Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಗೆಳೆಯ ಬರೆಯಲೇನು ನಾನು
ಸಾವಿರ ಪದಗಳ ಒಂದು ಕವಿತೆ!!
ಕೇಳದೇ ನೀ ಸುರಿದ ಒಲವಿನ
ಧಾರೆಯ ಸುಂದರ ಕವಿತೆ!!
ಕಪಟವಿಲ್ಲದೇ ನೀ ನುಡಿದ
ನುಡಿ ಮುತ್ತುಗಳ ಕವಿತೆ!!
ನಿನ್ನನ್ನು ಕಂಡು ನನ್ನ ಹೃದಯ
ನಲಿದು ಮಿಡಿದು ನುಡಿದ ಕವಿತೆ!!
ನಿನ್ನನ್ನು ನೆನೆದು ನನ್ನ ಮನ
ಸಾವಿರ ಕನಸನ್ನು ಹೆಣೆದ ಕವಿತೆ!!
ನಿನ್ನ ನೆನಪಿನಲ್ಲಯೇ ನಾ ಅದೆಷ್ಟೋ
ಇರುಳನ್ನು ಕಳೆದಿರುವ ಕವಿತೆ!!
ನಿನ್ನನ್ನು ಹುಡುಕುತಲಿ ಈ ನನ್ನ
ಕಣ್ಣುಗಳು ಅಲೆದಾಡಿದ ಕವಿತೆ!!
ನಾ ಮೌನವಾಗಿದ್ದೇ ನಿನ್ನ ಪ್ರೀತಿಗೆ
ಸಮ್ಮತಿ ನೀಡಿದ್ದ ಕವಿತೆ!!
ಕೊನೆಗೊಮ್ಮೆ ನೀ ದೊರೆತಾಗ ನಿನ್ನ
ಜೊತೆಗೂಡಿ ಸಂಭ್ರಮಿಸಿದ ಕವಿತೆ!!
ನಿನ್ನ ಬಾಹುಬಂಧದಲ್ಲಿ ನಾನು
ಈ ಲೋಕವನ್ನೇ ಮರೆತ ಕವಿತೆ!!
- ಪಿ.ಜಿ.ಜ್ಯೋತಿ
27 Feb 2017, 09:35 am
ಹೇ ಗಾಲಿಬ್ ಸಂಗಡಿಗರೇ,
ಮಸಣದೂರಿಗೆ ದಿಬ್ಬಣ ಕಟ್ಟಲು
ಅವಳದೊಂದು ಹೂ ಕೀಲಿ ಇಡಿ
ಜಡೆ ಸಂಧಿಯಲ್ಲಿ ಎಂದಿಗೂ
ಬಾಡದಿರುವ ಮುಷ್ಠಿಯಷ್ಟಿರುವುದು
ಕೊಟ್ಟು ಬಂದಿರುವೆ
**
ಕಡಲೂರಿನವಳು ಅಲೆಗಳಂತೆ
ಕುಣಿಯುತ್ತಾಳೆ ತುಸು ಸಾವಧಾನ ನಿಮಗಿರಲಿ
ಜೋರು ಮಾಡುವ ಜರೂರತ್ತೇನು ಇಲ್ಲ
ಮೆಹರ್ ಕೇಳುವ ದಿನವೇ ಬಹುಶಃ
ಅವಳೇ ಕೊಡಬಹುದು ತಾಳ್ಮೆ ನಿಮಗಿರಲಿ
**
ತೂತು ಮನಸಿನ ಫಕೀರನ ಗೋರಿ
ಸದ್ಧು ಮಾಡುತ್ತಿದೆ ಅಂದು ಬಿಡಿ
ಗಡಿಬಿಡಿಯಲ್ಲಿ ಕೊಡುವಳು ಅವಳೋ
ಅನಾಮತ್ತಾಗಿ ತಿರಸ್ಕರಿಸಿ ಹೋದವಳು
