Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಯಕೆ..!

ಹೇಳಬೇಕೆನಿಸಿದೆ ನೂರಾರು ಬಯಕೆಯ ಮಾತು

ಹೊರಬರಲಿಚ್ಛಿಸಿವೆ ಅವು ತುಟಿಯಂಚಿನಲ್ಲೇ ಕೂತು ||



ನಿನ್ನ ಜೊತೆಯಲಿ ಬರುವೆನು ನಾನು

ಕಣ್ಣ ಸನ್ನೆಯಲಿ ಕರೆಯ ಬಾರದೆ ನೀನು

ನಿನ್ನುಸಿರಿಗೆ ಉಸಿರಾಗಿರುವೆ ನಾನು 

ಏಳೇ  ಜನುಮ ಸಾಕು ಏನೇನು ನಾನು.




ರಂಗೇರಿದ ಮೊಗದೊಲ್ಲೊಂದು ಬಿರುಸಾದ ಹುಸಿಮುನಿಸು,

ನಲ್ಲೆ, ನೀನೀಗ ನೋಡಲೆಂತು ಸೊಗಸು 

ಮನಸಿನ ಸಾಗರದಲ್ಲಿ ಒಲವಿನ ಅಲೆ ಎಬ್ಬಿಸಿದೆ

ಕಣ್ಣು ಮುಚ್ಚಿದರೂ ಕಾಡುವಂತೆ ನೀ ಸುಳಿದಾಡಿದೆ.



ಚಂದ್ರನಿರದ ಬಾನಿನಲ್ಲಿ ಚುಕ್ಕಿ ರಾಜ್ಯವು ನನ್ನದು

ಚಂದ್ರನ ಹಾಗೆ ನಲಿವ ಮಂದಹಾಸ ನಿನ್ನದು

ಹಗಲು ರಾತ್ರಿಗಳು ಉರುಳಿದರೇನು

ಮಾಸಲು ಬಿಡೆನು ನಿನ್ನ ಮಂದಹಾಸವನ್ನು.

                                           -ಮನು

- ಮನು

14 Mar 2017, 07:08 am

ಓ ಪ್ರೇಮಾಂಜಲಿ

ಬರಿದಾದ ಬಾಳಲ್ಲಿ ಬೆಳಕಾಗಿ ಬಂದೆ ನೀ
ನನ್ನ ಎದೆಯ ರಾಗಕೆ ನಿನ್ನ ಮಾತೆ ತಾಳವು
ಹುಸಿಯಾಗದೆ ಇನ್ನೂ ಹಸಿರಾಗಿದೆ ಜೀವವು...ಪ

ಕಾಣದಾ ದೇವತೆಯಂತೆ ಕಲ್ಪನೆಯಲೋಕ ಮೀರಿ
ಕಸಿಮಾಡಿದೆ ಪ್ರೀತಿಯ ಕರುಣೆಯ ಕಂಗಳ ತುಂಬಿ
ನಿಜವಾಯಿತೀಗ ನನ್ನ ಕನಸಿನ ಓಲೆ.

ಜಾತಿ ಮತ ಭೇದಗಳು ಬರಲಿಲ್ಲ ಪ್ರೀತಿಯ ಮಧ್ಯೆ
ನಿರ್ಮಲದ ಮನಸುಗಳಲ್ಲಿ ಕಹಿಭಾವ ಬರದಿನ್ನೂ
ಪ್ರೀತಿಯೆ ಗೆಲುವು ಇನ್ನೂ ಪ್ರೀತಿಯೆ ಜೀವವು..

ಭಾಗ್ಯದ ಸಿರಿಯಲ್ಲಿ ಬಯಸಿದಂತೆ ನೀನು ಸಿಗಲು
ತೂಗುವ ಆಸೆ ನಿನ್ನ ನನ್ನ ಪ್ರೀತಿ ತೊಟ್ಟಿಲಿನಲ್ಲಿ
ತೋಳಲ್ಲಿ ಬಳಸಿ ನಿನ್ನ ಕಾಯುವೆ ಇನ್ನೆಂದು...

