ಬರೆದಿಟ್ಟ ಕವನ ನೂರು
ಕವನಕೆ ಉಸಿರೇ ನೀನು
ಮೌನದ ಪ್ರಶ್ನೆ ಸಾಕಿನ್ನು
ಉತ್ತರಕೆ ಕಾದಿರುವೆ ನಾನು
ಮನವೇ ಓ ಮನವೇ
ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ
ಈ ಜೀವ ನಿಂತಿದೆ ನಿನ್ನ ಹೆಸರಲಿ
ನೀನಿಲ್ಲದೆ ನನ್ನ ಉಸಿರೇ ಇಲ್ಲ ಕಣೆ
ನಿನ್ನ ಜ್ಞಾನದಲ್ಲೇ ಆಗುವುದು ಬೆಳಕು...
ನಿನ್ನ ನೆನಪಲ್ಲೇ ಕಳೆಯುವುದು ಇರುಳು...
ನಿನ್ನದೆ ಜ್ಞಾನ, ನಿನ್ನದೆ ನೆನಪು...
ನಿನ್ನ ಒಂದು ಮಾತಿಗೆ
ಮಿಡಿಯುವುದು ನನ್ನ ಹೃದಯ ...
ನೀನಿದ್ದರೆ ನನ್ನ ಜೀವನ...
ನೀನಿಲ್ಲದಿದ್ದರೆ ಬರಿ ಮೌನ....
ಮಮತೆಗೆ ಬೇಕು ಹೆಣ್ಣು ತಾಯಿಯಾಗಿ
ಪ್ರೀತಿಗೆ ಬೇಕು ಹೆಣ್ಣು
ಮಡದಿಯಾಗಿ
ಕರುಣಿಗೆ ಬೇಕು ಹೆಣ್ಣು
ಅಕ್ಕ ,ತಂಗಿಯಾಗಿ
ಪ್ರೇಮಕ್ಕೆ ಬೇಕು ಹೆಣ್ಣು
ಪ್ರೇಮಿಯಾಗಿ
ಸ್ನೇಹಕ್ಕೆ ಬೇಕು ಹೆಣ್ಣು
ಸ್ನೇಹಿತೆಯಾಗಿ
ಇದಕ್ಕೆ ವಿಪರ್ಯಾಸವಾಗಿ
ಹೆಣ್ಣು ಏಕೆ ? ಬೇಡ ಮಗಳಾಗಿ .
-ಬಿ .ಸಿ ಬಸವರಾಜ
ಅಪ್ಪನ ಮುದ್ದಿನ ಮಗಳಾದೆ..
ಮಗಳಾಗಿ ಅಪ್ಪನ ಜೊತೆಯಾದೆ..
ಅಕ್ಕರೆ ತೋರುವ ಅಪ್ಪನಿಗೆ..
ಪ್ರೀತಿಯ ಕಾಣಿಕೆ ತಂದಿರುವೆ..
ಅಪ್ಪನೆ ಎಲ್ಲಿರುವೆ?..
ಕಾದಿರುವೆ ನಾನಿಲ್ಲಿ..
ಕಾಣಿಕೆ ಜೊತೆಯಲ್ಲಿ..
ಅಪ್ಪನು ನನಗೆ ತೋರಿಸಿದ..
ಮಮತೆಯು ಎಲ್ಲಿ ಮರೆಯಾಗಿದೆ..
ಆಡಿದ ಆಟ ಪಾಠಗಳು..
ಅಪ್ಪನೆ ನಿನ್ನ ಕರೆಯುತಿದೆ..
ಅಪ್ಪನೆ ನಿನ್ನಯ ತೋಳಿನಲಿ..
ಜಗವನೆ ಮರೆತೆ ನಿನ್ನ ಒಲವಿನಲಿ..
ನೀನುಣಿಸಿದ ಪ್ರೀತಿಯ ತುತ್ತೊಂದನ್ನು..
ಮತ್ತೊಮ್ಮೆ ತಿನ್ನುವ ಆಸೆಯಲಿ..
ಕಾದಿರುವೆ ನಾನಿಲ್ಲಿ....ಅಪ್ಪ
ನಿನ್ನದೆ ನೆನಪಲ್ಲಿ..
ಸುಟ್ಟುಹೋದ ನನ್ನ ಕನಸುಗಳ ಹೊಗೆ ಇನ್ನು ಇದೆ
ಬದುಕುವ ಅಸೆ ಇಲ್ಲದ ದೇಹದಲ್ಲಿ ಉಸಿರು ಇನ್ನು ಇದೆ
ನನ್ನ ಈ ಸ್ಥಿತಿ ನೋಡಿ ಅವಳ ಕಣ್ಣಲ್ಲಿ ಕಂಬನಿ ಜಾರಿದೆ
ಅಂದರೆ ಅವಳ ಮನದ ಮೂಲೆಯಲಿ ನನ್ನ ನೆನಪು ಇನ್ನು ಇದೆ. !
ಹುಟ್ಟಿನಲ್ಲಿ ಸುಖವಿಲ್ಲ, ಬಾಳಲ್ಲಿ ಬೆಲೆಯಿಲ್ಲ..
ಕಟ್ಟಿಕೊಂಡೋನು ನೋವ ಅರಿಯಲಿಲ್ಲ..
ಹುಟ್ಟಿದೋರು ನನ್ನ ಕಡೆ ನೋಡಲಿಲ್ಲ..
ನಾನು ಅಸಹಾಯಕಳಲ್ಲ, ಆದರೂ..
ಕೈಮುಗಿದು ಬೇಡುವೆ, ನನ್ನ ಹೊಟ್ಟೆ ಉರಿಸಬೇಡಿ...