Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಮಾನವೀಯ ಗುಣಗಳಲಿ, ನಲಿದಾಡು
ಕೀರ್ತನೆ, ಪುರಾಣಗಳಲಿ, ನಂಬಿಕೆಯಿಡು
ಪರಿಶುದ್ದ ಮನಸು, ದೇವರಿಗೆ ನೀಡು
ಭಕ್ತಿ ಭಾವದಲಿ ಮೈ ಮರೆತು, ಮನಸಿಗೆ ಶಾಂತಿಕೊಡು. ....
ಲಿಂಗರಜ್. ಬಿ. ಬಡಿಗೇರ್
- lingaraj
05 Feb 2017, 07:33 pm
ಉತ್ತರ ಕರ್ನಾಟಕ, ಗಂಡು ಮೆಟ್ಟಿನ ನಾಡು "
ವೀರ ಮದಕರಿ, ಸಂಗೊಳ್ಳಿ ರಾಯನ ಬೀಡು
ನೆಲ, ಜಲ, ಭಾಷೆಗೆ ಮಾನ್ಯತೆ ಇದೆ ನೋಡು
ಈ ನೆಲದಲಿ, ಜನಿಸಿದ ವೀರ ಕನ್ನಡಿಗರ ಹಾಡು. ....
lingaraj b badiger
- lingaraj
05 Feb 2017, 07:21 pm
ಸಂದರಿಯರಲ್ಲಿ ನೀ ಅತಿ
ಜಗಕೇ ನೀ ಬಾನುಮತಿ
ಆಗುವೆ ನನ್ನ ಬಾಳಿನ ಜ್ಯೋತಿ
ಕೇಳೆಲೇ ನೀ ಕೀರ್ತಿ
- ಕೀರ್ತಿ
05 Feb 2017, 06:33 pm
ಮನಸಿಗೆ - ಬೆಂಬಿಡದ ಪ್ರೀತಿಯ ಮೋಹ..
ಪ್ರೀತಿಗೆ - ಬೆಂಬಿಡದ ವಯಸ್ಸಿನ ಮೋಹ..
ವಯಸ್ಸಿಗೆ - ಬೆಂಬಿಡದ ಕಾಮದ ಮೋಹ..
ಕಾಮಕ್ಕೆ- ಬೆಂಬಿಡಿದ ದೇಹದ ಮೋಹ ...
ದೇಹಕ್ಕೆ - ಬೆಂಬಿಡದ ನೆರಳಿನ ಮೋಹ..
ನೆರಳಿಗೆ- ಬೆಂಬಿಡದ ಕತ್ತಲೆಯ ಮೋಹ..
ಕತ್ತಲೆಗೆ - ಬೆಂಬಿಡದ ಶೂನ್ಯದ ಮೋಹ..
ಶೂನ್ಯಕ್ಕೆ - ಆತ್ಮನಲ್ಲಿ ಲೀನವಾಗುವ ಮೋಹ...
- ವಿಧಾತ್ರಿ ಹರಿತಸ್ಯ
05 Feb 2017, 05:53 pm
ಒಳಗೆಳೆದ ಉಸಿರು
ಸೇರುವ ಮುನ್ನವೇ ಒಡಲ
ಹೊರಬಂದಿದೆ ಸೀಳುತ
ನನ್ನ ಕೊರಳ
ಹೀಗೆಯೇ ಆಗಿದೆ ನಾ
ಉಸಿರಾಡಿದ ಪ್ರತಿಸಲ
ಬಡಿಯುತಿಹ ಹೃದಯ ಮಿಡಿಸುತಲಿದೆ
ಸಾವಿರಾರು ನೆನಪುಗಳ
ಆ ನೆನಪುಗಳೇ ಕೊಡುತಲಿಹುದಿಂದು
ಎನ್ನ ಕಣ್ಣಿಗೆ ಅಶ್ರುಜಲ
ಸುಡುತಲಿಹುದಿಂದು ನಾ ಕಂಡ
ಸವಿಗನಸುಗಳ
ಬಂಧನವ ಬಿಡಿಸಿಕೊಳ್ಳುತ
ಧನಿಯೊಂದು ದಾಟಿದೆ ಕರುಳ
ಹುಡುಕುತ ಹೊರಟಿದೆ
ತನಗಾಸರೆಯಾಗುವ ಮಡಿಲ
ಆದರಿಂದು ಅದರ ಅವಿರತ
ಪ್ರಯತ್ನವಾಗಿದೆ ವಿಫಲ
ನೋವಿನಲೆಗಳು ಏರುತಲೇರುತ
ನನ್ನ ಕಣ್ಣನಾಗಿಸಿದೆ ಕಡಲ
ಆ ಕಡಲೊಳು ತುಂಬಿಹುದು
