Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹುಡುಕಿ ಕೊಡಿ...!
ಹೊಲಿಗೆ ಇರದ ಬಾಯಿಯೆದುರು ಹರಿದ ಎದೆಯನ್ನು ತೆರೆದಿಟ್ಟ ಮೇಲೇ
ನನ್ನ ಪ್ರತಿಬಿಂಬವು ಕಾಣೆಯಾಗಿದೆ
ಕನ್ನಡಿಯೊಡೆದು ಬಿಂಬವು
ನಕ್ಕು ನಾರುತಿದೆ ....!!
ಇನ್ನೊಮ್ಮೆ ಹುಡುಕಿ ಕೊಡಿ...!!
ಅನೈತಿಕತೆಯಲ್ಲಿ ನಗ್ನವಾದ ನೈತಿಕತೆಯನ್ನು..!!
ಕಾಸಿಗೆ ಶೀಲ ಬಿಚ್ಚಿಹೋದ ಗುಣದ ಬಟ್ಟೆಯನ್ನು..
ಎಲ್ಲಿದೆಯೋ ಹುಡುಕಿ ಕೊಡಿ..!!
ಹುಡುಕುವವರೇ ಇತ್ತ ಕೇಳಿ,
ನೇಣು ಹಾಕಿದ ನಿವೇದನೆಯ ಸಾರವನ್ನು...!!
ಬಂಜೆಯಾದ ಗರ್ಭದಲ್ಲಿ ಹುಟ್ಟದೇ ವೇದನಿಸುತ್ತಿರುವ ಅವನ ಬಯಕೆಯನ್ನು...!!!
ಕೊಳೆತ ಕೊಚ್ಚೆಯಲ್ಲಿ ಹರಿದು ಹೋದ ವಿಜ್ಞಾಪನೆಯ ಅರ್ಥವನ್ನು..!!
ಹುಡುಕುವುದಾದರೇ ಹುಡುಕಿ ಕೊಡಿ..!!
ಅವಿಜ್ಞಾನಿ
- ಅವಿಜ್ಞಾನಿ
21 Feb 2017, 07:57 am
ನಸುಕ ನಂಬಿಬಂದೆ
ತಂಪನೆನೆದು ಮನದಲ್ಲಿ,
ಇಳಿಸಂಜೆಯ ಬಾನ ರಂಗು
ಸುಖವನೀಡಿದೆ ಎದೆಯಲ್ಲಿ,
ನಾಳೆ ಮತ್ತೆ ಹುಟ್ಟಲಿ
ಹುಟ್ಟಿ ಹೂವನಗಿಸಲಿ,
ಭಾಸ್ಕರನ ಶಿಸ್ತಿನಾಟ
ಬಾಳಿಗೊಂದು ದಿವ್ಯಪಾಠ.
ಚಂದ್ರ ತಂಪನಂಬಿಬಂದೆ
ಇರುಳ ಶಬ್ಧದಲ್ಲಿ ದಟ್ಟತೆ,
ಹುರುಪು ಹೊಂದಿ,
ನಗೆಯ ತೋರಿ,
ತಾರೆಗೂಡಿ ತೋರಿದೆ,
ಶಶಿಯ ಸೊಬಗು ಮೂಡಿದೆ.
ಮರಳಿ ಮರಳಿ ಉಬ್ಬನೆತ್ತಿ ನೋಡಿ
ದಣಿವ ಕಳೆದಿವೆ ನಯನವೆರಡು ನಲಿದಿವೆ.
-ಕನ್ನಡದ ಭಕ್ತ ಕಿರಣ್
- ಕನ್ನಡದ ಭಕ್ತ
21 Feb 2017, 02:56 am
ಅಂಕಗಳ ಹೆಸರು ಹೇಳಿ
ಹಗ್ಗ ಏನೇದರು .
ಕೊರಳಿಗಾಕಿ ಬಿಗಿದುಬಿಟ್ಟು
ಸಾಯಿ ಎಂದರು .
ಜೀವನ ಬರೀ ಓದಿನಲ್ಲಿ
ಅಡಗಿಲ್ಲ .
ಓದಿನಲ್ಲೇ ಜೀವನವೆಲ್ಲ
ಮುಗಿದು ಹೋಗಲ್ಲ .
ನನ್ನಲ್ಲಿರುವ ಪ್ರತಿಭೆಯನ್ನು
ಗುರ್ತಿಸುವುದಿಲ್ಲ.
