Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಾ ನನ್ನ ಸಂಜೀವಿನಿ

ನಿನ್ನ ಕಂಡಾಗಲೆಲ್ಲ
ನನ್ನ ಹೃದಯದ ಬಡಿತ ಹೆಚ್ಚುವುದು!!
ನಿನ್ನ ನೆನೆದಾಗಲೆಲ್ಲ
ನನ್ನ ಉಸಿರಿನ ಏರಿಳಿತ ಹೆಚ್ಚುವುದು!!

ನೀ ಬಳಿ ಬಂದಾಗಲೆಲ್ಲ
ನನ್ನ ಅದರವದು ತೊದಲುವುದು!!
ನೀ ಸ್ಪರ್ಶಿಸಿದಾಗಲೆಲ್ಲ
ನನ್ನ ತನು ಉಲ್ಲಾಸದಿ ಕುಣಿಯುವುದು!!

ನಿನ್ನ ನುಡಿ ಕೇಳಿ
ನನ್ನ ಮತಿ ಮಂತ್ರ ಮುಗ್ಧ ಆಗುವುದು!!
ನಿನ್ನ ಉಸಿರದು ಸೋಕಿ
ನನ್ನ ಉಸಿರು ಮರು ಜನ್ಮ ಪಡೆಯುವುದು!!

ನೀ ಅಮೃತ ಬಿಂದು
ನನ್ನ ಈ ಪ್ರೀತಿಗೆ ಹೆಸರಾದ ಬಂಧು!!
ನೀ ಬಂದೊಮ್ಮೆ ಎಬ್ಬಿಸು
ನನ್ನ ಬದುಕಿಸು ಬಾ ನನ್ನ ಸಂಜೀವಿನಿ!!

- ಪಿ.ಜಿ.ಜ್ಯೋತಿ

09 Feb 2017, 11:01 am

ಮನಸ್ಸು

ಓ ಮನಸೇ ನಿನ್ನ ಆಸೆಗೆ ತಕ್ಕಂತೆ ಆಡಿಸುತ್ತಿರುವೆ ನನ್ನನ್ನು.
ಕೇಳುವೆಯಾ ಒಮ್ಮೆ ನಿನ್ನ ಪ್ರತಿದ್ವನಿಯನ್ನು.
ಅದು ಸದಾಕಾಲ ವಿಚಲಿತಗೊಂಡು ಸ್ಮರಿಸುತ್ತೆ
ನೀ ತೋರಿದ ದಾರಿಯ ದಿಕ್ಕಿನ ಪ್ರತಿಫಲವನ್ನು.
ಅದೆಷ್ಟೇ ಕಷ್ಟ, ನೋವುಗಳು ಬಂದರು ಮರೆಯೋಲ್ಲ ನೀ ನಡೆಸಿದ ದಾರಿಯ ಪ್ರತಿ ಹೆಜ್ಜೆಯನ್ನು.

- ಚನ್ನಬಸವ ಅಂಗಡಿ

09 Feb 2017, 10:36 am

ಕೋಗಿಲೆ

ಕಾಗೆ ಗೂಡಿಗೆ ಹೋಗಿ
ಕೋಗಿಲೆಯು ಮೊಟ್ಟೆ
ಇಡುವ ಈ ಸೃಷ್ಟಿ
ಕಾಯಕದ ಅರ್ಥ ಏನು!!

ತನ್ನ ಕಂದನ ಸಲಹೋ
ಬಯಕೆಯು ಅದಕಿಲ್ಲ
ಕರುಳ ಕುಡಿ ಎಂಬ
ವ್ಯಾಮೋಹ ಅದಕಿಲ್ಲ!!

ಕಾಗೆ ಗೂಡನು ಅರಸಿ
ಕಪಟದಲಿ ಹೋಗಿ
ಮೊಟ್ಟೆ ಇಡುವ ನಿನ್ನ
ಬಯಕೆ ಎಷ್ಟು ಸರಿಯೇ!!

ತಾಯಿ ಕಾಗೆಯ ಮಡಿಲ
ಕೂಸಾಗಿ ಬೆಳೆದರೂ
ಗುಟುಕಿನ ಪ್ರೀತಿಯ
ತಾ ಮರೆತು ಸಾಗುವದು!!

