Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಕೇಳದೇನೆ ಜನ್ಮಕೊಟ್ಟೆ
ಅತ್ತಾಗ ಅಕ್ಕರೆಯ ಅಪ್ಪುಗೆಯಿಂದ ಹಾಲುಣಿಸಿದೆ
ಬಿದ್ದಾಗ ಮೇಲೆತ್ತಿ ಕಣ್ಣೀರು ಒರೆಸಿದೆ
ಅಕ್ಷರ ಜ್ಞಾನ ಮೂಡಿಸಿ ಜೀವನದ ದಾರಿ ತೋರಿಸಿದೆ...
ಜನ್ಮಕೊಟ್ಟ ನೀನೆ ಈಗ ಮರುಜನ್ಮ ಬೇಡುತಿರುವೆ
ಹಾಲುಣಿಸಿದ ನೀನೆ ಈಗ ಅನ್ನವ ಬೇಡುತಿರುವೆ
ಮೇಲೆತ್ತ ನೀನೆ ಈಗ ಮೇಲೆತ್ತಲು ಬೇಡುತಿರುವೆ
ಜ್ಞಾನಕೊಟ್ಟು ದಾರಿ ತೋರಿಸಿದ ನೀನೆ ಅಕ್ಷರದ ಬಿಕ್ಷೆ ಬೇಡುತಿರುವೆ...(ಹೆಣ್ಣಿಗೆ ಶಿಕ್ಷಣ ದೇಶಕ್ಕೆ ರಕ್ಷಣ)
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
17 Feb 2017, 08:42 pm
ಬಾಳ ತೊಟ್ಟಿಲು
ಮನವ ಮುಟ್ಟಲು
ಹೃದಯ ತಟ್ಟಲು
ಮುಗ್ದ ಮಗುವ ಮುಟ್ಟಲು //
ತಾಯಿಯ ಒಲವು
ತಂದೆಯ ಒಲವು
ಎರಡು ಒಂದೇ ಆದವು //
ನನ್ನಯ ಕಂದ
ನಕ್ಕರು ಚಂದ
ಅತ್ತರು ಅಂದ
ನಮಗಾಗಿ ತಂದೇ ಆನಂದ //
ಮಗುವಿನ ಆಟ
ಅದರ ನೋಟ
ನಿಲ್ಲದ ತುಂಟಾಟ
ನಮಗೆ ಹರುಷದ ಊಟ //
ತೊದಲ ನುಡಿಗಳು
ಮುತ್ತಿನ ಮಳೆಗಳು
ಮೈ ಮೇಲೆ ಕಂದನಿಟ್ಟ ಹೆಜ್ಜೆಗಳು //
ಹೇಳಲಾಗದ ಆನಂದ
ನೀ ಬಂದ ಗಳಿಗೆಯಿಂದ
ಮನೆ ಮಂದಿರವಾಯಿತು ನಿನ್ನಿಂದ //
"""""""”"""""""""""""^^^^^^""""""""""""""""
- ಕುಮಾರ ಸಿದ್ದರಾಜ
17 Feb 2017, 08:38 pm
ಕನ್ನಡ ಕನ್ನಡ ಕನ್ನಡ
ನಮ್ಮಯ ಭಾಷೆಯು ಕನ್ನಡ|
ಎಕ್ಕಡ ಎನ್ನಡ ಏತಕೆ
ಆಡಲು ಸಾಲದೇ ಕನ್ನಡ||ಪಲ್ಲವಿ||
ನಾ ಆಡುವ ನುಡಿಯು ಕನ್ನಡ
ನಾ ಹಾಡುವ ಹಾಡು ಕನ್ನಡ|
ನಾ ಬಾಳುವ ನಾಡು ಕನ್ನಡ
ನಾ ಉಸಿರಾಡುವ ಗಾಳಿಯು ಕನ್ನಡ||೧||
ಕನ್ನಡವೆನೆ ಕುಣಿದಾಡುವೆನು
