Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನ್ನಡ ಶಾಯರಿ

ಒಂದೇ ಪ್ರಪಂಚದಲ್ಲಿ ನಾವಿದ್ದರು
ನೋಡುವುದಕ್ಕೆ ಕಾಯಬೇಕು ದಿನಗಳೂ
ನಿನಗಿಂತ ನಿನ್ನ ಕನಸುಗಳೇ ಸುಂದರ
ಕಣ್ಣು ಮುಚ್ಚುತ್ತಲೆ ಓಡಿ ಬರುವವು.

ಪ್ರೀತಿಯನ್ನು ಮುಚ್ಚಿಡಲಾಗದು ಕಣ್ಣಲ್ಲಿ
ಹೃದಯ ಕೆಳದು ಯಾರ ಮಾತ್ತನ್ನು ಪ್ರೀತಿಯಲ್ಲಿ
ಹೃದಯ ಬಡಿತವೆ ನಿಲ್ಲುವುದು ಮರೆತರೆ ನಿನ್ನ
ಬದುಕುವ ನೆಪದಲ್ಲಿ, ನೆನೆಯುವೆ ಪ್ರತಿಕ್ಷಣ ನಿನ್ನ

ನಾಲ್ಕು ದಿನದ ಬಾಳು ಇದು
ಸುಖ ದುಃಖದ ಮೇಳ ಇದು
ಸಂಗಾತಿ ನಿನ್ನ ಸಂಪ್ರಿತಿ ಬಯಸಿರುವೆ
ನಾಲ್ಕು ದಿನದ ಬಾಳು ಹಸನಾಗಿ ಕಳೆಯಲು.

ನಿನ್ನ ಕಂಡ ಮೇಲೆ ನಾ ಅರಿತೆ
ಸೌಂದರ್ಯ ಎಂದರೆ ಏನು ಎಂದು
ನಿನಗೆ ಮನಸು ಕೊಟ್ಟ ಮೇಲೆ ಅರಿತೆ
ಮನಸು ಸುಡುವುದು ಹೇಗೆ ಎಂದು.

- ಕುಮಾರ ಸಿದ್ದರಾಜ

21 Feb 2017, 08:48 pm

ನಾ ಕಾಣುವ ದೇವರು ಅಮ್ಮ....!

ಪುಟ್ಟ ಕಂದ ಕಂಗಳರಳಿಸಿ ನುಡಿವ ಮಾತು ಅಮ್ಮ....!
ಹಕ್ಕಿ ಗೂಡಿಗೆ ಮರಳಿದಾಗ ಮರಿಯ ಚಿಲಿಪಿಲಿ ಅಮ್ಮ....!
ಹಸುವ ಕರುವು ಪ್ರೀತಿಯಿಂದ ಕರೆವ ಕೂಗು ಅಮ್ಮ....!
ಕರುಣೆಯ ಸಾಗರವ ಹ್ೃದಯದಲಿ ಹಿಡಿದು ಸಹನೆಯ ನಗುವ ಚೆಲ್ಲುವಳು ಅಮ್ಮ....!
ಕಾಣದ ದೇವರು ಕರುಣಿಸಿರೋ, ನಾ ಕಾಣುವ ದೇವರು ಅಮ್ಮ....ನನ್ನಮ್ಮ...!
ರಾಜ್. ಎಸ್...

- ರಾಜ್. S

21 Feb 2017, 06:11 pm

ಅವಿಜ್ಞಾನಿ ಉವಾಚಃ

ಅಡ್ಡ ದಾರಿಗೆ ಅಡ್ಡಲಾದ ಗುಡ್ಡವನ್ನು
ಕೆಡವಲು ನೋಡುವರೇ ವಿನಾಃ
ದಿಟ್ಟ ಹಾದಿಯಲಿ ಚಿತ್ತನೆಟ್ಟು
ಹೋಗುವೆನೆಂದು ಪಟ್ಟು
ಹಿಡಿಯಲಾರರು ಅವಿಜ್ಞಾನಿಯೇ
.....
-ಅವಿಜ್ಞಾನಿ

