Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೆಣ್ಣು ಸಮಾಜದ ಕಣ್ಣು

ಹೆಣ್ಣು ಇವಳು
ನಮ್ಮ ಸಮಾಜದ ಕಣ್ಣು ಇವಳು|
ಹೆಣ್ಣಿಂದಲೆ ನಮ್ಮ ಸಮಾಜದ ನೋಟ
ಹೆಣ್ಣಿಲ್ಲದಿದ್ದರೆ ಈ ಸಮಾಜ ಬರಿಯ ಬೆಡಗು||೧||

ಹೆಣ್ಣು ಇವಳು
ಮನುಕುಲದ ತಾಯಿ ಇವಳು|
ಹೆಣ್ಣಿಂದಲೆ ನಮ್ಮ ಈ ಜನ್ಮ
ಹೆಣ್ಣಿಲ್ಲದಿದ್ದರೆ ಇನ್ನಿಲ್ಲ ಈ ಮನುಜ ಮತ||೨||

ಹೆಣ್ಣು ಇವಳು
ಸಂಸಾರ ಸಾಗರದ ಪ್ರತಿಬಿಂಬ ಇವಳು|
ಹೆಣ್ಣಿಂದಲೆ ನಮ್ಮ ಈ ಸಮಾಜಕ್ಕೆ ಬೆಳಕು
ಹೆಣ್ಣಿಲ್ಲದಿದ್ದರೆ ಈ ಸಮಾಜ ಬರಿಯ ಕತ್ತಲು||೩||

ಹೆಣ್ಣು ಇವಳು
ಗಂಡಿಗೆ ಆಗುವಳು ದಾರಿ ದೀಪ|
ಹೆಣ್ಣಿಂದಲೆ ಗಂಡಿನ ಯಶಸ್ಸಿನ ಸಾಧನೆ
ಹೆಣ್ಣಿಲ್ಲದಿದ್ದರೆ ಇಲ್ಲ ಈ ಗಂಡಿನ ಅಭಿವೃದ್ಧಿ||೪||

ಹೆಣ್ಣು ಇವಳು
ದೇಶದ ಅಭಿವೃದ್ಧಿಯ ಪ್ರತೀಕ ಇವಳು|
ಹೆಣ್ಣಿಂದಲೆ ಈ ದೇಶದ ಪ್ರಗತಿಯ ಪಥ
ಹೆಣ್ಣಿಲ್ಲದಿದ್ದರೆ ಸಾಗದು ಈ ವಿಶ್ವಪಥ||೫||

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

16 Feb 2017, 08:11 am

ನಿನ್ನ ನೆನಪು

ಕರಗಿಹೋಗಿದೆ ಮನಸು
ಮುಂಜನೇ ಮಂಜನ್ನು ನೋಡಿ
ತoಪಾಗಿದೆ ಹೃದಯ ನಿನ್ನ
ನಗುವನ್ನು ನೆನೆದು.

ರವಿಯ ಆಗಮನ ತಡವಾಗ
ಬಹುದು .ಆದರೆ ನಿನ್ನ
ನೆನಪು ಮಾತ್ರ ಎಂದಿಗೂ
ತಡವಾಗುವುದುದಿಲ್ಲ.

ಏಕೇಂದರೆ ಅದುವೇ
ನನ್ನ ಪ್ರಪಂಚವಲ್ಲ........!!!!!!!

- ಚುಕ್ಕಿ

16 Feb 2017, 07:31 am

ಕೊನೆಯ ಕವನವಿದು....

ದೂರವಾದರೂ ನೆನಪು ಮಾಸುತ್ತಿಲ್ಲ
ಕಂಡರೂ ಮಾತನಾಡುವ ಹಾಗಿಲ್ಲ ..
ಭಾವನೆಗಳಿಗೆ ಇಲ್ಲಿ ಯಾವ ಸಂಬಂಧನೂ ಇಲ್ಲ ...
ದಾರಿ ಕಾಯುವುದು ಮರೆತಿಲ್ಲ ...
ಮತ್ತೆ ಬರುವ ಭರವಸೆ ಇಲ್ಲ ...
ನಿತ್ಯ ನಿನ್ನ ನೆನೆಯುದು ತಪ್ಪಿಲ್ಲ ...

- ನಮಿತ ಗಟ್ಟಿ

15 Feb 2017, 10:42 pm

ನನ್ನ ಕವಿ ರೂಪ

ಮರೆಯಾದೆನು ರವಿಯಾಗಿ
ಈ ಲೋಕದ ದೃಷ್ಟಿಯಲಿ
ಉದಯಿಸಿದೆನು ಕವಿಯಾಗಿ
ಈ ಪ್ರೀತಿಯ ಸೃಷ್ಟಿಯಲಿ.