ಕರುಣೆ ನಿಮಗಿರಲಿ
**
ಅವಳೆದುರು ಹೆಸರನ್ನೇನು ಕರೆಯದಿರಿ
ಮುಂಗುರುಳಿನ ಅಡಿ ಹುಬ್ಬಿನ
ನಿರ್ದಿಷ್ಟ ಬಲಗಡೆ ಮಚ್ಚೆಯನ್ನು
ಅರಿವಿಲ್ಲದೇ ಮುಟ್ಟುವಳು
ಗುಳಿಕೆನ್ನೆಗೆ ನನ್ನ ಮುತ್ತು ಬೀಳುತ್ತಿದ್ದದ್ದೇ ಅಲ್ಲಿಗೆ
ನೋಟ ತಿರುಗಿಸುವ ಗುಣ ನಿಮ್ಮಲ್ಲಿರಲಿ
ಅವಿಜ್ಞಾನಿ
- ಅವಿಜ್ಞಾನಿ
27 Feb 2017, 07:48 am
ಪ್ರೀತಿ ಒಂದು ಅದ್ಭುತ
ಪ್ರೇಮಿಗಳ ಮನದಲ್ಲಿ ಶಾಶ್ವತ
ಇಂದೇ ನಿಂತರು ನನ್ನ ಎದೆಬಡಿತ
ಪ್ರೀತಿಯೊಂದಿಗೆ ಆತ್ಮವಾಗಿ ಸುತ್ತುವೆ
ನಾ ನಿನ್ನ ಶಾಶ್ವತ...!
- Rahul manoj v r
27 Feb 2017, 12:40 am
ಗೋಡೆ ಎಂಬ ಅರಮನೆಯಲ್ಲಿ
ವಾಸವಾಗಿತ್ತು ಹಲ್ಲಿ!!
ಓಡುತಿತ್ತು ಅಲ್ಲಿ ಇಲ್ಲಿ
ಬೇಟೆಯನ್ನು ಹುಡಿಕುತಲಿ!!
ನಮ್ಮ ಮನೆಯ ಚಾವಣಿಯಲ್ಲಿ
ಜೋತು ನಡೆವ ಕಾಯಕವು!!
ನೋಡುತಿರಲು ನಾನು ಅದನೇ
ಬಿದ್ದರೆನ್ನುವ ಭಯವು!!
ನೀಳವಾದ ದೇಹಕ್ಕೆ ಒಂದು
ನೀಳವಾದ ಬಾಲದ ಬೆಸುಗೆ!!
ಬಳುಕಿ ನಡೆವ ಮೈಯ ಮಾಟ
ಕಂಡು ನನ್ನಲೇಕೆ ಈ ನಡುಕ!!
ಎರಡು ಕೈ ಎರಡು ಕಾಲು
ಐದೈದು ಬೆರಳು ಸಮ ಪಾಲು!!
ನೀಳವಾದ ನಾಲಿಗೆ ಒಡ್ಡಿ
ಬೇಟೆಯಾಡ ಹೊರಟಿತು ನುಗ್ಗಿ!!
- ಪಿ.ಜಿ.ಜ್ಯೋತಿ
26 Feb 2017, 11:32 pm
ನಾ ನೋಡಿದೆ ನೊಡಿದೆ
ಕುರುಚಲು ಗಿಡವ,
ಅದು ಕಾಡಿತು ಕಾಡಿತು
ಎನ್ ಮೌನದ ಮನವ.
ಎನ ಕಾಡ ಬೇಡಿತು ತಿಂದೆಯ
ಎನ ಫಲವ,
ನಾ ಹೇಳಿದೆ ಹೇಳಿದೆ
ಮರ ಭೂಮಿಯ ಕಥೆಯ.
ಹಸಿರು ಗಾಳಿಯು
ತಂಪು ವನದಲಿ,
ಪಸರ ಬೇಡುವೆ
ನಿನ್ನನ್ನು.