ಕನ್ನಡವೆನೆ ಕೂಗಾಡುವೆನು|
ಕನ್ನಡ ನಾಡಲ್ಲೆ ಮೆರೆಯುವೆನು
ಕನ್ನಡ ಮಣ್ಣಲ್ಲೆ ಮಡಿಯುವೆನು||೨||
ನಮ್ಮಯ ತಾಯಿಯು ಕನ್ನಡ
ನಮ್ಮಯ ನುಡಿಯು ಕನ್ನಡ|
ನಮ್ಮಯ ನಾಡೇ ಕನ್ನಡ
ನಮ್ಮಯ ನೆಲೆಯೆ ಕನ್ನಡ||೩||
ಕುವೆಂಪು ಬರೆದ ಕನ್ನಡ
ರಾಜಣ್ಣ ಹಾಡಿದ ಕನ್ನಡ|
ಕರುನಾಡಿನ ಜನ ನುಡಿದ ಕನ್ನಡ
ನಮ್ಮಯ ಬದುಕೆ ಕನ್ನಡ||೪||
ಜನಮನ ತಣಿಸಿದ ಕನ್ನಡ
ತನುಮನ ಬಣ್ಣಿಸಿದ ಕನ್ನಡ|
ಶಾಸ್ತ್ರೀಯಪಟ್ಟ ಧರಿಸಿದ ಕನ್ನಡ
ಧರೆ ಏರಿದ ಭಾಷೆಯು ಕನ್ನಡ||೫||
ದೊರೆಗಳು ಆಳಿದ ಕನ್ನಡ
ಕವಿಗಳು ಹೊಗಳಿದ ಕನ್ನಡ|
ರವಿ ಸೂಸಿದ ಕಿರಣವೆ ಕನ್ನಡ
ಕನ್ನಡ ಕಸ್ತೂರಿ ಕನ್ನಡ||೬||
ಬೆಳದಿಂಗಳು ಉಣಿಸಿದ ಕನ್ನಡ
ಕಾವೇರಿ ತಣಿಸಿದ ಕನ್ನಡ|
ಶ್ರೀಗಂಧ ಸುಗಂಧ ಕನ್ನಡ
ಕರುನಾಡೇ ಕೂಗಿದ ಕನ್ನಡ||೭||
ವಿಜಯನಗರ ಐಸಿರಿಯ ಕನ್ನಡ
ಹಚ್ಚ ಹಸಿರಿನ ಕನ್ನಡ|
ಶಿಲ್ಪಕಲೆಗಳ ಕನ್ನಡ
ನಮ್ಮಯ ಹೆಮ್ಮೆಯ ಕನ್ನಡ||೮||
ಕೋಗಿಲೆ ಹಾಡಿದ ಹಾಡು ಕನ್ನಡ
ನವಿಲು ಮಾಡಿದ ನರ್ತನೆ ಕನ್ನಡ|
ನಾ ಮೆಟ್ಟುವ ನೆಲವೇ ಕನ್ನಡ
ನಾ ಹುಟ್ಟುವ ಮಡಿಲೇ ಕನ್ನಡ||೯||
- ಕೆ.ಕೆ.ನಂದಾದೀಪ್(ಕೋಲಾರದ ಕಂದ)
17 Feb 2017, 08:24 pm
ಬಣ್ಣದ ಬಟ್ಟೆ ಹಾಕಿ
ಮನೆಯಾಚೆ ನೀ
ಒಮ್ಮೆ ಬಂದರೆ..
ಪ್ರೀತಿಯೆಂಬ ಮಳೆ
ಗಗನದಿಂದ ಸುರಿಯದೆ
ಬ್ಯಾಸಗೀಯ
ಯುವ ಮೇಘಗಳು
ಸುರಿದಾವೋ ಧರೆಯಿಂದ
ನಿನ್ನ ಈ ತಂಪಾದ
ಮೈ ಮ್ಯಾಲೆ ಚಲುವೆ.
ಎಚ್ಚರ ನೀ ಆಗು
ಅಥವಾ ಬಯಸು
ಜಾನಪದದ ಗೀತೆಯಲಿ
ಸೇರಿ ಹೋಗಲು.
*****
- ಕರಣ್ ಗಾವಡಾ
17 Feb 2017, 07:00 pm
ಮತಗಳ ಭೇದ ನಮಗಿಲ್ಲ
ಜಾತಿ-ಮತ ಅಂತರವಿಲ್ಲ
ನಮಗಿರುವುದು ಒಬ್ಬರ ಮೇಲೆ
ಇನ್ನೊಬ್ಬರಿಗೆ ಪ್ರೀತಿ ಮಾತ್ರ .
