Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಬಳುವಳಿ

ಹುಣ್ಣಿಮೆ ಚಂದ್ರನು
ಕೊಟ್ಟ ಇರುಳಲಿ
ಬಳುವಳಿಯಾಗಿ ನಿನ್ನನು!!
ಹಗಲಲೂ ಚಂದ್ರ
ಇರುಳಲೂ ಚಂದ್ರ
ದಿನವಿಡೀ ನನ್ನ ಎದುರಲಿ!!

ಅರಳುವ ಹೂವು
ಕೊಟ್ಟಿತು ತನ್ನ ನಗುವನು
ನಿನ್ನ ಮೊಗದಲಿ!!
ನೋವಲೂ ನಗುವು
ನಲಿವಲೂ ನಗುವು
ಸಂತಸ ನಮ್ಮ ಬಾಳಲಿ!!

ಜೇನದು ಸುರಿದು
ಹೋಯಿತು ನಿನ್ನ ಅದರಕೆ
ತಂದು ಮಧುವನು!!
ಕಹಿಯನು ಮರೆಸಿ
ಸಿಹಿಯ ಮಾತಾಡೊ
ಮಧು ನೀ ನನ್ನ ಬದುಕಲಿ!!

- ಪಿ.ಜಿ.ಜ್ಯೋತಿ

13 Feb 2017, 10:08 am

ಮೌನದ ಮಾತು

ಮೌನವಾಗಿ ಇದ್ದ ಮೇಲೆ ಮಾತು
ಮನಸಿನಲ್ಲಿ ಮೂಡಿ ತಾನೇ ಸೋತು
ನಿನ್ನ ಹೆಸರ ಹೇಳೋ ನಿನ್ನ ನೆನಪ
ಹಾಡೋ ಕಾಯಕಕ್ಕೆ ಕೈ ಹಾಕಿದೆ!!

ಮೌನವಾಗಿ ಇದ್ದ ಮೇಲೆ ಮಾತು
ತನಗರಿವಿಲ್ಲದೇ ತಾನೇ
ಅದರದಿಂದ ತಡವರಿಸಿ ಹೊರಚಿಮ್ಮಿ
ನುಡಿಯಾಗ ಬಯಸಿದೆ!!

ಮೌನವಾಗಿ ಇದ್ದ ಮೇಲೆ ಮಾತು
ಸಲ್ಲದ ನೆಪ ಹೂಡಿ ತನ್ನಯ
ಮಿತಿ ಮೀರಿ ವಿಪರೀತ ಬಯಕೆಯಿಂದ
ನಿನ್ನೊಡನೆ ಮಾತಾಡ ಬಯಸಿದೆ!!

- ಪಿ.ಜಿ.ಜ್ಯೋತಿ

13 Feb 2017, 09:43 am

ನಿನ್ನ ನೆನಪು

ಕೋಲ್ ಮಿಂಚು ಬಳಿ ಬಂದು
ಬಯಸಿತು ನನ್ನಯ ಸಲಿಗೆ!!
ಮಿನುಗಿ ಮರೆಯಾದ
ಆ ತಾರೆಗೆ ನಿನ್ನಯ ಹೋಲಿಕೆ!!

ಬಿಡದಿರುವ ಈ ಮೌನ ಗದ್ಗದಿಸಿ
ಕುಳಿತಿದೇ ನನ್ನಯ ಕೊರಳಲಿ!!
ಆಕಾಶ ಗಂಗೆ ಉಕ್ಕಿ ತಾ ಬಂದು
ಹರಿದಿದೆ ನನ್ನ ಈ ಕಣ್ಣಲಿ!!

ಇರುಳ ತಾ ಕಳೆಯ ಬರುವ
ರವಿಗಾಗಿ ಕಾದಿದೆ ಕಂಗಳು!!
ನೋವ ತಂದೆರೆದು ಹೊರಟ ನಿನ್ನ
ಒಲವ ಬಯಕೆ ಈ ಮನದೊಳು!!

ವಿರಹದ ಕಿಡಿಯು ಉರಿದು
ಧಗಧಗಿಸಿ ಸುಡುತಿದೆ ನನ್ನನು!!
ಚಲಿಸುವ ಮೋಡ ಕರಗಿ ಮಳೆಯಾಗಿ
ತೊಳೆಯಲೀ ನೆನಪ ಕೊಳೆಯನು!!

- ಪಿ.ಜಿ.ಜ್ಯೋತಿ

13 Feb 2017, 09:42 am

ಪ್ರೀತಿ..

