ಕ್ಷಮಿಸಿ ಬಿಡು ಗೆಳತಿ ನನ್ನನ್ನು
ಆ ದಿನ ನಿನ್ನ ಜೋತೆಯಲ್ಲಿ ನಗು-ನಗುತ
ಕೈ ಹಿಡಿದು ಇದೆ ದಾರಿಯಲ್ಲಿ
ನಡೆದು ಬಂದೆ..
ಈ ದಿನ ನೀನಿಲ್ಲದೇ ಒಂಟಿಯಾಗಿ
ನಿನ್ನ ನೆನಪುಗಳ ಮೆಲಕು ಹಾಕುತ
ಈ ದಾರಿಯಲ್ಲಿ ಬರಲಾಗುತ್ತಿಲ್ಲ ನನಗೆ
ಮತ್ತೆಂದೂ ತಿರುಗಿ ನೋಡದ ದಾರಿಯ
ಕಡೆ
ಸಾಗಿದೆ ನನ್ನ ಪಯಣ..
ಎಲೇ ಮಾನವ ಹೆಚ್ಚಾಯಿತು ನಿನ್ನ ಪಾಪ,
ಪ್ರಾಣಿಗಳ ಮೇಲೇಕೆ ನಿನ್ನ ಕೋಪ,
ಗಿಡಮರ ನೆಲಕ್ಕುರುಳಿಸುವೆ ನಿನಗಿಲ್ಲ ಪಶ್ಚಾತ್ತಾಪ,
ಪರಿಣಾಮ ನೋಡು ಏರುತಿದೆ ಭೂಮಿಯ ತಾಪ,
ಇದು ಆ ಪ್ರಕೃತಿ ದೇವಿ ನೀಡಿದ ಶಾಪ...ಶಾಪ.
ನನ್ನ ಬದುಕಿನ ದೇವತೆ
ಕೊಡುವಳು ಪ್ರೀತಿ ವಾತ್ಸಲ್ಯ ಮಮತೆ
ಹೊತ್ತಳು ನನ್ನ ನವ ಮಾಸ
ಇತ್ತಳು ಸಂಪೂರ್ಣ ಸುರಕ್ಷತೆಯ ವಾಸ
ಸಹಿಸಿದಳು ನೋವಿನ ಕಡಲ
ಗ್ರಹಿಸಿದಳು ಕೋಡುವೆಂದು ಒಡಲ
ಕೊಟ್ಟಳು ತನ್ನ ಪೂರ್ಣ ಮನಸ
ಬಿಟ್ಟಳು ತನ್ನ ಹಾದಿಯ ಕನಸ
ಹಿಡಿದಳು ಕೈ ಯ ಪ್ರತಿ ಹೆಜ್ಜೆಯಲಿ
ನುಡಿದಳು ದೈರ್ಯ ಪ್ರತಿ ನಡೆಯಲ್ಲಿ
ತಿದ್ದಿದಳು ನನ್ನ ಪ್ರತಿ ನುಡಿಯಲ್ಲಿ
ವಿತ್ತಳು ಬೆಂಬಲವ ಪ್ರತಿ ಕ್ಷಣದಲ್ಲಿ
ಸಾಧ್ಯ ವಿಲ್ಲ ನನ್ನಿಂದಾಳೆಯಲಾ ಪ್ರೇಮವ
ಸವಿಯುವೆನಾ ಮುಗ್ದತೆಯ ಮಾಧುರ್ಯವ
ತಂಪಿನ ಗಾಳಿಯು ಬೀಸುತ ಇರಲು
ಕಪ್ಪಿನ ಮೋಡವ ಒಯ್ಯುತ ಬರಲು
ಬೆಳ್ಳಿಯ ಗೆರೆಗಳು ನಭದಲಿ ಮಿನುಗಲು
ಗುಡುಗಿನ ಸದ್ದದು ಕೆಳುತ ಇರಲು
ಉದುರಿತು ಹನಿಯದು ಮುತ್ತಿನ ಹರಳು
ಹರಿಯಿತು ಭೂ ತಾಯಿಯ ಒಡಲು
ಮಳೆಯದು ನಿಂತಿತು ಕೊಡೆಯನು ಹಿಡಿಯಲು