ಎಲ್ಲಿದೆ ಜಾತಿ ತಿನ್ನುವ ಅನ್ನಕ್ಕಿಲ್ಲದ ಜಾತಿ...
ಕುಡಿಯುವ ನೀರಿಗಿಲ್ಲದ ಜಾತಿ...
ಉಸಿರು ನೀಡುವ ಗಾಳಿಗಿಲ್ಲದ ಜಾತಿ...
ಸುಡುವ ಬೆಂಕಿಗಿಲ್ಲದ ಜಾತಿ...
ಉಡುವ ಬಟ್ಟೆಗಿಲ್ಲದ ಜಾತಿ...
ನೀಡುವ ಕೈಗಳಿಗಿಲ್ಲದ ಜಾತಿ...
ಪ್ರಾಣಿ ಪಕ್ಷಿಗಳಿಗಿಲ್ಲದ ಜಾತಿ...
ತಿನ್ನುವ ಅನ್ನಕ್ಕೆ ಕೇಳುವೀರಾ ಯಾವ ಜಾತಿಯ ರೈತ ಬೆಳೆದಿರುವನೆಂದು
ಬೀಸುವ ಗಾಳಿಗೆ ಕೇಳುವೀರಾ ನಿನ್ನದು ಯಾವ ಜಾತಿ ಎಂದು
ಕುಡಿಯುವ ನೀರಿಗೆ ಕೇಳುವೀರಾ ನಿನ್ನದು ಯಾವ ಜಾತಿ ಎಂದು
ಉಡುವ ಬಟ್ಟೆಗೆ ಕೇಳುವೀರಾ ನೀನು ಯಾವ ಜಾತಿಯ ಕಾರ್ಮಿಕನ ಕಲೆ ಎಂದು
ಹಸಿವು ನೀಗಿದರೆ ಸಾಕು...
ದಾಹ ತೀರಿದರೆ ಸಾಕು...
ಮಾನ ಮುಚ್ಚಿದರೆ ಸಾಕು...
ಕಷ್ಟಕ್ಕೆ ದಾರಿ ಸಿಕ್ಕರೆ ಸಾಕು...
ಬೆಚ್ಚಗಿದ್ದರೆ ಸಾಕು...
ಮತ್ತೇಕೆ ನಮಗೆ ಜಾತಿ ಎಂಬ ಪದ ಬೇಕು?
ಬೇಸಿಗೆಯ ಬೇಗೆಯಲಿ ಸೂರ್ಯ ಇಂದೇಕೋ
ಮೋಡಗಳ ಮರೆಯಲಿ ಅವಿತಿದ್ದಾನೆ
ಮಳೆ ಹನಿಯ ಮತ್ತಲ್ಲಿ
ಮೈ ಮನವ ತೋಯಿಸಿದ ವರುಣರಾಜ
ಮತ್ತೆ ಸುಮಧುರ ನೆನಪುಗಳ
ಹೊತ್ತು ತಂದಿದ್ದಾನೆ...
ಮಳೆಯಲಿ ನೆನೆಯುತ ನಿನ್ನನು ನೆನಸುತ
ತಂಪು ಗಾಳಿಯಲಿ ಬಿಸಿ ಅಪ್ಪುಗೆ ಬಯಸುತ
ಮುತ್ತಿನ ರೂಪದಲಿ ಮಳೆ ಹನಿ
ಭೂಮಿಯ ಚುಂಬಿಸಿದಾಗ
ಮತ್ತೆರಿಸಿದ ನಿನ್ನ ಚುಂಬನ ನೆನಪಾಯಿತು
ನನ್ನಿಂದ ದೂರ ನೀನಿದ್ದರೆ ಏನಂತೆ...??
ನನ್ನೆದೆಯಲಿ ಉಸಿರಾಗಿ ನಿನ್ನದೇ ಉಸಿರಿದೆ...
ಜೀವನದ ಪ್ರತಿ ಪುಟದಲೂ ನಿನ್ನದೇ ಹೆಸರಿದೆ...
