ಕುಂಡಿಗೆ ಬರೆ ಹಾಕಿದರೂ ನಂಬುತ್ತೇನೆ ನಮ್ಮವರೆಂದು, ವಿಶ್ವಾಸ ದ್ರೋಹಬಗೆದರೂ ಸಹ
ನಿಮ್ಮ ಪ್ರೀತಿ ಮಾತಲಿ ಹೂಬುನೆಟ್ಟರೂ ಮನಸಿಗೆ ಗಾಯವಾದರೂ ಸಹ
ಬಣ್ಣದ ರಂಗೋಲಿ ಹಿಂದೆ ಮುಂದೆ ಹಾಕಿದಾಗಲೂ ಸಹ
ನಾನು ಬಿಗಿದಪ್ಪಿ ಪ್ರೀತಿಸುತ್ತೇನೆ.
ಜಾತಿಯ ವಿಷ ಬೀಜ ಬಿತ್ತದಾಗಲೂ ಮೀಸಲಾತಿಗೆ ವಿಶ್ವಾಸಘಾತುಕತನ ಮಾಡಿದಾಗಲೂ ಸಹ
ನಾನು ಹೋರಾಟ ಶಕ್ತಿಯನ್ನು ಪ್ರೀತಿಸುತ್ತೇನೆ ಅಭಿಮಾನಪಡುತ್ತೇನೆ
ಅದರ ಫಲಾವಾಗಿ ಬದಲಾದ ಕಾಲಮಾನಕ್ಕೆ ನೀವು ಬದಲಾಗುವಿರಿ ಎಂದು
"ಹೋರಾಟದವಸಾಗರಕ್ಕೆ ಸಾವಿರಾರು ನದಿಗಳು' ಇರುವಾಗ ಬಗುರಿ ಆಟ ಆಡಿಸಿದಾಗ ಗುಟ್ಟು ರಟ್ಟಾಗಿ ಎಷ್ಟು ದಿನ ನೀವು ಗದ್ದುಗೆ ಏರ ಬಲ್ಲಿರೆಂದು
ಅರಿತು ಮೋಸವಾಗುವುದಿಲ್ಲವೆಂದು
ನಿಮ್ಮ ನಡುವೆ ಪ್ರತಿಭಟಿಸಿ ನಮ್ಮ ಬದುಕು ಕಟ್ಟಿಕೊಂಡು
ಮತ್ತೆ ಮತ್ತೆ ಪ್ರೀತಿಸುತ್ತೇನೆ ಪ್ರೀತಿಸುತ್ತಲೇ ಇರುತ್ತೇನೆ
ನೀವು ಬದಲಾಗುವ ತನಕ ಮನುಷ್ಯರಾಗುವ ತನಕ
ಒಂದಿಲ್ಲ ಒಂದು ದಿನ ಬದಲಾಗುವಿರೆಂಬ ನಂಬುಗೆಯಿಂದ
ಪ್ರೀತಿಸುತ್ತಲೇ ಇರುತ್ತೇನೆ
ಬಾಳೇ ಗೊನೆಯಾಗುವ ತನಕ
ಹೋರಾಟಕ್ಕೆ ಫಲದೊರೆಯುವ ತನಕ ನಾನು
ಪ್ರೀತಿಸುತ್ತಲೇ ಇರುತ್ತೇನೆ..
ಮನ ವಿಷಾದಿಸಿದೆ
ತನ್ನೊಳಗ ನೋಡಿ
ಬರಿ ನೋವು ತುಂಬಿರುವ
ತನ್ನೊಳಗ ನೋಡಿ.
ನನಗಾಗಿ ಎಲ್ಲವು ಇದೆ
ಆದರೆ ನೆಮ್ಮದಿ?
ಸಂಬಂಧಗಳಿವೆ
ಹಣವಿದೆ
ಸೌಲಭ್ಯಗಳಿವೆ
ಆದರೂ ಮನ ಕೂಗುತಿದೆ
ಖಾಲಿತನದ ನೋವಿನಲಿ
ಮನ ವಿಷಾದಿಸಿದೆ.
ತನ್ನೊಳಗೆ ಏನನೋ ತುಂಬಬೇಕು
ಏನನೋ ಪಡೆಯಬೇಕು
ಆದರೆ ಏನೆಂದು?
ಅರಿವಾಗದೆ ಮನ ವಿಷಾದಿಸಿದೆ.
ಅಮ್ಮ.,..
ಅರಿವಾಗದವಳು
ನನ್ನ ಪ್ರಪಂಚದಲಿ ತೇಲಿದವಳು
ನಮಗಾಗೇ ಬದುಕಿದವಳು
ಆದರೂ, ಅರಿವಾಗಲಿಲ್ಲ ಎನಗೆ
ಅವಳು ಮನವು.
ನನ್ನ ಆಲೋಚನೆ ಅವಳ ಜೀವನವಾಗಿತ್ತು
ನನ್ನ ಬದುಕು ಅವಳ ಬದುಕಾಗಿತ್ತು
ದಿನದ ಪ್ರತಿ ಕ್ಷಣ ಮಕ್ಕಳ ಜೊತೆ ಹೆಜ್ಜೆ ಹಾಕಿದವಳು
ಆದರೂ ಅರಿವಾಗಲಿಲ್ಲ ಎನಗೆ ಅವಳ ಮನವು.