- Irayya Mathad

14 Mar 2017, 06:09 am

ಕವನ

ಮನುಷ್ಯ ನಿಸರ್ಗದಲ್ಲಿ ಹೊರಟಾಗ
ಆತನ ಮನಸ್ಸಿನಲ್ಲಿ ಒಂದು
ಕೋಮಲ ಭಾವನೆ ಉದಯಿಸಿತು
ಆ ಭಾವನೆಯೇ ಕವನ
ಕವನ ಹಾಡಿದರೆ ಬರುವುದು
ಮನಸ್ಸಿಗೆ ಆಹ್ಲಾದವೂ, ಆನಂದವೂ.

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

13 Mar 2017, 08:37 pm

ಬೆಂದು ಮೂಡಿದಾ ಭರವಸೆ

ನಗುವೊಂದು ಬರಬಾರದೇ
ಕವಿಯ ಬಸಿರಿನಲಿ
ಸಾಹಿತ್ಯದಾ ತೆನೆ ವಸರಿ
ಕಾವ್ಯದಾ ಹೆರಿಗೆಯಾದಂತೆ

ಮಳೆಯೊಂದು ಬರಬಾರದೇ
ಬಿಸಿಲ ಬೇಗೆಯಲಿ ಬೆಂದು ಬಾಯಾರಿ ನಿಂತ ಧರಣಿ ಎಂಬ ತರುಣಿಯೊಡಲಲಿ
ಹಸಿರಸಿರಿ ನಳನಳಿಸುವಂತೆ

ಬೆಳಕೊಂದು ಬರಬಾರದೇ
ಕತ್ತಲು ತುಂಬಿದ ಕಂಗಳಿಗೊಮ್ಮೆ
ನೇತ್ರದಾನದಿ ದೃಷ್ಟಿಮೂಡಿ
ಬೆರಗುಗಣ್ಣಲಿ ಜಗವ ಕಾಣುವಂತೆ

ನೀ ಸಿಗಬಾರದೇ ಹೇಳು
ಮನದುಗಿಬಂಡಿಯಲಿ ಕೊತಕೊತ ಕುದಿಯುವ ಭಾವನೆಗಳ ಚುಕುಬುಕುವನು
ನಿಲ್ಲಿಸುವ ನಿಲ್ದಾಣದಂತೆ

ಕನ್ನಡಿಯ ಗಂಟಿದು ಹೇಗೆ ತೆರೆಯಲಿ
ಬದುಕೊಂದು ಒಗಟು ಹೇಗೆಬಿಡಿಸಲಿ
ಈ ಕುರುಡು ಕಂಗಳಿಗೂ ನಗುವಾಸೆ ಒಮ್ಮೆ
ಎಲ್ಲಿ ಹುಡುಕಲಿ

ಕೊರಗದಿರು ಎಲೆಮನವೆ ಜಗವು ಕೊರತೆಗಳ ಮಹಾ ಸಂತೆ
ತಮ್ಮ ಮನದೂನವ ಕಾಣದಾ ಕುರುಡರು
ದುರ್ಬೀನಿನಲ್ಲಿ ಪರರ ಊನವನು
ಹುಡುಕುವರು

ಮೂರು ಗಂಟಿಗೆ ಬೇಕು ಪ್ರೀತಿಯಾನಂಟು
ಮುಖವಾಡಕೆ ಬೇಕು ಸೌಂದರ್ಯದಾ ಒಣ ಅಂಟು
ಮುಖವಾಡಕೆ ಮನಸೋಲುವವರು ಅವರಂತೆ
ಅಂತಹವರಿಗಾಗಿ ಕಣ್ಣೀರಿಡುವುದು ಸರಿಯುಂಟೇ?