- ಕೆ.ಕೆ.ನಂದಾದೀಪ್(ಕೋಲಾರದ ಕಂದ)

15 Feb 2017, 10:26 pm

ಅಳು

ಮನಸಿಂದು ತುoಬ ಅಳುತಿದೆ
ಮೇಲೆ ಮಾತ್ರ ನಗುತ್ತಿರುವೆ
ಎಲ್ಲಾರನ್ನೂ ನಗಿಸಲು .
ಒಳಗೆ ಪ್ರತಿ ಕ್ಷಣ ಸಾಯುತ್ತಿರುವೆ
ನನ್ನ ನೋವು ಮರೇಯಲು .

- ಚುಕ್ಕಿ

15 Feb 2017, 10:16 pm

ಬ್ರಹ್ಮ ಗಿಚಿದ ಹೆಸರ...

ಸುಮ್ಮ ಸುಮ್ಮನೆ ಹಿಂದೆ ಬರುತ್ತಿಲ್ಲ ನಾ
ಬ್ರಹ್ಮ ಗಿಚಿದ ಹಣೆಯಲ್ಲಿ ನಿನ್ನ ಹೆಸರನ್ನ
ನಿನ್ನ ನೋಡಲೇ ಬಾರದೆಂದು ಹೊರಟೆ ನಾ
ಕಣ್ಣು ಹಾಯುವವರೆಗೂ ಕಂಡೆ ನಿನ್ನ ನಾ. /

ಪ್ರೀತಿ ಪ್ರೇಮದ ವಿಷಯ ಅರಿಯೆನು
ನಿನ್ನ ಕಂಡಾಗಿನಿಂದ, ನನ್ನನ್ನೇ ಮರೆತೇ ನಾ
ಹುಡುಕುತಿದೆ ಮನಸು ಎಲ್ಲಡೆ ನಿನ್ನ
ಮಾತು ಕೇಳದ ಮನಸು ಕೂಗುತಿದೆ ನಿನ್ನ /

ಪ್ರೀತಿಸಿ, ಅಳಿಸುವ ಜಾಯಮಾನ ನನ್ನದಲ್ಲ
ನಗುವ ಚೆಲ್ಲು ಒಮ್ಮೆ, ಹೃದಯ ಕಳಚಿ ಕೊಡುವೆನಾ
ನಿನ್ನ ನೋಯಿಸುವ ಅಸೆ ಕಿಂಚಿತ್ತು ನನಗಿಲ್ಲ
ನೀ ಇಲ್ಲದ ಜಗದಲಿ ಬದುಕುವ ಅಸೆ ನನಗಿಲ್ಲ/

ಪ್ರೀತಿಯ ಕಿಚ್ಚು ಎದೆಯೂಳಗೆ, ಹುಚ್ಚು ಮನದೊಳಗೆ
ನೀ ಹೀಗೆ ಕಾಡುತ ಕಾಯಿಸುವೆ ಎಲ್ಲಿಯವರೆಗೆ
ಬ್ರಹ್ಮ ಬರೆದಿರುವ ನನ್ನ ಹೆಸರ ನಿನ್ನೊಳಗೆ
ಕಾಯುವೆ ನಿನಗಾಗಿ, ನೀ ಬರುವೆ ಕುಣಿಯುತ ನನ್ನ ಮನೆಗೆ. /

- ಕುಮಾರ ಸಿದ್ದರಾಜ

15 Feb 2017, 08:53 pm

ನಕ್ಷತ್ರದ ಕಣ್ಣುಗಳು

ನಕ್ಷತ್ರದ ಕಣ್ಣುಗಳವು ನನ್ನ
ಮನಸನ್ನು ಕ್ಷಣದಲ್ಲೇ ಕದ್ದವು .
ಸಾವಿರಾರು ಮಾತು ಬೇಕಿಲ್ಲ
ಅವಳ ಒಂದು ನೋಟ ಸಾಕಲ್ಲ .

ಆ ಕನ್ನಿನಲ್ಲಿನ ಮಿಂಚು
ಕನಸಲ್ಲೂ ಕಂಡಿಲ್ಲ .
ನೋಡುತಿರು ನೀನು ನನ್ನನು
ನನ್ನ ಕಡೆಯ ಕ್ಷಣದವೆರೆಗೂ .

ತೋರಿಸದಿರು ನಿನ್ನ ಕಣ್ಣೀರು
ನನ್ನ ಹ್ರುದಯಕ್ಕೇ .
ತಡೆಯಲಾರೇ ನಾನು ನಿನ್ನ
ದುಃಖವ ನೋಡಿ ಆ ನಾಜೂಕು ನಯನದಲ್ಲಿ...!!!

