Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಯುದ್ಧ ನಡೆದಾಗ!?

ಹುಟ್ಟು ಹಬ್ಬಕ್ಕೆ ಬರುವ
ಅಪ್ಪನ ಗೊಂಬೆಗೆ
ಮಗಳು ಕಾಯುತ್ತಿದ್ದಾಳೆ..!
**
ಅವನಲ್ಲಿ ದಿನಾಲೂ ಚಳಿಗೆ
ಮೈಯೊಡ್ಡಿ ರಕ್ತದ ಚಲನೆಯಲ್ಲಿ
ಏರುಪೇರಾಗಿದೆ ಈಗ ಯುದ್ಧ
ಕಿಟ್ ಜೋಡಿಸುತ್ತಿದ್ದಾನೆ..!
**
ಯುದ್ಧ ಭೂಮಿಯ ಇರುವೆಗಳು
ಪಲಾಯನ ಮಾಡುತ್ತಿವೆ
ಶ್ಶ್!!!ಯುದ್ಧ ನಡೆಯುವಾಗ
ಮನುಷ್ಯರ ಕಣ್ಣು ನೆತ್ತಿಯಲ್ಲಿ
ಹೃದಯ ಬಂದೂಕಿನ ತುದಿಯಲ್ಲಿ
ಎನ್ನುತಿದೆ ಮುದಿ ಇರುವೆ..!
**
ರಣಹದ್ಧುಗಳು ಸಂಗಡಿಗರಿಗೆ
ಆಮಂತ್ರಣ ಕೊಟ್ಟು ಬಂದಿದೆ
ಇನ್ನೆರಡು ದಿನದಲ್ಲಿ
ಭೂರಿ ಭೋಜನ ವ್ಯವಸ್ಥೆಯಿದೆ
ಗಿಡಿರಾಜನ ಅಂಬೋಣ..!!
**
ಹಸಿರೆಲೆಗಳು ಯಾಕೋ ಸುಖಾ
ಸುಮ್ಮನೇ ಉದರುತ್ತಿದೆ
ಹಸಿರೆಂದರೆ ಸಮಾಧಾನವಂತೆ.!!
***
ಯುದ್ಧ ನಡೆಯಿತು,ನಡೀತಿದೆ
ನಡೆಯುತ್ತದೆ,ಗಳಿಸಿದ್ದು
ಯೋಧನಿಗೆ ಹುತಾತ್ಮ ಬಿರುದು
ಮುತ್ತೈದೆಗೆ ವಿಧವೆ
ಮಗಳಿಗೆ ಅನಾಥೆ...!!!

ಅವಿಜ್ಞಾನಿ

- ಅವಿಜ್ಞಾನಿ

15 Mar 2017, 07:57 pm

ಸೂರ್ಯೋದಯ

ಮೋಡ ಮತ್ತು ಸೂರ್ಯನ ನಡುವೆ ನಡೆಯುವ ಕಾಳಗ ...
ಮೋಡ ನಾ ಬಿಡೆನು ಎನ್ನುವ ಸಮಯದಲ್ಲಿ,
ಸೂರ್ಯ ತನ್ನ ಪ್ರಖರತೆಯಿಂದ ಭೂಮಿಗೆ ಬೆಳಕ ನೀಡುವ ಕಾಯಕ ಮರೆತಿಲ್ಲ.
ಸೂರ್ಯನ ಬಂದು ಹೋಗುವ ಮೋಡಗಳೊಡನೆ ಈ ಆಟ,
ಕಾಣುವ ಕಣ್ಣುಗಳ ಆಳದ ಆನಂದ ಹೇಳಲು ಅಸಾಧ್ಯವೆ ಸರಿ.

- ಅಯ್ಯೇಂದ್ರ ಆರ್ ಪತ್ತಾರ್

15 Mar 2017, 07:42 pm

ಹೂವೇ ನಗುವ ಕನಸು ತಪ್ಪಲ್ಲ..

