Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಣ್ಣ..

ಕಾಣುವ ಕಣ್ಣುಗಳಿಗೆ ಕತ್ತಲು
ಒಂದೇ ಬಣ್ಣ...
ಕಾಣದ ಮನದೊಳಗೆ ಜಗದ
ನೂರಾರು ಬಣ್ಣ....

- ವಿಧಾತ್ರಿ ಹರಿತಸ್ಯ

17 Feb 2017, 08:06 am

ನೀನಿರದ ಜೀವನ...

ನಾನೆ ಸೃಷ್ಟಿಸಿದ ಸಾಲುಗಳು
ನನ್ನೆ ಕೇಳುತ್ತಿವೆ
ಕಾರಣವ....
ಅವುಗಳೂ ಸಾರಿ ಸಾರಿ
ಹೇಳುತ್ತಿವೆ ನೀನಿರದ
ಬೇಸರವ.....
ಪ್ರತಿಯೊಂದು ಸಾಲುಗಳು
ಪ್ರಶ್ನೆಯೇ,ನಿರೀಕ್ಷಿಸಿದೆ
ಉತ್ತರವ....
ನಾ ಹೇಗೆ ಹೇಳಲಿ ಅವುಗಳಿಗೆ
ನೀ ಬರಲಾರೆಯೆಂದು
ಸಮಾಧಾನವ.....

- ವಿಧಾತ್ರಿ ಹರಿತಸ್ಯ

17 Feb 2017, 08:04 am

ಸಂಗಮ

ಮೋಡ ಮಳೆಯಾಗಿ ಸುರಿದು
ನೀರು ಅಲೆಯಾಗಿ ಹರಿದು|
ಕೆರೆ-ಕಟ್ಟೆಗಳ ಸರಿದು
ನದಿಯನ್ನು ಸೇರುವುದೇ ಸಂಗಮ||೧||

ಮಳೆಯಾಗಿ ಬಂದ ನೀರು ಅಲೆಯಾಗಿ
ಅಲೆಯಾಗಿ ಬಂದ ನೀರು ಕಳೆಯಾಗಿ|
ಕಳೆ ಹಚ್ಚ-ಹಸಿರ ಬೆಳೆಯಾಗಿ
ಫಸಲು ನೀಡುವುದೇ ಸಂಗಮ||೨||

ಸೂರ್ಯ ಹಗಲು ಹುಟ್ಟಿದರೂ
ಚಂದಿರ ರಾತ್ರಿ ಹುಟ್ಟಿದರೂ|
ಅಮಾವಾಸ್ಯೆ ಚಂದಿರನ ಮರೆಮಾಡಿದರೂ
ಜಗಕೆ ಬೆಳಕು ಇರ್ವರ ಸಂಗಮ||೩||

ಸಮುದ್ರ ವಿಶಾಲವಾಗಿದ್ದರೂ
ದ್ವೀಪ ಚಿಕ್ಕದಾಗಿದ್ದರೂ|
ಕರಾವಳಿ ತೀರ ತಂಪಾಗಿದ್ದರೂ
ಉಪ್ಪು ತನ್ನಲ್ಲಿ ವಿಲೀನವಾಗಿರುವುದೇ ಸಂಗಮ||೪||

ಗಾಳಿಯು ಹಗುರವಾಗಿದ್ದರೂ
ಮಳೆಯನ್ನು ಭುವಿಗೆ ತಂದು|
ಮರ-ಗಿಡ ಹಸಿರಾಗಿಸಿ
ಶುದ್ಧಗಾಳಿಯನ್ನು ನೀಡುವುದೇ ಸಂಗಮ||೫||

ದೇಹಗಳು ಎರಡಾದರೂ
ಮನಸ್ಸು ಒಂದೆಂಬಂತೆ|
ಜೊತೆಯಾಗಿ ಬಾಳಲು ಆಗದಿದ್ದರೂ
ಸತ್ತರೂ ಕಥೆಯಾಗಿ ಉಳಿಯುವುದೇ ಸಂಗಮ||೬||

ದೇಶಗಳು ಎರಡಾದರೂ
ಪ್ರಪಂಚ ಒಂದೆಂಬಂತೆ|
ಏಕತೆಯ ಮನೋಭಾವದಿಂದ
ಎಲ್ಲರೂ ಒಟ್ಟಾಗಿ ಬಾಳುವುದೇ ಸಂಗಮ||೭||

