ತಡರಾತ್ರಿ ಎಚ್ಚೆತ್ತ ಮಗಳಿಗೆ
ಸುಳ್ಳುಗಳನ್ನು ಪೋಣಿಸಿ ನಿದ್ದೆ ಹತ್ತಿಸ
ಬೇಕಾಗಿ ಹವಣಿಸುವ ಇವಳ ಉಮೇದು ನೋಡಿ ನಾನು ಒಂದೆರಡು ಮಗ್ಗುಲು ಬದಲಾಯಿಸಿದ್ದಲ್ಲದೇ ಮತ್ತೇನೂ ಮಾಡಿಲ್ಲ
ನಿತ್ಯ ಅಪರಾತ್ರಿಯಲ್ಲಿ ಮೊಲೆಕೊಟ್ಟು
ಕೂಸಿನ ಕನಿಷ್ಟ ಕೂಗನ್ನು ನನ್ನ ಕಿವಿಯೊಳಗೆ ಬರದಂತೆ ಮಾಡುವ ಇವಳ ಜಾಣ್ಮೆಗೆ ನಾನಂತೂ ಒಮ್ಮೆಮ್ಮೆ ಹುಬ್ಬೇರಿಸಿದ್ದುಂಟು
ಹೆಣ್ಣಿನ ಪೇಚಾಟ ರಾತ್ರಿಗಳಲ್ಲಿ ಒಮ್ಮೆ
ಎಚ್ಚೆತ್ತು ನೋಡಿ ಸೂರ್ಯನಿರದ ರಾತ್ರಿಯಲ್ಲಿ ಮಗುವಿಗೆ ಸೂರ್ಯ ಕಿರಣ ತೋರಿಸುವ ಜಾಣತನಕ್ಕೆ ಬಿಗಿದಪ್ಪಿ ಕೃತಜ್ಞತೆ ಸಲ್ಲಿಸಿ ಬಿಡಿ
ನಿಮ್ಮಗಳ ಜವಾಬ್ದಾರಿ ತೀರಿಸಿ
ಸುಖನಿದ್ರೆಗೆ ಜಾರಿದರೂ ಹೆಣ್ತನದ
ಪಾಡು ಮಗುವಿಗೆ ಅಲ್ಪ ಜ್ವರ ಬಂದಾಗ ರುಜುವಾತು ಆಗುತ್ತದೆ
ನಿಮ್ಮಲ್ಲಿ ತೋರಿಸದ ಒಂದು ವೈದ್ಯೆ
ಸರಿಸುಮಾರು ಮುಕ್ಕಾಲು ರಾತ್ರಿ ಸರಿದ ಮೇಲೆ ಹುಟ್ಟಿಕೊಳ್ಳುತ್ತಾಳೆ
ಗಂಡಸರೇ,ಹೆಣ್ಣೆಂದರೆ ಸರ್ವಾಂತರ್ಯಾಮಿ
ಓ ಮೋಡವೆ ಏಕೆ ಓಡುವೆ
ಬಾಯಾರಿ ಬಸವಳಿದ ನರ
ಮನುಜರನು ಕಂಡು ?
ಬರಲಿಲ್ಲವೇ ಕರುಣೆ
ಕಾದಿಹಳು ಧರಣಿ
ಹನಿ ನೀರ ಕಾಣದೆ ಹಸಿದಿಹುದು
ಆಕೆಯೊಡಲು.
ಸ್ವಾರ್ಥಿಗಳು ನಾವು,
ಕೊಚ್ಚಿದೆವು ಮರ ಗಿಡಗಳ
ಅವು ನಿನ್ನ ಹಳೆ ಗೆಳೆಯರೆಂಬುದ ಮರೆತು.
ಮುಚ್ಚಿದೆವು ಕೆರೆ ಕಟ್ಟೆಗಳ
ಮೂಡತನದಲಿ ನಾವೇ
ಮುಂಬರುವ ಬರಗಾಲ ಬರಲಾರದೆಂದು.
ಊರಿಗೊಂದು ಕೆರೆ ಇರುವ ಬದಲು
ಕೇರಿಗೆ ನಾಲ್ಕು ಗುಡಿಗಳನು ಕಟ್ಟಿ
ಕೇಳಿಕೊಂಡೆವು ಕಲ್ಲ ದೇವರ
ಕೊಡು ನೀರ, ಸುರಿಸು ಬಿರು ಮಳೆಯ
ಎಂದೂ ಏನೂ ಕೊಡದ ದೇವರಿಗೆ
ಸುರಿದೇವು ಹಾಲ್ಮೊಸರ ಕೊಡದ ತುಂಬ
ಮರೆತೇವು ನಿಜ ದೇವರ
ಮೆರೆಸೇವು ಕಳ್ಳ ಕಾಕರ
ಮರುಳರಾಗಿ ತಬ್ಬಿಕೊಂಡೆವೋ
ನಮ್ಮ ಅವನತಿಯ...
