ನಿನ್ನ ಉಸಿರು ನನ್ನ ಉಸಿರಾಗುತ
ನಿನ್ನಲಿ ನನ್ನ ನಾ ಮರೆಯುತ
ನೂರೆಂಟು ಕವನ ಗೀಚುತ
ಈ ಹೃದಯ ನಿನ್ನನೆ ನೆನೆಯುತಿದೆ
ಪದೆ ಪದೆ ನೆನಪಾಗುವ ನೀನು
ನಿನ್ನ ಪ್ರತಿ ಘಳಿಗೆ ಬಿಡದಂತೆ
ನಿನ್ನನೆ ಹುಡುಕುತ್ತಿದೆ ಈ ಮನಸ್ಸು
ನೀನೆ ಬೇಕೆಂದು ಹಂಬಲಿಸುತಿದೆ
ನಿನ್ನ ಪ್ರೀತಿಯ ಸೆರೆಯಲಿ
ನನ್ನ ನಾ ಮರೆತು
ಬಂಧಿಯಾಗಿರುವೆ ನನಗರಿವಿಲ್ಲದೆ...
ನೀ ಬಿಟ್ಟು ಹೋಗದಿರು ನನ್ನ
ನಿನ್ನ ಮರೆತು ಬದುಕುವ
ಕ್ಷಣಗಳ ಕಲ್ಪನೆಯೂ ನನಗಿಲ್ಲದೆ
ನನ್ನ ನಾ ಮರೆತಿರುವೆ
ಬತ್ತಿದೆ ನನ್ನೆದೆಯ ಮಾತು
ಬಿಕ್ಕಳಿಸುತಿದೆ ನನ್ನ ಹೃದಯ
ಅಳಿವು ಉಳಿವು ನಿನ್ನಲ್ಲಿದೆ
ಓ ಒಲವೇ ಉಳಿಸು ಈ
ಹೃದಯದ ಬಡಿತ ನಿಲ್ಲುವ ಮುನ್ನ
ನನ್ನಲಿ ಬೆರೆತು ಒಂದಾಗು
ಪ್ರಾಣ ಪಕ್ಷಿ ಹಾರುವ ಮುನ್ನ...
ನಿನ್ನ ಎದೆಯ ಬಾಗಿಲಿಗೆ
ನಾ ಬಂದು ನಿಂತಿರುವೆ.
ಕದ ಬಡಿಯುವ ಆಸೆಯು ನನಗೆ
ಆದರೂ ಏನೋ ತಿಳಿಯದ
ಅಂಜಿಕೆ ಎದೆಯೊಳಗೆ.
ನಿನ್ನ ಮೊದಲ ನೋಟಕೇ
ಮರುಳಾಯ್ತು ನನ್ನ ಮನ.
ತುಡಿತ ತುಂಬಿದ ಮನದ
ಮಿಡಿತ ಮುನಿಯುವ ಮುನ್ನ
ಕದವ ತೆರೆದು ಬಾಚಿ ತಬ್ಬಿಕೋ ಎನ್ನ.
ನಿನ್ನೆದೆಯ ಕದವನು ತಟ್ಟಿ
ಸದ್ದು ಮಾಡುವ ದೈರ್ಯ ಎನಗಿಲ್ಲ.
ನೀನಾಗೆ ಮನಸು ಮಾಡಿ
ಸ್ವಾಭಿಮಾನದ ಚಿಲಕವ ಬದಿಗೆ ಸರಿಸಿ
ನನ್ನನು ನಿನ್ನೊಳು ಬರಮಾಡಿಕೋ.
-- ನಿನ್ನ ನೆರಳು ಮೂಡಿದ
ದಾರಿಯನೇ ಹಿಂಬಾಲಿಸುತ.
ನಿನ್ನ ಮೌನಯಾನದ ಪ್ರತೀ ಹೆಜ್ಜೆಯ ಸದ್ದು
ನಾನಾಗಬೇಕೆಂದು ಹಂಬಲಿಸುತ.
ನಿನ್ನ ಹೃದಯರಾಗದ ನಲುಮೆಗಾನವನೇ
ಅನುಕ್ಷಣವೂ ಆಲಾಪಿಸುತ.
ನಿನ್ನೆದೆಯ ಬಾಗಿಲಲೇ ಕಾದು ಕಳಿತಿರುವ
ನಿನ್ನ ಪ್ರೀತಿಯ ನಲ್ಲೆ.
-ಮಾಧುರಿ
ನನ್ನಾಕೆ, ಬರೀ ಒಂದು ಹೆಣ್ಣಲ್ಲ,
ಗಂಡನಿಗೆ ಬರೀ ತನ್ನ ತನು-ಮನವನು ಅರ್ಪಿಸಿಕೊಂಡ ದಾನಿಯಲ್ಲ,
ಬಾವ- ಭಾವನೆ ಇಲ್ಲದ ಕಲ್ಲು ಬಂಡೆಯಲ್ಲ,
ಸಂಸ್ಕೃತಿ - ವಿಕೃತಿ ತಿಳಿಯದ ಜಾಡಲ್ಲ,
ಸಂಸಾರದೊಳಗಣ ಸಾರ ತಿಳಿಯದಿರುವ ಗೂಡಲ್ಲ,
ನನ್ನಾಕೆಯು ಹೊಸ ಮನೆ, ಹೊಸ ಜನರ,
ಹೊಸ ಜೀವನ ಆರಿಸಿ ಅನುಸರಿಸ ಹೊರಟವಳು. ಕಾಲ, ಪ್ರಕೃತಿ, ತನ್ನ್ಮನೆಯವರ ಆದ್ಯತೆ-ಆಶಯಗಳಿಗೆ ತನ್ನನ್ನೇ ತಾನು ಪುನರ್ ರೂಪಿಸ ಹೊರಟವಳು,
ಗಂಡನ ಮನೆ ಕಪ್ಪು ಬಿಳುಪಿನ ಬಣ್ಣದ ಮನಗಳಿಗೆ ವೈವಿದ್ಯಮಯ ರಂಗು ಕೊಡಲೊರಟವಳು, ಗಂಡನ ಹುಸಿ ಮುನಿಸಿಗೆ ಸಿಹಿ ಮುತ್ತು ನೀಡಿ ತನಿಸುವವಳು,
ತಾನು ಸೋತು ಗಂಡನನ್ನ ಜಯಿಸಿದವಳು,
ಹೊಟ್ಟೆಯಲಿ ಪುಟ್ಟ ಮಗುವಿನ ಆಕೃತಿ ಮೂಡಿದಾಗ ಹೆಣ್ತನದ ವೈಶಿಷ್ಟ್ಯತೆ ಸಾರಿದವಳು,
ಕೂಸು ಹೆರುವ ಘಳಿಗೆಯಲಿ ಸತ್ತು ಹುಟ್ಟಿದವಳು,
ಗಂಡ - ಮಗುವಿನ ಏಳಿಗೆಯಲಿ ಮನಸಾರೆ ನಕ್ಕವಳು.
ನನ್ನಾಕೆ ಸೋತು ಗೆದ್ದವಳು..