Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ರಾಜ ರಾಣಿ ನಾವು ನಮ್ಮಿ ದುನಿಯಾಗೆ
ಯಾರು ಏಕೆ ಬೇಕು ನಮ್ಮ ಸೇವೆಗೆ
ಸೂರ್ಯ ಬರುವ ಹಗಲಲಿ ಜೊತೆಗೆ
ಚಂದ್ರ ಸಾಕಲ್ಲವೇ ಇರುಳಲಿ ನಮಗೆ
ರಾಜ ರಾಣಿ .. ... ...
- ಕುಮಾರ ಸಿದ್ದರಾಜ
03 Mar 2017, 05:28 pm
ನಿನೆನೂ ಹೊರಟು ಹೋದೆ ಕೊಟ್ಟು
ಪ್ರೀತಿಯ ಮೊದಲ ಮುತ್ತನು
ಸಾಕಾಗೊತ್ತಿಲ್ಲ ಜಾಗ ಎದಯಲಿ ನಲ್ಲೇ
ತುಂಬಿಕೊಳ್ಳಲು ಆ ಸವಿಯನು.
- ಕುಮಾರ ಸಿದ್ದರಾಜ
03 Mar 2017, 05:16 pm
ಕಾಣೆಯಾಗಿದೆ ಹೃದಯ
ಹೇಳು ಕದ್ದಿದ್ದು ನೀನೇನಾ?
ಹುಡುಕಿದರೂ ಸಿಗದ ಹಾಗೆ
ಎಲ್ಲಿ ಬಚ್ಚಿಟ್ಟಿರುವೆ ಅದನ್ನ ?
ಮಾಯವಾಗಿದೆ ಮನಸ್ಸು
ಹೇಳು ಮಾಯ ಮಾಡಿದ್ದು ನೀನೆನಾ?
ಶಂಖೆಯೊಂದು ಮೂಡುತಿದೆ
ನೀ ಉಪಯೋಗಿಸಿದ ಮಂತ್ರ ಪ್ರೀತಿನಾ?
ಮೌನವಾಗಿದೆ ಮಾತು
ಹೇಳು ಮೂಕಾಗಿಸಿದ್ದು ನೀನೇನಾ?
ಪ್ರೀತಿಯನ್ನು ವ್ಯಕ್ತಪಡಿಸಲು
ಸೂಕ್ತ ಭಾವನೆ ಮೌನವೇನಾ?
- ಅಕವಿ
03 Mar 2017, 05:13 pm
ಸುಮ್ಮ ಸುಮ್ಮನೆ ನಿನ್ನ ಹಿಂದೆ ಬರೋಕೆ
ನಾನೇನೋ ಹುಚ್ಚನಾ..
ಆ ಹುಚ್ಚ ಬ್ರಹ್ಮ ಗಿಚಿದಾ
ನಿನ್ನ ಹೆಸರ, ನನ್ನ ಹಣೆಯಲಿ
ನಾನೇನು ಮಾಡಲಿ ಚಿನ್ನ!
- ಕುಮಾರ ಸಿದ್ದರಾಜ
03 Mar 2017, 05:13 pm
ರಾಜನಲ್ಲ ನಾನು ಯಾವ ಊರಿಗೋ
ಯಾವ ಅಸ್ತಿ ಇಲ್ಲ ನನ್ನ ಹೆಸರಿಗೂ
ಪುಟ್ಟ ಹೃದಯವಿದೆ ಎದೆಯೊಳಗೆ
ಸಾಗರದಷ್ಟು ಪ್ರೀತಿ ಇದೆ ಅದರೊಳಗೆ
ಅಲೆಯಾಗಿ ಬಾ, ನದಿಯಾಗಿ ಬಾ
ಜೊತೆಯಾಗಿರು ನೀ ಎಂದೆಂದೂ ನನಗೆ.
- ಕುಮಾರ ಸಿದ್ದರಾಜ
03 Mar 2017, 03:31 pm
ನಿನ್ನನು ಪ್ರಿತಿಸಿತು ನನ್ನ ಹೃದಯ
ನೀ ಪ್ರಿತಿಸುವೆಯಾ ನನ್ನ
ಏಕೋ ಏನೋ ನಾ ಕಾಣೆ ನಲ್ಲೇ
ನಿನ್ನನು ಬಯಸಿತು ನನ್ನ ಹೃದಯ /
ನಿನ್ನಾ ಪ್ರೀತಿಗೆ ಸೂಲದಿದ್ದರೆ ನಾನು
ಕೊಡುತ್ತಿದ್ದೇನೆ ನನ್ನ ಹೃದಯವನು
ನಿನ್ನ ಹೃದಯದ ಪ್ರೇಮದ ಸಂದೇಶ
ಸೆಳೆಯಿತು ನನ್ನ ಮಾನವನು. /
ನಿನ್ನ ಕಣ್ಣಿನ ಮಿಂಚಲ್ಲಿ
ಕಂಡೆನು ಸಾವಿರ ಕನಸನು
ನಿನ್ನ ಮುತ್ತಿನ ಸಹವಾಸದಲ್ಲಿ
ಮರೆತೇ ನಾನಿ ಜಗವನು. /
ನೀನೇ ಹೃದಯದ ಮಿಡಿತವು
ನಿನಗಾಗಿಯೆ ಈ ಜೀವವು
ನಿನ್ನ ಹಣೆಯ ಕುಂಕುಮವಾಗಿ
ಜೊತೆಯಾಗಿ ನಾ ಇರುವೆನು. /
ನಿನ್ನನು ಪ್ರಿತಿಸಿತು ನನ್ನ ಹೃದಯ
ನೀ ಪ್ರಿತಿಸುವೆಯಾ ನನ್ನ.........
