ಮನೆ ಸತ್ತು ಬಿಡಿ
ಏಕಾಂತದೆ ಮನದೊಳಗೆ ಬಂದ ಕನಸನ್ನು
ನನಸಾಗಿಸುವ ನವ್ಯ ಚಿಂತನೆಗಳೇ...
ಜಾತಿಗಳು ಮತವಾಗತೊಡಗಿದೆ
ನೀತಿ ನಿಯಮ ತಪ್ಪಿದೆ.
ಬೆಳಕನ್ನೂ ಕ್ಷಣದಲ್ಲಿ ಕತ್ತಲಾಗಿಸುವ
ಕಂಡೂ ಕಾಣದ ಕೈಗಳು
ಕಾಣದಂತೆ ವ್ಯವಸ್ಥೆಯ
ತಮ್ಮ ಕಪಿಮುಷ್ಠಿಯಲ್ಲಿ ಹಿಡಿದು
ಕೊಂಡಿದೆ... ಅಯ್ಯೋ ಗಟ್ಟಿಯಾಗಿ
ಹೇಳದಿರಿ ಸಮತಟ್ಟವಾದ ಭುವಿಯಲ್ಲಿ
ಗುಂಡಿಗಳು ಬಿದ್ದಿವೆ. ..
ನಿಜ ಸುಳ್ಳು ಎಲ್ಲರಿಗೂ ಗೊತ್ತಿಲ್ಲವೆಂದೇನಲ್ಲ
ಕರ್ತವ್ಯದ ಚುಕ್ಕಾಣಿ ಹಿಡಿದಿರುವ
ಕೈಗೆ ಸಂಕೋಲೆ ತೊಡಿಸಿ ಅಧಿಕಾರ
ನೀಡಲಾಗಿದೆ...
ಅಂದ್ಯಾರೋ ಹೇಳಿದ ಮಾತು
ಇಂದು ನಿಜವೆನಿಸತೊಡಗಿದೆ
ಬದುಕಬೇಕೆಂದರೆ ಜಗದ
ಜನರೊಳಗೆ ಮಾತು ಬೆಳ್ಳಿ ಅಲ್ಲ ( ತಳ್ಳಿ)
ಮೌನ ಬಂಗಾರವಾಗಿದೆ...!!
ಅನು..

- Anu...

20 Mar 2017, 11:49 am

ಸ್ನೇಹದ ನೆನಪು..

ಆ ದಿನಗಳನ್ನು ನೆನೆಸಿ...
*******************

ನಾನಾಗ ಚಿಕ್ಕವನಾಗಿದ್ದೆ
ಆಳವಾಗ ಸ್ನೇಹವಿರುತ್ತಿತ್ತು
ಹೊಡೆದಾಟ ಬಡಿದಾಟ ದೂರು ಚಾಡಿ
ಇಂದಿನಂತೆ ಅಂದೂ ಇರುತ್ತಿತ್ತು
ಆದರೆಂದೂ ಸ್ನೇಹ ಕುಂದುತ್ತಿರಲಿಲ್ಲ
ಪ್ರೀತಿಗೀತರ ಬರವಿರಲಿಲ್ಲ
ಗೆಳೆಯರನೇಕ ಈಗಲೂ ಇದ್ದಾರೆ
ಆದರೆಲ್ಲೂ ಸ್ನೇಹದ ಸುಳಿವಿಲ್ಲ
ಎಲ್ಲಾದರೂ ಮಿತ್ರರ ಮಿಲನವಾದರೆ
“ಹಾಯ್ ಬಾಯ್” ಹೇಳಿ ಮುನ್ನಡೆಯುತ್ತಾರೆ
ಸಭೆ ಸಂಭ್ರಮ ನಡೆದರೆ
ಹಬ್ಬ ಪರ್ವದ ದಿನ ಬಂದರೆ
ಹುಟ್ಟು ಸಾವಿನ ಸಂದರ್ಭಗಳಲಿ
ಅಥವಾ ಯಾವುದೇ ಭಾನುವಾರ
ರಿಂಗಣಿಸುತ ಒಂದು ‘ಕರೆ’ ಬರುತ್ತದೆ
ಇಲ್ಲವೆಂದರೆ ಒಂದು ಎಸ್ಎಂಎಸ್
ಬಹುಶಃ ನೆಂಟಸ್ತಿಕೆಗಳೀಗ ಬದಲಾಗುತ್ತಿದೆ
ಅನು..