- ಅವಿಜ್ಞಾನಿ

21 Feb 2017, 03:44 pm

ಸದಾ ನಗುತಿರು ಎಂದಿಗೂ ಅಳದಿರು

ನಿನ್ನ ನಗು ಹಾಗೂ ನಿನ್ನ ಅಳು ನನ್ನ ಮನಸ್ಸಿನಲ್ಲಿ ಎಂತಹ ಭಾವನೆಗಳ ಮೂಡಿಸುವುದು ಎಂಬುದನ್ನು ಪ್ರಾಸದೂಂದಿಗೆ ವಿವರಿಸಿದ್ದೇನೆ ...ನನ್ನ ಕಣ್ಣಿನಿಂದ ಓದಿ ಅರ್ಥೈಸಿಕೋ .‌‌‌.......ಓ ಗೆಳತಿ

ನಿನ್ನ ನಗು ಮುಂಜಾನೆಯ ಮಂಜು
ನಿನ್ನ ಅಳು ಮುಸ್ಸಂಜೆಯ ಮಂಕು
ನಿನ್ನ ನಗು ತಾರೆಗಳ ಮಿನುಗು
ನಿನ್ನ ಅಳು ತಂಗಾಳಿಯ ಕೊರಗು
ನಿನ್ನ ನಗು ಚಿಟ್ಟೆಗಳ ಕಲರವ
ನಿನ್ನ ಅಳು ದುಂಭಿಯ ಪರಾಭವ
ನಿನ್ನ ನಗು ಹೂಮೇಲಿನ ಇಬ್ಬನಿ
ನಿನ್ನ ಅಳು ಹೂ ಎಸಳಿನ ಕಂಬನಿ
ನಿನ್ನ ನಗು ನವಿಲಿನ ನರ್ತನ
ನಿನ್ನ ಅಳು ಕಗ್ಗತ್ತಲ ಕಾನನ
ನಿನ್ನ ನಗು ಕೋಮಲವಾದ ಕಮಲ
ನಿನ್ನ ಅಳು ಕೆಸರಿನ ತುಮುಲ
ನಿನ್ನ ನಗು ಹುಣ್ಣಿಮೆಯ ಬೆಳಕು
ನಿನ್ನ ಅಳು ಅಮಾವಾಸ್ಯೆಯ ಸಿಡುಕು
ನಿನ್ನ ನಗು ಹಕ್ಕಿಯ ಇಂಚರ
ನಿನ್ನ ಅಳು ಕಾರ್ಮೋಡದ ಸಂಚಾರ
ನಿನ್ನ ನಗು ಮಧುರ ಅನುಭೂತಿ
ನಿನ್ನ ಅಳು ವೀಣೆಯ ಹರಿದ ತಂತಿ
ನಿನ್ನ ನಗು ಕೋಗಿಲೆಯ ಧನಿ
ನಿನ್ನ ಅಳು ಕರ್ಕಶದ ಮಾರ್ಧನಿ
ನಿನ್ನ ನಗು ಬಳ್ಳಿಯ ಬಳುಕು
ನಿನ್ನ ಅಳು ದುಃಖದ ಮೆಲುಕು
ನಿನ್ನ ನಗು ಶಾಂತವಾದ ಕಡಲು
ನಿನ್ನ ಆರ್ಭಟಿಸುವ ಸಿಡಿಲು
ನಿನ್ನ ನಗು ಮಲ್ಲಿಗೆಯ ಸುವಾಸನೆ
ನಿನ್ನ ಅಳು ಸಾವಿನ ಆಶ್ವಾಸನೆ
ನಿನ್ನ ನಗು ದುಗುಡಗಳ ನಿರ್ಗಮನ‌‍‌‌‌‌‌‌‌‌‌‌
ನಿನ್ನ ಅಳು ನೋವಿನ ಆಗಮನ
ನಿನ್ನ ನಗು ನವಿರಾದ ನಾದಸ್ವರ
ನಿನ್ನ ಅಳು ಅಸಹನೀಯ ಅಪಸ್ವರ

