ಧನವಿರುವಾಗ ಬರುವರು ಎಲ್ಲರು,
ಧನಹೀನರಾಗಲು ದೂರ ಸರಿವರು,
ವಯಸ್ಸು ಮಾಗಲು, ಹಾಸಿಗೆ ಹಿಡಿಯಲು,
ತಿರುಗಿ ನೋಡುವರಿಲ್ಲ ನಿನ್ನೆಡೆಗೆ,
ಈ ಜೀವನವು ನಾಯಿಪಾಡು ಕಟ್ಟಕಡೆಗೆ,
ದೇಹದಲ್ಲಿ ಯೌವನವಿರಲು,
ತೋಳಿನಲ್ಲಿ ಬಲವಿರಲು,
ಖಜಾನೆಯಲ್ಲಿ ಧನವಿರಲು,
ಮುತ್ತುವರು ಎಲ್ಲ ನಿನ್ನ,
ಹಾಡಿ ಹೊಗಳುವರು ಪ್ರತಿ ಕ್ಷಣ.
ಒಡಹುಟ್ಟಿದವರರೊಂದಿಗೆ ವಾತ್ಸಲ್ಯ ಬೆಳಸಿದೆ,
ಬಂಧು ಬಾಂಧವರನ್ನು ನನ್ನ ವರೆಂದೆ,
ಮಿತ್ರ ರೊಂದಿಗೆ ಕೂಡಿ ಆಡಿ ನಲಿದೆ,
ಅಂದು ನಿನ್ನನ್ನು ಎಲ್ಲರೂ ಬೆರೆತರು,
ಹೀಗೇಕೆ ಇಂದು ದೂರಾಗುತಿಹರು.
ದೇಹ ಮುಪ್ಪಾಗುವುದು ಕಳೆದಂತೆ ವರುಷಗಳು,
ಸಾಲಾಗಿ ಬರುವವು ನಿರಂತರ ರೋಗಗಳು,
ಅರಿತರೂ ಹತ್ತಿರ ಸುಳಿಯುವುದಿಲ್ಲ ಬಂಧಗಳು,
ನೋವಿನಲಿ ದಿನಗಳು ಕಳೆಯುವವು ನಿರಂತರ,
ಸಾವು ಕೂಡ ತಕ್ಷಣದಲಿ ಬರುವುದಿಲ್ಲ ಹತ್ತಿರ.
ಕಿರುನಗೆಯಿಂದ ಕಂಬನಿಯನೊರಸಿದೆ,
ಪ್ರೀತಿಯನು ಜೀವಧಾರೆಯಾಗಿ ಹರಿಸಿದೆ,
ಜೀವಧಾರೆಯಾಗಿ ಹರಿದ ಜೀವನವನ್ನು,
ಸಾಗರದ ರೌದ್ರ ನರಕಕ್ಕೆ ನೂಕಿದೆ,
ಬಾಳು ಮೌನಗೀತೆಯಾಗಿ ನಲುಗುವ ಸ್ಥಿತಿ,
ಇದೇ ನನ್ನ ಮನೋ ವ್ಯಾಕುಲದ ಬೀಭತ್ಸ ರೀತಿ,
ನಿನ್ನ ಮೋಹಕ ಭಾಷೆಗೆ ಮಾರುಹೋದೆ,
ನನ್ನನ್ನೇ ನಾನು ಮಾರಿಕೊಡೆ.
ನಾನು ದಡ್ಡನೆಂಬ ಅರಿವು ಬಂದದ್ದು ಆಗಲೇ,
ಎಂತಹ ಸ್ಥಿತಿಯಲ್ಲೂ ನಲುಗದ ನಾನು,
ನಿನ್ನ ಮನೋ ವಿಕಾರದ ಅಪದೆಸೆಯಿಂದ,
ನರಳುವ ಸ್ಥಿತಿ ತಂದುಕೊಂಡೆ.
ಕಣ್ಮುಚ್ಚಿದರೂ ನಿರಂತರ ಸುಳಿಯುವ
ಆ ನಿನ್ನ ಚಿರಂತನ ಮೋಹಕ ಪ್ರತಿಮೆ.
ಹೆಣ್ಣಿನ ಬಣ್ಣದ ಮನಸ್ಸನ್ನು ಅರ್ಥ ಮಾಡಿಕೊಳ್ಳದ ನಾನು ಬುದ್ಧಿವಂತನೇ? ಅಲ್ಲ ದಡ್ಡ.
ಅಲ್ಲ ಬುದ್ಧಿವಂತ.
ಬುದ್ಧಿ ಬಂದ ಮೇಲಾದರೂ ಬದುಕು, ಬದುಕಿಸು.
ಬಾಳು ಇಂದು-ನಾಳೆ ಮುಗಿದು ಹೋಗುವದಲ್ಲ.,
ಅದು ನಿರಂತರ, ನಿತ್ಯ ನೂತನ..
ಹಾರುವ ಹಕ್ಕಿ
ಮನುಜನ ಮನಸ್ಸು
ಒಂದೆ ತರ
ಸದಾ ಹಾರುವಾಸೆ
ಎತ್ತರೆತ್ತರ ಹಾರಿ
ಗಗನ ಮುಟ್ಟುವಾಸೆ
ಮನುಜನಲ್ಲಿ
ಸ್ವಾರ್ಥದ ಅತಿ ಆಸೆ
ಬಯಸಿದಷ್ಟು ಬಯಕೆಗಳ
ತಲುಪಲು ಮಾನವೀಯತೆ
ಮರೆಯುವ ದುರಾಸೆ
ಹಾರುವ ಹಕ್ಕಿಗೆ
ತಿಳಿದಿಲ್ಲ
ಅದು ತಲುಪಿರುವುದು
ಬಿಳಿ ಮೋಡ
ಅಜ್ಞಾನದಲಿ ಮಾನವನಿಗೆ
ತಿಳಿದಿಲ್ಲ
ಬದುಕೆಂಬುದು ಚದುರಂಗದಾಟ
ತನ್ನ ಆತ್ಮ ದೊರೆತರೆ
ಗೆಲುವು
ದೊರಯದೆ ಹುಡುಕಾಡುತಿರೆ
ಸೋಲು
ಬದುಕು ಭವ್ಯವಾಗಲು
ನಿನ್ನನ್ನು ಮೊದಲು ನೀ ಅರಿ
ತ್ಯಾಗದಲ್ಲಿರೊ ಸುಖವ ಅರಿ
ಬಯಕೆಯೆಂಬ ನೀರ್ಗುಳ್ಳೆ ಮರಿ
ಮಾನವೀಯತೆ ನಿನಗೊಂದೆ ಸರಿ
ಸಾಯುವ ಮುನ್ನ ಆತ್ಮವ ಅರಿ