ಪ್ರೀತಿಯ ಅಲೆಯಲಿ
ತೇಲುವ ಆಸೆಯಾಗಿದೆ ಗೆಳೆಯ,
ಕೈ ಬಿಡಬೇಡ ನನ್ನ ಕೊನೆ ಉಸಿರಿರುವ ತನಕ..
ಪ್ರೀತಿ ಬೇಕು ಮನಕೆ,
ಪ್ರೀತಿಸುವ ಹೃದಯ ಬೇಕು ಜೀವಕೆ..
ಎಂಥ ಮಾಯೆ ಈ ಪ್ರೀತಿಯು,
ಒಲಿದವರಿಗೆ ಮಾತ್ರ ಸಿಗುವುದು
ಸಮಾಧಾನ ತೃಪ್ತಿಯು..
ಕಾದಿದೆ ಮನ ನಿನಗಾಗಿ
ಬಳಲಿದ ಬದುಕಿಗೆ ಬಾ ತಂಗಾಳಿಯಾಗಿ..
ಹೀಗೆಂದು ಆಗುತ್ತದೆಂದು ತಿಳಿದಿರಲಿಲ್ಲ
ನಾನೇಕೆ ಹೀಗಾದೆ..
ಕಾಯುವಿಕೆಯು ನನ್ನಲ್ಲೂ ಇರುವುದೇ.....??
ಪ್ರೀತಿ ಇರದೆ ಸ್ನೇಹ ಬರುವುದೇ...??
ಕನಸಿನ ಕನವರಿಕೆಗೆ ಕಾರಣ ನೀನು
ಮನಸಿನ ಮಾತಿಗೆ ಮಂದಾರ ನೀನು
ಕಾಲ ಕಳೆಯುವುದು ಬೇಡವೆಂದರೂ..
ನಿನ್ನ ಜೊತೆಗಿರುವೆ ನಾ ಎಲ್ಲಿದ್ದರೂ..
ನಿನ್ನ ಮನದಲ್ಲೊಂದು ಪುಟ್ಟ ಜಾಗ ಕೊಡು ನನಗೆ..
ನಾ ಅಲ್ಲೆ ಬಂಧಿಯಾಗುವೆ ಬೆಚ್ಚಗೆ...
ನಿದಿರೆಯಲಿ ಕಾಡುವೆ ಏಕೆ ನೀರೆ
ಕಣ್ಣೆದುರಿದ್ದರು ಯಾಕೀ ಮೌನ ಒಲವೆ...??
ಬೇಡವಾಯಿತೆ ನನ್ನೀ ಪ್ರೀತಿ
ಬದುಕಲಾರೆ ನಿನ್ನ ರೀತಿ
ಹೇಗಿರುವೆ ನೀನು ನನ್ನನಗಲಿ
ಕಲಿಸಿಕೊಡು ನೀನಿರುವ ಪರಿ
ಮನಬಿಚ್ಚಿ ಮಾತಾಡು ಒಮ್ಮೆ
ಅಪ್ಪುಗೆಯಲಿ ಬಂಧಿಸುವೆ ಸುಮ್ಮನೆ
ಸಾಕು ಗೆಳತಿ ಈ ದೂರ
ನೀ ಬೇಕು ಇನ್ನೂ ಹತ್ತಿರ
ನನ್ನ ಮನದ ದೇವತೆ ನೀನು
ಕಾಯುವೆ ಪ್ರತಿ ಜನುಮ ನಾನು...
ಹಣೆಬರಹಕ್ಕೆ ಹೊಣೆ ಯಾರು...?? ಆತನು ಆಡಿಸಿದಂತೆ ಆಡುವ ಗೊಂಬೆಗಳು.. ಇದ್ದ ಷ್ಟು ದಿನ ಇರುವವರ ಜೊತೆಗೆ ನಗು ಮೊಗದಿಂದ ಬದುಕುವುದೇ ಜೀವನ ಆಗಿದೆ... ಮನದೊಳಗಿನ ಸಂತಸದ ದಿನಗಳು ದೂರವಾಗಿವೆ ಎಲ್ಲೋ ಮರೆತು... ಕಣ್ಮುಚ್ಚಿ ಕರೆದರೂ ಬಾರದ ಲೋಕಕ್ಕೆ ಜಾರಿವೆ ನೆನಪುಗಳು... ಮತ್ತೆ ಮತ್ತೆ ನೋಡುವ ಆಸೆ ನಿನ್ನ ಮೊಗದಲ್ಲಿನ ನಗುವನ್ನು.. ಮತ್ತೊಂದು ಬಾರಿ ಕೂಗಿ ಹೇಳುವೆ ನೀ ನಡೆವ ದಾರಿಯಲ್ಲಿ ,ನಿನ್ನೆಲ್ಲ ನೆನಪುಗಳನ್ನು ಮೆಲುಕಿಸುತ್ತ....
-- ಶ್ಯಾನು...