ಯಾಕೆ ಜನ ಜಾತಿ-ಮತ
ಎಂದು ಜಗಳಮಾಡುತ್ತಾರೆ ?
ನಾವಿಬ್ಬರೂ ಮನುಷ್ಯರೇ
ಇಬ್ಬರ ಗಮ್ಯ ಪ್ರೀತಿನೇ .
ಮನುಷ್ಯ ಶ್ರುಷ್ಟಿಸಿದ ಜಾತಿ
ಏಂಬ ಪದಕ್ಕೆ ನಮ್ಮ ಜೀವನ
ಬಲಿಯಗಳು ನಾವು ಬಿಡುವುದಿಲ್ಲ
ನಿಮಗಾಗಿ ನಮ್ಮ ಪ್ರೀತಿಯ ಕಳೆದುಕೊಳ್ಳುವುದಿಲ್ಲ .
- ಚುಕ್ಕಿ
17 Feb 2017, 04:46 pm
ಮನದ ಮೂಲೆಯಲ್ಲಿ ಹೊತ್ತಿಟ್ಟ ನೆನಪುಗಳು
ಮಳೆಯ ಆರ್ಭಟಕ್ಕೆ ಗರಿಗೆದರಿ ನಿಂತಿಹವು
ಮಳೆಯಲ್ಲಿ ಮಿಂದು ಕಣ್ಣೀರು ಕಾಣೆಯಾಗಿಹುದು
ಬರಿಯ ನಗುವೊಂದೇ ಜಗಕ್ಕೆ ಕಾಣುತಿಹುದು....
- ವಿಧಾತ್ರಿ ಹರಿತಸ್ಯ
17 Feb 2017, 12:53 pm
ನಿನ್ನ ನೆನಪುಗಳ
ಆ ಕಾಗದದ
ತುಂಡುಗಳು..
ಮತ್ತೆ ಒಂದಾದರೆ
ಆಗುವುದು
ಹುಣ್ಣಿಮೆಯ
ಬೆಳದಿಂಗಳ ಬೆಳಕಿನಲ್ಲಿ
ಹಾಡುವ/ಆಲಿಸುವ
ರಸ ಕಾವ್ಯ...
- ಕರಣ್ ಗಾವಡಾ
17 Feb 2017, 12:51 pm
ಕಲ್ಪನೇ ಕಲ್ಪನೆ
ರೂಪವೇ ಕಲ್ಪನೆ!!
ನನ್ನ ಸ್ವಪ್ನ ಮಂಟಪದಲ್ಲಿ
ನಿನ್ನ ರೂಪದ ಕಲ್ಪ!!
ನನ್ನ ಎದೆಯ ಬಂಡಾರದಲ್ಲಿ
ಸವಿ ಪ್ರೀತಿಯ ಕಲ್ಪ!!
ರೂಪವೇ ರೂಪವೇ
ಪ್ರೀತಿಯ ರೂಪವೇ!!
ನಾ ನಗುವೆ ನಗುವೆ
ನಲಿವೆ ನಾ ನಲಿವೆ!!
ನನ್ನೇ ಮರೆತು ಹೋಗುವೆ
ದಿನ ನಿನ್ನ ಜಪವ ಮಾಡುವೆ!!
ಬೆಳ್ಳಕ್ಕಿ ಸಾಲಿನೊಡನೆ
ನಾನು ಹಾರಿ ಜಿಗಿಯುವೆ!!
ಆ ಮುಗಿಲ ಮಿಂಚಿನಂತೆ
ನಾನು ಕಳೆದು ಹೋಗುವೆ!!
ನಿನ್ನ ಒಲವ ಎದೆಯ ಗೂಡಿಗೆ
ನಾ ಏಣಿ ಹಾಕಿ ಏರಿ ಬರುವೆ!!
ನಾ ನಿನ್ನ ರೂಪ ಲಹರಿಯ
ತನುವನ್ನು ಸೇರಿಕೊಳ್ಳುವೆ!!
ಮನದಲ್ಲಿ ಪ್ರೇಮ ನಾದದ
ಶೃತಿಯೊಂದು ಮೂಡಿ ಬರುತಲಿ!!