ನಿನ್ನ ನಗು ಬಣ್ಣಿಸಲಾಗದ ಸೌಂದರ್ಯ
ನಿನ್ನ ಅಳು ಬೇಸರದ ಸತ್ಕಾರ್ಯ
ನಿನ್ನ ನಗು ಅದ್ವಿತೀಯ ಆನಂದ
ನಿನ್ನ ಅಳು ಸಾವಿನ ನಿನಾದ
ನಿನ್ನ ನಗು ಗೆಲುವಿನ ಮಹೋತ್ಸವ
ನಿನ್ನ ಅಳು ಸೋಲಿನ ಜಯಂತ್ಯೋತ್ಸವ
ನಿನ್ನ ನಗು ಸೌಂದರ್ಯದ ಶ್ಲಾಘನೆ
ನಿನ್ನ ಅಳು ಕಣ್ಣೀರಿನ ಆಚರಣೆ
ನಿನ್ನ ನಗು ಅಮೃತದ ಜಿನುಗು
ನಿನ್ನ ಅಳು ಪ್ರಳಯದ ಗುಡುಗು
ನಿನ್ನ ನಗು ನಲಿವಿನ ಸಿಂಚನ
ನಿನ್ನ ಅಳು ನೋವಿನ ಕಂಪನ
ನಿನ್ನ ನಗು ಕಾಮನಬಿಲ್ಲು
ನಿನ್ ಅಳು ವಿಷದ ಅಮಲು
ನಿನ್ನ ನಗು ಧುಮ್ಮಿಕ್ಕುವ ಜಲಪಾತ
ನಿನ್ನ ಅಳು ರೋಧನೆಯ ಪಥ
ನಿನ್ನ ನಗು ಸಡಗರದ ಸಾಗರ
ನಿನ್ನ ಅಳು ಅಳುವಿನ ಆಗರ
ನಿನ್ನ ನಗು ಚಿನ್ನದ ಅರಮನೆ
ನಿನ್ನ ಅಳು ಕಂಚಿನ ಸೆರೆಮನೆ
ನಿನ್ನ ನಗು ಬಣ್ಣದ ಕಾರಂಜಿ
ನಿನ್ನ ಅಳು ಕಳೆಗುಂದಿದ ಅಪರಂಜಿ
ನಿನ್ನ ನಗು ಜೀವ ನೀಡುವ ಶ್ವಾಸ
ನಿನ್ನ ಅಳು ಜೀವ ತೆಗೆಯುವ ವಿಷ
ನಿನ್ನ ನಗು ಸೂರ್ಯೋದಯ
ನಿನ್ನ ಅಳು ಕರಾಳ ಅಧ್ಯಾಯ
ನಿನ್ನ ನಗು ಮರೆಯಲಸಾಧ್ಯ
ನಿನ್ನ ಅಳು ಸಹಿಸಲಸಾಧ್
ನಿನ್ನ ನಗು ದಿವ್ಯ ಜ್ಯೋತಿ
ನಿನ್ನ ಅಳು ಕೊರಳ ತೂಗುಕತ್ತಿ

- ಅಕವಿ

21 Feb 2017, 01:13 pm

ಉತ್ತರ ಬೇಕಾಗಿದೆ

ಬಿಟ್ಟು ಹೋದ ಹುಡುಗಿ ಮತ್ತೆ ಬರುವಳೇ?

ಕೆಟ್ಟು ಹೋದ ಮನಸ್ಸು ಮತ್ತೆ ಸರಿಹೋಗುವುದೇ?

ಸುಟ್ಟು ಹೋದ ಹೃದಯ ಮತ್ತೆ ತಣ್ಣಗಾಗುವುದೇ?

ಪಟ್ಟು ಬಿಡದೇ ಕಾಡುತಿದೆ ಈ ಪ್ರಶ್ನೆಗಳು

ಕೊಟ್ಟು ಬಿಡಬಾರದೇ ಉತ್ತರಗಳು.............