ದಾರಿಕಾಣದಾಗಿರಲು ನೀ ನಿರ್ಮಿಸಿಕೋ ನಿನ್ನದೇ ದಾರಿಯ
ಅದೆಷ್ಟು ಜನ ಹಿಡಿದುಬರುತಿಹರು ನೋಡು ನಿನ್ನ ದಾರಿಯ
ನೀನೀಗ ಅವರೆಲ್ಲರಿಗೂ ಮಾದರಿ
ಆಗಸವ ಸ್ಪರ್ಶಿಸಲೆತ್ನಿಸುತಿಹರು ನಿನ್ನ ನಿರಾಕರಿಸಿದವರು ಇಂದು ಹಾರಿ ಹಾರಿ

ಹಂಸಿನಿ

- ವಿಸ್ಮಯ

13 Mar 2017, 06:37 pm

ಬಣ್ಣದ ಬಯಲಾಟ

ಬದುಕೆ ಬಣ್ಣದೋಟ ಪ್ರೀತಿ ಹೋಳಿಗೆ ಊಟ
ಸಹಿಸಬೇಕು ಜೀವನದಲ್ಲಿ ದುಃಖದ ಕ್ಷಣಗಳ ಕಾಟ
ಕಲಿಯಬೇಕು ಪ್ರತಿದಿನವು ಜೀವನದ ಪಾಠ
ಹಂಚಬೇಕು ಪ್ರೀತಿ ಸ್ನೇಹದ ಹೂದೋಟ
ತೊರೆಯಬೇಕು ಜಾತಿ ಮತಗಳ ಪರಿಪಾಠ
ಸಾಕಾರವಾಗಬೇಕು ಈ ಜೀವನದ ಆಟ....

- Irayya Mathad

13 Mar 2017, 06:07 pm

ಬದುಕೆ ಬಣ್ಣದಾಟ

ನೋಡು ಸಪ್ತ ವರ್ಣ ನೀಲ ಬಾನಲಿ
ಏನೋ ಮಾಯೆ ಅರಿಯೆ ಮನದ ಖಗದಲಿ..
ಬದುಕ ಬಣ್ಣ ಬಳಿದುಕೊಂಡು
ಒಲವ ರಂಗು ತುಂಬಿಕೊಂಡು
ನಗುತ್ತಿದ್ದರೇನೆ ಸುಖದ ರಂಗು ಬಾಳಲಿ.

ಎಲ್ಲವಿದ್ದು ಎಲ್ಲರಿಲ್ಲ
ಎಲ್ಲ ಕಾಲ ನಮ್ಮದಲ್ಲ
ಎಲ್ಲಕ್ಕಾಗಿ ಏನೇ ಹಂಬಳಿಸಿದರು
ಉಳಿಯಲಾರದು ಎಲ್ಲ ಬಣ್ಣ...
ತೆರುದು ನೋಡು ಒಳಗಿನ ಕಣ್ಣ
ಪ್ರೀತಿಯೊಂದೇ ಜಯದ ಬಣ್ಣ..

ಯಾರೇ ಹೋಗಲಿ ಏನೇ ಬರಲಿ
ನಟಿಸಲೇಬೇಕು ಹಚ್ಚಿಕೊಂಡು ಬದುಕ ಬಣ್ಣ
ಮನಸಿಗೆ ಜೊತೆಯಾಗೋ ಮನಸುಗಳು
ಕನಸಿಗೆ ಕಣ್ಣಾಗೋ ಕಣ್ಣುಗಳು
ಕಾಮನಬಿಲ್ಲಿನಾಟದ ರಂಗಿನ ಸಪ್ತ ವರ್ಣಗಳು...
ಬಯಸಿದರೋ ಜೊತೆ ಇರವು ಸದಾ...
ಮಾಸದಂತೆ ಉಳಿಸಿಕೊಳ್ಳಿ ಪ್ರೀತಿಯ ಬಣ್ಣ.


