Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಭೂಮಿಯೊಂದು ಪುಟ್ಟ ಸ್ವರ್ಗದಂತ

ಒಮ್ಮೆ ಆ ಕ್ಷಣ, ಇನ್ನೊಮ್ಮೆ ಈಕ್ಷಣ
ಕ್ಷಣಗಳಲಿ ಸಿಹಿ ನೆನಪು ತುಂಬಿದಾ ವನಿತೆ,
ಆರದಿರಲಿ ನೀನಚ್ಚಿದಾ ಹೃದ್ಹಣತೆ,
ಮುಂಗೋಪವ ಸವಕಲಾಗಿಸಿದೆ,
ನಶ್ವರವೆಂದೆಣಿಸಿದಕೆ ಉಸಿರ ತುಂಬಿದಾಕೆ,
ದಾರಿದ್ರ್ಯತುಂಬಿದೆಡೆಗೆ ಸಂತತ್ವ ತಂದಾಕೆ,
ನಾಸ್ತಿಕನೊಳಗೆ ದೇವಿಯಾದಾಕೆ,
ತಕ್ಷಣ ಹೊಕ್ಕು, ಪುಸುಕ್ಕನೆ ನುಸುಳಿ,
ಮನದ ಮನದನ್ನೆಯಾದಾಕೆ.

ಕುಂಚದೊಳಗಿಹ ರಂಗು,
ಕಲ್ಪನಾಲೋಕದೊಳಗಿಹ ಸೊಬಗು,
ಸರಿದೂಗಲಾರವು, ಸಾಟಿನಿಂಗೆಲ್ಲಿ?
ದೇವಲೋಕದ ನೈದಿಲೆಯೋ?
ಚಂದ್ರಿಕೆಯ ಕಾಂತಿಯೋ?
ಬೆಳದಿಂಗಳ ಸುಖವೋ?
ನಿನ್ನ ಕಂಡಾಗಲೆಲ್ಲ ಭಾಸವಾಗುತಿದೆ ಭೂಮಿಯೊಂದು ಪುಟ್ಟ ಸ್ವರ್ಗದಂತೆ!!!!!!

-ಕನ್ನಡದ ಭಕ್ತ ಕಿರಣ್

- ಕನ್ನಡದ ಭಕ್ತ

20 Feb 2017, 12:00 am

ಇದಕೆಲ್ಲ ಕಾರಣ ನೀ

ಕವಿತೆಯ ಸಾರ ನನ್ನಲಿಲ್ಲ
ಕವಿತೆಯ ಕಾವ್ಯ ನೀ
ಕವಿತೆಯ ಪದಗಳಿಗೆ ನೀ
ಕವಿತೆಯ ಸಾರಾಂವಶ ನೀ
ಕವಿತೆಯ ಮನದ ಮನೆಯಲಿ ನೀ
ಕವಿತೆಯ ಬರೆಯುವ ಲೇಖನಿ ನೀ
☝☝ಇದಕೆಲ್ಲ ಕಾರಣ ನೀ ನೀ ನೀ

- ಪ್ರದೀಪ.ಮ.ಪಾಡಮುಖೆ

19 Feb 2017, 12:51 pm

ನನಗಿದೊಂದೇ ಮುಕ್ತಿ

ನನ್ನಲಿಲ್ಲ ಭಾವನೆಯ ಶಕ್ತಿ ನೀನೆಗೆ ಗಳಿಸಿದೆ ಭಕುತಿ ..
ಭಕ್ತಿಯ ಭಾವಮನೆಯಲಿ ಮೈತುಂಬಿ ಹರಿಯುತ್ತಿದೆ ನಿನ್ನಲಿ ಸಾಗರದ ಶಕ್ತಿ ...
ಮನವೇ ನಿನಗೆ ಗೆಲುವಂದೇ ಗಳಿಸು ಕಾಲದ ಚಕ್ರವ ಉರುಳಿಸು ನೀ ,
ನಿನ್ನ ಒಳಿತು ಮನಸಿನ ಮಾತಿನಗೆ
ಜಗ ಮೆಚ್ಚಿಸು ನೀ ಜೀವಿಸು ನೀ
ನನಗಿದೊಂದೇ ಮುಕ್ತಿ..

- ಪ್ರದೀಪ.ಮ.ಪಾಡಮುಖೆ

19 Feb 2017, 12:48 pm

ಮೊದಲ ಭೇಟಿ

ಮೌನ ಗೌರಿ ಮನೆಗೆ ಬಂದ ದಿನವೇ
ಪಾರಿವಾಳ ಹಾರಿ ಹೋದ ಕ್ಷಣವೇ!!
ಮನದಲ್ಲೀ ಮೂಡಿದ್ದ ಆ ರೂಪ
ಕಣ್ಣೆದಿರು ಬಂದಾಗ ಸಂಕೋಚ!!

