ಮದರಂಗಿಯ ಚಿತ್ತಾರದಲ್ಲಿ
ಮುಂಗುರುಳನ್ನು ಮರೆಮಾಚಿದ
ತರುವಾಯ ಬಿಸಿಯುಸಿರ ಸೆಳೆದಿಟ್ಟ
ಅವಳ ಆಂತರ್ಯಕ್ಕೆ ಸೋಲಬೇಕಾದ
ನನ್ನ ಎದೆಯೊಳಗೊಂದು ಇಶ್ಕ್ ನ
ಮುನ್ನುಡಿ ಬರೆಯುತ್ತೇನೆ....
ಅವಳ ತಾರೀಪಿಗಾಗಿ ಎದೆಗೀರಿನ
ಚಿತ್ರವನ್ನು ಹುದುಗಿಸಿಡುವ ನನ್ನ
ಹುಂಬತನವು ಯಥಾಪ್ರಕಾರ
ನಡೆಯುತ್ತದೆ ಅವಳಂತೂ
ಕನಸುಗಳನ್ನು ಬಂಧಿಸಿಡುವ ನಿಪುಣೆ
ಎದೆಯೂರಿನವಳ ತಲಾಶೆ
ಮಾಡುವ ಅಲೆಮಾರಿ ನಾನು..!
ಬೆಳಕೊಂದು ಬರಬಾರದೇ
ಕತ್ತಲು ತುಂಬಿದ ಕಂಗಳಿಗೊಮ್ಮೆ
ನೇತ್ರದಾನದಿ ದೃಷ್ಟಿಮೂಡಿ
ಬೆರಗುಗಣ್ಣಲಿ ಜಗವ ಕಾಣುವಂತೆ
ನೀ ಸಿಗಬಾರದೇ ಹೇಳು
ಮನದುಗಿಬಂಡಿಯಲಿ ಕೊತಕೊತ ಕುದಿಯುವ ಭಾವನೆಗಳ ಚುಕುಬುಕುವನು
ನಿಲ್ಲಿಸುವ ನಿಲ್ದಾಣದಂತೆ
ಕನ್ನಡಿಯ ಗಂಟಿದು ಹೇಗೆ ತೆರೆಯಲಿ
ಬದುಕೊಂದು ಒಗಟು ಹೇಗೆಬಿಡಿಸಲಿ
ಈ ಕುರುಡು ಕಂಗಳಿಗೂ ನಗುವಾಸೆ ಒಮ್ಮೆ
ಎಲ್ಲಿ ಹುಡುಕಲಿ
ಕೊರಗದಿರು ಎಲೆಮನವೆ ಜಗವು ಕೊರತೆಗಳ ಮಹಾ ಸಂತೆ
ತಮ್ಮ ಮನದೂನವ ಕಾಣದಾ ಕುರುಡರು
ದುರ್ಬೀನಿನಲ್ಲಿ ಪರರ ಊನವನು
ಹುಡುಕುವರು
ಮೂರು ಗಂಟಿಗೆ ಬೇಕು ಪ್ರೀತಿಯಾನಂಟು
ಮುಖವಾಡಕೆ ಬೇಕು ಸೌಂದರ್ಯದಾ ಒಣ ಅಂಟು
ಮುಖವಾಡಕೆ ಮನಸೋಲುವವರು ಅವರಂತೆ
ಅಂತಹವರಿಗಾಗಿ ಕಣ್ಣೀರಿಡುವುದು ಸರಿಯುಂಟೇ?
ದಾರಿಕಾಣದಾಗಿರಲು ನೀ ನಿರ್ಮಿಸಿಕೋ ನಿನ್ನದೇ ದಾರಿಯ
ಅದೆಷ್ಟು ಜನ ಹಿಡಿದುಬರುತಿಹರು ನೋಡು ನಿನ್ನ ದಾರಿಯ
ನೀನೀಗ ಅವರೆಲ್ಲರಿಗೂ ಮಾದರಿ
ಆಗಸವ ಸ್ಪರ್ಶಿಸಲೆತ್ನಿಸುತಿಹರು ನಿನ್ನ ನಿರಾಕರಿಸಿದವರು ಇಂದು ಹಾರಿ ಹಾರಿ
ಬದುಕೆ ಬಣ್ಣದೋಟ ಪ್ರೀತಿ ಹೋಳಿಗೆ ಊಟ
ಸಹಿಸಬೇಕು ಜೀವನದಲ್ಲಿ ದುಃಖದ ಕ್ಷಣಗಳ ಕಾಟ
ಕಲಿಯಬೇಕು ಪ್ರತಿದಿನವು ಜೀವನದ ಪಾಠ
ಹಂಚಬೇಕು ಪ್ರೀತಿ ಸ್ನೇಹದ ಹೂದೋಟ
ತೊರೆಯಬೇಕು ಜಾತಿ ಮತಗಳ ಪರಿಪಾಠ
ಸಾಕಾರವಾಗಬೇಕು ಈ ಜೀವನದ ಆಟ....
ನಾಚಿಕೆ ಇಲ್ಲವೇ ನನಗೆ?
ಬರೆಯುತ್ತಿರುವೆ ಈ ಕವನಗಳ
ಗೊತ್ತಿದು ಸಿಹಿ ಸುಳ್ಳುಗಳ ಬೆರಸಿ
ಪ್ರಾಸ ಪದಗಳ ಬಳಸಿ
ಬರೆದೆ ಕವನಗಳ ಬರಿ ಊಹೆಯಲಿ
ಚಪಾಳೆ ಗಿಟ್ಟಸಿಕೊಳ್ಳುವ ಯೋಚನೆ ತಲೆಯಲ್ಲಿ
ಪದಗಳವು ಎಷ್ಟು ಸಾಚಾ...ಎಷ್ಟು ಸುಂದರ...
ಏನು ಖುಷಿಯೊ ಇನ್ನೊಬರ ದಾರಿ ತಪ್ಪಿಸಲು.
ಮರೆತೇನಾ ನಾ ಎಲ್ಲಾ ಮೌಲ್ಯಗಳನ್ನು....?
ಹುಚ್ಚಿದು...
ಕವನ ಬರೆಯಬೇಕೆಂದೋ?
ಚಪಾಳೆ ಗಿಟ್ಟಿಸಿಕೊಳಲೆಂದೋ?
ಏಕೆ ಈ ವೇಷ? ಏಕೆ ಈ ದುರ್ಬುದ್ಧಿ?
ಏನು ನನ್ನ ಉದ್ದೇಶ? ಏನಾಗಿದೆ ನನಗೆ?
ಈಗಲಾದರೂ ಮಾಡುತಿರುವುದೇನು ,ಕವನವಿದು
ಸ್ವ -ವಿಮರ್ಶೆಗೊ?...... ಚಪಾಳೆಗೊ ?