ಗೆದ್ದ ಪ್ರೀತಿಯಲ್ಲಿ ಕನಸುಗಳಿವೆ...
ಸೋತ ಪ್ರೀತಿಯಲ್ಲಿ ನೆನಪುಗಳಿವೆ...

- ಪಿ ಎಂ ಎಸ್

13 Feb 2017, 07:52 am

ಇದು ಹೃದಯವಲ್ಲ ಎರಡು ಸಾವಿರದ

ನನ್ನ ಹೃದಯವಾಗಿದೆ ಈಗ
ಹೊಸ ಎರಡು ಸಾವಿರದ ನೋಟು.
ಪ್ರೀತಿಯ ಲೇಖನಿ ಹಿಡಿದು ಅದರಲ್ಲಿ
ನಾ ನಿನ್ನ ಹೆಸರನ್ನು ಗೀಚಿಬಿಟ್ಟು.
ಈಗದು ಚಲಾವಣೆ ಆಗೋದೆ
ನನಗೆ ಮಹಾ ಡೌಟು.
ಎಲ್ಲಿಯೇ ನಾ ಅದ ಕೊಡಲು ಹೋದರೂ
ನಿನ್ನೆಡೆಗೆ ತೋರುತಿರುವರು ಅವರ ಬೆಟ್ಟು.
ನನಗೀಗ ತಿಳಿದುಹೋಯ್ತು ಯಾರೂ
ತೆಗೆದುಕೊಳ್ಳುವುದಿಲ್ಲ ಅದನ್ನು ನಿನ್ನ ಬಿಟ್ಟು.
ನೀನೆ ಸ್ವೀಕರಿಸಿ ಸಹಕರಿಸು
ಹೃದಯದ ನೋಟನು ದಯವಿಟ್ಟು.
ತಿರಸ್ಕರಿಸುವುದಾದರೆ ಹೊರಟುಬಿಡು ನೀ
ನನ್ನ ಕಣ್ಮುಂದೆಯೇ ಅದನ್ನು ಜೀವಂತ ಸುಟ್ಟು.

- ಅಕವಿ

12 Feb 2017, 08:39 pm

*ನಿರ್ಲಿಪ್ತ ಭಾವ*

*ನಿರ್ಲಿಪ್ತ ಭಾವ*

ಸತ್ಯದಿ ಮನದ ಭಾವನೆ
ಹೊರಹೊಮ್ಮಿದಾಗ
ಮನವು ಕಲುಕುವುದು
ಸಮುದ್ರದ ಅಲೆ ಉಕ್ಕಿದಂತೆ
ಪ್ರತಿಸ್ಪಂದಿಸಲು ಕ್ಷಣದಿ,

ಸುಳ್ಳದು ದುಖಃದ ಕೊಡಿ
ಒಡೆದು ಝರಿಯಂತೆ
ಉಕ್ಕಿ ಹರಿದರು ಬೀಳುವುದಿಲ್ಲ
ಹನಿ ಕಣ್ಣೀರು ಜಾರಿ
ಎಚ್ಚರ ತಪ್ಪಿಯು ಧರೆಗೆ
ಹೊಂದಿಹೇ ಎಂದಿಲ್ಲದ
ನಿರ್ಲಪ್ತ ಭಾವದಿ. . .

