Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಬರೆದೆನೊಂದು ಕವಿತೆಯ, ನೆನೆಯುತ ನಿನ್ನ ಮೋರೆಯ
ತೋರಿ ನಿನ್ನ ಮೋರೆಯ, ತೀರಿಸೆಯ ನನ್ನ ಆಸೆಯ
ತಾಳಲಾರೆನು ಇನ್ನ, ಈ ವಿರಹ ವೇದನೆಯ
ಕಲ್ಪಿಸಿ ನಿನ್ನ ಭೇಟಿಯ, ತೆಗೆದುಕೋ ನನ್ನ ಈ ವಂದನೆಯ
ಪ್ರೀತಂ
- basavarajsirnayakpreethu
25 Feb 2017, 11:42 pm
ಸಾವಿರಾರು ಸೂತ್ರಗಳು
ಹತ್ತಾರು ಹಂತಗಳು
ತಲೆ ಕೆಡಿಸುವ ಸೂಚನೆಗಳು
ನೆನಪಾಗದ ನoಬರ್ಗಳು .
ಯಾರೋ ಕಂಡುಹಿಡಿದರು
ಈ ತೆಲೆನೋವು ಸಬ್ಜೇಕ್ಟನ್ನು
ಇರುವ ಬುದ್ದಿಯಲ್ಲಾ ಉಪಯೋಗಿಸಿದರೂ
ಒಂದು ಲೆಕ್ಕವೂ ಬರ್ತಿಲ್ಲಾ .....
ಇರುವ ಜ್ಞಾನೇಂದ್ರಿಯಗಳೆಲ್ಲಾ
ನಿನಗೆ ಅರ್ಪಿಸಿದರೂ
ನೀನು ಮಾತ್ರ ಒಲಿಯುವುದಿಲ್ಲ.
ನೀನೇನು ಮಾಡಿದ್ರು
ನಾ ನಿನ್ನ ಬಿಡುವುದಿಲ್ಲ .........!!!!!!!
- ಚುಕ್ಕಿ
25 Feb 2017, 07:40 pm
ನನ್ನ ಮುದ್ದು ಚೆಲುವೆ
ನಿನ್ನ ಮೊದಲನಗುವು ಮರೆಯದ ಕ್ಷಣ
ನನ್ನ ಚೆಲುವ ಮೊಗವೆ
ನಿನ್ನ ಸೆಳೆವ ಕಣ್ಣೋಟ ರಮ್ಯಲಮಣೀಯ
ನನ್ನ ಬಾಳಿನ ಬೆಳಕೆ
ನಿನ್ನ ಭರವಸೆಯ ಮಾತುಗಳೆ ಜೀವಂತ
ನನ್ನ ಮಾನದ ಅರಸಿ
ನಿನ್ನ ಅಕ್ಕರೆಯ ಪರಿಯೆ ಶಾಶ್ವಾತ
ನನ್ನ ಬಣ್ಣದ ಬಂಗಾರಿ
ನಿನ್ನ ಸಮ್ಮೋಹಿತ ಮೌನ ಅಮ್ರುತ
ನನ್ನ ಒಲವ ಗೀತೆ
ನಿನ್ನ ತಾಳ್ಮೆಯ ನುಡಿ ಸಂಗೀತ
ನನಗೆ ನೀನು ನಿನಗೆ ನಾನು ಹಾಲುಜೇನು
ಕೂಡಿಬಾಳುವಭಾವಯಾನದಲಿ ನಾನುನೀನು
- shree
25 Feb 2017, 06:00 pm
ಅಂಕಗಣಿತ, ಬೀಜಗಣಿತ, ರೇಖಾಗಣಿತ
ಲೆಕ್ಕಗಳಿಗೆ ಉತ್ತರ ಸಿಗುವುದು
ಸರಳವಾಗಿ ಗುಣಿಸುತ,
ಅಂಕಿಗಳನ್ನು ಕೂಡಿಸುತ,
ಸಂಖ್ಯೆಗಳನ್ನು ಕಳೆಯುತ,
ರೇಖೆಗಳನ್ನು ಎಳೆಯುತ,
ಸಾಗುವುದು ಸುಂದರ ಗಣಿತ.
ಎಲ್ಲ ಭಾಷೆಗೂ ಒಂದೆ ಸೂತ್ರ ತೋರುವ ಅಧ್ಭುತ,
ಜಗದೆಲ್ಲೆಡೆ ತುಂಬಿದೆ, ಸರಳ ದಾರಿ ತೋರುತ.
- ರವೀಂದ್ರಬಾಪೂರ(GNL)
25 Feb 2017, 04:50 pm
ನಾನು ಜೀವಿಸುತ್ತಿರುವೇ
ಒಂದು ಸುಂದರ ಲೋಕದಲ್ಲಿ
ಅದರ ಹೆಸರು ಕವನ ......
ಇಲ್ಲಿ ನನ್ನ ಯಾರು ಬೈಯಲ್ಲ,
ಕೇಳಲ್ಲ ,ಹೋಡಿಯಲ್ಲ ......
ಇಲ್ಲಿ ನನಗೆ ಸಾವಿರಾರು
ಮಿತ್ರರು ಅವರ ಹೆಸರೆ
ಭಾವನೆಗಳು...................
ನಗುವಾದರು ಅವರ ಜೊತೆ
ಅಳುವಾದರು ಅವರ ಜೊತೆ .