ನೊoದಾಗ ಧೈರ್ಯ
ನೀಡುವುದಿಲ್ಲ .
ಜನರ ಈ ದೋರಣಿ
ನನಗಿಡಿಸುವುದಿಲ್ಲ .
ಇವೆಲ್ಲಕ್ಕೂ ಹೆದರಿ
ನಾನು ಹಿಮ್ಮೆಟ್ಟುವುದಿಲ್ಲ .
- ಚುಕ್ಕಿ
20 Feb 2017, 10:19 pm
ಹೆಜ್ಜೆ ಸದ್ಧು ಕೇಳುವಾಗಲೆಲ್ಲ ನನ್ನ ಒಂಟಿತನ ವಯಸ್ಸಿಗೆ ಬರುತ್ತದೆ..!!
ಹಳೆಯ ಹಾಡಿಗೆ ಗೀರಿದ ಕಡ್ಡಿಯು ನೋವಿನ ನೆಂಟಸ್ತಿಕೆ ಬೆಳೆಸುತ್ತದೆ...!!
ಕಾಯುವಿಕೆಯು ಮಾಸವಾದರೆ ಅವಳೊಂದು ಶಿಲೆ ಆಗುತ್ತಾಳೆ..!!
ನನ್ನವಳೆಂದೇ ಮುದ್ರೆ ಒತ್ತುವಾಗ ಆಷಾಡಕ್ಕೆ ಕಲೆಯಾಗುತ್ತಾಳೆ...!!
ಬೆರಗು ಪದದ ಮುಖವನ್ನೊಮ್ಮೆ ಸುಮ್ಮನೇ ನೋಡಿ ಬಿಡುತ್ತೇನೆ....!!
ಇನ್ನೂ ಬೇಕೆಂಬ ಅಹವಾಲಿನ ಪಟ್ಟಿಯೊಂದು ಕಣ್ಣಿನಲ್ಲೇ ಮೆತ್ತಿ ಹೋಗುತ್ತಾಳೆ...!!
ನವಿರು ಜಪಕೆ ಹೆಸರು ಆಗಲು ಕಾದಿರುವಂತೆ ಸೋಲಿಸುತ್ತಾಳೆ...!!
ಬೇಡವೆಂದು ತೊದಲಿ ಹೋಗುವಾಗ ಹಗ್ಗ ಕಡಿದ ಹಲಿಗೆಯನ್ನು ಕೊಟ್ಟು ಹೋಗುತ್ತಾಳೆ ..!!
ಅವಿಜ್ಞಾನಿ
- ಅವಿಜ್ಞಾನಿ
20 Feb 2017, 06:50 pm
ಒಂಟಿ ಶವದ ವಾಸನೆಯು
ಹರಿದ ಮೂಗಿಗೆ ಬಡಿಯುತ್ತಿಲ್ಲ....!
ಕೀವು ಸುರಿವ ಹುಣ್ಣೊಂದು
ಕಟ್ಟು ಬಿಚ್ಚಿಡು ಎನ್ನುತಿದೆ...!!!!
ಶೋಕಾಚಾರಣೆಯ ಮಡುವಿನಲ್ಲಿ ಕಾಲು ಮುರಿದ ರಾಗವೊಂದು ಶೃತಿಯ ತಪಾಸನೆ ಮಾಡುತಿದೆ....!!!
ಬೆಂದ ಬೂದಿಯಲ್ಲಿ ಬಂಜೆಯಾದ ಬಯಕೆಗೊಂದು ಶ್ರಾದ್ಧ ನಡೆಯುತ್ತಿದೆ..!!!
ಬಳ್ಳಿ ಕಡಿದು ಬೀಳಲು ಮೊಗ್ಗೊಂದು ಬಯಸುತಿದೆ...!!
ಬಳಲಿಹೋದ ಎಸಲು ಕೂಡ ಮತಿಭ್ರಮಣೆಯಾಗುವಂತೆ ಬೇರು ಹಿಡಿದು ಅಲುಗಾಡಿಸುತ್ತದೆ...!!!
ಹಸಿದ ಹಲ್ಲುಗಳು ಕೊಳೆತು ನಾರುವಾಗ ಮುಸಿನಗುವ ಒಸಡಿಗೆ ಮುಂಜಿ ನಡೆಯುತಿದೆ....!!
ಉಚ್ಚೆ ಬರದೆ ಶ್ವಾಸವು ರಟ್ಟೆ ಕಚ್ಚುವಾಗ ಹೆಪ್ಪು ಗಟ್ಟಿದ ರಕ್ತಕ್ಕೆ ಜೋಗುಳ ಹಾಡುತ್ತಾರೆ....!!