- ಕುಮಾರ ಸಿದ್ದರಾಜ
03 Mar 2017, 03:19 pm
ಮನದ ಮ೦ದಿರದಲ್ಲಿ ಬೆಳಗಿದ ಪ್ರೀತಿಯ ದೀಪ ನೀನು..
ಹೃದಯ ಸಮುದ್ರದಲ್ಲಿ ಸಿಕ್ಕ ಪ್ರೀತಿಯ ಮುತ್ತು ನೀನು...
ಕಣ್ಣ ಕೊಳದಲ್ಲಿ ಅರಳಿದ ಪ್ರೀತಿಯ ಪುಷ್ಪ ನೀನು...
ನೆನಪಿರಲಿ....
ದೀಪ ಆರದಿರಲಿ,ಮುತ್ತು ಒಡೆಯದಿರಲಿ,ಪುಷ್ಪ ಬಾಡದಿರಲಿ.....!!!
- Praveen
03 Mar 2017, 02:07 pm
ನಿನ್ನ ಜೊತೆ ಕುಣಿಯೋ ಆಸೆ ,
ಆದ್ರೆ ನನಗೆ ಕುಣಿಯೋದಿಕ್ಕೆ ಬರೋಲ್ಲ
ಎಂಬುದೇ ನಿರಾಸೆ ,....
ನಿನ್ನ ಅಪ್ಪಿಕೊಂಡು ಮುದ್ದಾಡೋ ಆಸೆ ,
ಆದ್ರೆ ನನ್ನ ಸತಾಯಿಸಿ
ಮಾಡ್ತಿಯಲ್ಲೇ ನಿರಾಸೆ ......
ನೀ ಮಾಡೋ ಬಿರಿಯಾನಿ ತಿನ್ನುವ ಆಸೆ
ಆದರೆ ನಿನಗೆ ಮ್ಯಾಗಿ ಬಿಟ್ಟರೆ ಬೇರೆ
ಏನು ಮಾಡೋಕೆ ಬರಲ್ಲ
ಅನ್ನೋದೇ ನಿರಾಸೆ ....
ನಿನ್ನ ಜೊತೆಗೂಡಿ ಬಾಳೋ ಆಸೆ ,
ಆದರೆ
ನಾ ಇಲ್ಲಿಯವರೆಗೂ ಕಂಡಿದ್ದು ಕನಸು ಎಂಬುದೇ ನಿರಾಸೆ .....
- Praveen
03 Mar 2017, 01:56 pm
ಹಾಲಿನಂತಹಾ ಕೋಮಲ ಮನಸುಳ್ಳವಳು
ನಿನ್ನ ಜೊತೆ ನರಕದಲ್ಲೂ ನಗುತಿರುವವಳು
ನಿನ್ನ ಕುಟುOಬದಲ್ಲಿ ಮಗಳಾಗಿ
ನಿನ್ನ ಮರೆಸುವವಳು.
ಅವಳ ಕಣ್ಣಲ್ಲೇ ನಿನ್ನ ಪ್ರಾಣ
ಅಡಗಿಸಿಟ್ಟವಳು.
ನಗುವಲ್ಲೇ ನಿನ್ನ ದುಕ್ಕ ಕರಗಿಸುವವಳು.
ಪ್ರೀತಿಯಿಂದ ನೀ ಕರೆದ ಕ್ಷಣ
ನಿನ್ನ ಉಸಿರಿಗೆ ಹೆಸರಾಗುವವಳು.
ತನ್ನ ಹ್ರುದಯ ದೇಗುಲದಲ್ಲಿ
ನಿನಗಾಗಿ ಆಸನ ಕಾದಿರಿಸಿದವಳು .
ಅವಳಾ ನಿನ್ನವಳು ಕಡೆವರೆಗೂ
ನಿನ್ನ ನೆರಳಲ್ಲಿ ನೀನಾಗಿ ನಿಲ್ಲುವವಳು.
ಚಿತೇಯಲ್ಲಿ ನಿನ್ನ ಜೊತೆಗೂಡಿ
ಬರುವವಳು .
- ಚುಕ್ಕಿ
03 Mar 2017, 04:17 am
ಕನಸೊಂದ ಕಟ್ಟಿರುವೆ ನನಸಾಗಬಹುದೆಂದು,
ನನಸಾಗಿ ಬದುಕಲ್ಲಿ ಹೊಸತನವ ತರಬಹುದೆಂದು...
ಸಿಹಿಗಳಿಗೆ ಕಹಿಗಳಿಗೆ ನಡುವಲ್ಲಿಹುದು ಬಯಕೆ,
ಏರು ಪೇರುಗಳನ್ನು ದಾಟಿ ಸಾಗುತಿಹುದು ದಡಕೆ...
ಅಲ್ಲಲ್ಲಿ ತಡೆಗೋಡೆ ತಡೆಯುತಿದೆ ಆಸೆ,
ಅತಿ ಬಯಕೆ ಮನೆಮಾಡಿ ಆಗದಿರಲೆಂದು ನಿರಾಸೆ...
ಏಳು ಬೀಳುಗಳ ಹಾದಿಯಲಿ ಕನಸುಗಳ ಬಿತ್ತಿರುವೆ,
ಬಿದ್ದರೂ, ಬಳಲಿದರು, ಸಾಧಿಸಿಯೆ ತೋರಿಸುವೆ.....
ಜೆ ಪಿ..
- jp R
03 Mar 2017, 01:24 am