ಅಭಿಮಾನವೂ ಇಲ್ಲ
ಕೃತಜ್ಞತೆಯು ಇಲ್ಲ
ತಾಯಿ ಎಂಬ ಪ್ರೀತಿಯು
ಕೋಗಿಲೆಗೆ ಇಲ್ಲ!!

ತನ್ನ ಬದುಕಿನ ಸೆಲೆಯ
ಹಾಡಿ ಹೇಳುವ ಕಲೆಯ
ಕಲಿತಿರುವ ಕೋಗಿಲೆಗೆ
ಇದೆಂತ ಶಾಪ!!

ಹರೆಯದ ಪ್ರಣಯದಲಿ
ಫಲಿಸಿದ ವರವನ್ನು ಇಡಲು
ಮತ್ತೆ‌ ಮರಳುವುದು
ಅರಸಿ ಕಾಗೆ ಗೂಡ!!

- ಪಿ.ಜಿ.ಜ್ಯೋತಿ

09 Feb 2017, 09:26 am

ಕಾಣದ ಬದುಕು..

ಕಾಣದ ಬದುಕನು ಬಯಸಿದೆ ಮನ..
ಕಾಣುವೆ ಬದುಕನು ಒಂದು ದಿನ..
ಕಂಡರೂ ಇರಲಾರೆ ನಾ ಅಲ್ಲಿ ಹೆಚ್ಚು ದಿನ..

ಕಾಣದ ಬದುಕಿನ ಸುಂದರ ಕನಸಿನ
ಗೀತೆಯು ಇಂದು ಕೇಳುತಿದೆ....
ತಂಪಾದ ಗಾಳಿಲಿ ಸುಮಧುರ ಹಾಡಿದು
ನನ್ನೆದೆ ಕದವನು ಬಡಿಯುತಿದೆ....
ಎಲ್ಲಿಯದೋ ಕನಸು ಎಲ್ಲಿಯದೋ ಹಾಡು..
ಕಾಣ ಬಲ್ಲೆನೆ ಕಮಾನು....ಒಂದು ದಿನ
ಕೇಳಬಲ್ಲೆನೆ ಗೀತೆಯನು....

ಸಾವಿರ ಕನಸದೂ ಬದುಕಲಿ ಬಂದರೂ
ಒಂದೇ ಜೀವನವಿದೆಯಂತೆ..
ಬಣ್ಣದ ಲೋಕದಿ ಸುಳ್ಳಿನ ಜಾಲದ
ನರಳುವ ಜೀವಿಯು ನಾನಂತೆ....
ಕಣ್ಣೀರಂತೆ.....ಬರಿ ನೋವಂತೆ....
ಕಾಣ ಬಲ್ಲೆನೆ ನಗುವನು....
ಅದರೊಳು ಮರೆಯ ಬಲ್ಲೆನೆ ನೋವನು....

ಬಿಸಿಲ ತಾಪದಲಿ ಬೆಂಕಿ ಜ್ವಾಲೆಯಲಿ
ಬೆಂದಿರುವ ಹೂವು ನಾನು....
ಎಂದಿಗಾದರೂ..
ಮುಗಿಲ ನೋಡುತ ಅರಳಬಲ್ಲೆನೇನು....
ಅರಳಬಹುದೇ ನಾನು..
ಬದುಕಲಿ ಖುಷಿಯಿಂದ ಬಾಳಬಹುದೇ ನಾನು
ಬಾಳಬಹುದೇ ನಾನು..

- B.Shree

09 Feb 2017, 06:09 am

ಸಾವಿನ ಸನಿಹದಲಿ..

