ವಿಚಿತ್ರ,ವಿನೋದ,ವಿಚಾರ,ಜೀವನ,
ಸೆಳೆತಗಳ ಬಳ್ಳಿಯದು ನಮ್ಮೊಳಗಿನ ಯೌವನ..
ಹಾಸ್ಯ,ಲಾಸ್ಯ ,ಆಟ,ಪಾಠ,
ಕ್ಷಣಿಕ ಸುಖದ ಹಿಂದೆ ಓಟ...
ಹೊತ್ತು ಮನದಿ ಕನಸ ಮೂಟೆ,
ಗುರಿಯ ಕಡೆಗೆ ಭರದ ಭರಾಟೆ...
ಸೆಳೆದ ಕನಸ ಹಿಂದೆ ನಡಿಗೆ,
ಕಳೆದ ದಿನದ ಚಂದ ಗಳಿಗೆ...
ಮತ್ತೆ ಬಾರದೆ ಮರೆಯಾದ ಯೌವನ,
ಕಳೆದೆ ಹೋಯಿತು ತಣಿಸಿ ಮೈಮನ...
ಎಲ್ಲಿಂದಲೋ ಬಂದಿರುವೆ,
ಎಲ್ಲಿಗ್ಹೋಗಬೇಕೆನ್ನುವ ಅರಿವಿಲ್ಲ ಪರಿವಿಲ್ಲ..
ಓಡುತಲಿರುವೆ ಹುಚ್ಚು ಬಿಸಿಲ್ಗುದುರೆಯ ಬೆನ್ನ ಹತ್ತಿ...
ಒಂದು ಕ್ಷಣ ಓಡಿದ್ದು ಸಾಕೆನಿಸುವುದು,
ಮರು ಕ್ಷಣವೇ ನೂರು ಮೈಲಿಯ ವೇಗ...
ಸುಳ್ಳು ಸತ್ಯಗಳ ಪಯಣವೋ?
ಸರಿ ತಪ್ಪು ಲೆಖ್ಖಗಳ ಸರಮಾಲೆಯೋ?
ಪ್ರೀತಿ ಪ್ರಣಯಗಳ ಸಾರವೋ?
ಕಳ್ಳು ಬಳ್ಳಿ ಸಂಬಂಧಗಳ ಸಾಮರಸ್ಯದಲೆಯೋ?
ಅರಿಯೆ ನಾನು... ಆರಿಯಲೂ ನಾನಾರು?
ಎಲ್ಲಿಂದಲೋ ಬಂದಿರುವೆ
ಬದುಕು ಪೆಟ್ಟಿಗೆಯ ನಿಜ ಕೀಲಿಯ ಕಳೆದುಕೊಂಡವ ನಾನು...
ಕಡು ಕತ್ತಲ ಸಾಮ್ರಾಜ್ಯದಧಿಪತಿಯ ಕಬಂಧದ ಹುಲು ಕೈದಿ ನಾನು...
ಚಿತ್ತವಿಲ್ಲ, ಚಲನೆಯಿಲ್ಲ, ಎಲ್ಲಿಗೋ ಹೊರಟಿರುವೆ..
ಬಹುಷ: ದಿಗಂತದಂಚಿನೂರಿನವನಿರಬೇಕು ನಾನು
ಅದನ್ಹುಡುಕುತಿರುವ ಅಲೆಮಾರಿ ನಾನು
ಎಲ್ಲಿಂದಲೋ ಬಂದಿರುವೆ
ಸರಳ ಸಂಗೀತ ಒಂದು ನೀನು ಹಾಡುವಂತೆ ಮಾಡಬಹುದು.
ಸರಳ ಅಪ್ಪುಗೆಯು ನಿನ್ನಲ್ಲಿ ಉತ್ತಮ ಭಾವ ಮೂಡಿಸಬಹುದು.
ಸರಳ ಸಣ್ಣ ಸಣ್ಣ ವಿಷಯ ಗಳು ಸಂತೋಷ ಉಕ್ಕಿಸಬಹುದು.
ಹಾಗೆ ಈ ಸರಳ ಸಂದೇಶ ಒಂದು ನಿಮ್ಮ ತುಟಿ ಯ ಮೇಲೆ ನಗುವರಳಿಸಿದರೆ ನನಗಷ್ಟೆ ಸಾಕು
ಕಾದಿರುವೆ ನಿನ್ನ ಕಾಣಲು
ಬರೀ ಕಣ್ಣೀರೆ ರಾತ್ರಿ ಹಗಲು
ಕಣ್ಣ ರೆಪ್ಪೆ ಮುಚ್ಚಿದರೆ ನೀ ನೆನಪಾಗುವೆ
ಕಣ್ಣ ರೆಪ್ಪೆ ತೆಗೆದರೆ ನೀ ಎದುರಾಗುವೆ
ಹೇಗೆ ಮರೆಯಲಿ ನಿನ್ನ ನಾ
ಹೇಗೆ ಎದುರಿಸಲಿ ನೀನಿಲ್ಲದ ಈ ಬಾಳನ್ನ
ನಿರೀಕ್ಷೆಯ ವಿಷ ತಲೆಗೇರುವ ಮುನ್ನ
ಬಂದುಬಿಡು ಗೆಳತಿ ಕಾಣಲು ನನ್ನ.
ಮತ್ತೆ ಬರಬಾರದೇ ಕಳೆದು ಹೋದ
ಜೀವನದ ಮಧುರ ಕ್ಷಣ
ಕೊನೆಯೆ ಇಲ್ಲದ ಬಯಕೆಗಳು ಹತ್ತಾರು
ಮನದೊಳಗಿರುವ ಮಾತುಗಳು ಸಾವಿರಾರು
ಕನಸಂತೆ ಕಳೆದ ಆ ಮಧುರ ಕ್ಷಣ
ಹೇಗೆ ಮರೆಯಲಿ ಆ ದಿನ
ಅಚ್ಚ ಅಳಿಯದೆ ಉಳಿದಿದೆ
ನನ್ನ ಹೃದಯದಲ್ಲಿ ...
ಗುರಿ ಮುಟ್ಟಿದ ಸಂತಸದ ಕ್ಷಣ
ನೂರು ಭಾವನೆಗಳ ಮರೆಮಾಚಿ ಮನದಿ
ನೆನಪುಗಳ ನೆನೆಯುತ
ಕಳೆಯುತಿರುವೆ ಈ ದಿನಗಳನು...
ಕಾಯುತಿರುವೆ ಆ ದಿನ...
ಮರಳಿಬರಬಾರದೇ ಮತ್ತೆ ಆ ಕ್ಷಣ...!!!