- ಚುಕ್ಕಿ

15 Feb 2017, 07:56 pm

ಪ್ರೀತಿ ಮಾಯೆ ಹುಷಾರು

ಸಂಜೆಯ ಸಮಯವದು
ಸಮುದ್ರದ ದಡವದು|
ನನ್ನ ನಿರೀಕ್ಷೆಯು ಅವಳಿಗದು
ಕ್ಷಣಗಳೆಲ್ಲಾ ಹತ್ತಾರು ಯುಗವದು||

ತಡೆಯಲಾಗದೆ ಆತುರ
ಹಲ್ಲಿನ ತುದಿ ಸೇರಿತ್ತು ನನ್ನ ನಖ|
ಅಂತೂ ದೂರದಿಂದಲೇ
ಕಂಡಿತು ಅವಳ ಮುಖ||

ಇಂದುಮುಖಿಯಾಗಿ ಬಂದವಳು
ಹೇಳಿದ್ದು ಒಂದೇ ಮಾತು|
ಮರೆತು ಬಿಡು ನನ್ನನ್ನು
ನಾನಿನ್ನು ಬೇರೆಯವನ ಸ್ವತ್ತು||

ಪ್ರತ್ಯುತ್ತರಕ್ಕೂ ಕಾಯದೇ
ಹೊರಟುಬಿಟ್ಟಳವಳು ಅಲ್ಲಿಂದ|
ಅಷ್ಟು ಸುಲಭದ ಮಾತಲ್ಲ
ತೆಗೆದುಹಾಕುವುದು ಅವಳನ್ನು ಹೃದಯದಿಂದ||

ಅವಳ ಮಾತನು ಕೇಳಿ
ತಾಕುವ ಮುನ್ನವೇ ಕಣ್ಣೀರು ನನ್ನ ಗಲ್ಲವ|
ಅವಸರಿಸಿ ಆಗಸವೇ
ಸುರಿಸಿತು ಕಂಬನಿ ತೋರುತ ಅನುಕಂಪವ||

ನಿಂತಂತಾಗಿ ಹೃದಯ
ಬದಲಿಗೆ ನಿಲ್ಲಿಸಿತು ಮಳೆಯ|
ಮೋಡಗಳ ಮರೆಯಿಂದ
ಮತ್ತೆ ಕಂಡ ಸಂಜೆಯ ಸೂರ್ಯ||

ನನ್ನ ಮನಸಿನ ಏರಿಳಿತವನ್ನು
ಅನುಕರಿಸಿತು ಸಾಗರದ ಅಲೆಗಳು|
ನನ್ನ ಆಳದೆದೆಯ ನೋವು
ಸೂರ್ಯನ ಸೇರಿ ಕೆಂಪಾದವು ಕಿರಣಗಳು||

ಮುಳುಗುವ ಸೂರ್ಯನಲ್ಲಿ ಕಾಣುತ್ತಿತ್ತು
ಅತೀವ ನೋವಿನ ವಿಷಾದ|
ಅಬ್ಬರದ ಅಲೆಗಳಲ್ಲಿ ಕೇಳುತ್ತಿತ್ತು
ಕಿವಿಗಡಚಿಕ್ಕುವ ಸಾವಿನ ನಿನಾದ||

ನನ್ನೆಲ್ಲಾ ಕನಸುಗಳು ಕರಗಿತು
ಮಂಜುಗಡ್ಡೆಯಂತೆ|
ನನ್ನೆಲ್ಲಾ ಆಸೆಗಳಿಗೆ ಕಿಡಿತಾಕಿ
ಉರಿಯಿತು ದಹಾವಾಲಿನಂತೆ||

ಪಶ್ಚಿಮದಂಚಿನಲ್ಲಿ ಬೆಳಕು
ಕಣೆಯಾಗಿ ಸೂರ್ಯನ ನುಂಗಿತು ಸಾಗರ|
ಆಗಸದಂಚಿನಲ್ಲಿ ಚಂದ್ರನು
ಉದಯಿಸಿ ಆಗಸವಾಯ್ತು ಬೆಳದಿಂಗಳ ಆಗರ||

ಇರುಳೆಂದರೆ ಬರೀ ಕತ್ತಲಲ್ಲ ಅಲ್ಲೂ ಬೆಳಕಿದೆ
ಎಂದು ತಿಳಿಯಿತು ಇಳಿದಾಗ ಪ್ರೀತಿ ಅಮಲು|
ಎಲ್ಲೇ ಇರಲಿ ಯಾರ ಜೊತೆಯೇ ಇರಲಿ
ಸುಖವಾಗಿ ಇರಲಿ ಎಂದೆಂದಿಗೂ ಅವಳು||

- ಅಕವಿ

15 Feb 2017, 05:58 pm

ಕಾರಣವೆನು

ಹಿಮಬಿಂದು ಒಂದು
ಕಾದು ಕುಳಿತಿದೆ
ಕಣ್ಣಂಚಲಿ ಜಾರಲು
ಕಾರಣವೇನು?