ಹೆಜ್ಜೆ ಹೆಜ್ಜೆಗೂ ಹಂಬಲಿಸಿ ಕೊರಗುತಿರುವೆ
ನನ್ನ ಹೃದಯದ ಪ್ರತಿ ಮಿಡಿತವು
ಪ್ರತಿಧ್ವನಿಸುತಿದೆ ನಿನ್ನ ಹೆಸರು
ಬಿಚ್ಚಿಡದೆ ಮುಚ್ಚಿಟ್ಟ ಭಾವನೆಗಳು ಹಲವು
ಬೆಸದಿರುವೆ ನಿನ್ನಲ್ಲಿ ಬಿಟ್ಟಿರಲಾರದ ನಂಟು
ಮನಸಲ್ಲಿ ಹೆಣೆದಿಟ್ಟ ಕನಸುಗಳು ನೂರು
ಮನದಲ್ಲಿ ಮಿತಿ ಮೀರಿ ಆವರಸಿ
ಪ್ರವಾಹದಂತೆ ಕಣ್ಣೀರ ಹನಿಯಾಗಿ
ಕೊಚ್ಚಿ ಹೋಗುತಿರುವೆ
ನೀ ದೂರ ಇದ್ದರು ಪ್ರೀತಿಯ
ನೆನಪುಗಳು ಕಾಡುತಿವೆ
ನೀ ನನ್ನಲ್ಲಿದ್ದರು ನಿನ್ನ
ಕಾಣಲು ಹಂಬಲಿಸುತಿರುವೆ
ದಿನಗಳುರುಳುತಿವೆ ನೋವಿನಲಿ
ಕ್ಷಣ ಕ್ಷಣವೂ ಕುಗ್ಗುತಿದೆ ಮನಸ್ಸು
ದಿನಗಳು ಕಳೆದರು ವರ್ಷಗಳು ಉರುಳಿದರು
ನಾ ನಿನ್ನೆ ಪ್ರೀತಿಸುವೆ...!!!
ಬರೆಯಲು ಕುಳಿತಿರುವೆ ಕವನವೊಂದು
ನಿನ್ನ ನೆನಸಿ ಬರೆಯಲು
ಪದಗಳ ಸಾಲು ಸಾಲದು
ಏನೆಂದು ಬರೆಯಲಿ,
ಕನವರಿಸಿ ನಾ ಕೊರಗುತಿರುವೆ,
ನನ್ನಿಂದ ನೀ ಇರುವೆ ದೂರ
ನಾ ಬಯಸಿದರೆ ಸನಿಹ ನಿನ್ನ...
ಕ್ಷಣದಲಿ ಬರುವೆ ನೀ
ನನ್ನ ಕಣ್ಣ ಹನಿಗಳಾಲಿ..
ಹಗಲಾದರೆನು ಇರುಳಾದರೆನು
ನಿನ್ನ ನೆನಪುಗಳಿಗೆ ಕೊನೆಯಿಲ್ಲ
ನಿನ್ನ ಕನಸುಗಳಿಗೆ ಬರವಿಲ್ಲ
ಮನಸು ಮನಸಿನಾ ಬೆಸುಗೆಗೆ
ಮೌನದ ಮಾತಗಳೆಲ್ಲ
ಕಣ್ಣ ಹನಿಗಳಾಗಿ ಜಾರಿ ಮೌನದಲಿ
ನಿನ್ನ ನೆನಪಿಸುತಿದೆ ಈ ಹೃದಯ
ಮನದಲ್ಲಿ ನೆನಪಿನಾ, ಪುಟಗಳನು
ಬಚ್ಚಿಡಲಾಗದೆ ಬಚ್ಚಿಟ್ಟ ಮಾತುಗಳು
ನನಗೆ ಅರಿವಿಲ್ಲದೆ ಪದಗಳಲ್ಲಿ
ಬೆರತು ಕವನವಾಗಿ, ಮತ್ತೆ ನೀ ಬಂದೆ
ಮನಸಿನ ಪುಟಗಳನು ತೆರೆದಿಡಲು...!!!