"ದೂರವಾಗಿ.. ನೀ_ಇದ್ದರು !
ಒಂದೆ_ಸಮನೇ.. ಕಾಡುತಿದ್ದರು !
ಊಹ_ಪೋಹ ನಿನ್ನ ಕುರಿತು.. ನೂರಾರಿದ್ದರು !
ನಾ_ಅರಿತಿಹ.. ಪರಿಹೆ ನಂಬುವೇ !
ಸದಾ_ನಿನ್ನನ್ನೇ.. ಮನಸಾರೆ ಪ್ರೇಮಿಸುವೇ !!"
"ನಿನ್ನ ಹಾಜರಾತಿ ಎಂದು ತಪ್ಪದು.. ನನ್ನ ಮನದಲ್ಲಿ !
ನನ್ನ ಮನೆ_ಮನದೊಡತಿ ನೀನಾಗುವ.. ಸೂಚನೆ ನೀಡಿಲ್ಲಿ !
ನಿನ್ನ ಹೊರೆತು ಏನು ಬೇಡ !
ನಿನ್ನ ಜೊತೆಯೆ ನನಗೆಲ್ಲಾ ಕೂಡ !
ಯೋಚಿಸೋಮ್ಮೆ ನನ್ನ ಕುರಿತು.. ಓ ಪ್ರೇಮವೇ !!"
ಎಮ್.ಎಸ್.ಭೋವಿ...✍️
ಜೀವನವೆಂಬ ಕಾಲ ಚಕ್ರದೊಳಗೆ
ಮಾನವನೆಂಬ ಪಯಣಿಗ
ಉಸಿರೆಂಬ ಸಾರಥಿ ಸಾರೋಟನ್ನು ನಿಲ್ಲಿಸಿದಾಗ ಮಾನವನ ಬದುಕಿನ ಪಯಣವು ಮುಗಿದಿದೆ ಎನ್ನುವುದು ಮನವರಿಕೆ ಆಗುವುದು.
ಸಾರಥಿಯು ಚಕ್ರವನ್ನು ನಿಲ್ಲಿಸುವ ಮೊದಲೇ, ಈ ಕ್ಷಣ ನಿನ್ನದೆಂದು ಅದನ್ನು ಪೂರ್ತಿಯಾಗಿ ಬದುಕಿ ಖುಷಿಯಾಗಿ ಬಾಳುವುದನ್ನು ಕಲಿಯೆಂದು. ಆದರೆ ಈ ಮಂಕು ಮಾನವ ಜನ್ಮದ ಮನುಷ್ಯರು ಜೋಳಿಗೆ ಹಿಡಿದು ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಅತಿಥಿಗಳು.ಕೆಲವರು ಜೋಳಿಗೆಯಲ್ಲಿ ಹಣ ಆಸ್ತಿ ,ವಿದ್ಯೆ, ಗೌರವ, ಘನತೆ ,ಅಹಂಕಾರ ಹೀಗೆ ಅವರವರಿಗೆ ತೋಚಿದ್ದು ತುಂಬಿಸಿಕೊಳ್ಳುತ್ತಾರೆ. ಆದರೆ ಹೊತ್ತು ತಿರುಗುವ ಕಾಲಚಕ್ರದ ಸಾರೋಟು ಮತ್ತು ಎಲ್ಲವನ್ನೂ ತುಂಬಿಸಿಕೊಳ್ಳುವ ಈ ಜೋಳಿಗೆ ಬಾಡಿಗೆ ಎನ್ನುವುದನ್ನೂ ಮರೆತು ಬಿಟ್ಟು ಮುಂದೆ ಸಾಗಬೇಕೆನ್ನುವ ಸತ್ಯವನ್ನು ಮರೆತು ಬಿಡುತ್ತಾರೆ.
ನೀನೇ ಇರಬೇಕು.. ನನ್ನ ಎಲ್ಲಾ ನಿದ್ರೆಯಲಿ...
ನೀನೇ ಬರಬೇಕು.. ಎಲ್ಲೇ ನಾ ಹೋದಲ್ಲಿ...
ತಂಗಾಳಿಗೂ ಬಿಸಿ ಸೋಕಿದೆ.
ನೀ ಸನಿಹ ಸಾಗಿದಾಗ...
ಮಳೆ ಹನಿಯೂ ಮುತ್ತಾಗಿದೆ.
ನಿನ್ನ ಅಂಗಾಲು ತಾಕಿದಾಗ...
ಸ್ವಲ್ಪ ಹುಚ್ಚ ನಾನು.. ಆದರೂ
ತುಸು ಪ್ರೀತಿಸು...
ಸಮೀಪದಲ್ಲೇ ಹಿತವಿದೆ.