ಮನಸು ಮೌನವಾಗಿದೆ
ಮೌನದ ಹಿಂದೆ
ದುಗುಡ ತುಂಬಿದೆ
ಕಾರಣವೇನು?

ತುಟಿಯಂಚಲಿ ನಗುವಿದೆ
ನಗುವಲಿ ನೋವಿದೆ
ಆ ನೋವಿಗೆ
ಕಾರಣವೆನು?

ಹೃದಯ ಭಾರವಾಗಿದೆ
ಮುಖದಲಿ ಅದರ
ಸೂಚನೆಯಿದೆ
ಕಾರಣವೇನು?

ಪ್ರೀತಿಯಿಂದಲೇ ಜಗವು
ಪ್ರೀತಿಸಿದರೆ ಜೊತೆ ನಿಲ್ಲದ ಜಗವು
ಸೋಲು ಗೆಲುವಿನ ಪಯಣದಲ್ಲಿ
ಸೋಲು ಶಾಶ್ವ್ ತವಲ್ಲ ಗೆಳತಿ
ಜೊತೆಗಿರಲು ನಾನು, ನೀನೇಕೆ ಹೆದರುತಿ
ಇನ್ನಾದರೂ ನೀ ನಗಬಾರದೆ
ನನ್ನ ಬಾಳ ಒಡತಿ !

- ಕುಮಾರ ಸಿದ್ದರಾಜ

15 Feb 2017, 05:24 pm

ಪ್ರೀತಿ....ಜಾತಿ

ಪ್ರೀತಿ ಬನದಲಿ ಅರಳಿದ ಹೃದಯಗಳು
ನೋವು ನಲಿವು, ಸುಖ ದುಃಖದ ಭಾಗಿಗಳು
ಪ್ರೀತಿ ಒಂದೇ......ಪ್ರೀತಿಗೆ ಜಾತಿ ಒಂದೇ.....
ಹೃದಯದ ಮನೆಯಲ್ಲಿ..
ಭಾವನೆಗಳ ಮನಸ್ಸುಂಟು...
ಮನಸ್ಸೆಂಬ ಬದುಕಲ್ಲಿ...
ನೂರಾರು ಕನಸ್ಸುಂಟು...
ಈ ಕನಸ್ಸಿನ ಕೊಲೆಯಾಗಲು ಜಾತಿ ಬೇಕೆ?

ಪ್ರೀತಿಯ ಕಾಪಾಡಿ ಜಾತಿಯ ಹೊಡೆದೂಡಿ
ಹೃದಯವನು ಬಲ್ಲೋರೆ ಮನುಜರಮ್ಮ
ಪ್ರೀತಿ ಪ್ರೇಮದಡಿ...
ಬೇಡ ಜಾತಿ ಕಿಡಿ...
ಮನಸ್ಸುಗಳು ನಲಿದಾಗ...
ನೀವೆ ಧನ್ಯ ನೋಡಿ...
ಎಲ್ಲ ಪ್ರೇಮಿಗಳು ಸಾರುವುದೊಂದೆ
ಪ್ರೀತಿ ಒಂದೇ......ಪ್ರೀತಿಗೆ ಜಾತಿ ಒಂದೇ

ಒಲವಿನ ಸಂಬಂಧ ಅಕ್ಕರೆ ಅನುಬಂಧ
ಪ್ರೀತಿಯ ಗೂಡಿನಲಿ ಈ ಬಂಧನ ಉಂಟು
ದ್ವೇಷ ಬೇಡ...
ಜಾತಿ ಬೇಡ...
ಪ್ರಾಣಕ್ಕಿಂತಲೂ ಹೆಚ್ಚು...
ಈ ಹೃದಯಕೆ ಪ್ರೀತಿ ಹುಚ್ಚು...
ಬನ್ನಿ ಪ್ರೀತಿ ಉಳಿಸೋಣ
ಪ್ರೀತಿ ಒಂದೇ........ಪ್ರೀತಿಗೆ ಜಾತಿ ಒಂದೇ

- B.Shree

15 Feb 2017, 05:12 pm