- ಅಕವಿ

21 Feb 2017, 11:57 am

ಹನಿ ಹನಿ

ನೀ....
ಬಿಟ್ಟು ಹೋದೆ ಗೆಳತಿ
ಪ್ರೀತಿಯ ಘಂಟುಮೂಟೆ ಕಟ್ಟಿ...

ನಿನ್ನ ನೆನಪಲ್ಲಿ ನಾ ಸುರಿಸಿದ
ಹನಿ ಹನಿ ಕಣ್ಣೀರೂ... ಆಯ್ತು
ಹನಿ ನೀರಾವರಿಗೆ ಸ್ಫೂರ್ತಿ....

...ಪಿ ಅನಿ...
21- 2-17

- ಪಿ ಅನಿ...

21 Feb 2017, 10:20 am

ಹಲ್ಕಾ ಕವನ-3

ಜಡೆ ಎತ್ತಿ ಗುಲಾಬಿ
ಮುಡಿಸಬೇಕೆಂದವನ
ಕೈಯಲ್ಲಿ ಷರಾಬು
ಕೊಟ್ಟವಳದ್ದು ಕನಿಷ್ಟ
ಪಾಪವೆಂದು ಮನ್ನಿಸಿ
ಬಿಡು ಖುದಾ....
•••
ಮೆಹರ್ ಏನು ಬೇಕೆಂದು
ಕೇಳಿದ್ದು ನನ್ನ ತಪ್ಪೇ ಬಿಡು
ನಿಖಾಹ್ ಆದರೆ ಮೆಹರ್
ಕೊಡೋದೆಂದು ಮರೆತಿತ್ತು
ಆಗ...
•••
ಅವಳು ಜಾಣೆಯು
ಪ್ರಸನ್ನಳು,ದಿನಂಪ್ರತಿ
ಮೊಗ್ಗುಗಳನ್ನೇ ಮುಡಿ
ಯುತ್ತಿದ್ದಳು ನಾನೊಬ್ಬ
ಏನೂ ಅರಿಯದವನು..
•••
ಇಶ್ಕ್ ನ ಚಾಂದ್ ಅವಳು
ಕಿಮ್ಮತ್ತು ಕಟ್ಟಲಾಗದ
ಇಬ್ಲೀಸನ ಆಲೋಚನೆ
ಗಳಿಂದ ಅವಳನ್ನು
ರಕ್ಷಿಸಿ ಬಿಡು ..!!
•••
ಖುದಾ ನ ಕೋರ್ಟಿನಲ್ಲಿ
ಅಪರಾಧಿಯು ನಾನು
ನಿನ್ನ ಸುಂದರ ಸುಳ್ಳುಗಳು
ಎಷ್ಟಿದ್ದರೂ ನನ್ನಲ್ಲೇ
ಉದುರಿಬಿಡಲಿ ನಿರ್ಲಿಪ್ತತೆಯಲ್ಲಿ ಆಲಿಸಿ ಬಿಡುವೆನು ಹುಡುಗೀ..

ಅವಿಜ್ಞಾನಿ

- ಅವಿಜ್ಞಾನಿ

21 Feb 2017, 08:17 am

ನಿಮ್ಮಾಣೆ ಇದೆ..!!

ನಿಮ್ಮ ಪುಟ್ಟ ಮೆದುಳಲ್ಲಿ ಉತ್ಪತ್ತಿಯಾಗುವ ಯೋಚನೆಯ ಮೇಲಾಣೆ ಪ್ರೀತಿ ಇದೆ
ಕನಸು ಕಾಣಲೆಂದೇ ನಿದ್ರೆಗೆ ಜಾರುವ ಕಣ್ಣುಗಳ ಮೇಲಾಣೆ ಪ್ರೀತಿ ಇದೆ

ಸದಾ ಬಡಿಯುವ ಚಿರಯುವ ಹೃದಯದ ಮೇಲಾಣೆ ಪ್ರೀತಿ ಇದೆ
ರಸ ವಿಷಯಗಳ ಮಾತು ಹೊರ ಗೆಡವುವ ನಾಲಿಗೆ ಮೇಲಾಣೆ ಪ್ರೀತಿ ಇದೆ