ಮನಸ್ಸೆಕೊ ಮೌನವಾಗಿದೆ..
ಭಾವನೆಗಳೆಕೊ ಮರೆಯಾಗಿವೆ..
ಹೃದಯ ಬಡಿತದ ತಾಳ ತಪ್ಪೊಗಿದೆ..
ಏಕೊ ಕಾಣೆ ನಾ.. ಭಯವಾಗುತಿದೆ..
ಯಮನ ಪಾಶ ನನ್ನನ್ನು ಕರೆದಂತೆ ಭಾಸವಾಗುತಿದೆ..
ಶಾಶ್ವತವಾಗಿ ಕಣ್ಮುಚ್ಚುವ ಸಮಯ ಬಂದಿದೆ..
ಈಗಲೂ ಹಟ ಮಾಡುವೆಯಾ?
ನಾ ಗೋರಿಯೊಳಗೆ ಸೆರೆಯಾಗುವ ಮೊದಲೆ
ಬಂದು ನನ್ನನ್ನೊಮ್ಮೆ ಮುದ್ದಿಸು ಗೆಳೆಯಾ..

- B.Shree

08 Feb 2017, 09:46 pm

ಪ್ರೀತಿಯ ಅನುಭವ

ಅಳುವಿನ ಆಚೆಗೆ ಅವಿತಿದೆ ಅನುಭವ
ಅರಿವಿನ ಮಟ್ಟವ ಮುಟ್ಟದ ಅನುಭವ
ಆಘಾತಕ್ಕೆ ಮೆಟ್ಟಿಲ ಕಟ್ಟುವ ಅನುಭವ
ಅದುವೇ ಪ್ರೀತಿಯ ಅನುಭವ
ಇದರಿಂದ ಹೊರಬರುವುದು ಅಸಂಭವ

ಹೃದಯದ ನೋವಿಗೆ ಉಂಟೆ ಕಣ್ಣೀರಿನ ಅಭಾವ
ಕಣ್ಣೀರ ಹಿಡಿದಿಡಲು ಬಿಡುವುದೇ ವಿರಹದ ಕಲರವ
ಈ ಕಣ್ಣೀರಿಗೆ ಕಾರಣ ಭಾವನೆಗಳ ಪರಾಭವ
ಅದುವೇ ಪ್ರೀತಿಯ ಅನುಭವ
ಇದಕೇ ನೋವೇ ಫಲಾನುಭವ.

ಕನಸೇ ಕೆರಳಿಸುತಿರಲು ನಿದ್ರಿಸಲು ಸಾಧ್ಯವ
ನೋವೇ ಮನವಾಳುತಿರಲು ನಗಲು ಸಾಧ್ಯವ
ಹೃದಯವೇ ಎದೆ ಹಿಂಡುತಿರಲು ಬದುಕಲು ಸಾಧ್ಯವ
ಅದುವೇ ಪ್ರೀತಿಯ ಅನುಭವ
ಖುಷಿ ಕ್ಷಣಿಕ ಜೀವನ ಕೃತಕ ನಿತ್ಯ ನರಕ ಇದೇ ಪ್ರೀತಿ ಪ್ರಭಾವ.

ಮರೆಯಲಾಗದ ಮರೆಯಾಗದ ಮತ್ತೆ ಸಿಗದ ಮಧುರ ಪರ್ವ
ಅಡಗಿರುವಂತೆ ಕಾಣುವುದು ಜೀವನದ ಸರ್ವಸ್ವ
ಆದರೆ ಏನು ಇಲ್ಲ ಇದರಲಿ ನೋವಿನ ವಿನಃ
ಅದುವೇ ಪ್ರೀತಿಯ ಅನುಭವ
ಇದರಿಂದ ಸಾವೂ ಸಂಭವ.

ಸನಿಹದಿ ವಿರಸದ ವಿರಹದಿ ಸರಸದ ಭಾವ
ನಗುವಲಿ ಅಳುವಿನ ಅಳುವಲಿ ಸಾವಿನ ಭಾವ
ಉಸಿರು ನಿಂತಂತಹ ಜೀವವು ಸತ್ತಂತಹ ಭಾವ
ಅದುವೇ ಪ್ರೀತಿಯ ಅನುಭವ
ಇದರಿಂದ ನರಳುವುದು ಒಳಜೀವ.

