Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಆಡಿ ಕೊಳ್ಳುವವರ ನೂರಾರು ಜನರು

ಆಡಿಕೊಳ್ಳುವರು ನೂರಾರು ಜನರು
ಹಾರೃಸೊರು ಸಾವಿರಾರು ಜನರು
ಅಪಮಾನ ಮಾಡುವರು ನೂರಾರು ಜನ
ಆತ್ಮ ಅಭಿಮಾನ ತೋರಿಸೊರು ಸಾವಿರಾರು ಜನ

ದೂರ ತಳ್ಳುವರು ನೂರಾರು ಜನರು
ಕರೆದು ಮಾತಾಡುವರು ಸಾವಿರಾರು ಜನ
ಈ ನೂರಾರು ಜನರ ನಡುವೆ ಇರುವ ಬದಲಿಗೆ
ಸಾವಿರಾರು ಜನರ ನಡುವೆ ಇರುವುದು ಒಳ್ಳೆಯದಲ್ಲವೆ.
‌‌‌ ‍‍ Basavaraj Yk

- ಬಸವರಾಜ್

02 Mar 2017, 10:42 pm

ತೊರೆಯ ಬೇಡೆನ್ನ

ಕಂಡ ಕನಸು ಕಮರಿ ಹೋಗಿದೆ
ಜತೆಗಿದ್ದ ಕ್ಷಣ ಮತ್ತೆ ಮತ್ತೆ ನೆನಪಿಸುತ್ತಿವೆ
ಆಗುತ್ತಿಲ್ಲ ಮರೆಯಲು ನಿನ್ನ
ಸಾಲುತ್ತಿಲ್ಲ ಸಾಲುಗಳು ವರ್ಣಿಸಲು ನಿನ್ನ
ಮಾಸುತ್ತಿಲ್ಲ ಮುಖವು ಕಣ್ಗಳಿಂದ ಎನ್ನ
ಯಾಕೆ ಬಂದೆ ನೀ ಎನ್ನ ಜೀವನದಿ
ಇರುತ್ತಿದ್ದೆ ಯಾರ ರಗಳೆಗೂ ಬರದೆ
ಹೋಗುತ್ತಿದ್ದೆ ತೊಂದರೆಯ ಯಾರಿಗೂ ಕೊಡದೆ
ಭರವಸೆಯ ಮೂಡಿಸಿದೆಯಾಕೆ,
ನೀ ಎನ್ನ ಬಿಟ್ಟು ತೊಲಗುವೆನೆಂದಾದರೆ....
ಯಾಕೆ ಹೀಗೆಂದು ಅರ್ಥವಾಗುತ್ತಿಲ್ಲ
ಇದೇನು ನನ್ನ ಅನಿಸಿಕೆಗಳಲ್ಲ....

- ಅರುಣ್. ಕೆ. ಗಟ್ಟಿ. ಕಾಪಿಕಾಡ್

02 Mar 2017, 07:37 pm

ನಿನ್ನ ನಾ ಕಂಡ ದಿನ

ಆ ದಿನ ಎಲ್ಲೆಲ್ಲೂಸಂಜೆಗತ್ತಲು
ಯಾರೂ ಇರಲಿಲ್ಲ ಸುತ್ತ ಮುತ್ತಲೂ.
ನಿನ್ನನ್ನು ಕಂಡದ್ದುನಾ ಅದೇ ದಿನ
ಪ್ರೀತಿಗೆ ಬಿದ್ದದ್ದು ಸಹ ಅದೇ ಕ್ಷಣ.

ಚಂದ್ರನ ಮಂದ ಬೆಳಕಿನಲ್ಲಿ
ನೀ ಎದುರಿಗೆ ಬಂದೆ.
ನನ್ನ ಜೀವನವು
ಪ್ರಮುಖ ತಿರುವು ಕಂಡದ್ದೂ ಅಂದೆ.
ನನ್ನ ಹೃದಯದಲ್ಲಿ
ಆಯಿತು ಚಂದ್ರೋದಯ.
ನೀನಾದೆ ನನ್ನ
ಜೀವನದ ದೊಡ್ಡ ಅಧ್ಯಾಯ.
ನನ್ನೆದೆಯಿಂದ ಹುಕ್ಕಿತು
ಪ್ರೀತಿಯ ಜಲಪಾತ.
ನೀ ನನ್ನ ಜೊತೆಯಾದರೆ
ನನ್ನ ಬದುಕಾಗುವುದು ವರ್ಣರಂಜಿತ.