ನಗೆಯ ತಂದಿತು
ಪಚ್ಚ ವನಕೆ, ಅಳುವು ತಂದಿತು ನನ್ನ ಮನಕೆ.
ಏಕೆಂದರೆ?
ST
- ST
26 Feb 2017, 08:09 pm
ನೀ ಬೀಸಿ ಬರುತ್ತಿರಲು ಮರಗಳು ನಮಿಸುತಿವೆ
ನಿನ್ನ ಬರುವಿಕೆಗಾಗಿ ಹಲವು ಮನ ಕಾಯುತಿವೆ
ಬರುವೆ ಯಾವಾಗ ಎಂದು ಮನದಲ್ಲೇ ತವಕಿಸಿವೆ
ಹಣ್ಣಾದ ಎಲೆಗಳು ಉದುರಲು ಕಾಯುತಿವೆ||
ನೀ ಹಸಿರೆಲೆ ಮೇಲೆ ಹಾಯ್ದು ಬರುತಿರಲು
ಮುಖದಲಿ ಮಂದಹಾಸ ಬೀರುತಿರಲು
ಕಳೆದ ನೆನಪುಗಳು ಹಾಗೇ ಸುಳಿಯುತಿರಲು
ಮನದಲಿ ಸಂತಸ ಗರಿಗೆದರುತಿರಲು..
- ನಮಿತ ಗಟ್ಟಿ
26 Feb 2017, 08:01 pm
ಗಾಳಿ ಬಿಸಲಿ ಮೋಡ ಸುರಿಯಲಿ
ಮಳೆಯು ಮೂಡಿದು ಬಂದಿದು ಬಂದಿತು,
ಹಸಿರು ಗಾಳಿಯು ತಂಪು ಧರೆಯಿತು
ಪಚ್ಚ ಎಲೆಗಳು ಹೊಳೆಯಲಿ.
ಸೂರ್ಯ ಮೂಡಲಿ ಜಗವ ಬೆಳಗಲಿ
ಬೆಳಗು ತಾನದಿ ಹೊಳೆಯಲಿ,
ಕಿರಣ ಕಾಂತಿಯು ಮೂಡಿಬಂದಿತು
ಸೂರ್ಯ ಕಾಂತಿಯು ತಿರುಗಿತು.
ಜನದಿ ಮನಗಳ ದನಿಯ ಕೂಗು
ಕೇಳಿ ಬಂದಿತು ಗಾಳಿಲಿ,
ಒಮ್ಮೆ ತಿರುಗಿ ನೋಡಿದಾಗ, ಅಲ್ಲಿ ನಗು
ಬಳಿಯ ಬಂದಿತು ಮೊಗದಲಿ.
ರೈತ ನೆತ್ತರ ಬಿಜವನೊತ್ತು
ಸಾಗಿ ಸಾಗಿ ನಡೆದು ಬಂದನು ಮುಂದೆ,
ಎತ್ತು ಬಂಡಿಯನು ಹೊಡೆದುಕೊಂಡು, ಎತ್ತ
ನೊಡದೆ ಬಂದಿತು ಮುಂದೆ ಮುಂದಗೆ.