~ ಕನಸು

- Prathap Simha

12 Feb 2017, 05:36 pm

ಪ್ರೇಮಿಗಳ ದಿನ

ಪ್ರೇಮಿಗಳ ದಿನ ಬಂದಿದೆ

ಪ್ರೇಮಿಗಳೀಗೆ ಹರುಷ ತಂದಿದೆ

ಎಲ್ಲರನ್ನು ನಕ್ಕು ನಗಿಸಿದೆ

ಎಲ್ಲರಲ್ಲೂ ಪ್ರೀತಿ ತುಂಬಿದೆ


ಪ್ರೀತಿಯಾಗಿದೆ ಬಾಳಿನ ಕನಸು

ಆಗಲಿ ಎಂದಿಗೂ ನನಸು

ಹಚ್ಚ ಹಸಿರಾಗಿರಲಿ ಸುಮಧುರ ಬಾವನೆಗಳು

ಮರೆಯಲಾಗದಿರಲಿ ಸುಂದರ ನೆನಪುಗಳು

ಅವೇ ನಿಮ್ಮ ನಾಳಿನ ಸಂಗಾತಿಗಳು

ಸುಮಧುರವಾಗಿರಲಿ ನಿಮ್ಮ ನಾಳೆಗಳು


ವಯಸ್ಸು ಇನ್ನೂ ನಿಮ್ಮಲಿ ಹದಿನೆಂಟು

ಆಗಲೇ ಆಸೆಗಳು ಮಾತ್ರ ನೂರೆಂಟು

ವಯಸ್ಸು ಆಸೆಗಳ ನಡುವೆ ಇಲ್ಲ ನಂಟು

ಇನ್ನೂ ಇದೆ ದಿನಗಳು ನೂರೆಂಟು

ಬೀಳಬೇಕಾದರೆ ಮೂರು ಬ್ರಹ್ಮಗಂಟು

ಅಷ್ಠರಲ್ಲಿ ಏನೂ ಮಾಡದಿರಿ ಏಡವಟ್ಟು

- ರಾಜೇಶ್

12 Feb 2017, 04:39 pm

*ನಿಚ್ಚಳ ರೂಪ*

*ನಿಚ್ಚಳ ರೂಪ*

ಹೂದಳವಾಗಲಿ ಹೂವಾಗಲಿ
ಸಾವಿರ ಚೂರುಗಳಾದರೂ
ಮೂಡುವ ಹೂವೊಂದೆ
ಸೂಸುವ ಸುಗಂಧವೂ ಒಂದೇ,

ಪ್ರೀತಿಯೂ ಹಾಗೆನೇ,
ಸಾವಿರ ಬಾರಿ ಸೊಲು ಕಂಡರೂ
ಮತ್ತೊಮ್ಮೆ ಮಗದೊಮ್ಮೆ
ಚಿಗುರೊಡೆದು ಚಿಮ್ಮುವುದು
ಹೊಸ ರೂಪದಲಿ
ಹೊಸ ಹೊಸ ಬಗೆಯಲಿ....

~ ಕನಸು

- Prathap Simha

12 Feb 2017, 01:21 pm

ನಲ್ಲನ ತುಂಟಾಟದಿ......

ಮಾವಿನ ಮರದೊಳು
ಕೋಗಿಲೆ..
ಕೋಗಿಲೆ ಸ್ವರದೊಳು
ಹಾಡಲೆ..
ಮರದಲಿ ಒಂದು..
ಹಣ್ಣಿದೆ..
ಕೆಂಪಾದ ಕೆನ್ನಯ
ಕಚ್ಚಲೆ...
ನಲ್ಲನ ತುಂಟಾಟದಿ
ಒಲವಿದೆ..
ತಪ್ಪಾದಿತು ಎಂಬ
ಭಯವಿದೆ....
ಪಿ ಅನಿ
12-2-17

- ಪಿ ಅನಿ...

12 Feb 2017, 10:58 am

ಯಾರು ನನ್ನವರಲ್ಲಾ..?

ಯಾರನ್ನೆಲ್ಲಾ ನನ್ನವರೆಂದುಕೊಂಡೆನೊ
ಅವರ ಯಾರೂ ನನ್ನವರಲ್ಲಾ..

ನೀರಿನಲ್ಲಿ ಕಾಣೊ ನನ್ನ ಪ್ರತಿಬಿಂಬದ ಹೊರತಾಗಿ
ಬೆನ್ನಹಿಂದೆ ಬರೊ ನನ್ನ ನೆರಳಿನ ಹೊರತಾಗಿ
ಮನಸ್ಸಿನಲ್ಲಿರೊ ನನ್ನ ಭಾವನೆಗಳ ಹೊರತಾಗಿ
ಹೃದಯಲ್ಲಿರೊ ನನ್ನ ಪ್ರೀತಿಯ ಹೊರತಾಗಿ
ಈ ಬದುಕನ್ನು ಜಯಸಬಲ್ಲೆ ಎಂಬ ನನ್ನ ಆತ್ಮವಿಶ್ವಾಸದ ಹೊರತಾಗಿ..
ನನ್ನೊಳಗಿರೊ ಆತ್ಮದ ಹೊರತಾಗಿ..
ಈ ಜಗತ್ತಿನಲ್ಲಿ ಯಾರು ನನ್ನವರಲ್ಲಾ....
ಇವರೆ ನನಗೆಲ್ಲಾ..

ಯಾರನ್ನೆಲ್ಲಾ ನನ್ನವರೆಂದುಕೊಂಡೆನೊ
ಅವರ ಯಾರೂ ನನ್ನವರಲ್ಲಾ..

- B.Shree

12 Feb 2017, 08:22 am