- Anu...

20 Mar 2017, 11:48 am

ಕಡಲ ತೀರದಲಿ ಅವಳ ರಂಗು

ಅಲೆಯೇ ತಾಳು ಸ್ವಲ್ಪ ಹೊತ್ತು
ನನ್ನ ಮುದ್ದು ಹುಡುಗಿ ನಡೆದು
ಹೃದಯಕಡಲ ಒಳಗೆ ಇಳಿದು
ಸಂಗ್ರಹಿಸಿಕೊಳ್ಳಲಿ ಕೊಂಚ ಪ್ರೇಮ ಭಾವವ..

ಸೆಳೆತವು ಎಲ್ಲೆ ಮೀರಿ,
ನದಿಯು ಕಡಲ ಅರಸಿ ಬಂದು ಜಾರಿ,
ಭಾಸವಾಗಿದೆ ಅವಳ ಗೆಜ್ಜೆ ಪಿಸುಗುಟ್ಟಿದಂತೆ,
ಕೆಂಪು ಸಂಜೆಯ ಹೊತ್ತಿಗೆ ಕೆನ್ನೆ ಕೆಂಪಾದಂತೆ..

ಹೊಂಚು ಹಾಕಿ ಕಾದಿರುವೆ ನಿನ್ನ ಜೊತೆಯ,
ಹಂಚಿ ಒಮ್ಮೆ ಹಾಡಿಬಿಡು ಪ್ರೀತಿಕಾವ್ಯವ,
ಸಂಜೆ ರಂಗು ಮಾಯವಾಗುವ ಮೊದಲು,
ಕೂಡಿಟ್ಟುಕೊಡು ಒಂದಷ್ಟು ನಿನ್ನ ಭವ್ಯವ..

ಅನುಮೋದನೆಯು ಒದಗಿ
ಹೆಚ್ಚು ಪ್ರೀತಿ ಸಂಭಾವನೆಯ ನಿರೀಕ್ಷೆಯು ಕಾಡಿ
ಇಬ್ಬರ ಹೆಜ್ಜೆಯು ಸಮನಾಗಿ
ಮೂಕಸಂವೇದನೆಯು ರವಾನೆಯಾಗಿ..

-ಕನ್ನಡದ ಭಕ್ತ

- ಕನ್ನಡದ ಭಕ್ತ

20 Mar 2017, 08:09 am

ಪ್ರೀತಿ

ಇಬ್ಬರು ಪ್ರೇಮಿಗಳು ಅವರ
ವಯಸ್ಸು ಆಗಿತ್ತು ಅರವತ್ತು.
ತಾತ ಇದ್ದರು ಊರಿನಲ್ಲಿ
ಅಜ್ಜಿ ಇದ್ದರು ಮಗನ ಮನೆಯಲ್ಲಿ.

ತಾತ ದಿನ ಕರೆ ಮಾಡುತ್ತಿದ್ದರು ಅಜ್ಜಿಗೆ
ಅಜ್ಜಿ ದಿನಾಲು ತಾತ ಕರೆ ಬರುವ ಸಮಯಕ್ಕೆ
ಸರಿಯಾಗಿ ಚನ್ನಾಗಿ ರೆಡಿಯಾಗಿ ಕೂರುತ್ತಿದ್ದಳು
ಫೋನ್ ನಲ್ಲಿ ಮಾತಾಡಲು.