ಹೂವೇ ನಗುವ ಕನಸು ತಪ್ಪಲ್ಲ
ಆಗಲೇ ಬಿರಿಯುವ ತವಕ ಸರಿಯಲ್ಲ
ನಿನ್ನ ರೂಪು ರಂಗು ಮುಚ್ಚಿಡುವಂತಿಲ್ಲ
ಕಂಪಂತೂ ಹಿಡಿಯಲು ಸಿಗಲ್ಲ
ಪೆದ್ದು ನಿನಗೇನಿಷ್ಟೂ ಗೊತ್ತಿಲ್ಲ
ವನವೀಗ ಮೊದಲ ತರವಿಲ್ಲ
ಮಾಲಿಯೂ ನಿನ್ನ ಪರವಾಗಿಲ್ಲ
ಮುಳ್ಳಿಗೂ ನಿನ್ನ ರಕ್ಷಕನೆಂಬ ಅರಿವಿಲ್ಲ
ತಂಗಾಳಿಯೆಂದೂ ನಿನಗೆ ಆಪ್ತನಿರಲಿಲ್ಲ
ಈ ಕಾಣುವ ಹುಲ್ಲು ಹಸಿರುಂಟಲ್ಲ
ನಿನ್ನ ನೋವು ಯಾರಿಗೂ ತಿಳಿದಿಲ್ಲ
ಸರಿ ಇರುಳಿಗೇನೂ ತೋಚಿರಲಿಲ್ಲ
ಶುಭ್ರ ಸುಪ್ರಭಾತವೂ ಇಲ್ಲ...
ಅನು..

- Anu...

15 Mar 2017, 03:43 pm

ಅರಳಿದ ಕನಸು

ಪ್ರಿತಿಯಲ್ಲಿ ಚಿಗುರಿತು ನನ್ನ ಕನಸ
ಆಸೆಯಲ್ಲಿ ಅರಳಿತು ನನ್ನ ಮನಸು
ನನ್ನಮನಸು ನನಸಾಗಿದೆ ನಾ ಕಂಡ ಕನಸು
ಬಾಡದಿರಲಿ ಹೂವಿನಂತ ಮನಸು
ಎಂದಿಗೂ ಈ ನನ್ನ ಪ್ರಿತಿಸುವ ಮನಸು

- kiran kiran

15 Mar 2017, 11:31 am

ನನ್ನ ಕನಸು

ಕಂಗಳ
ವಡಲಲ್ಲಿ
ಕಂಗಳ ನೀರು ಶಾಂತವಾಗಿದೆ

ಕಾರಣ,,

ಅಬ್ಬರಿಸಲು ನಿಂತರೆ,,

ವಂಚನೆಗೈದವರ
ಬದುಕು
ಸುನಾಮಿಯ
ಅಲೆಗಳಿಗೆ
ಸಿಕ್ಕು ಕೊಚ್ಚಿ
ಹೊಗವ ಬಿತಿ ಇದೆ,,

 ಇದು ನಾ ನಿನ್ನಾ ಮನಸು,,
ಎಲ್ಲರ ಸುಂದರ
ಬದುಕೇ ನನ್ನ ಕನಸು,,,,
ಪ್ರವೀಣ್ ಯಾದವ್

- ಪ್ರವೀಣ್ ಯಾದವ್

15 Mar 2017, 11:05 am

ನನ್ನ ಭಾವನೆಗಳು

ಮನಸಿಗೆ ಬಂದಂತೆ
 ಗಿಚುವವನಲ್ಲಾ,,,,,,
  
 ಗಿಚಲು ನಿಂತರೆ
  ಬಿಳಿ ಹಾಳೆಯ ಹಸಿವು
ನಿಗಬೇಕು,,,,
   ಒದಲು ನಿಂತರೆ,,,,
  ಮನಸು ಅ ಪದಗಳ
 ಕಂಡು ತನ್ನ ತಾ ಮರೆತು
   ಪದಗಳ ಅಳಕ್ಕಿಳಿದು
   ಅದರೊಳು ತಾ ಕಳೆದು
ಕೊಂಡಾ ಭಾವಗಳ
ಹುಡುಕಬೇಕು,,,,
ಪ್ರವೀಣ್ ಯಾದವ್.

- ಪ್ರವೀಣ್ ಯಾದವ್

15 Mar 2017, 10:57 am

ಒಬ್ಬನೇ ಮಾಡಲಿ ಏನು ನಾ?

ನಿಸ್ವಾರ್ಥ ಬಣ್ಣಗಳವು
ಬಾನಲ್ಲಿ ಕಾಮನಬಿಲ್ಲ ಮೂಡಿಸಿವೆ
ಬಾಳಲ್ಲಿ ಸಂತೋಷವ ತಂದಿವೆ
ನಿಮ್ಮ ಅನಿಸಿಕೆ, ಅಭಿಪ್ರಾಯಗಳ
ಬಣ್ಣ ಅವುಗಳಿಗೆ ಬಳಿಯಬೇಡಿ.

ಹoಚ್ಚಿಕೊಂಡು ಬಣ್ಣಗಳ ಆಸ್ತಿಯಂತೆ
ಒಬೋಬ್ಬರ ಸಿದ್ಧಾಂತಗಳಿಗೆ,
ಅವರವರ ಧರ್ಮಗಳಿಗೆ,
ಹೇಳುತಿರುವೆವು ತುಂಬಿರಲಿ ಬದುಕು ಬಣ್ಣಗಳಿಂದ.