ಕಣ್ಣುಗಳು ಎರಡಾದರೂ
ಕನಸ್ಸು ಒಂದೆಂಬಂತೆ|
ಗುರಿಯೆಡೆಗೆ ಸಾಗಲು
ಮನಸ್ಸು ಮಾಡುವುದೇ ಸಂಗಮ||೮||

ಬೇಡದೆ ಪಡೆದ ವರ ಜನನ
ಬೇಡಿದರೂ ತಪ್ಪದು ಮರಣ|
ಎಷ್ಟು ತಿಳಿದರೂ ತಿಳಿಯದು ಜೀವನ
ಆದರೂ ಜೀವನವು ಸುಖ-ದುಃಖಗಳ ಸಂಗಮ||೯||

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

16 Feb 2017, 08:48 pm

ತಾಯಿ

ಗುಡಿಯ ಮೇಲೆ ಗೋಪುರ ಕಟ್ಟಿ,
ಒಳಗೆ ದೇವರನಿಟ್ಟು ಮತ್ತೇನು ಹುಡುಕತ್ತಲಿರುವೆ...
ತೆರೆದು ನೀ ಒಳಗಣ್ಣ ನೋಡುವ ಮನಮಾಡಿದೊಡೆ, ತಾಯಿಗಿಂತ ಮಿಗಿಲಾದ ದೇವರ ಕಾಣಲು ಸಾಧ್ಯವೇ...
ಎಲ್ಲುಂಟು ಎಲ್ಲಿಲ್ಲ ಎಂದೇಕೆ ಹುಡುಕುವೆ
ಹಡೆದವ್ವನಿಲ್ಲವೇ ಕಣ್ಣೆದುರೇ....
ಸಕಲವು ಅವಳಲ್ಲೆ ನೆಲೆಯಾಗಿ ಇರುವಾಗ
ಮತ್ತೂ ತಡಕಾಡುವುದೇಕೆ...
ಅರಿವಿನ ಗುರುವಾಗಿ ಬದುಕಿಗೆ ನೆರವಾಗಿ ದಾರಿಯ ತೋರುವ ತಾಯಿಯ ಮರೆಯುವುದು ಸರಿಯೇ...

- ನಮಿತ ಗಟ್ಟಿ

16 Feb 2017, 08:14 pm

ಜೀವನ

ಆಯಿತು ಜೀವಿಯ ಉಗಮ
ನಿನ್ನ ಕಡೆಗೆ ಆಗಮನ|
ಆಗುವುದೆಂದೋ ಅದು ನಿರ್ಗಮನ
ಅದರೆಡೆಗೆ ಇರಲಿ ನಿನ್ನಯ ಗಮನ||೧||

ಹುಟ್ಟಿದ ಪ್ರತಿ ಜೀವಿಯ ಉರುಗೋಲು
ನಿನ್ನಿಂದ ತಾನೇ ಸಾಗುವುದು ಈ ಬಾಳು|
ಓ ಬಾಳೇ ನೀ ಕೇಳು
ನಿನ್ನನ್ನೇ ನೀ ಆಳು||೨||

ಅರ್ಥ ಇಲ್ಲದ ಪದವೇ ಜೀವನ
ತಿಳಿದರೆ ಆಗುವುದು ಜನ್ಮ ಪಾವನ|
ನೋವು-ನಲಿವುಗಳ ಸಾಗರ
ಪ್ರೀತಿ-ಪ್ರೇಮದ ಆಗರ||೩||

ಸುಖ-ಸಂತೋಷದ ಅನುರಾಗ
ಇದಕ್ಕಾಗಿ ಮಾಡಲೇ ಬೇಕು ತ್ಯಾಗ|
ಕಳೆದು ಹೋಗುವುದು ಇದು ಬಹುಬೇಗ
ಕಡೆತನಕ ಉಳಿಯದು ಈ ತ್ಯಾಗ||೪||

ಸಾಹಸಕ್ಕೆ ಇಲ್ಲಿ ಜಯವುಂಟು
ಆವೇಶಕ್ಕೆ ಶತೃತ್ವ ನಂಟು|
ಪ್ರೀತಿಗೆ ಇಲ್ಲಿ ಬೆಲೆಯುಂಟು
ನೀತಿಗೆ ಇಲ್ಲಿ ಕಾಲವುಂಟು||೫||

ಎಲ್ಲರ ಜಾತೆಗೂಡುವ ಅನುಬಂಧ
ಇದು ಪ್ರತಿ ಜೀವಿಯ ಬಾಳಿನ ಸಂಬಂಧ|
ಅರಿತರೆ ನಾವು ಈ ಬಂಧ
ನಮ್ಮ ಬಾಳು ಆಗುವುದು ಮಕರಂಧ||೬||

ವ್ಯಕ್ತಿ-ವ್ಯಕ್ತಿಗಳ ಕಲಹಗಳು
ಜನತೆಯ ಯೋಚನಾ ಲಹರಿಗಳು|
ಇರುವೆವು ಹಲವು ಗುರಿಗಳು
ಸಾಧಿಸಲು ಹಲವು ದಾರಿಗಳು||೭||