ಇದನ್ನು ದಿನಾ ಗಮನಿಸುತ್ತಿದ್ದ ಮಮ್ಮಗಳು
ಕೇಳಿದಳು ಅಜ್ಜಿಯಾಕೆ ನೀನು ದಿನ ಕರೆಬರುವ
ಸಮಯಕ್ಕೆ ರೆಡಿಯಾಗಿ ,ಹೂ ಮುಡಿದು ,ಬೊಟ್ಟಿಟ್ಟು,ಬಳೆ ತೊಟ್ಟು
ಕೂರುತ್ತಿಯಾ ಎಂದು.

ಅಜ್ಜಿ ಹೇಳಿದಳು ಮಗು ನಿಮ್ಮ ತಾತ
ನನ್ನನು ಮದುವೆಯಲ್ಲಿ ಈ ರೀತಿಯೆ
ನೋಡಿದರು ಅವಗಿಂದ ದಿನಾಲು ಈಗೆ
ಅವರಿಗಾಗಿ ರೆಡಿಯಾಗೋದು ನನಗಿಷ್ಟ ಎಂದು.

ಆಗ ಮಮ್ಮಗಳು ಆದ್ರೂ ಅಜ್ಜಿ ನೀನು
ತಾತನಿಗೆ ಕಾನಲ್ವಲ್ಲ ಅದ್ರಲ್ಲೂ ಅವ್ರಿಗೆ
ಈಗ ಕಣ್ಣು ಸಹ ಕಾಣಲ್ಲ ಎಂದಳು.

ಹಾಗ ಅಜ್ಜಿ ನಗುತ್ತ ಮಗು ನಂಗೂ ಗೊತ್ತಮ್ಮ
ತಾತನಿಗೆ ನಾನು ಕಾಣಲ್ಲ, ಕಣ್ಣು ಕಾಣಲ್ಲ ಅಂತ ಅವ್ರು ನನ್ನಕಣ್ಣಿಂದ ನೋಡಿ ಇಷ್ಟ ಪಟ್ಟಿಲ್ಲ ಮನಸ್ಸಿನಿಂದನೋಡಿ ಇಷ್ಟ ಪಟ್ರು
ಈಗ್ಲೂ ಹಾಗೇ ನೋಡ್ತಾರೆ.

ಅವ್ರು ನೋಡಿದ್ರು ನೋಡಿಲ್ಲ ಅಂದ್ರು ನಾನು
ಅವರಿಗಾಗಿ ರೆಡಿ ಆಗ್ತೀನಿ ಅವ್ರು ನನಗಾಗಿ
ಕರೆ ಮಾಡ್ತಾರೆ ಫೋನ್ ನಿಂದ ಅಲ್ಲ
ಪ್ರೀತಿಯಿಂದ ಎಂದಳು.

ಅಷ್ಟರಲ್ಲಿ ತಾತನ ಕರೆ ಬಂತು ಅಜ್ಜಿ
ಓಡಿ ಹೋದಳು ಮಾತಾಡಲು.
ಪ್ರೀತಿ ಇಬ್ಬರು ವ್ಯಕ್ತಿಗಳ ಮಧ್ಯೆ ಅಲ್ಲ
ಎರಡು ಹೃದಯಗಳ ಮಧ್ಯೆ.........

ಇಂತಿ ನಿಮ್ಮ ಅಂಚಲ........

- ಚುಕ್ಕಿ

19 Mar 2017, 08:30 pm

ಸಾವು

ಎಲ್ಲಾ ಇಹಲೋಕ ಕಷ್ಟಗಳಿಗೂ
ಬಹುದೂರ ಸಾವು.
ಪರಮಾತ್ಮನ ಸೇವೆಗಾಗಿ ಪರಲೋಕ
ಪಯಣ ಸಾವು.

ಭವ ಬಂದಗಳಿಗೆಲ್ಲಾ ಅಂತಿಮ
ನಮನ ಸಾವು.
ಎಲ್ಲಾ ನೋವುಗಳನ್ನು ಹರಿಸುವ
ಯಮನ ಪಾದಗಳಿಗೆ ಅರ್ಪಿಸುವ
ಹೂವು ಸಾವು.