ಬಿಸಿಲ ಬೆವರು ಬೆಂದು
ಬೇಯುವಾಗ ಮುರಿದ ಬೆನ್ನಿನ ಬಾಸುಂಡೆ ಲೆಕ್ಕವಾಗುತ್ತದೆ...!!
ಹೊಡೆದ ತಮಟೆ ಮೌನ ಹಾಡಿಗೆ ತಾಳವಾಗುವಾಗ ಬೊಬ್ಬಿಡುವ ಬಾಯಿಗೆಲ್ಲ ಬಂದೋಬಸ್ತ್ ಮಾಡಲಾಗುತ್ತದೆ...!!!!
(ಅವಿಜ್ಞಾನಿ)
- ಅವಿಜ್ಞಾನಿ
20 Feb 2017, 06:48 pm
ಅವಳ ನಡೆದ ದಾರಿಯಲ್ಲೆಲ್ಲ
ಕಾಡ ಹೂ ಬಿರಿಯುತ್ತದೆ
ಆಗೇ ಸುಮ್ಮನೇ ನೋಡಿದಾಗ
ಗೊಂದಲವುಂಟು ಮಾಡುವ ಘಮ
ಮುಂಗುರುಳು ಮುತ್ತಿಟ್ಟ ಎಣ್ಣೆಗೆಂಪು ಕೆನ್ನೆ
ಪ್ರಾರಬ್ಧ ಮಾತುಗಳಿಗೆ ತುಟಿಯಾಗಿದ್ದು ಹುಸಿಮುನಿಸಿನ ಕಾರಣ
ಎದೆ ಗಾಯಕ್ಕೆ ಹಾಸುಬೆನ್ನಿನ ಮುಲಾಮು ಹಚ್ಚಿದ್ದು ಅವಳೇ
ಈಗೀಗ ಕತ್ತಲೆಯ ಒಂಟಿತನ
ದೀರ್ಘ ನಿಟ್ಟುಸಿರು ಮತ್ತು ಅವಳು
ತಿರುಗಿ ನೋಡಿದ್ದು ಕೊನೆಯ ತಿರುವಿನಲ್ಲಿ ಪ್ರಥಮ ಸೋಲು
ಆಮೇಲೆ ಎಲ್ಲವೂ ನಿಗೂಢ ಪಥ
ಕ್ಷಣಕ್ಕೊಮ್ಮೆ ಹಾದಿ ತಪ್ಪಿಸೋ ನೆನಪುಗಳು ಅವಳಷ್ಟೇ ಅಮೂರ್ತ
ಪ್ರತಿ ವಿಷಯಕ್ಕೂ ಮುನ್ನುಡಿ ಕುರುಡು ಬಯಕೆಯ ಆದಿ
ಕಾಲಂದುಗೆಯ ತೊಟ್ಟ ಬಿಂಕ
ವಾರೆ ನೋಟಕ್ಕೆ ಬಿಡಸಲಾಗದ ಅರ್ಥ ಮತ್ತು ಅವಳು..
ಅವಿಜ್ಞಾನಿ
- ಅವಿಜ್ಞಾನಿ
20 Feb 2017, 06:46 pm
ಸೋತ ನೆನಪು ಉಕ್ಕಿ ಬರುವಾಗ
ಒಡಲೊಳಗೆ ತಾಕಲಾಟವಾಗುತ್ತದೆ
ವಿರಹಗಾಳಿಯು ಬಯಕೆ ಎಳಿಯುವಾಗ
ಹೆಜ್ಜೆಗಳೆರಡು ತಾರಸಿ ನೋಡುತ್ತದೆ..!!!
ನೆನಪಿನಲೆಗಳು ಭೋರ್ಗರೆಯುವಾಗ
ಒಡೆದ ಹೃದಯ ಬೊಗಸೆಯಾಗುತ್ತದೆ
ಕೂಡಿ ನಲಿದ ಮನೆಯ ಬೆಳಕೊಂದು
ಕಣ್ಣಿನೊಳಗೆ ತೆವಲಿ ಹೋಗುತ್ತದೆ...!!