ಜೀವನವೆಂಬ ಸಾಗರ ಆಗದು ಈಜಲು
ಈಜಲು ಈ ಬಾಳು ಬರೀ ಗೋಜಲು|
ಈಜಲೇ ಬೇಕು ಮುಂದಕ್ಕೆ ಸಾಗಲು
ಸಾಗಲೇ ಬೇಕು ದಡ ಸೇರಲು||೮||

ಉಳಿಯದು ಯಾವುದು ಕೊನೆತನಕ
ಅರಿಯದು ಇದು ನಮ್ಮ ಮನಕ|
ಆಸೆಯೆಂಬುದು ತೀರದ ತವಕ
ಆಶಯವೇ ಬೇಕು ನಮಕ||೯||

ಜೀವನ ಒಂದು ಸಾಗರ
ಬಾಳೇ ಕಣ್ಣೀರಿನ ಆಗರ|
ತುಂಬಿಸಿಕೊಳ್ಳಲು ನಮ್ಮ ಉದರ
ತೋರಲೇ ಬೇಕು ಎಲ್ಲರಿಗೂ ಆದರ||೧೦||

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

16 Feb 2017, 08:03 pm

ಹೃದಯ ಹೇಳದ ಮಾತು

ಕುಲದೊಳಗೆ ಕಲೆಯೊಂದಿಹುದು
ಆ ಕಲೆಯಿಂದ ಕುಲವಾಯಿತೇನೊ...
ನನ್ನ ಎದೆಯೊಳಗೆ ಮನೆಯೊಂದಿಹುದು
ಆ ಮನೆಯೊಳಗೆ ಮಗುವಂದಿದೆಯೇನೊ..

ಆ ಕಂದ ಮನವಾಗಿ ಈ ತಾರೆಯಾಕಂಡು
ಆ ಚುಕ್ಕಿ ಬೇಕೆಂದು ಹೃದಯಕೆ
ಹಠ ಮಾಡಿದೆ...
ಓ ವಲವೆ.... ಈ ಹೃದಯ ಹೇಳದು
ಯಾವೊಂದು ಮಾತನು
ಈ ಕಣ್ಣಲಿ ಕಾಣು ಅದರ
ಕೊರಗನು.....

... ಅಸಿತ...

- ಪಿ ಅನಿ...

16 Feb 2017, 07:08 pm

ತಾಯಿ

ಅವಳು ಎಂದರೆ ನನ್ನ ಪಾಲಿಗೆ ವರ
ಅವಳಿಗಿಲ್ಲ ನನ್ನ ಮೇಲೆ ಪ್ರೀತಿಯಲ್ಲಿ ಬರ
ಫೈಝಾ

- ನನ್ನ ಹೃದಯ

16 Feb 2017, 05:42 pm

ನತದೃಷ್ಟ

ಅಕಾಲಿಕ ಮಳೆಯೂ
ಧೋ ಎಂದ್ಯುಯಬಹುದು,
ಕ್ಲೇಷ ಹೊಂದಿರುವನ ಪಂಜರದಿಂ
ಗಿಳಿಗಳ ಕಿಚಿಪಿಚಿ ಮಾರ್ಧನಿಸಬಹುದು,
ಪಾರಂಗತನೂ
ಒಮ್ಮೊಮ್ಮೆ ಪೆಚ್ಚಾದಾನು,
ಪಳಿಯುಳಿಕೆಗಳಿಂ
ಅಸ್ತಿತ್ವಗಳ ಪರಿಶೋಧಿಸಬಹುದು,
ತಾರೆಯಮೇಲಾಸೀನನಾಗುವ ಬಯಕೆ
ಚಂದ್ರ ಮಂಡಲಕ್ಕೊಯ್ಯಬಹುದು,
ನಿನ್ನೊಪ್ಪಿಗೆಯ ಪಡೆಯಲೊಲ್ಲೆನಾದೆನೇ
ಏಕಾಂತ ಚಂದ್ರಿಕೆಗೆ ಮನಸೋತ
ನತದೃಷ್ಟ....!!!!!

-ಕನ್ನಡದ ಭಕ್ತ

- ಕನ್ನಡದ ಭಕ್ತ

16 Feb 2017, 04:54 pm

ಹೆಣ್ಣೆ ನಿಂದೇನಾ...? ಬದುಕು

ಸಾಗರದ ಆಳದಲಿ ಸಿಗುವ ಮುತ್ತಿನಂತೆ..
ಮನಸ್ಸಿನಾಳದಲಿ ಭಾವನೆಗಳನು ಬೆಳೆಸಿಕೊಂಡೆ..
ಸಾಗುತಿರುವ ಜೀವನದಲಿ ಕಲ್ಲೆಷ್ಟೊ..ಮುಳ್ಳೆಷ್ಟೊ
ಬೆಳಕನು ಬಯಸಿ ಹೊರಟ ಹಾದಿಯಲಿ..
ನೋವೆಷ್ಟೊ.........ನಲಿವೆಷ್ಟೊ......