ನಾನೇನು ಎಲ್ಲವ ಮೀರಿನಿಂತ ಯೋಗಿಯಲ್ಲ,
ನನ್ನದೆಂಬ ಧರ್ಮವಿದೆ,
ಯಾವುದೋ ಸಿದ್ಧಾಂತಕೆ ಮನವು ಮರುಳಾಗಿದೆ
ಬಣ್ಣಗಳ ವ್ಯಾಪಾರಿ ನಾನೂಕೂಡ.
ಆಸೆಗಳು ನನ್ನವು ಸಹಜ ಮಾನವನಂತೆಯೇ,
ಆಸೆ ಇಲ್ಲ ಎನ್ನುವುದಕ್ಕೆ ನಾನೇನು
ಶರಣ, ಸಂತ , ಭುದ್ದನಲ್ಲ.

ನಡೆಯಿಲ್ಲದ ನುಡಿ ನಮ್ಮದೊಂದು,
ಜಂಜಾಟದಲಿ ಯಾವುದು ಸರಿ ಯಾವುದು ತಪೆಂದು
ತೂಗುವ ಪುರುಸೊತ್ತು ನಮಗಿಲ್ಲ.
ಒಬ್ಬನ್ನೇ ಮಾಡಲಿ ಏನು ನಾ?
ಬನ್ನಿ ಜೊತೆಗೆ ಸರಿಪಡಿಸಿಕೊಳ್ಳೋಣ್ಣ
ನಮ್ಮತನವನ್ನ.....

- MK Reddy

15 Mar 2017, 09:40 am

ಸ್ನೇಹ

ಅರಮನೆ ಕಟ್ಟುವಂತಹ ಸಿರಿತನ
ಇಲ್ಲದಿದ್ದರೇನಂತೆ
ಕಣ್ಣೀರು ಒರೆಸುವ ಗೆಳೆತನ
ಇದ್ದರೆ ಸಾಕು .RS

- *RS*

15 Mar 2017, 06:50 am

ಸ್ನೆಹಿತೆ

ನೆನಪಾಯಿತೇ ಗೆಳತಿ ನಿನ್ನ
ಮುದ್ದಾದ ನಗುವೂ .
ನೆನಪಾಯಿತೇ ಗೆಳತಿ ನಿನ್ನ
ಸವಿಯಾದ ಮಾತು .

ಕ್ಷೇಮಿಸೆ ನನ್ನ ಇಷ್ಟು ದಿನ
ದೂರವಿದ್ದೇ ನಾ .
ಕನಸಲ್ಲಿ ಕಂಡರೂ ನನ್ನ
ತುಟಿಯ ಮೇಲೆ ನಗುವ ತರುವೆ ನೀ .

ನಿನ್ನನೇಗೆ ಬಿಟ್ಟು ಇದ್ದೆ ಕಳೆದ
ಕಾಲದಲ್ಲಿ ನಾ .
ಉಳಿದ ಕಾಲ ಕಲೆಯಲಾರೆ
ನಿನ್ನ ಮರೆಸಿ ನಾ .

ಎಲ್ಲಿದ್ದರೂ ನಾನೇ ಬರುವೆ
ನಿನ್ನ ಹರೆಸಿ, ನಿನ್ನ ಸ್ನೆಹವ
ಮತ್ತೆ ಪಡೆಯುವೆ ನಿನ್ನ ನಗಿಸಿ ......

- ಚುಕ್ಕಿ

15 Mar 2017, 06:35 am

ಗೆಳಯ

ಕಳೆದುಹೋಗಿದೆ ನನ್ನ ಗಮನ
ನಿನ್ನ ನೆನೆವ ಕೆಲಸದಲ್ಲಿ .
ನನ್ನಲ್ಲೇ ನಾನಿಲ್ಲ ನಿನ್ನ
ಹುಡುಕುವ ಪ್ರಯತ್ನದಲ್ಲಿ .

ನಿನ್ನನ್ನು ಪ್ರತಿಕ್ಷಣ ನೆನೆಯಲು
ನಾ ನಿನ್ನ ತಾಯಿಯಲ್ಲ
ಅನುದಿನ ನಿನ್ನ ಜೊತೆಗಿರಲು
ನಾ ನಿನ್ನ ಸ್ನೆಹಿತೆಯಲ್ಲಾ.

ನಾನು ಕೇವಲ ನಿನ್ನ ಹ್ರುದಯ
ನಿನ್ನ ಪ್ರೀತಿಯೆOಬ ಉಸಿರಿನಿOದ
ಜೀವಿಸುತ್ತಿರುವ ಗೆಳಯ .

- ಚುಕ್ಕಿ

14 Mar 2017, 07:57 pm