ಒಂಟಿ ಜಡದ ನೋವ ಬಿಸಿಗೆ ಮಾಗಿ
ಚಳಿಯು ಬೆವೆತು ಹೋಗುತ್ತದೆ
ಕಪ್ಪು ಹುಡುಗನ ಕ್ಯಾತೆ ಹೆಚ್ಚುವಾಗ
ತಾರಸಿನಲ್ಲೊಂದು ನಡುಕ ಹುಟ್ಟುತ್ತದೆ...!!!
ರೋಗವೆಂದರೆ ದಿನವು ತಾರಸಿ
ಅವನ ಕಣ್ಣೀರಿಗೆ ಕೊಡವಾಗುತ್ತದೆ
ಮೌನಿಯ ಉತ್ತರಕ್ಕೆ ಕಾಯುವ
ಮಾತುಗಳಿಗಾಗಿ ಬಡಿತ ಹೆಚ್ಚುತ್ತದೆ
ಆ ಮನೆ ಅವನು ಮತ್ತು ತಾರಸಿ
ದಿನಚರಿಗೆ ಅಕ್ಷರವಾಗುತ್ತದೆ
ಮೌನ ರೋದನ ಕೇಳುವ
ಕಿವಿಗಳೆಲ್ಲವೂ ಸಪ್ಪಳಕ್ಕೆ ಜೊತೆಗೂಡುತ್ತದೆ....!!!!
#ಅವಿಜ್ಞಾನಿ
- ಅವಿಜ್ಞಾನಿ
20 Feb 2017, 06:42 pm
ಜೀವ-ಜೀವನ ಏರಡು
ನಮ್ಮ ಕೈಯಲ್ಲಿ ಇಲ್ಲ
ಜೀವ ಬದುಕು ಅನ್ನುತ್ತದೆ
ಜೀವನ ಸಾಕು ಅನ್ನುತ್ತದೆ
ಸುಖ-ದುಃಖ ಯಾವುದು
ನಾವು ಬಯಸಿದಾಗ ಬರಲ್ಲ
ಸುಖ ಬದುಕುವ ಆಸೆ ತುಂಬುತ್ತೆ
ದುಃಖ ಬದುಕಲು ಪಾಠ ಕಲಿಸುತ್ತದೆ
ಹುಟ್ಟು-ಸಾವು ಹೇಳಿ ಕೇಳಿ ಬರಲ್ಲ
ದೇವರು ಕೇಳದೆ ಕೊಡುವ ವರ ಹುಟ್ಟು
ಈ ಹುಟ್ಟಿಗೊಂದು ಬೆಲೆ ಕೊಡಬೇಕು ಅಂದಾಗ
ಹೇಳದೆ ಬರುವ ಶಾಪವೆ ಸಾವು...
- chinmayi
20 Feb 2017, 06:18 pm
ತುಟಿಯಂಚಿನ ಮಾತು ನಾ ಆಡಲೆ
ಬಾಳಂಚಿನ ಗೋಳು ಯಾರು ಕೇಳರೆ
ಮನದೊಳಗೆ ಅವಿತಿರುವ ಪ್ರೀತಿಯೇ
ತುಟಿಯಂಚಿಗೆ ಬಂದರೆ ಮಾತು ನಾ ಓಡಿ ಹೋಗಲೇ.....
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
20 Feb 2017, 05:58 pm
ನೀ ಬಂದಾಗ ಎದುರಲ್ಲಿ
ನಾನಿರಲಿಲ್ಲ ನನ್ನಲ್ಲಿ
ಸೆಳೆದಾಗ ನೀ ಕಣ್ಣಲ್ಲಿ
ನನ್ನ ಹೃದಯ ಇರಲಿಲ್ಲ ನನ್ನಲ್ಲಿ
ಎಲ್ಲೆಲ್ಲಿ ನಾ ಹುಡುಕಲಿ
ಆದರೆ ಆ ಹೃದಯವ ಕಂಡೆ ನಿನ್ನಲ್ಲಿ
ನೀ ನೆಲೆನಿಂತೆ ನನ್ನಲ್ಲಿ
ಪ್ರೇಮದರಮನೆ ಕಟ್ಟುತ್ತ ಮನದಲ್ಲಿ
ಪ್ರೀತಿ ಎಂಬ ಹೂ ಅರಳಿ
ನಿನಗೆ ಹೇಳಲಾಗದೆ ಬಳಲಿ
ಮುದುಡಿಹೋಯ್ತು ಕ್ಷಣದಲ್ಲಿ
ಕೊನೆಗೆ ಮರೆಯಾಯ್ತು ಮಣ್ಣಲ್ಲಿ.
- ಅಕವಿ
20 Feb 2017, 08:35 am