ಕಾಣದ ಕತ್ತಲಿನ ದಾರಿಯಲಿ ಕಾಲಿಟ್ಟಿರುವೆ..
ಹೊರಟಿಹೆ ನಾ ಬದುಕಲಿ ಬೆಳಕಿನ ಜಾಲ ಅರಸುತ್ತ
ಹುಡುಕಿ ಹುಡುಕಿ ಸೋತು ..
ಹುಡುಕಿ ಹುಡುಕಿ ಸೋತು ..
ಸಿಲುಕಿರುವೆ ಮೋಸದ ಜಾಲದಲಿ..
ಮರಳಿ ಬಾರದೆ ಇರುವೆನು ಈ ಬದುಕಿಗೆ..
ಸುಂದರ ಬದುಕನು ಹುಡುಕಲು ಹೋಗಿ..
ಮಸಣದ ದಾರಿಗೆ ಸಿಲುಕಿಕೊಂಡೆನೇ....?

ನನ್ನನ್ನು ಈ ನರಕಕ್ಕೆ ತಳ್ಳಿ ನಲಿವ ಮನಸ್ಸುಗಳಿಗೆ..
ನಾನೊಂದು ಹೆಣ್ಣೆಂಬುದು ತಿಳಿಯದಾಗಿದೆ..
ಸತ್ತ ಮೇಲೆ ಮಣ್ಣಾಗೊ ಈ ದೇಹಕ್ಕೆ ..
ನರ ರಾಕ್ಷಸರಂತೆ ಕಾದಿವೆ ಕಾಮುಕ ಕಣ್ಣುಗಳು..
ಬೇಕೇ.....ಹೆಣ್ಣಿನ ಜನ್ಮ ...?
ಬೇಕೆಂದು ಬಯಸಿದರು ಬಾರದಿರಲಿ ಈ ಕಷ್ಟ..
ಬಯಸಿದ ಹೆಣ್ಣು ತಾಯಾಗಲಿ, ತಂಗಿಯಾಗಲಿ..
ಅಕ್ಕಾಗಲಿ, ಮಗಳಾಗಲಿ...........ಆದರೆ......
ಕಿತ್ತು ತಿನ್ನುವ ಹಣ್ಣಾಗದಿರಲಿ.......

- B.Shree

16 Feb 2017, 03:22 pm

ಕರುನಾಡ ಮುತ್ತು

ಕಗ್ಗತ್ತಲಲ್ಲಿ ಜನಿಸಿ
ಸ್ವ-ಪ್ರತಿಭೆಯಿಂದ ಬೆಳಕು ಕಂಡು|
ಹಾಡಿ ಕುಣಿದ ಎಲ್ಲರ ಮನವ ತಣಿಸಿ
ಜನತೆಗೆ ಬೆಳಕು ನೀಡಿದ ತಾನು ಕತ್ತಲನ್ನು ಉಂಡು||೧||

ನಾಟಕಕಾರನಾಗಿ ಜನಮನ ಗೆದ್ದ
ನಟನಾಗಿ ಜನರಿಂದ ಮೇಲೆದ್ದ|
ಮಾಡಿದನು ಮಯೂರ ನರ್ತನೆ
ಜನಪ್ರಿಯಗೊಳಿಸಿ ಸಿರಿಗನ್ನಡದ ಕೀರ್ತನೆ||೨||

ಮೊಗ್ಗಾಗಿ ಉದಯಿಸಿ ಹೂವಾಗಿ ಅರಳಿ
ಕನ್ನಡಾಂಬೆಯ ಕೊರಳಿಗೆ ಪುಷ್ಪಮಾಲೆಯಾಗಿ ಮೆರೆದ|
ನಟನಾಗಿ ಕುಣಿದು ಕೋಗಿಲೆಯಾಗಿ ಜನಮನ ತಣಿದು
ಕನ್ನಡಾಂಬೆಯಲ್ಲಿ ಲೀನನಾಗಿ ನಮ್ಮಿಂದ ದೂರ ಸರಿದ||೩||

ಆಗಿಲ್ಲ ಇವ ಸಾಕ್ಷರ
ಆದರೂ ಚರಿತ್ರೆ ಪುಟದಲ್ಲಿ ಇವ ಸುವರ್ಣಾಕ್ಷರ|
ಜನಮನದಿಂದ ಆಗನು ನಶ್ವರ
ಕರುನಾಡ ಪಾಲಿಗೆ ಇವನೇ ಈಶ್ವರ||೪||

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

16 Feb 2017, 08:32 am