ವಿರಹದಿ ಮೂಡಿದ ಕಣ್ಣ ಸಲಿಲ
ಆ ಸಲಿಲದ ಕಣಕಣದೊಳು ತುಂಬಿದೆ
ನಿನ್ನ ಸೇರಲಾಗದ ಮನದ ತುಮುಲ
ಬರಿಯ ನಿನ್ನದೇ ನೆನಪುಗಳು
ನನ್ನ ಮನದ ತುಂಬೆಲ್ಲಾ
ನೀ ಬಿಟ್ಟು ಹೋದರು ಬದುಕಿರುವುದಕೆ
ಮೆಚ್ಚಬೇಕಿದೆ ನನ್ನ ಮನೋಬಲ
ಹೊರಗೆ ಬದುಕಿದ್ದರೂ ಒಳಗೆ ಸಾಯುತಿರುವೆ
ಕ್ಷಣವುರುಳಿ ಕ್ಷಣ ಬಂದ ಪ್ರತೀ ಸಲ
ನೀನಿಲ್ಲದ ಈ ಬದುಕು
ತುಂಬಾನೆ ಜಟಿಲ
ಮನದೊಳಗೆ ಇನ್ನೂ ಪ್ರತಿಧ್ವನಿಸುತಿದೆ
ನಿನ್ನ ನಗು ಮಾಡಿ ಹೋದ ಗದ್ದಲ
ಇನ್ನುಳಿದಿರುವುದೂಂದೇ ನನ್ನ ಬಾಳಲಿ
ನಿನ್ನ ಕೊನೆಯ ಬಾರಿ ನೋಡಬೇಕೆನ್ನುವ ಹಂಬಲ
- ನಿರೀಕ್ಷೆಯೆಂಬ ನೌಕೆಯ ನಾವಿಕ ಶಶಿಕಿರಣ
- ಅಕವಿ
05 Feb 2017, 12:49 pm
ದೇಹ ಸೊರಗಿ ಸುಣ್ಣವಾಗುವ ಮೊದಲು
ಸಾವಿನ ಮನೆಯ ಕದತಟ್ಟುವ ಮೊದಲು
ಜೀವನದ ಪ್ರತಿ ಕ್ಷಣಗಳು ನಿರರ್ಥಕವಾಗುವ ಮೊದಲು
ಪರಿತಪಿಸಿ ಪಾಡು ನೀ ಪರೋಪಕಾರದ
ಪರಮೋಚ್ಛ ಮಂತ್ರವನು...
- Irayya Mathad
05 Feb 2017, 11:29 am
ಬರೆಯಬೇಕೆಂದು ಅನಿಸಿದಾಗಲೆಲ್ಲಾ
ಪದಗಳು ಆಡುವುವು ಕಣ್ಣಾಮುಚ್ಚೆ....
ಹಳೆಯದನ್ನೆಲ್ಲಾ ನೆನಸಿಕೊಂಡಾಗ
ಅನಿಸುವುದು ಅಳಿಸಿಬಿಡೆಲಾ ನೆನಪುಗಳ ಹಚ್ಚೆ..!!
- ವಿಧಾತ್ರಿ ಹರಿತಸ್ಯ
05 Feb 2017, 08:10 am
ಬಾಲ್ಯದಲಲ್ಲಿ ಆಟ, ಊಟ, ಪಾಠ
ಯವನದಲ್ಲಿ ತುಂಟಾಟ
ಕೆಲಸಕ್ಕಾಗಿ ಕಾದಾಟ
ನಂತರ ಸಂಸಾರದಲ್ಲಿ ಹಾರಾಟ, ಹೋರಾಟ
ಮುಗಿದಾಗ ಜೀವನದ ಜಂಜಾಟ
ಹೋರಡುವೆವು ಅನಿರೀಷಿತ ಟಾಟ
ಇದೇ ಜೀವನದ ದೊಂಬರಾಟ.....
Vanishree
- Vanishree c p
05 Feb 2017, 01:18 am
ರ
************** ಪದ್ಯಾಣ.
- padyana
04 Feb 2017, 08:21 pm
ಪಾಪಿ ನಕ್ಷತ್ರಗಳು
ಉಲ್ಕೆಗಳಾಗಿ ಉರಿದು
ಭೂಮಿಗಪ್ಪಳಿಸಿ-ಬೂದಿ
ಚೆಲ್ಲಿದರೆ
ಪುಣ್ಯವಂತರು-ಬಣ್ಣದ
ಚುಕ್ಕೆಗಳಾಗಿ-ಹೊಮ್ಮಿ
ಗಗನದಲಿ ಮೂಡಿ
ರಂಗು ಹರಡುತ್ತಾರೆ.
*************
************* ಪದ್ಯಾಣ.
- padyana
04 Feb 2017, 08:10 pm