Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಯಾವಾಗ

ಪ್ರೋಫೈಲ್ ನಲ್ಲಿ ಖಾಲಿ ಇತ್ತು ಜಾಗ
ನಿಮ್ಮ ಫೋಟೊ ಸೇರಿಸಿದಿರಿ ಬೇಗ
ನಾ ಅದನ್ನು ನೋಡಿ ಈಗ
ಕೇಳಿದೆ ನಿಮ್ಮ ನ್ಯೂ ಫೋಟೊ ಹಾಕೋದು ಯಾವಾಗ.

- ಗೌಡ

04 Feb 2017, 06:44 pm

ಪ್ರೀತಿ ನೀನೆಲ್ಲಿರುವೆ...

ಓ ನನ್ನ ಪ್ರೀತಿಯ ಗೆಳೆಯ
ಆಗಬಾರದೆ ನೀ ನಲ್ಮೆಯ ಒಡೆಯ
ಪ್ರತಿ ಕ್ಷಣ ಕಂಡಾಗ ನಿನ್ನ ನಯನ
ಪ್ರೀತಿಯ ಹೊಳೆಯಲ್ಲಿ ತೇಲಾಡಿತು ನನ್ನೀ ಮನ
ನಿನ್ನ ಹೃದಯದೊಳಗೆ ಸೆರಲೆಂದು ನಾ ಬಂದೆ
ಮನನೊಂದು ಕಣ್ಣೀರಿನ ಹೊಳೆಯಲಿ ನಾ ಬಿದ್ದೆ
ನಿನ್ನ ಸೇರೊ ಭರದಲ್ಲಿ ನನ್ನೆ ನಾ ಮರೆತು ಹೋದೆ

- chinmayi

04 Feb 2017, 04:47 pm

ಹಾಗೆ ಸುಮ್ಮನೆ....

ಮಾತು ನಿನ್ನ ಹೊರತು ರುಚಿಸುವುದೇ..
ನೀ ಬಿಟ್ಟು ಅದೆಷ್ಟೋ ಕನಸುಗಳು, ನೆನಪುಗಳು ನನ್ನ ಕೊಂದು ಹಾಕಿತ್ತು..
ನಡೆದ ದಾರಿಗಳು ಕಾಯುವುದು ತಪ್ಪಿಲ್ಲ ..
ನಿನ್ನೆಯ ನೆನಪುಗಳ ಜೊತೆ ನಾಳಿನ ಬದುಕು..
ಪ್ರೀತಿಯ ಆಳ ಅರ್ಥವಾಗುವ ಮುಂಚೆ ಅರ್ಧವಾದ ಬದುಕು..
ಜೊತೆಯಲ್ಲಿ ಇದ್ದಾಗ ನಾಳಿನ ಕಲ್ಪನೆ ಕೂಡ ಇರಲಿಲ್ಲ ..
ಆದರೆ ಇಂದು ಅರಿತೂ ಅರಿಯಾಲಾಗದ ಪರಿಸ್ಥಿತಿ ....
ಬೇಕು ಅನ್ನುವ ಹಾಗಿಲ್ಲ ...ಬೇಕೆಂದರೂ ನೀ ಮತ್ತೆ ಸಿಗುವ ಹಾಗೆ ಕಾಣಿಸುತ್ತಿಲ್ಲ...
ಜೀವನ ಅಂದರೆ ಇಷ್ಟೇನೇ ಅದೊಂದು ಮುಗಿಯದ ಪಯಣದಂತೆ...
ಮುಗಿದ ಹಾಗೆ ಕಂಡರೂ ನಾವು ಮಾತ್ರ ಮುಂದಕ್ಕೆ ಸಾಗಲೇಬೇಕು...