ರಂಗಿನ ಜಗದಲ್ಲಿ ರಂಗನು ಚೆಲ್ಲಲು
ಬಾಳ ರಂಗಮಂಚದಲಿ ನಟಿಸಲೇಬೇಕು...
ಬಣ್ಣ ಎರಚಲೇಬೇಕು ಖುಷಿ ಖುಷಿಯಾಗಿ
ಕೆಸರನ್ನಲ್ಲ ನೆನಪಿರಲಿ..

- sharanu

13 Mar 2017, 09:00 am

ಮೂಡೀದ ಕಂಬನಿ

ಸೀಳೀದ ಎದೆಯಲಿ ಮೂಡೀದ ಕಂಬನಿ
ಕಣ್ಣ ಕಾಡೀಗೆ ಜಾರಿ ನಲಿದಾಡಿ
ಹೊಮ್ಮದ ನಾಧದಿ ಚಿಮ್ಮೀದ ದುಃಖವು
ವೀಣೇಯ ಹಿಡೀದೂ ನಡೆದೇನ

ತೊರೆದಾನ ನನ್ನನ್ನ ತೊರೆದಾನ ಚಂದೀರ
ಬಾನಲ್ಲು ಮೂಡದೆ ಮರೆಯಾದ
ಮನದಲ್ಲಿ ಮೂಡೀಸಿ ಭಾವನೆ ಮೆರೆದಾನ




ಕತ್ತಲ ಮೋಡವ ತೋರೀಸಿ ನಡೆದಾನ

ತಪ್ಪೀನ ಹಾದೀಯ ಕಪ್ಪೀನ ಮೋಡದಿ
ಕತ್ತಲ ಜೀವನ ಹಾದಿ ತಪ್ಪಂತೆ
ವೀಣೆಯ ತಂತೀಯು ಚುಚ್ಚೀತು ಮನವನ್ನು
ಚುಚ್ಚೂವ ನೆನಪೊಂದು ಕಾಡೀತು

ಹದಮಾಡಿ ನಡೆದೇನ ಮಸಣದ ಹಾದೀಯ
ಜಗವ ತಣೀಸಿ ತಣಿದು ನಡೆದೇನ
ಚಂದೀರ ಬಾನಲ್ಲಿ ಧರೇಯ ಮಣ್ಣಲ್ಲಿ ನಾ
ಮಣ್ಣಾಗಿ ಕಾಣೂವೆ ನಿನ್ನ ಬಾನಲ್ಲೀ.........

- Sujay

13 Mar 2017, 08:27 am

ಮರೆಯಬೇಡ ನನ್ನ ಹೇಸರು

ನಿನ್ನ ಹೇಸರು
ಮರೇತ ಮೇಲೆ
ನನ್ನ ಹೇಸರು
ಗೊರಿ ಮೇಲೆ.''.....
ಅರ್ಥ ಮಾಡ್ಕೊ.....
.. ಅನಿ

- anil

13 Mar 2017, 07:42 am

ನಾಚಿಕೆ ಇಲವೇ ನನಗೆ?

ನಾಚಿಕೆ ಇಲ್ಲವೇ ನನಗೆ?
ಬರೆಯುತ್ತಿರುವೆ ಈ ಕವನಗಳ
ಗೊತ್ತಿದು ಸಿಹಿ ಸುಳ್ಳುಗಳ ಬೆರಸಿ
ಪ್ರಾಸ ಪದಗಳ ಬಳಸಿ

ಬರೆದೆ ಕವನಗಳ ಬರಿ ಊಹೆಯಲಿ
ಚಪಾಳೆ ಗಿಟ್ಟಸಿಕೊಳ್ಳುವ ಯೋಚನೆ ತಲೆಯಲ್ಲಿ
ಪದಗಳವು ಎಷ್ಟು ಸಾಚಾ...ಎಷ್ಟು ಸುಂದರ...
ಏನು ಖುಷಿಯೊ ಇನ್ನೊಬರ ದಾರಿ ತಪ್ಪಿಸಲು.
ಮರೆತೇನಾ ನಾ ಎಲ್ಲಾ ಮೌಲ್ಯಗಳನ್ನು....?