ಹೂ ಬಳ್ಳಿ ತಲೆ ಬಾಗಿ ನಿಂತಂತೆ
ನಾ ನಿಂತೆ ಅವನೆದಿರು ಇದೇ ಮೊದಲು!!
ನನಗೇಕೆ ಈ ನಡುಕ ಈ ಬೆವರು
ಉಸಿರಿನ ಏರಿಳಿತ ಅದಲು ಬದಲು!!

ಮುಗಿಲೊಮ್ಮೆ ಹೆಗಲೇರಿ ಕುಳಿತಂತೆ
ತಲೆ ಎತ್ತಿ ನೋಡುವುದ ನಾ ಮರೆತೆ!!
ಇಂದೇಕೆ ನನ್ನಲ್ಲಿ ಈ ದಿಗಿಲು
ಮಾತನ್ನೇ ಮರೆಸಿಹುದೇ ಈ ಹಗಲು!!

ಮಧು ಮಗಳು ನಾನಾಗಿ ನಿಂತಿರಲು
ಜೊತೆಯಾಗ ಬಂದಿಹನು ಬದುಕಿನೊಳು!!
ವಿಪರೀತ ಮಿಡಿತ ಈ ಹೃದಯದೊಳು
ನವ ಒಲವ ಬರೆಯುತಲಿ ಬಯಕೆಗಳು!!

- ಪಿ.ಜಿ.ಜ್ಯೋತಿ

19 Feb 2017, 12:03 pm

ಸುಮ್ಮನೇ ಗೀಚಿದ ಅಕ್ಷರ.

ಅಂಗಳದಲ್ಲಿ ಆಟದ ಮಸ್ತಿ ಇತ್ತು
ಮನೆಯಲ್ಲಿ ಅಮ್ಮನ ಪ್ರೀತಿ ಇತ್ತು
ಅಪ್ಪನ ಮಾತಿನಲ್ಲಿ ಕಾಳಜಿ ಇತ್ತು
ಕನ್ನಡ ಶಾಲೆಯಲ್ಲಿ ವಿದ್ಯೆ ಇತ್ತು.

ಇಂದು ಎಲ್ಲವೂ ಮರೆಯಾಗಿದೆ
ಪಂಜರದೊಳಗಿನ ಗಿಣಿಯಂತೆ
ಭವಿಷ್ಯ ಹುಡುಕುವುದೇ ಕೆಲಸ.

ಬರುವವರು ಬಂದು ಸುಮ್ನೆ
ಮೈಯಲ್ಲಿ ಗಾಯ ಮಾಡ್ತಾರೆ
ಕಾರಣ ಹೇಳದೆ ಹೋಗುತ್ತಾರೆ.

ಉಳಿದಿದೆ ಈಗ ಒಂದೇ ಕೆಲಸ
ರಾತ್ರಿ ಸ್ವಚ್ಛ ಬಾನಿನಲ್ಲಿ
ತಾರೆಗಳು ಏಣಿಸುವುದು.
*****

- ಕರಣ್ ಗಾವಡಾ

18 Feb 2017, 10:50 pm

ಕನಸು.‌. ನನಸು...

ಕನಸು..
ಹರೆಯದಾ ನೆನಪುಗಳೆಲ್ಲ ಕನಸುಗಳಾಗಿ ಕಾಡುವುದುಂಟು
ಮರೆಯದಾತ್ಮೀಯರದು ಕನಸುಗಳೊಂದಿಗೇ ನಂಟು
ಈಡೇರಿರದಾ ಆಸೆಗಳೆಲ್ಲ ಸುಷುಪ್ತಿಯಲಿ ಈಡೇರಿದಂತೆನಿಸುತ್ತವೆ
ನೈಜ ಘಟನೆಗಳೇನೋ ಎಂಬಂತೆ ಕನಸಿನಲಿ ಭಾವಿಸುತ್ತೇವೆ..!

- Anu...