ಪ್ರೀತಿಯಿದೆ ಅಂಬಾ ಎನ್ನುವ ಕರುವಿನ ತಾಯಿಯಲ್ಲಿ
ಮುಳ್ಳು ಚುಚ್ಚಿದಾಗ ಅವ್ವಾ ಎನ್ನುವ ಮಗುವಿನ ಬಾಯಿಯಲ್ಲಿ

ನಾಳೆ ಊಟಕೆ ಇಂದಿನ ನಿದಿರೆ ಬಿಟ್ಟ ಪ್ರತೀ ಅಪ್ಪಂದ್ದಿರಲ್ಲಿ
ಹೊಟ್ಟೆ ತುಂಬಿಸಿ ಕೆಲವು ದಿನಗಳಾದರೂ ಹಸಿವಿಲ್ಲವೆನ್ನುವ ತಾಯಂದಿರಲ್ಲಿ

ಪ್ರೀತಿ ಇದೆ ಕಂಕುಳದಿ ಪುಟ್ಟಾ ತಂಗಿಯ ಹೊತ್ತು ಭಿಕ್ಷೆ ಕೇಳುವ ಅಣ್ಣನಲ್ಲಿ
ಹೆಚ್ಚೇ ಪ್ರೀತಿಯಿದೆ ಪುಟ್ಪಾತಿನ ರಾತ್ರಿ ಕಳೆಯುವ ತಂಗಿಯ ಚಳಿಗೆ ಪೇಪರ್ ಮುಚ್ಚುವ ದೀದಿಯಲ್ಲಿ

ಯಾರಿಲ್ಲವೆಂದರೂ ಪ್ರೀತಿಯಿದೆ ಉಸಿರುಗಟ್ಟಿ ದೇಶ ಕಾಯುವ ನಮ್ಮ ಯೋಧನಲ್ಲಿ
ನಿಮ್ಮ ಸುಖ ನಿದ್ರೆಗಾಗಿ ತನ್ನ ನಿದಿರೆ ಬಿಡುವ ಗೂರ್ಖನಲ್ಲಿ

ಪ್ರೀತಿಯಿದೆ ಪ್ರೀತಿಗೊಂದು ದಿನವೂ ಇದೆ ಪ್ರಣಯವಿದೆ ನಿರ್ದಿಷ್ಟ ನಿಯಮವೂ ಇದೆ
ಪ್ರೀತಿಯಿದೆ ಮನಸು ಮುನಿಸು ಹಂಚಿಕೊಳ್ಳಬೇಕೆನ್ನುವವಳ ಕೆಂಗುಲಾಬಿಯಲ್ಲಿ....

ಅವಿಜ್ಞಾನಿ

- ಅವಿಜ್ಞಾನಿ

21 Feb 2017, 08:04 am

ಹಲ್ಕಾ ಕವನ-2

ಅದೇ ದಾರಿಯಲ್ಲಿ ನಾನು ನಡೆಯುವಾಗ ಗೆಜ್ಜೆ ಸದ್ದೊಂದು ಹೇಳಕೇಳದೇ ಕಿಂಕಿಣಿಸಿ ಮರೆಯಾಗುತ್ತದೆ
ಪ್ರೇಮಿಗಳ ದಿನದ ಉಲ್ಲಾಸವಿರಬಹುದೆಂಬ ಸಂಶಯ ಮೂಡುತ್ತೆ ಆಗ..