ನನ್ನೇ ಮರೆತು ಹೋಗುವೆ
ನಿನ್ನಲ್ಲೇ ಕಳೆದು ಹೋಗುವೆ!!
- ಪಿ.ಜಿ.ಜ್ಯೋತಿ
17 Feb 2017, 10:06 am
ಕೂಸು ಕಂದಮ್ಮ
ಆಡಿ ನಗುತಾದ
ನಲಿದಾಡಿ ನಗುತಾದ
ಕಣಿದಾಡಿ ನಗುತಾದ!!
ಕಂದಮ್ಮ.... ಕೂಸು ಕಂದಮ್ಮ
ಜೋಲಿ ಜೋ.... ಸುವ್ವಾಲಿ ಕಂದಮ್ಮ,!!
ಬೆಳ್ಳೀಯ ತೇರಿನಲ್ಲಿ
ಮೂಡಿ ಚಂದ ಮಾಮ
ನಗುತಾನ ನಿನ್ನ ನಗು ಕಂಡು
ಅಳುತಾನ ನಿನ್ನ ಅಳು ಕಂಡು!!
ಆ ಬಾನ ಮುಟ್ಟಿತೀಗ
ಈ ತಾಯ ಜೋಲಿ ರಾಗ
ಕಂದಮ್ಮ.... ಕೂಸು ಕಂದಮ್ಮ!!
ಕನಸೀನ ಅಂಚಿನಲ್ಲಿ
ನಾ ಹಾಡುವಾಗ ಲಾಲಿ
ನಿದಿರೆಯ ಲೋಕದಲ್ಲಿ
ನಿನಗಾಗಿ ಒಂದು ಜೋಲಿ
ಹಿತವಾಗಿ ನಿನ್ನ ಸುಖಕಾಗಿ!!
ಕಂದಮ್ಮ ....ಕೂಸು ಕಂದಮ್ಮ
ಜೋಲಿ ಜೋ.... ಸುವ್ವಾಲಿ ಕಂದಮ್ಮ!!
- ಪಿ.ಜಿ.ಜ್ಯೋತಿ
17 Feb 2017, 09:51 am
ಬದುಕಿನ ಕಡಲಲಿ
ಪುಟ್ಟ ಮನಸಿನ ದೋಣಿ!!
ದೋಣಿಯ ಮೇಲೇರಿ
ಕುಳಿತಿರುವಳು ರಾಣಿ!!
ಸಣ್ಣ ಸಣ್ಣ ವಿಷಯಕ್ಕೂ
ಹುಸಿ ಮುನಿಸು!!
ಅಕ್ಕರೆಯ ಪ್ರೀತಿಗೆ ಅದು
ಮಗು ಮನಸು!!
ನಕ್ಕರೆ ಉದುರುವ
ಮುತ್ತುಗಳ ಸೊಗಸು!!
ಕಪ್ಪೆ ಚಿಪ್ಪಿನಲ್ಲಿ
ಅಡಗಿಸಿ ಇರಿಸು!!
ಅಲೆಗಳ ಸೆಳೆತಕೆ
ಅಲುಗಾಡುವ ದೋಣಿ!!
ಹೆದರದೇ ಕುಳಿತಿರು
ನನ್ನ ಮನಸಿನ ರಾಣಿ!!
ಈ ಬದುಕ ಕಡಲಿನ ತುಂಬ
ಕಾಣುತಲಿ ನಿನ್ನ ಬಿಂಬ!!
ಹಾಲು ನೊರೆಯ ಸುರಿದ
ಚಂದ್ರ ಈ ಅಲೆಗಳ ತುಂಬ!!
ಸಣ್ಣ ಸಣ್ಣ ಆಸೆಗಳ ತುಣುಕು
ಬಾನೇರಿ ನೋಡುತಿವೆ ಇಣುಕಿ!!
ಕಡಲಲ್ಲಿ ಹೊಳೆಯುತ್ತಲಿ
ಆ ನಕ್ಷತ್ರಗಳ ಬೆಳಕು!!
- ಪಿ.ಜಿ.ಜ್ಯೋತಿ
17 Feb 2017, 08:08 am