ಹುಚ್ಚಿದು...
ಕವನ ಬರೆಯಬೇಕೆಂದೋ?
ಚಪಾಳೆ ಗಿಟ್ಟಿಸಿಕೊಳಲೆಂದೋ?
ಏಕೆ ಈ ವೇಷ? ಏಕೆ ಈ ದುರ್ಬುದ್ಧಿ?
ಏನು ನನ್ನ ಉದ್ದೇಶ? ಏನಾಗಿದೆ ನನಗೆ?
ಈಗಲಾದರೂ ಮಾಡುತಿರುವುದೇನು ,ಕವನವಿದು
ಸ್ವ -ವಿಮರ್ಶೆಗೊ?...... ಚಪಾಳೆಗೊ ?

#ಸಾಚಾ ನಾನಲ್ಲ

- MK Reddy

12 Mar 2017, 10:57 pm

ಜೀವ-ಭಾವ

ಜೀವದಿಂದ ಜೀವ ಹುಟ್ಟಿದರೆ
ಭಾವದಿಂದ ಭಾಷೆ ಹುಟ್ಟುವುದು
ಜೀವಿಗೆ ಅಳಿವುಂಟೆ ವಿನಃ ಜೀವಕ್ಕೆ ಅಳಿವಿಲ್ಲ
ಭಾಷೆಗೆ ಅಳಿವುಂಟೆ ವಿನಃ ಭಾವಕೆ ಅಳಿವಿಲ್ಲ.(೧)

ಜೀವಿಯ ಅಭಿವ್ಯಕ್ತಿ ಜೀವನ
ಭಾಷೆಯ ಅಭಿವ್ಯಕ್ತಿ ಸಂವಹನ
ಜೀವಿಯ ಅರಿಯಬೇಕೆಂದರೆ ಜೀವನ ಅರಿತರೆ ಸಾಲದು ಜೀವವನ್ನು ಅರಿಯಬೇಕು
ಭಾಷೆಯ ಅರಿಯಬೇಕಾದರೆ ಸಂವಹನ ಅರಿತರೆ ಸಾಲದು ಭಾವವನ್ನು ಅರಿಯಬೇಕು.(೨)

ಭಾವಕೆ ಜಾವದ ಹಂಗಿಲ್ಲ
ಜೀವಕೆ ಭವದ ಹಂಗಿಲ್ಲ
ಭಾವವು ನಿರ್ಜೀವವಾದರೆ ಜಗತ್ತೇ ನಿರ್ವಾತವು
ಜೀವವು ನಿರ್ಭಾವವಾದರೆ ಜಗತ್ತೇ ನಿರ್ನಾನಮವು.(೩)

ಜೀವದ ಭಾವ ಕಡಲ ಒಡಲು
ಭಾವದ ಜೀವ ಮನದ ಮುಗಿಲು
ಭಾವದ ಅಸ್ತಿತ್ವ ಭಾವನಾತ್ಮಕತೆ
ಜೀವದ ಅಸ್ತಿತ್ವ ಆಧ್ಯಾತ್ಮಿಕತೆ.(೪)

ಭಾವದ ಮಿತಿ ನಿಯಮಿತ
ಜೀವದ ಮಿತಿ ಅನಂತ
ಜೀವ-ಭಾವ ಅರಿತವನು ಜೀವಾತ್ಮ
ಜೀವ-ಭಾವ ಮೀರಿದವನು ಮಹಾತ್ಮ
ಜೀವ-ಭಾವದ ಹಂಗಿಲ್ಲದವನು ಪರಮಾತ್ಮ.(೫)

- ಅಕವಿ

12 Mar 2017, 10:24 pm