ಕೊನೇವರೆಗೂ ವಿರಹವ ದ್ವೇಷಿಸು...
ಎಮ್.ಎಸ್.ಭೋವಿ...✍️
ನೀವು ನಮಗೆ ಯಾಕೆ
ಅರ್ಥವಾಗಲಿಲ್ಲ
ಹೋರಾಡಿದಿರಿ
ಗಲ್ಲಿ ದಿಲ್ಲಿ ಸುತ್ತಿ
ಕುಳಿತಲ್ಲಿ ನಿಂತಲ್ಲಿ ನೆನದು
ಅದೇ ಊರು ಕೇರಿ ಮರೆತು
ನಮಗೆಲ್ಲ ಕನಸು ಚೆಲ್ಲಿ ಜಿಗಿದುಬಿಟ್ಟು
ಜೋಗುಳ ಹಾಡಿ ನೀವು ಬೆಳ್ಳಿ ಚಿಕ್ಕಿ
ಮೂಡಿಸಿ
ಮಗ್ಗುಲಲ್ಲಿ ಮುಳ್ಳಾಗಿ
ಮೂಲೆಗುಂಪು ಮಾಡಿ
ಅಂಗದೊಳಗೆ ಲಿಂಗವ ಹಿಡಿದು ಅನಂತದೊಳು ಮನವ
ಮಡಿಗೆ
ಮನಸೋತಿರಿ ನೀವು
ಯಾರಿಗೆ ಬೇಕು ಅಂಬೇಡ್ಕರ್
ಇರುಳಾಗುವುದನ್ನೇ ಕಾದು
ಪರದೆಯ ಮೇಲೆ ಮಾದಕ ನಗು
ಅದೆಂತಹಾ ಸೇವೆಯ ಸೋಗು ಮಿಂಚಿನ ಸಂಚಾರ
ಅದೆಂತಹ ಹೋರಾಟ
ಹಾಗೆ ಹಾಗೆ ನೀವು ದಣಿವಿಲ್ಲದ ಅಂಗ ಪೂಜೆಯೊಳಗೆ
ಲಿಂಗಪೂಜೆ ಮರೆತೇ ಹೋಯ್ತು
ಆದರೂ ಮತ್ತೇ ಮತ್ತೇ ಅಂಬೇಡ್ಕರ್
ಪ್ರತಿ ಕ್ಷಣವೂ ಸ್ಮೃತಿಯಲ್ಲಿ
ಏನು ಮಾಡಲು ಗದ್ದುಗೆ ಹಿಡಿದಿರಿ
ಏನು ಮಾಡಿದಿರಿ
ಸ್ವಯಂ ಘೋಷಿತ ಬಿರುದುಗಳು
ಬಾವಲಿಯಂತೆ ಜಾತಿ ಹೋರಾಟಕ್ಕೆ ಜೋತು ಬಿದ್ದು
ಏನಾಯ್ತು ಕೊನೆಗೆ
ಜೇನು ಮೆತ್ತಿದ ಅಲಗು
ನೆಕ್ಕಿ
ನಾಲಗೆ ಕುಯ್ದುಕೊಂಡು
ಜನ ದ್ರೋಹಿಗಳಾಗಿ
ಕರ ಪತ್ರ
ಅಯ್ಯೋ
ದೇಹ ಜೀವ
ಕೂಡುವ ಮುನ್ನ ಯೋಚಿಸಲಿಲ್ಲ ಯಾಕೆ ಮನ್ಮಥರುಗಳಾಗಿ ಬಿಟ್ಟಿರಿ
ವೈಭವವ ಹೊದ್ದು
ಗಲ್ಲಿ ಸಣ್ಣದು ಮಾಡಿ ಾದರ ಕಥೆ ದೊಡ್ಡದು
ಮರೆಯಬಾರದಾಗಿತ್ತು
ಗಲ್ಲಿ ನೀವು ಮರೆಯಬಾರದಿತ್ತು
ಅಂಬೇಡ್ಕರ್ ನಮಗೆಲ್ಲ ಗುರುವಾಗಿಬಿಟ್ಟಾಗ
ಹಾಳು ಮಾಡಿ ಹೋಳಾಗಿ
ಹಾಳಾಗಿಹೋಗಿದ್ದೇವೆ
ನೀವು ದ್ರೋಹಿಗಳಾಗಿ ಮಡಿ ಮುಡಿಯಲಿ ಮುಳುಗಿಸಿ ಮೆರೆದು ಬಿಟ್ಟಿರುವದಕ್ಕಾಗಿ
ನಿಮಗೊಂದು ನನ್ನ ಧಿಃಕಾರ ಆಯ್ತಿತು ಈಗಲಾದರೂ ಬನ್ನಿ ಸಂವಿಧಾನವ ಓದೋಣ ಹೊಸ ಬದುಕು ಕಟ್ಟಿಕೊಳ್ಳೋಣ
ಹರೆಯ ಪುಲ್ಲೂ ಕರಗಿಸಿ
ನಿನ್ನ ಬೆನ್ನಿನ ಬೆವರಾಗಿಸುವೆ...