ಖಾಲಿ ಬಿಂದಿಗೆ ಸೊಂಟದಲ್ಲಿ ನಾಟ್ಯವಾಡುತ್ತಾ ಮುಂದೆ ಸಾಗುತ್ತಿರುತ್ತದೆ ಹದಿನಾಲ್ಕರ ಚಂದ್ರನ ಬಿಂಬ ಮೂಡುವಂತಿರುತ್ತದೆ ನಡೆತ

ಗಳಿಗೆಗೊಮ್ಮೆ ನೆನಪು ಮಾಡುವ ನೆಪಕೆ ವಿರಹಿಗಳೆಲ್ಲಾ ಪ್ರೇಮವೆನ್ನುತ್ತಾರೆ
ಜುಮುಕಿಯ ತೂಗಾಟಕ್ಕೆ ಸಿಕ್ಕ ಮುಡಿಗಳನ್ನು ಬೇರ್ಪಡಿಸುವುದು ನನಗಂತೂ ಸುಗ್ಗಿಯ ಕಾಲ

ಕೊನೆ ಬಾರಿ ಕತ್ತು ಉಬ್ಬಿಸಿ ನೋಡುವ ಪ್ರಯತ್ನಕ್ಕೆ ಕೈ ಹಾಕುವಾಗ
ಕೆಂಗುಲಾಬಿಯ ಎಸಳುಗಳಿಂದ ಒಂದ್ಹೆಸರ ಚಿತ್ತಾರ ಹುಟ್ಟು ಪಡೆಯುತ್ತದೆ

ಕೇಳದಿರಿ ಯಾರಾಕೆ ಶೃಂಗಾರಿಯೆಂದು ಇನ್ನೂ ಮಾಸದ ಗಾಯ ಅದು
ನೋಡದಿರಿ ಬಿಂಕಗಳ ಒಟ್ಟಾರೆ ಅರುಣನ ಕೆನ್ನಾಲೆಯ ನೋಟವದು
ಹಲ್ಕಾ ಸಾಲಿಗೆ ಅಕ್ಷರ ಮತ್ತು ಹಲ್ಕಾ ಕವನದ ಹುಮ್ಮಸ್ಸು

ಅವಿಜ್ಞಾನಿ

ಹಲ್ಕಾ ಕವನ

- ಅವಿಜ್ಞಾನಿ

21 Feb 2017, 08:03 am

ಗಜ಼ಲ್

ಪ್ರೇಮಿಗಳ ದಿನದ ವಿಶೇಷ .!


ಒಡಕು ಮಡಿಕೆಗೊಂದು ತೇಪೆ ಹಾಕಿ ಮಾಡಬೇಕು ಪ್ರೇಮಿದಿನ
ಸಿಡುಕು ಮೊಗಕೆ ನಗು ಬುಕ್ಕೆ ಕೊಟ್ಟು ಮಾಡ ಬೇಕು ಪ್ರೇಮಿದಿನ

ಹರೆಯ ಕಾಲದ ನವಿರು ನೆನಪುಗಳು ಮೂಡುವುದು ಸಹಜ
ಎಳೆಯ ಮನಸಿನ ಮೇರು ಬಯಕೆಗೊಂದು ರೂಪ ಕೊಟ್ಟು ಮಾಡಬೇಕು ಪ್ರೇಮಿದಿನ

ಸಕಲ ಒಡಲ ಒಳಗೂ ಜನ್ಮವೆತ್ತುವ ಸಹಜ ಬೀಜ ವಲ್ಲವೇ
ಸಾಥಿಗೊಂದು ಸಾರಥಿಯಾಗಿ ಸಾಗಬೇಕು ಪ್ರೇಮ ಅನುದಿನ

ಜಟಿಲ ಕಷ್ಟವಿದ್ದರು ಹಸನ್ಮುಖಿಯ
ಕಂಡರಂತು ಸಮಾಧಾನ
ಜವಾನರ ಜಾತಿಗೆ ಜಪದ ರೀತಿಯಾಗಿದೆ ಪ್ರೇಮದಿನ

ಸರ್ವದಿನ ಪ್ರೇಮಮಯ ದಿನ
ಒಂದಕ್ಕೆ ಸೀಮಿತವಲ್ಲ
ನಗುತ ಮಾಡು 'ಅವಿಜ್ಞಾನಿ'ಯೇ ಕ್ಷಣ ಕ್ಷಣವು ಪ್ರೇಮಿದಿನ

ಅವಿಜ್ಞಾನಿ

- ಅವಿಜ್ಞಾನಿ

21 Feb 2017, 08:03 am