ನಾಗರಾಜ್ ಎಸ್ ಟಿ
ಹೊಸದಡಗೂರು (ಪೊ)
ಮೊಳಕಾಲ್ಮೂರು (ತಾ)
ಚಿತ್ರದುರ್ಗ (ಜಿಲ್ಲೆ)
577540
- ST
26 Feb 2017, 07:50 pm
ಕತ್ತಲ ದಾರಿ ಬಲುದೂರ
ಒಬ್ಬಂಟಿಯಾಗಿ ನಡೆಯಲಂಜಿ
ಹಚ್ಚಿದೆ ಒಂದು ಪ್ರೀತಿಯ ಹಣತೆ
ದೃಷ್ಟಿ ಇರದವರಿಗೆ ಹಗಲೇನು ಇರುಳೇನು
ಎಂದೆನುತ ಅದು ಮಿಂಚುಹುಳುವಾಗಿ
ಹಾರಿಹೋಗಿ ಮತ್ತೆ ನಾನು ಒಬ್ಬಂಟಿ
ಈಗ ಉಳಿದಿರುವುದಿಲ್ಲಿ ಕತ್ತಲೆ ಮತ್ತು ನಾನು ಮಾತ್ರ
ಕತ್ತಲೆಗೆ ಕಂಡ ಕಂಬನಿ ಬೆಳಕಿಗೆ ಕಾಣಲಿಲ್ಲ
ಕತ್ತಲೆಯನ್ನೇ ಪ್ರೀತಿಸಲು ಆರಂಭಿಸಿರುವೆ
-- ಹಂಸಿನಿ
- ವಿಸ್ಮಯ
26 Feb 2017, 07:46 pm
ಸಂತೋಷದಲ್ಲಿರುವ ಸಾವಿರ
ಸ್ನೆಹಿತರಿಗಿಂತ ಕಣ್ಣೀರು
ಬರದೇ ಒಂದು ಕ್ಷಣ ಕೈಯೋಡ್ಡುವ
ಒಂದು ಜೀವಿಯ ಸ್ನೆಹವಿದ್ದರೆ ಸಾಕು .
ಎಲ್ಲಾರೂ ಬಂದುಗಳೆ,ಎಲ್ಲಾರೂ
ಮಿತ್ರರೇ ಆದರೂ ಈ ಕಣ್ಣೀರಿಗೆ
ಕಾರಣಿಭೂತರದರೂ.......
ನಾನೇನ ನಿಮ್ಮ ದುಕ್ಕಕ್ಕೇ
ಕಣ್ಣೀರು ಹಾಕುವುದು ......?
ನನಗೂ ಮನಸಿದೆ ಅದಕ್ಕೂ
ನೋವಾಗುತ್ತೆ ತಿಳಿದುಕೊಳ್ಳಿ .
ನಿಮಗಾಗಿ ನಾನು ಮಾಡಿದಷ್ಟು
ನನಗೆ ಮಾಡಬೇಡಿ .......
ದಯವಿಟ್ಟು ನನ್ನ ನೋವಿಗೆ
ಕೆಲವು ಕಣ್ಣೀರ ಹನಿಗಳನ್ನು
ನನ್ನ ಕಣ್ಣಲ್ಲಿ ಉಳಿಸಿ ........!!!!
- ಚುಕ್ಕಿ
26 Feb 2017, 07:35 pm
ಜೀವನದ ಹಾದಿ ಬಲ್ಲವರಾರು
ಎಲ್ಲಗೆ ನಡೆಸುವುದೋ ಅರಿತವರಾರು
ಏರಿಳಿತದ ಯಾನಕೆ ಜೊತೆಯಾರು
ಬಾಯಾರಿದ ಹೃದಯಕೆ ಪ್ರೀತಿಯ ತಂಪೆರೆವರಾರು
ಸ್ನೇಹದ ತಂಗಾಳಿಯ ಬೀಸುವವರಾರು
ತುತ್ತಿನ ಚೀಲಕೆ ಆಶ್ರಯದಾತರಾರು
ಒಂಟಿತನವ ನೀಗಿಸುವವರಾರು
ಸಂಕಟ ಸಮಯದಲಿ ಕೈ ಹಿಡಿವವರಾರು
ಮೇಲಾರು ಕೀಳಾರು
ನಮ್ಮವರಾರು ಪರರಾರು
ಜೀವನದ ಹಾದಿ ಬಲ್ಲವರಾರು
ಹಾದಿಯ ಅಂತ್ಯವ ಕಂಡವರಾರು...
- Indushekar Chinivar
26 Feb 2017, 06:16 pm