ಇಲ್ಲಿ ನಾನು ಎಂದಿಗೂ ಒಂಟಿಯಲ್ಲ
ನನ್ನ ಸ್ನೇಹಿತರು ಎಲ್ಲಿಗೂ ಬಿಟ್ಟು
ಹೋಗಲ್ಲ .........................
ಈ ಕವನ ಓದುವವರೇಲ್ಲ ನನ್ನ
ಸ್ನೆಹಿತರೆ ಯಾಕೇಂದರೇ ಇದೆ
ನನ್ನ ಕವನ ಲೋಕವೆಲ್ಲವೆ.......
- ಚುಕ್ಕಿ
25 Feb 2017, 03:40 pm
ಮಾತು ದೂರವಾಗಿ ಬಾವನೆ ಮೌನವಾಗಿ
ದೂರವಾಯಿತೆನ್ನ ಒಂದಾರ......
ಮಗುಳ್ನಗೆ ಕಂಡು ಬಾವನೆಗಳು ಬಳಿಬಂದು
ನನ್ನತ್ತಿರ ಬಂದಾಯ್ತೆನ್ನ ಒಂದಾರ.........
ಚಲಿಸುತ್ತಿದೆ ಮತ್ತೋಮ್ಮೆ ಮಾತೆ ಇಲ್ಲದ
ಬಾವನೆಗಳು ಎಲ್ಲಿಗೋ ಕಾಣೆಯಾದಂತೆ
ನನ್ನ ಕಣ್ಣುಗಳಲ್ಲಿಯೇ ಕಾಣದಂತೆ....
ಕಾಣದಾಚೆಗೆ ಸಾಗುತ್ತಿದೆ ಇಂದೆನ್ನ
ಒಂದಾರ.............................
- ಅಗಸ್ತ್ಯ
25 Feb 2017, 03:37 pm
ಜೀವ ತುಡಿಯುತಿದೆ ನಿನ್ನನು ಕಾಣಲು
ಹೃದಯ ಮಿಡಿದಿದೆ ತವಕದಿ ಸೇರಲು
ಬಾಳೇ ಬರಡು ಕ್ಷಣ ನಿನ್ನ ಕಾಣದಿರಲು..
ಬಂದರೆ ಬರಲಿ ಬವಣೆ ನೂರಾರು
ನೀ ಬಿಡದಿರು ಅದಕ್ಕೊಂದು ನಿಟ್ಟುಸಿರು
ನೀ ನಗುತ್ತಿದ್ದರೆ ಈ ಜೀವನವೇ ಹಸಿರು..
ಬರುವುದು ನಮ್ಮ ಬಾಳಲು ಬೆಳಕು
ಹೊಡೆದೋಡಿಸು ಈ ಕ್ಷಣ ಮನಸಿನ ಅಳುಕು
ಇದ್ದರೆ ಸಾಕು ಧೈರ್ಯದ ಒಂದೇ ತುಣುಕು
ತಾನಾಗಿ ಸರಿವುದು ಮಂಜಿನ ಮುಸುಕು..
- ನಮಿತ ಗಟ್ಟಿ
25 Feb 2017, 01:04 pm
ಇಂದು
ನೀ ನನ್ನ
ಅಗಲಿ ಹೋದರೂ..
ನಿನ್ನ
ನೆನಪುಗಳಿಂದ
ಮಾಸಿ ಹೋದರೂ..
ಎಂದಾದರೂ
ನಾ ನಿನ್ನ
ನೆನಪುಗಳಲ್ಲಿ
ಮೂಡಿದರೆ
ಹುಡುಕದಿರು ನೀನನ್ನ..
ಮತ್ತೆಲ್ಲಿಯೂ..
ನಾನಿನ್ನ
ಕಣ್ಣಲ್ಲೇ ಇರುವೆ;
ಒಂದು ಹನಿ ಕಣ್ಣೀರಾಗಿ…!
- Rahul manoj v r
25 Feb 2017, 11:34 am
ಮೆಾದಲಿಲ್ಲದ
ಕೊನೆಯಿಲ್ಲದ
ಒಂದೇ-ಮಾನ್ಯತೆ
ಅದುವೇ ಶೂನ್ಯತೆ
- ಸಾ.ರಾ.ಜ್ಞಾ
25 Feb 2017, 10:50 am
ಉಸಿರೇ... ಉಸಿರ ಜೊತೆ
ಕಂಪಿಸಿದ ಕವಿತೆ ಸಾಲುಗಳು...
ಕನಸುಗಳ ಜೊತೆ ನಡೆದ
ಹೆಜ್ಜೆ ಗುರುತುಗಳು ...
ಕಾಣದ ಒಲವೇ ಕೇಳೆ
ನಿನಗಾಗಿ ಬರೆದಿರುವೆ ಈ ಕವನ
ಕಾಣೆನೆಂಬ ಕಾರಣಕ್ಕೆ
ಮರೆಯದಿರು ನೀ ನನ್ನ
ಅನೀರಿಕ್ಷಿತ ಘಟನೆಗೆ ಮರುಗಬೇಡ
ಬಯಕೆ ಮರೆಯಾದರೆನಂತೆ
ಕನಸುಗಳು ನಿನ್ನದೆ ಇರಲಿ
ಆ ಕನಸುಗಳಿಗೆ ಜೀವ
ತುಂಬುವ ಬಯಕೆ ನನ್ನದಾಗಿರಲಿ
- Pb
24 Feb 2017, 10:28 pm