- ಅಕವಿ

02 Mar 2017, 06:22 pm

ಮನೋಬಲ

ಮೆಚ್ಚಲೇಬೇಕು
ಮನುಜನ
ಮನೋಬಲವನ್ನು,
ಬದುಕುವುದು
ಮೂರೇ
ದಿನಗಳೆಂದು
ತಿಳಿದರೂ,
ಹಾಕುವನು
ಮೂರು
ವರುಷಗಳಿಗೆಂದು
ಉಪ್ಪಿನಕಾಯನ್ನು

- basavarajsirnayakpreethu

02 Mar 2017, 04:01 pm

ನನ್ನೊಲವೆ ಎಲ್ಲಾ ನಿನ್ನಿಂದ

ಎನೆಲ್ಲಾ ಅಗಿದೆ ನನಗೆ ಅದು ನಿನ್ನಿಂದ
ಹಸಿವಿಲ್ಲ,ನಿದಿರೆ ಇಲ್ಲಾ ಎಲ್ಲಾ ನಿನ್ನಿಂದ
ಬದುಕು ಕಟ್ಟಿಕೊಳ್ಳುವ ಆಸೆ ಅದು ನಿನ್ನಿಂದ
ಪ್ರತಿಯೊಂದರಲ್ಲು ಪ್ರೀತಿ ಕಾಣುವ ಹಾಗೆ ಮಾಡಿದೆ
ಎಲ್ಲಾ ನಿನ್ನಿಂದ ಎಲ್ಲಾ ನಿನ್ನಿಂದ..

- devhoogar

02 Mar 2017, 02:54 pm

ನಿನಗಾಗಿ ಕಾದಿರುವೆ ಗೆಳೆಯ

ನಿನ್ನ ಶೀತಲ ತುಟಿಗೆ ಮುತ್ತಿಕ್ಕುವಾಸೆ ಗೆಳೆಯ
ನಿನ್ನ ನಿಶ್ಚಲ ರೂಪವ ತಬ್ಬಿ ಮುದ್ದಾಡುವಾಸೆ ಇನಿಯ
ನಿನ್ನ ಅನಂತ ತೋಳಲ್ಲಿ ಬಂಧಿಯಾಗಿ ಕರಗಲೇ?
ನಿನ್ನಲ್ಲಿ ಲೀನವಾಗಿ ಜನನ ಮರಣಾದಿಗಳಿಂದ ಮುಕ್ತಿ ಹೊಂದಲೇ?

ನಿನ್ನಯ ಚುಂಬನ ವಿದ್ಯುತ್ ಆಲಿಂಗನ
ನಿನ್ನಯ ಆಲಿಂಗನ ಹೃದಯ ಸ್ಥಂಬನ
ಓ ನೀರವ ನಿರಾಕಾರ ನಿರವಯವ ಶಕ್ತಿಯೇ
ಓ ನಿರ್ಭಾವ ನಿಸ್ತೇಜ ನಿರಂತರ ಕಪ್ಪುಕುಳಿಯೇ

ಬಾ ಎಂದು ಗೋಗರೆದರೂ ಬರಲ್ಲೊಲ್ಲೆ ನೀನು
ನಿನ್ನ ಕಂಡರೆ ಹೆದರೋಡುವವರ ಬೆನ್ನತ್ತುವೆ ನೀನು
ನಿನಗೆ ಬಡವ ಬಲ್ಲಿದರೆಂಬ ಭೇದಭಾವವಿಲ್ಲ
ಕಾಲ ದೇಶಗಳೆಂಬ ಇತಿ ಮಿತಿಗಳಿಲ್ಲ
ಯಾರಮನೆಗೆ ಯಾವರೂಪದಲ್ಲಿ ಬಂದು ವಕ್ಕರಿಸುವೆಯೊ ಬಲ್ಲವರಾರು
ನೀ ಬಂದ ದಿನವ ಎಂದೆಂದಿಗೂ ಮರೆಯರು ಯಾರು

ಕಾದಿರುವೆ ನಿನಗಾಗಿ ಎಂದಾದರೊಂದುದಿನ ಬಂದೇಬರುವೆ ಎಂದು
ಬಂದು ನನ್ನ ಕೈ ಹಿಡಿದು ಇಹಲೋಕವೆಂಬ ಕನ್ಯಾ ಸೆರೆಯಿಂದ ಮುಕ್ತಿ ನೀಡುವೆ ಎಂದು
ಇನ್ನು ಕಾಯಿಸದೆ ಸತಾಯಿಸದೆ ಬಂದುಬಿಡು ನನ್ನ ದೇಹಕೆ
ಓ ನನ್ನ ಪ್ರಿಯ ಗೆಳೆಯ ಸಾವೆ
ಹಂಸಿನಿ

- ವಿಸ್ಮಯ

02 Mar 2017, 01:18 pm

ಪ್ರಥಮ ಪ್ರೇಮದ ಕ್ಷಣ

ಬೆಳದಿಂಗಳಂತೆ ನೀ ಬಂದೆ ನನ್ನ ಬಾಳಿನಲಿ,
ತಂಗಾಳಿಯ ಅನುಭವ ತಂದೆ ಆ ಕ್ಷಣದಲಿ,
ನಿನ್ನ ನಯನದಲಿ ಬೆರೆತವು ನನ್ನ ನಯನಗಳು,
ಒಡನೆಯೆ ಒಂದಾದವು ಇಬ್ಬರ ಮನಸುಗಳು,
ಮಾಸದೆ ಉಳಿದಿವೆ ಪ್ರಥಮ ಪ್ರೇಮದ ಕ್ಷಣಗಳು.