- ನಮಿತ ಗಟ್ಟಿ

04 Feb 2017, 04:24 pm

ಜೊತೆಯಲಿ ನಾನು ನಿನು

ದಾರಿ ಕಾಯುತ್ತಾ ಕುಳಿತ್ತಿದ್ದೇನೆ
ದಾರಿಯ ಮಧ್ಯದಲ್ಲಿ ನಿನಗಾಗಿ
ನೀನು ಬರುವೆಯೆಂದು-ಬೇಗ ಬಾರೆಂದು
ಸುತ್ತಲೂ ತಿಳಿನೀಲಿಯಾಕಾಶ
ಮನದಲ್ಲಿ ನೂರು ಯೋಚನೆಗಳು,ಯಾಚನೆಗಳು;
ಈ ಕ್ಷಣದಲ್ಲಿ ನೀನು ನನ್ನ ಮುಂದಿದ್ದರೆ ಎಂಬ ಆಲೋಚನೆ;
ಎಲ್ಲವೂ ಮನದಲ್ಲಿ ಪುಳಕ ನೀನು ಬರುವೆಯೆಂದು
ತಂಗಾಳಿಯ ಸೌರಭ,ಸಂಜೆಯ ಸೂರ್ಯಕಿರಣಗಳು
ಕಾತರತೆಯ ಜೊತೆಗೆ ವಿರಹವನ್ನೂ ಹೆಚ್ಚಿಸಿದೆ
ಕಾತರತೆಯ ವಿರಹದಲ್ಲಿ ಬೇಯುತ್ತಾ ನಿನಗಾಗಿ ಕಾಯುತ್ತಿದ್ದೇನೆ
ಕಾತರತೆಯಲ್ಲಿಯೇ ನನ್ನ ಸುಖವನ್ನು ಕಾಣುತ್ತಿದ್ದೇನೆ
ಜೀವನ ಮೊದಲಿಗಿಂತಲೂ ಆಸಕ್ತಿದಾಯವಾಗಿದೆ-ಕಾತರತೆಯಿಂದ;
ಕಾಯುವ ಮನಸ್ಥಿತಿಯಲ್ಲಿರುವ ಸುಖ ಕಾಯುವವನಿಗೇ ಗೊತ್ತು;
ಅರಳುವ ಹೂವುಗಳ ಜೊತೆಯಲ್ಲಿ
ಅರಳುತಿರುವ ನನ್ನ ಸುಂದರ ಮನಸು
ಅಂತರಾಳದಲಿ ಹುದುಗಿರುವ
ನೆನಪುಗಳನು ಕೆದಕಿದೆ.
ಅದೆಂದೋ ಆದ ಘಟನೆ
ಕಣ್ಣಂಚಿನಲಿ ನರ್ತಿಸುತ್ತಿದೆ
ಮೂರಗಲ ಮನಸಿನಲಿ
ಊರಗಲ ಕನಸುಗಳ ಹಾಸಿ.
ಅಭಯ ನೀಡಿದವರ ನೆನಪು
ಧೈರ್ಯ ತುಂಬಿದವರ ನೆನಪು
ಸುಮಧುರ ಬಾಂಧವ್ಯ ಬೆಸೆದ
ಸಹೋದರಿಯ ನೆನಪು…
ನಿಟ್ಟುಸಿರಿನಲಿ ಪಟಬಿಚ್ಚಿ ತೇಲುತ್ತಿದೆ.
ಶಾಲೆ, ಕಾಲೇಜಿನಲಿ ಕಳೆದ ಕ್ಷಣಗಳ
ಸವಿನೆನಪು, ಬಾನಂಗಳದಲಿ
ಚಿತ್ತಾರ ಮೂಡಿದಂತೆ ಚಿಗುರೊಡೆದಿದೆ
ಅಕ್ಕರೆಯ ಅಪ್ಪುಗೆಯನು ನೀಡಿ.
ಶಾಂತವಾಗುತ್ತಿದೆ ಮನಸು..ನೆನಪೆಂಬ
ಸಂಕೋಲೆಗಳ ಕೊಂಡಿಗಳನು ಕಳಚುತ್ತಾ,
ಸುಮ್ಮನೆ ಕುಳಿತಿದ್ದೇನೆ ನಾನು
ಏನೂ ಮಾಡಲಾಗದಂತೆ…
ಹಳೆಯ ನೆನಪುಗಳ ಜೊತೆ ಹರಟುತ್ತಾ.

"ಮಲ್ಲಿಕಾರ್ಜುನ"

- Mallikarjun

04 Feb 2017, 10:26 am

ಅಮ್ಮಾ ನ ಮಡಿಲಲ್ಲಿ

ಬರೆವ ಪದಗಳೆಲ್ಲ ಕವನವಾಗು ವಂತಿದ್ದರೆ...!!
ಅರಳಿದ ಹೂವುಗಳೆಲ್ಲ ದೇವರ ಪಾದ ಸೇರುವಂತಿದ್ದರೆ...!!
ಕಂಡ ಕನಸೆಲ್ಲ ನನಸಾಗುವ ಆಗಿದ್ದರೆ....ಬೇಕು ಎನಿಸಿದೆಲ್ಲ ಸಿಗುವಂತಿದ್ದರೆ...!!
ಅವಕ್ಕೆ ಇರಬೇಕಾದ ಮೌಲ್ಯ ಇರುತಿತ್ತೇ....?
ಕಷ್ಟ ಇಷ್ಟ ಗಳ ನಡುವಿನ ಅಂತರ ತಿಳಿಯುತಿತ್ತೆ....?