ಹೃದಯ ಪೂರ್ತಿ ಪ್ರೀತಿಸಿ
ಸದ್ದೇ ಇರದಂತೆ ಮುದ್ದಿಸುವೆ...
ನಿನ್ನೆಸರ ಇಡುವೆ ಮಳೆಯೇ
ನಿಲ್ಲದ ಊರಿಗೆ....
ಬೆಂಬಿಡದೆ ಹಿಂಬಾಲಿಸುವೆ
ನಿನ್ನ ಸಣ್ಣ ಬೈಗುಳಕೆ....
ಪ್ರೀತಿಸು ಒಮ್ಮೆ.. ನೀನೇ ನನ್ನ
ನೆಚ್ಚಿನ ಸ್ವಪ್ನ....
ಸಾಯಿಸು ಒಮ್ಮೆ.. ಹೇಳದೇ
ಸಣ್ಣ ಕಾರಣ....
ಎಮ್.ಎಸ್.ಭೋವಿ...✍️
ಕುಂಡಿಗೆ ಬರೆ ಹಾಕಿದರೂ ನಂಬುತ್ತೇನೆ ನಮ್ಮವರೆಂದು, ವಿಶ್ವಾಸ ದ್ರೋಹಬಗೆದರೂ ಸಹ
ನಿಮ್ಮ ಪ್ರೀತಿ ಮಾತಲಿ ಹೂಬುನೆಟ್ಟರೂ ಮನಸಿಗೆ ಗಾಯವಾದರೂ ಸಹ
ಬಣ್ಣದ ರಂಗೋಲಿ ಹಿಂದೆ ಮುಂದೆ ಹಾಕಿದಾಗಲೂ ಸಹ
ನಾನು ಬಿಗಿದಪ್ಪಿ ಪ್ರೀತಿಸುತ್ತೇನೆ.
ಜಾತಿಯ ವಿಷ ಬೀಜ ಬಿತ್ತದಾಗಲೂ ಮೀಸಲಾತಿಗೆ ವಿಶ್ವಾಸಘಾತುಕತನ ಮಾಡಿದಾಗಲೂ ಸಹ
ನಾನು ಹೋರಾಟ ಶಕ್ತಿಯನ್ನು ಪ್ರೀತಿಸುತ್ತೇನೆ ಅಭಿಮಾನಪಡುತ್ತೇನೆ
ಅದರ ಫಲಾವಾಗಿ ಬದಲಾದ ಕಾಲಮಾನಕ್ಕೆ ನೀವು ಬದಲಾಗುವಿರಿ ಎಂದು
"ಹೋರಾಟದವಸಾಗರಕ್ಕೆ ಸಾವಿರಾರು ನದಿಗಳು' ಇರುವಾಗ ಬಗುರಿ ಆಟ ಆಡಿಸಿದಾಗ ಗುಟ್ಟು ರಟ್ಟಾಗಿ ಎಷ್ಟು ದಿನ ನೀವು ಗದ್ದುಗೆ ಏರ ಬಲ್ಲಿರೆಂದು
ಅರಿತು ಮೋಸವಾಗುವುದಿಲ್ಲವೆಂದು
ನಿಮ್ಮ ನಡುವೆ ಪ್ರತಿಭಟಿಸಿ ನಮ್ಮ ಬದುಕು ಕಟ್ಟಿಕೊಂಡು
ಮತ್ತೆ ಮತ್ತೆ ಪ್ರೀತಿಸುತ್ತೇನೆ ಪ್ರೀತಿಸುತ್ತಲೇ ಇರುತ್ತೇನೆ
ನೀವು ಬದಲಾಗುವ ತನಕ ಮನುಷ್ಯರಾಗುವ ತನಕ
ಒಂದಿಲ್ಲ ಒಂದು ದಿನ ಬದಲಾಗುವಿರೆಂಬ ನಂಬುಗೆಯಿಂದ
ಪ್ರೀತಿಸುತ್ತಲೇ ಇರುತ್ತೇನೆ
ಬಾಳೇ ಗೊನೆಯಾಗುವ ತನಕ
ಹೋರಾಟಕ್ಕೆ ಫಲದೊರೆಯುವ ತನಕ ನಾನು
ಪ್ರೀತಿಸುತ್ತಲೇ ಇರುತ್ತೇನೆ..