ಸೂರ್ಯನಿಲ್ಲದ ಬೆಳಗು ಜಾವ
ಮುಂಜಾನೆಯಲಿ ಅರಳದ ಹೂವ
ಉಸಿರಾಡದೆ ಬದುಕುವ ಜೀವ
ಅದುವೇ ಪ್ರೀತಿಯ ಅನುಭವ
ಇದೊಂದು ಸಾರವಿಲ್ಲದ ತತ್ವ

- ಅಕವಿ

08 Feb 2017, 09:07 pm

ಕವನ

ಕನಸು ನನಸಾಗಲು ಮಾಡುವೆ ಹರಸಾಹಸ
ನೆನಪು ಬಂದಾಗಲೆಲ್ಲಾ ನೋಡುವೆ ಪಾರಿಜಾತ
ನಿನ್ನು ನನ್ನನು ನೋಡಿದಾಗ ಬರುವದು ಮಂದಹಾಸ

- Ajay

08 Feb 2017, 08:57 pm

ಗಗನ ಕುಸುಮ ನೀನು

ಗಗನ ಕುಸುಮ ನೀನು
ನನ್ನ ಮೆಚ್ಚಿದೆ ಏಕೆ ನೀನು
ಹುಣ್ಣಿಮೆ ರಾತ್ರಿಯ
ಹೊಂಬೆಳುಕು ನೀನು
ನನ್ನಲ್ಲಿ ಏನು ಕಂಡೆ ನೀನು
ಹೂವಿನಂತ ಮೃದುವಾದ ಮನದಲಿ
ಇರಬಹುದು ನೂರಾರು ಆಸೆಗಳು
ನಾನೇನು ಕೊಡಬಲ್ಲೆ ನಿನಗೆ
ಪ್ರೇಮದ ರಥದಲ್ಲಿ ಕುಳಿತಿರುವ ನಿನಗೆ
ಕತ್ತಲೆ ತುಂಬಿದ ನನ್ನ ಜೀವನದಲ್ಲಿ
ನಿನಗೇಕೆ ಆಸಕ್ತಿ ನನ್ನಲ್ಲಿ
ನಿನ್ನಲ್ಲಿದೆ ಅಂದ ಚಂದ
ನಿನ್ನಲ್ಲಿ ನಾ ಕಂಡೆ
ಬೇಲೂರಿನ ಪ್ರತಿಬಿಂಬ
ನಿನ್ನ ಕಂಗಳ ಒಲವಿನ ನೋಟ
ಮನದಲಿ ಕಟ್ಟಿತು ಒಲವಿನ ಮಂದಿರ
ನಿನಗೆ ಅರ್ಪಿತ ನನ್ನ
ಒಲವಿನ ಹೂ ಮಂದಿರ
ನಿನಗೆ ಮೀಸಲು ಗೆಳತಿ
ಈ ನನ್ನ ಜೀವ !

- ಕುಮಾರ ಸಿದ್ದರಾಜ

08 Feb 2017, 08:30 pm

ವಾರಸುದಾರ

ನಿನ್ನ ಹೃದಯ ಖಾಲಿ ಇದೆ
ಎಂದು ನಾ ಬಲ್ಲೆ ಓ ನಲ್ಲೆ
ಆದರೆ ನಾನಲ್ಲ ಬಾಡಿಗೆದಾರ
ನೀ ನನ್ನ ಮೆಚ್ಚಿ ಒಪ್ಪುವದಾದರೆ
ನಾನಾಗುವೆ ಒಲವೆ
ನಿನ್ನ ವಿಶಾಲ ಹೃದಯಕ್ಕೆ
ವಾರಸುದಾರ !

- ಕುಮಾರ ಸಿದ್ದರಾಜ

08 Feb 2017, 08:03 pm

ಭಾವನೆಗಳು

ಭಾವನೆಗಳು
ಅರಳುತ್ತವೆ
ಮಂಜಿಗೆ
ಮಲ್ಲಿಗೆ ಅರಳುವ ಹಾಗೆ !

ಸ್ಪಂದಿಸುವ
ಹೃದಯ
ದೊರೆಯದಿದ್ದಾಗ
ತಾನೇ ಮುದುಡಿಕೊಳ್ಳುತ್ತವೆ
ಸಂಜೆ ಮಲ್ಲಿಗೆ
ಬಾಡವ ಹಾಗೆ !

- ಕುಮಾರ ಸಿದ್ದರಾಜ

08 Feb 2017, 07:46 pm