ಪ್ರೀತಿಸಿದ ಎಲ್ಲರಿಗೂ ಪ್ರೀತಿ ಸಿಗುವಂತಿದ್ದರೆ...ಕಾಯುವಿಕೆಗೆ ನೋಯುವಿಕೆಗೆ ಅರ್ಥ ಇರುತಿತ್ತೆ...?
ಪ್ರೀತಿಯ ಮೌಲ್ಯ ಎಲ್ಲರಿಗೂ ಅರಿವಾಗುತಿತ್ತೆ....?
ವಿರಹದ ಬೇಗೆಯ ಅನುಭವದ ಅರಿವು ನಮಗಾಗುತಿತ್ತೆ...?

ಭೂಮಿಯ ಮೇಲೆ ಜನಿಸಿದ ಎಲ್ಲರಿಗೂ...ತಂದೆ ತಾಯಿಯ ಪ್ರೀತಿ ಸಿಗುವಂತಿದ್ದರೆ...!!
ಬಂಧು ಬಳಗದ ನಂಟು ಸಿಗುವಂತಿದ್ದರೆ...!!
ಆ ಮಮತೆಯ ವಾತ್ಸಲ್ಯದ ಬೆಲೆ ತಿಳಿಯುತಿತ್ತೆ....? !!

""""""ಮಲ್ಲಿಕಾರ್ಜುನ """"

- Mallikarjun

04 Feb 2017, 10:19 am

ನಾ ಕಂಡ ಪ್ರಪಂಚ

ಪ್ರತಿ ದಿನವೂ ಕಾಣದಂತೆ ಉರುಳುತಿದೆ
ಅರಿತ ಮನವೂ ಅರಿಯದಂತೆ ನಟಿಸುತಿದೆ

ಜಗದಗಲ ಆಗು-ಹೋಗು ನಡೆಯುತಿವೆ
ವನ್ಯಜೀವಿಗಳ ಜೀವನ ಅಯೋಮಯವಾಗಿದೆ

ಬದಲಾವಣೆಯ ಋತುಚಕ್ರ ಸಾಗುತಿದೆ
ಆಡಂಬರದ ಆಟಕೆ ಜಗ ಅಧಃಪತನಕೆ ಹೊರಟಿದೆ

ವೇಗದ ನಡಿಗೆಗೆ ಉದ್ವೇಗ ಹೆಚ್ಚಾಗಿದೆ
ಅರಿವಿನ ಮಾರ್ಗಕೆ ಗುರುವಿಗೆ ಬೆಲೆ ಎಲ್ಲಿದೆ?

ಕೆಸರಿನ ಮನಕೆ ಮೊಸರಂಗಿ ತೊಟ್ಟಿದೆ
ಮಡಿ- ಮೈಲಿಗೆ ಮಾರುದ್ದ ಸರಿದಿವೆ

ತನ್ನ ಹುಳುಕಿಗೆ ಇನ್ನೊಬ್ಬರ ಹುಳುಕು ಮುಚ್ಚಿದೆ
ಕೇಳದೆ- ಹೇಳದೆ ಇರುವ ಪರಿಪಾಠ ಹೆಚ್ಚಾಗಿದೆ

ಪಾಪದ ಕಡಲಿಗೆ ತೀರ್ಥದ ನೀರು ಅಂಜಿದೆ
ಶಕ್ತಿ ಕುಂದಿದೆ ಯುಕ್ತಿಯೂ ಮಾಯವಾಗಿದೆ

ಎಲ್ಲರೂ ಅವರೇ, ಅವರೇ ನಾವಾಗುವುದಾಗಿದೆ
ಹೊಂದಾಣಿಕೆ ಸತ್ಯದ ಬತ್ತಳಿಕೆಯನ್ನು ಮುಚ್ಚಿದೆ

ಕರ್ಮದ ಮುಂದೆ ಧರ್ಮ ಸೊರಗಿದೆ
ಪಾಪದ ಪಿಂಡಕೆ ಸಾಕ್ಷಿ ಇಲ್ಲದಾಗಿದೆ

ಸುತ್ತುವ ಭೂಮಿಗೆ ಸುಸ್ತಾಗುತ್ತಿದೆ
ಬೆಳಗುವ ಸೂರ್ಯನಗೆ ಬೇಜಾರಾಗಿದೆ

ಜಗ ಆಳುವವನ ಕಣ್ಣು ಸದಾ ತೆರೆದಿದೆ
ಹೀಗೆ ಸಾಗಿದರೆ ಮುಂದೆ ತಕ್ಕ ಶಾಸ್ತಿಯಿದೆ

ರಚನೆ: ಎ.ಜಿ.ಕಮತಗಿ(ಶಾಂತಿಪ್ರಿಯ)

- "ಶಾಂತಿಪ್ರಿಯ"

04 Feb 2017, 10:00 am

ಹೆಜ್ಜೆಗುರುತು

ನೀ ಹೋಗಿರಬೇಕು
ಮರೆತು
ನಾ ಬರೆಯುವುದೆಲ್ಲಾ
ನಿನ್ನ ಕುರಿತು
ಅದಕ್ಕೆ ನಾ ನಿಟ್ಟ ಹೆಸರು
ಹೆಜ್ಜೆಗುರುತು. ..