- ರವೀಂದ್ರಬಾಪೂರ(GNL)

02 Mar 2017, 12:45 pm

ಮಾನವಧರ್ಮ

ಓ ದೇವರೇ ನಿನ್ನ ನಾಮವೇನು?
ಓ ದೇವರೇ ನಿನ್ನ ರೂಪವೇನು?

ನಾ ಹಿಂದೂವಾದರೆ...
ನೀ ರಾಮನಾದೆ.

ನಾ ಕ್ರೈಸ್ತವನಾದರೆ...
ನೀ ಏಸುವಾದೆ.

ನಾ ಮುಸ್ಲಿಂನಾದರೆ...
ನೀ ಅಲ್ಲಾನಾದೆ.

ನಾ ಯಾವ ಧರ್ಮದವನಾದರೆ...
ನೀ ಆ ಧರ್ಮದವನಾದೆ.

ಎಲ್ಲ ಧರ್ಮಗಳ ಮೂಲ ನಾನಯ್ಯ...
ನನ್ನ ಧರ್ಮವೇ ಶ್ರೇಷ್ಟವಯ್ಯ.

ಅದುವೇ ನನ್ನ ಧರ್ಮವಯ್ಯ...
ಸರ್ವರ್ತ ಶ್ರೇಷ್ಠ ಮಾನವಧರ್ಮ.

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

02 Mar 2017, 12:40 pm

ದೇಶಪ್ರೇಮಿ

ಹುಟ್ಟಿಬರಲಿ
ಪ್ರತಿಯೊಂದು ಮನೆಯಿಂದ
ಆ ಪ್ರೇಮದೂತ ಬುದ್ಧ...

ಬೆಳಗಿಸಬರಲಿ
ಪ್ರತಿಯೊಂದು ಮನೆಯಿಂದ
ಆ ಜಗಜ್ಯೋತಿ ಬಸವ...

ಬೆಳೆದುಬರಲಿ
ಪ್ರತಿಯೊಂದು ಮನೆಯಿಂದ
ಆ ಶಾಂತಿದೂತ ಗಾಂಧೀ...

ಹೋರಾಡಬರಲಿ
ಪ್ರತಿಯೊಂದು ಮನೆಯಿಂದ
ಆ ದೇಶಭಕ್ತ ಬೋಸ್...

ಪ್ರೀತಿಸಬರಲಿ
ಪ್ರತಿಯೊಂದು ಮನೆಯಿಂದ
ಆ ವಿಶ್ವಸನ್ಯಾಸಿ ವಿವೇಕ...

ಪರಿಪಾಲಿಸಬರಲಿ
ಪ್ರತಿಯೊಂದು ಮನೆಯಿಂದ
ಆ ರಾಜಕೀಯ ನಿಪುಣ ನೆಹರು...

ಸಮಾನತೆಬರಲಿ
ಪ್ರತಿಯೊಂದು ಮನೆಯಿಂದ
ಆ ಭಾರತರತ್ನ ಅಂಬೇಡ್ಕರ್...

ಘರ್ಜಿಸಬರಲಿ
ಪ್ರತಿಯೊಂದು ಮನೆಯಿಂದ
ಆ ದೇಶಪ್ರೇಮಿ ಭಗತಸಿಂಗ್...

ಅಮರವಾಗಲು ಬರಲಿ
ಪ್ರತಿಯೊಂದು ಮನೆಯಿಂದ
ಆ ಸ್ವಾತಂತ್ರ್ಯ ವೀರಪುತ್ರರು...

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

02 Mar 2017, 12:13 pm

... ನನ್ನ ಪ್ರೀತಿ ಆಳ...

ಒಲವೆ....
ನನ್ನ ಪ್ರೀತಿ ಹೇಳೊಕೆ
ಕ್ಷಣ ಹೊತ್ತು ಸಾಕು....!
ಅದರ ಆಳ ನೀ..
ತಿಳಿಯಬೇಕೆಂದಿದ್ದರೆ
ಜನ್ಮ ಪೂರ್ತಿ ಜೊತೆಗಿರಬೇಕು.....!!!

....ಪಿ ಅನಿ....
02-03-17

- ಪಿ ಅನಿ...

02 Mar 2017, 10:09 am