18 Feb 2017, 07:31 pm

ಅರಿವು

ಅಮ್ಮನುದರದಿಂ ಭುವಿಯ ಸೇರಿದೆ
ಕಣ್ಣು ತೆರೆಯುವ ಮುನ್ನ ,
ಆಸೆ ಗಂಟ ಹೊತ್ತು ಮುಂದೆ ಸಾಗಿದೆ
ದಾರಿ ಸಿಗದ ಮುನ್ನ ,
ಅರಿತು ಬಾಳದೆ ಹಗೆಯ ಸಾಧಿಸಿದೆ ಅರಿತರೂ ಅರಿಯದೆ ನಿನ್ನ ,
ಸಾಗಿ ಸಾಗಿ ಬೆಸವಳಿದು ಕುಳಿತೆ
ಕಂಡು ಕಾಣದೆ ನಿನ್ನ ,
ಅದನರಿತೇ ಇದನರಿತೇ ಎಂದೆ
ಏನೂ ಅರಿಯದ ಮುನ್ನ ,
ಬಂದ ಮೂರು ದಿನದಿ ಏನು ಸಾಧಿಸಿದೆ
ಸೇರುವ ಮೊದಲು ಮಣ್ಣ ,
ಬಂದ ದಾರೀಲೇ ಹಿಂತಿರುಗಿ ಹೋದೆ
ನೀನೇ ಅರಿಯದೇ ನಿನ್ನ .
- ಬಿ ಸಿ.ಬಸವರಾಜ

- ಬಿ.ಸಿ ಬಸವರಾಜ

18 Feb 2017, 11:42 am

ಮರೆತು ಬಿಡು...ನನ್ನ ನೀನು ಮರ

ನಿನ್ನ ಕೈಗಳಿಂದ ಬಣ್ಣ ಬಣ್ಣದ ಚಿತ್ತಾರ ಹೇಗೆ ಮುಡುತ್ತದೆಯೊ ಹಾಗೆ ನನ್ನ ಮನದಲ್ಲಿ ಕೂಡ ಬಣ್ಣ ಬಣ್ಣದ ಲೋಕವೇ ತುಂಬಿದೆ....

ನಾ ನಿನ್ನ ಪ್ರೀತಿಯ ಸ್ನೇಹಿತನಾಗಿ ಅದೇ ಅರಳಿ ಮರದ ಕೆಳಗೆ ನೀನಗೆ ಒಂದು ಮಾತು ಹೇಳಿದೆ ನೇನಪಿದೆಯಾ ಗೆಳತಿ ನೆನಪಿದೆಯಾ .....

ನಾವಿಬ್ಬರು ಒಂದು ಹೊಳೆಯ ದಡದಲ್ಲಿ ಕುಂತು ಮರಳು ಮನೆಗಳ ಕಟ್ಟಿ ಆಟವಾಡಿದ ದೀವಸ ನೆನಪಿದೆಯಾ ಗೆಳತಿ..........

ನಾ ಮಳೆಯಲ್ಲಿ ನೆನೆಯುತ್ತಿದ್ದಾಗ ನಿನ್ನ ಹೆಗಲ ಮೇಲಿನ ಶಾಲ ಹೊದಿಸಿ ಮತ್ತೆದೆ ಭಾವುಕತೆಯ ಮಾತು ಹೇಳಿದವಳು ನೀನು ನಮ್ಮಿಬ್ಬರ ಸ್ನೆಹನಾ ನಾವಿಬ್ಬರ ಮೆಚ್ಚಿಕೊಂಡ ಪ್ರೀತಿನಾ.....

ಒಡೆದ ಹೋದ ಹೃದಯ ದಲ್ಲಿ ಪ್ರೀತಿಯ ಮಂದಿರ ಕಟ್ಟಿ ಸಂತೋಷ ದ ಹಣತೆ ಹಚ್ಚಿದವಳು ನೀನು ......

ಇಂತಿ ನಿಮ್ಮ .......

- Shiva.S.M...!

18 Feb 2017, 10:10 am

ನಿನ್ನ ಅರಿತುಕೊ...

ಬೆರೆಯವರ ಹಿಂದೆ ಮಾತನಾಡುವ ಮುನ್ನ ..
ತಿಳಿದುಕೋ ಒಮ್ಮೆ ನಿನ್ನ...
ಪರರ ಹೀಯಾಳಿಸುವ ಮುನ್ನ...
ನೀನೇನೆಂದು ಅರಿತುಕೊಂಡರೆ ಚೆನ್ನ..

- ವಿಧಾತ್ರಿ ಹರಿತಸ್ಯ

18 Feb 2017, 08:36 am

ಹೃದಯಗಳ ಮಾತು...

ಎರಡು ಹೃದಯಗಳು ಸೇರಿದರೆ ಮಾತ್ರ ಪ್ರೀತಿ ಹುಟ್ಟೋದು, ಎಲ್ಲಾ ಹೃದಯಗಳು ಮತ್ತೊಂದು ಹೃದಯದ ಪ್ರೀತಿಗಾಗಿ ಮಿಡಿಯುತ್ತಿರುತ್ತವೆ, ಈ ಪ್ರೀತಿಯ ಪಯಣದಲ್ಲಿ ಮಿಡಿದ ಮಿಡಿತವೇ ಈ ಪ್ರೇಮ ಕವನಗಳು,
ಇಂತಿ ನಿಮ್ಮ ಪ್ರೀತಿಯ..
ಅನು..

- Anu...

17 Feb 2017, 10:42 pm