- ವಿಧಾತ್ರಿ ಹರಿತಸ್ಯ

04 Feb 2017, 08:16 am

ಮುಂಜಾನೆ-ಸಾಧನೆ

ಸೂರ್ಯೋದಯದಿಂದಾಗಿದೆ ಮುಂಜಾನೆ
ಹಾಸಿಗೆಯಿಂದ ಎದ್ದೇಳಿ ಜಾಣ-ಜಾಣೆ
ದೇವರಿಗೆ ಮಾಡಿ ಭಕ್ತಿಯ ವಂದನೆ
ಸಿದ್ಧರಾಗಿ ಮಾಡಲು ಮಹತ್ಸಾಧನೆ.

- ಗೌಡ

04 Feb 2017, 07:10 am

ಮೊದಲ ಪ್ರೇಮ

ನಿನ್ನ ನೆನಪೆಂಬುದು ನನ್ನ ಮನಸಲೆಲ್ಲೊ ಇಲ್ಲ...
ಅದು ನನ್ನ ಹೃದಯದಲ್ಲಿ ಅಚ್ಚೊತ್ತಿರುವ ಹಚ್ಚೆ...
ಮರೆಯಲದು ಬರೀ ನೆನಪಲ್ಲ...!
ಅದು ಮೊದಲ ಪ್ರೇಮ. ಅಮರ ಪ್ರೇಮ...

- ಪಿ ಅನಿ...

04 Feb 2017, 07:10 am

ನನ್ನ ಗೊಂಬೆಯ ನನ್ನಪಲಿ

ಹಣೆಬರಹದಲಿ...ಅವಳನ್ನ ನನಗಾಗಿ ಬರೆದಿಲ್ಲ..ತಿಳಿದ ವಿಷಯಕೆ...ಏಕೆ ಈ ಹುಚ್ಚಾಟ..!!
ಅಳುತಿರುವೆ...ಅವಳ ಪ್ರೀತಿಗಾಗಿ..ಉಸಿರುಗಟ್ಟಿಸುತಿದೆ..ಅವಳಿಲ್ಲದ ಪ್ರತಿ ಕ್ಷಣಾಕ್ಷಣವೂ..!!
ಮರುಕಳಿಸುತಿವೆ..ಅವಳಾಡಿದ..ಒಂದೊಂದೂ ಮಾತು..!!
ಬಯಸುತಿದೆ ದುಃಖಗಳಿಗೆ..ಅವಳ ಸಮಾದಾನದ ಸಾಂತ್ವನ..ಬೇಕೆನಿಸಿದೆ...!!
ಅವಳೊಂದಿಗೆ.. ಓಡಾಡಿದ ಒಡನಾಟ..ಪ್ರಯತ್ನೀಸಿಯೂ ಮರೆಯಲಾಗಲಿಲ್ಲ...!!
ನನ್ನ ಅಳುವಿಗೆ..ಸ್ಪಂಧಿಸಿದ ಆ...ಕಣ್ಣುಗಳಾ..ಕಣ್ಣೀರಾ...ಒರೆಸಿದ ಮೃದುವಾದ ಆ..ಕೈಗಳ..!!
ಆಸರೆಯಾಗಿ...ಧೈರ್ಯ ಹೇಳಿದ..ಆ ಬುಜಗಳ..!!
ಸದಾ ನನ್ನೊಡನೆಯಿರುವ..ಭರವಸೆಯ ಅಪ್ಪುಗೆಯ...!!
ಪ್ರೀತಿಯ ಚುಂಭನವಾ..ಅವಳಿತ್ತ ನಂಬಿಕೆಯ ಬಾಷೆಗಳ...ಹೇಗೆ ಮರೆಯಲಿ...??
ನೆರಳಂತೆ...ಹಿಂಬಾಲಿಸುತಿರುವ...ನೆನಪುಗಳ..ಜೊತೆಯಲಿ..!
ಕೇಳದ ಮನಸು....ಕಾಣುತಿದೆ ಕನಸ...ಅವಳ..ಬರುವಿಕೆಗಾಗಿ

"ಮಲ್ಲಿಕಾರ್ಜುನ"

- Mallikarjun

04 Feb 2017, 06:49 am