ಹಗಲು ರಾತ್ರಿ ಒಂದೇ ಯೋಚನೆ..
ಮುಗಿಯದ ಮೋಹ ತೀರದ ದಾಹ
ಋತುಗಳು ಬದಲಾಗಬಹುದು.
ನೀ ನನ್ನ ಮರೆಯಲೂಬಹುದು
ನೋವಲ್ಲಿ ನಾನು ಸಾಯಲೂ ಬಹುದು
ಆದರೆ...
ನಿನ್ನ ಪ್ರೀತಿಯಿಲ್ಲದೇ ನಾನಿಲ್ಲ...
ನನ್ನ ಪ್ರೀತಿಗೆಂದೂ ಸಾವಿಲ್ಲ...!!!
ನಾನು ಸಾಯುವ ಕ್ಷ ಣದಲ್ಲಿ
ಎಡಗೈ ನನ್ನ ಮೀಸೆಯ ಮೇಲಿರಲಿ,
ಬಲಗೈಯಲ್ಲಿ ತ್ರಿವರ್ಣ ಧಜವಿರಲಿ,
ನನ್ನ ಸುತ್ತ ಮುತ್ತಲು ಕನ್ನಡಿಗರ
ಸಾಲು ಇರಲಿ,
ನನ್ನ ನಾಲಿಗೆಯು ಕನ್ನಡವನ್ನೆ ನುಡಿಯುತ್ತಿರಲಿ,
ನನ್ನ ಎರಡು ಕಣ್ಣುಗಳಲ್ಲಿ
ಕರ್ನಾಟಕವೇ ಕಾಣುತಿರಲಿ,
ಹೀಗೆ ನನ್ನ ಮರಣವಾಗಲಿ.
ನಾನು ಸಾಯುವ ಕ್ಷ ಣದಲ್ಲಿ
ಎಡಗೈ ನನ್ನ ಮೀಸೆಯ ಮೇಲಿರಲಿ,
ಬಲಗೈಯಲ್ಲಿ ತ್ರಿವರ್ಣ ಧಜವಿರಲಿ,
ನನ್ನ ಸುತ್ತ ಮುತ್ತಲು ಕನ್ನಡಿಗರ
ಸಾಲು ಇರಲಿ,
ನನ್ನ ನಾಲಿಗೆಯು ಕನ್ನಡವನ್ನೆ ನುಡಿಯುತ್ತಿರಲಿ,
ನನ್ನ ಎರಡು ಕಣ್ಣುಗಳಲ್ಲಿ
ಕರ್ನಾಟಕವೇ ಕಾಣುತಿರಲಿ,
ಹೀಗೆ ನನ್ನ ಮರಣವಾಗಲಿ.
ಪದಗಳ ಹುಡುಕಲಾಗದು ನಿನ್ನ ವರ್ಣಿಸಲು
ಬಳಿಯಲ್ಲೆ ನೀನರಲು ಬದುಕಿಗೆ ಭಯವಿಲ್ಲ
ತೃಣಮಾತ್ರ ನಿನ್ನ ಮಾತಿನ ಸಿಹಿ ಸಾಕು ತಣಿದು ತಂಪಾಗಲು ನಾನು
ವಿಷಾದವಿಲ್ಲ ವಿನೋದವೆಲ್ಲ ವಿನಮ್ರತೆಯ ವೈಣಿಕೆ ನೀನಿರಲು
ಪ್ರೀತಿಯೊಳಗಿನ ಜೇನ ಹುಡುಕಲು ಕಾಯಲಿಲ್ಲ ಸಾವಿರ ದಿನ ನೋಡಿದಾಕ್ಷಣ ಸವಿದೆನು ಆ ಜೇನ ಸವಿಯನು
ನಲುಮೆಯ ಗೆಳತಿ ಸೌಂದರ್ಯದೊಡತಿ ಕಾಡದಿರು ನೀ ನನ್ನ ಪ್ರತಿದಿನ ಕನಸಲಿ....