ಸತ್ತ ಮೇಲಾದರೂ ನನ್ನ ಕಣ್ಣೀರಿಗೆ
ಅಂತ್ಯವಿದೆಯ.
ನೆಮ್ಮದಿ ನೀನು ನನ್ನ ಹುಡುಕಿ
ಬರುವೆಯ............................?

- ಚುಕ್ಕಿ

19 Mar 2017, 07:10 pm

ಓ ಮಿನುಗುತಾರಾಮಣಿ

ನಕ್ಕರೆ ಸುಕುಮಾರಿ
ಅತ್ತರೆ ಮಯೂರಿ
ನಾಚಿದರೆ ಸುರಸುಂದರಿ
ಮಾತಾಡಿದರೆ ವಾಗ್ದೇವಿ ಕುವರಿ
ಸಿಡುಕಿದರೆ ಸಿಂಗಾರಿ
ಬಳುಕಿದರೆ ಬಂಗಾರಿ
ನನ್ನವಳು ಕನ್ಯಾಕುಮಾರಿ...

- Irayya Mathad

19 Mar 2017, 06:40 pm

ಕಮರಿದ ಕನಸು

ತಾರೆಯಾಗುವಾಸೆ
ಚಂದ್ರನಾಲಯದಲ್ಲಿ
ಮೀನಾಗುವಾಸೆ
ಕಡಲ ಮಡಿಲಲ್ಲಿ
ಝರಿಯಾಗುವಾಸೆ
ಜೋಗದ ಸಿರಿಯಲ್ಲಿ
ಕಡೆಗೆ,ನಾನಾದೆ ಪಾತ್ರದಾರಿ
ವಿಧಿಯ ಸೂತ್ರದಲ್ಲಿ


ಬಾಳ-ಬಟ್ಟೆಯಲ್ಲಿ
ಗುರಿಯ-ಅರಿವಿನಲ್ಲಿ
ಗುರು-ಸ್ಪೂತ್ರಿಯ
ಅಲೆ-ಅಲೆಯಲ್ಲಿ
ನಲಿ-ನಲಿಯುತ್ತ
ತೇಲಿ-ತೇಲಿ ಸಾಗಲು
ಬಟ್ಟೆಗೆಟ್ಟಿತು ಬಾಳು


ಕೈ ತುತ್ತ ತಿಂದ ಶ್ವಾನವು
ಯಜಮಾನನ ಕಾಲೇ ಕಡಿವಂತೆ
ಬೆವರೆ- ನೀರಾಗಿ ಹರಿದು
ಬೆಳೆದ ಮರವು,ಒಡೆಯನ
ಶಿರದ ಮೇಲೆರಗುವಂತೆ
ಬೇಲಿಯೇ ಎದ್ದು ಹೊಲ ಮೇಯ್ದಂತೆ
ಹಿಂಡಿನಿಂದ ಕುರಿ ಕದ್ದ ತೊಳದಂತೆ
ಮನೆಯಿಂದ ಅಗಲಿಸಿತು ಮನವ

ತಾಯ ಒಡಲಿಗೆ
ಬರಸಿಡಿಲು ಬಡಿಯಿತು
ನಳನಳಿಸುವ ಶಶಿಗೆ
ಕಾಮ್ರೋಡ ಕವಿಯಿತು
ಚಿಗರಿಯೊಂದು ವ್ಯಾಘ್ರನ
ಬಲೆಗೆ ಬಿದ್ದಾಗ

ಹಿತವಂಚಕರ ಹಿಂಡಿನಲ್ಲಿ
ಹಿತಚಿಂತಕರ ಹುಡುಕಾಟ
ನಡೆದಿದೆ ಬದುಕಿನಲ್ಲಿ
ಸವಾಲುಗಳ ಓಟ
ನಿಲ್ಲುವುದೆ ಇದರ ಆಟ
ಇದೆ ಬಾಳಿಗೊಂದು ಪಾಠ.


-ಶಾರದ

- ಶಕುಂತಲಾ

19 Mar 2017, 06:19 pm