ಎಷ್ಟು ಬಣ್ಣ ನಿನ್ನಲಿ...
ಮತ್ತೆ ನೋಡುವಾಸೆ ಕಣ್ಣಲಿ..
ಎಷ್ಟು ಸುಂದರವಾಗಿರುವೆ ನೀನು..
ಎಷ್ಟು ಆಕರ್ಷಕ ನೀನು..
ಅಂದವಾಗಿ ಅರಳುವೆ ನೀ..
ಚಂದವಾಗಿ ಸೆಳೆಯುವೆ ನೀ..
ನಿನ್ನ ನೋಡಲು ತುಂಬಿ ಬರುವುದು ಹೃದಯ..
ನಿನ್ನ ಸ್ಪರ್ಶ ಸುಮಧುರ, ಸುಂದರ..
ಪ್ರೀತಿಯ ಪ್ರತೀಕವಾದೆ ನೀನು..
ದೇವರ ಶಿರದಲು, ಪಾದದಲು ನೀನು..
ಜಾತಕ, ಸೂತಕಕ್ಕು ನಿನ್ನದೆ ಅಲಂಕಾರ..
ಶುಭ, ಅಶುಭಕ್ಕು ನಿನ್ನದೆ ಸಿಂಗಾರ..
ಮಾಡುವ ಕೆಲಸದಲಿ ಕಾಣಬೇಕು ದೇವರ
ಅದುವೇ ಜೀವನದ ಸಾಕ್ಷಾತ್ಕಾರ..
ಯಾರ ಹಂಗಿಲ್ಲದೆ ಜೀವಿಸಲು ಛಲ ಹುಟ್ಟಿಸುವುದು ಕೆಲಸ..
ಕಾಯಕವೇ ಕೈಲಾಸ ಎಂಬುದು ನಿಜವಾದ ದೇವರ ಕೆಲಸ...
ಸ್ವತಂತ್ರವಾದ ಬದುಕು ಕಟ್ಟಿಕೊಳ್ಳಲು ಧೈರ್ಯ ಕೊಡುವುದು ಕಾಯಕ..
ಅವಲಂಬಿತವಾಗಿ ಕೈಚಾಚುವುದು ತುಂಬಾ ನರಕ..
ನೆಮ್ಮದಿಯು ಹೆಚ್ಚು ಕೈತುಂಬ ಕೆಲಸವಿರಲು..
ಯೋಚನೆಯು ಹಿಡಿಸುವದು ಮತ್ತಷ್ಟು ಹುಚ್ಚು ಖಾಲಿ ಇರಲು...
ಚಿಂತೆಗಳನ್ನು ಮರೆಸಿ ಜವಾಬ್ದಾರಿಗಳತ್ತ ಸಾಗಿಸುವುದು ಕಾಯಕ..
ದುಡಿಮೆಯ ನಂಬಿ ಬದುಕುವುದು ಶ್ರೇಷ್ಠ ಕಾಯಕ...
ನಿನ್ನ ಕವನಗಳಿಗೆ ಪದಗಳಾಗುತ್ತ, ನಿನ್ನ ಭಾವನೆಗಳಿಗೆ ಬಣ್ಣ ಹಚ್ಚುವಾಸೆ...
ನಾ ಬರಲೇ ನಿನ್ನ ಜೊತೆಗೆ... ??
ನಿನ್ನ ಕನಸುಗಳನ್ನು ನನಸು ಮಾಡುತ್ತಾ...
ನನ್ನ ಕನಸುಗಳನ್ನು ನಿನ್ನೊಡನೆ ಹಂಚಿಕೊಳ್ಳುತಾ...
ನೀ ಮುನಿದಾಗ ಮುದ್ದಿಸುತ್ತಾ..
ನಿನ್ನ ಸಂತೋಷವನ್ನು ಸಂಭ್ರಮಿಸುತ್ತಾ...
ಜೊತೆಗೆ ಇದ್ದು ಬಿಡಲೆ...??
ಹೇಳು ಗೆಳೆಯ...
ದೂರದಲಿ ಎಲ್ಲೊ ಇರುವ ನಿನ್ನ ಹೇಗೆ ತಲುಪಲಿ ನಾನು..??
ನಿನ್ನ ಹೃದಯ ಬಡಿತದ ದನಿ ಕೇಳುವಾಸೆ ನನಗೆ..
ಒಮ್ಮೆ ನಿನ್ನೆದೆಗೊರಗಲು ಅನುಮತಿ ನೀಡುವೆಯ.. ??
ನನ್ನೆಲ್ಲಾ ಆಸೆ, ಕನಸುಗಳಿಗೆ ಸ್ಫೂರ್ತಿಯಾದ ನಿನ್ನ ಒಮ್ಮೆ ಅಪ್ಪಿಬಿಡಲೆ..
ನನ್ನ ನಂಬಿಕೆ ಮತ್ತು ಸಮಯದ ರಾಯಭಾರಿಯಾದ ನಿನ್ನ ಪ್ರೀತಿಯಲೆ ರಮಿಸಿಬಿಡಲೆ...