Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚಂದಿರೆಯೇ ಓ ಸುಂದರಿಯೇ...

ಚಂದಿರೆಯೇ ಓ ಸುಂದರಿಯೇ
ನನ್ನ ಹೃದಯವ ಕಳೆದುಕೊಂಡೇ
ಅದು ಕಳೆದ ಜಾಗ ಅದಾವುದೆಂದು
ನಿನ್ನ ದ್ಯಾನದಿ ಮರೆತು ಬಿಟ್ಟೆ.

ನಿನ್ನ ಕಾಲ್ ಗೆಜ್ಜೆಯಲ್ ಅದು ಕಳೆದಿತೆಂದು
ನಿನ್ನ ಕಾಲಡಿ ಹುಡುಕಿ ಬಂದೆ
ನಿನ್ನ ಹೆಜ್ಜೆಯ ಧೂಳಿನ ಕಣಗಳಲು
ನಿನ್ನೊಲುಮೆಯ ಕಂಡು ನಿಂದೆ.

ಇದು ಮಾಯವೋ, ಇಲ್ಲ ಮರ್ಮವೋ
ಹೇಳೆಲೆ ನನ್ನುಸಿರೇ..
ನೀ ದೊರೆವೆಯ ಇಲ್ಲ ಮರೆವೆಯ
ತಿಳಿಸುತ ಬಿಡಿಸು ಸೆರೆ.. ||

ಚಂದಿರನ ಒಂದಾಗಮನ
ಆ ಕಡಲನು ಕುಣಿಸುವುದು
ಚಂದಿರೆಯೇ ನಿನ್ನೊಂದು ನುಡಿ
ಈ ಮನಸನ್ನು ತಣಿಸುವುದು

ನೀನೊಲಿದು ಜೊತೆ ಸೇರಿದರೆ
ಆ ಬದುಕದು ಸುಂದರವೂ
ಮರೆಯಾಗಿ ನೀನೋಡಿದರೆ
ಈ ಬದುಕೇ ಮರಳ್ಗಾಡು..

ನೀ ಪ್ರೇಮಿಯೋ ಬರಿ ಗೆಳತಿಯೋ
ಹೇಳೆಲೆ ಗಿರಿ ನವಿಲೇ
ಇದು ಸಾಧ್ಯವೋ, ಅಸಾಧ್ಯವೊ
ತಿಳಿಸೆಲೆ ನನ್ನೊಲವೇ..

- ಶ್ರೀಗೋ.

07 Feb 2017, 03:55 pm

ಆಸೆ

ನಿನಗೆ ನಾನು
ನಿನವಳು ನಾನು
ಆದರೆ

ನನ್ನ ಆಸೆ ಆಕಾಷೆಗಳ-
-ಕೊಂದು ಜೀವಿಸಲಾರೆ

ನಿನ್ನ ಮುಷ್ಠಿಯಲೇ ಬಾಳಲಾರೆ


vanishree

- Vanishree c p

07 Feb 2017, 01:57 am

ಕಳ್ಳಿ ನೀ

ಜೀವನದ ಸಂತೆಯಲಿ
ಭಾವನೆಗಳ ಅಂಗಡಿಯಲ್ಲಿ
ನೀ ಕದ್ದೆ ನನ್ನ ಹೃದಯವ.........

- ಸುಬ್ರಹ್ಮಣ್ಯ ಶಾಸ್ತ್ರಿ

07 Feb 2017, 12:21 am

ಅಪರಿಚಿತ

ಅಪರಿಚಿತರಾಗಿ ಬಂದು
ಪರಿಚಿತರಾಗಿ ಹೋದೆ ನೀ
ಕಡೆ ತನಕ ಚಿರಪರಿಚಿತರಾಗಿ ಬಾಳುವ ಬಾರೆ ಓ ಗೆಳತಿ.....

- ಸುಬ್ರಹ್ಮಣ್ಯ ಶಾಸ್ತ್ರಿ

07 Feb 2017, 12:12 am

ಮೋಡ ಕವಿದ ಭಾವನೆ ಮಳೆ ಬರುವ ಸ

ಮೋಡ ಕವಿದ ಭಾವನೆ
ಮಳೆ ಬರುವ ಸೂಚನೆ
ಗುಡುಗು ಸಿಡಿಲುಗಳ ಆರ್ಭಟವಿಲ್ಲ
ಮಿಂಚಿನ ಸುಳಿವೂ ಇಲ್ಲ

ನವಿಲಿಗಿಲ್ಲ ನಿನ್ನ
ಕಾಣಲು ನಿರೀಕ್ಷೆ
ನದಿಗಳಿಗಿಲ್ಲ ನಿನ್ನ
ತುಂಬಿಕೊಳ್ಳುವ ಅಪೇಕ್ಷೆ
ಹಸಿರೆಲೆಗಳು ತೋರುತಿಹುದು
ನಿನಗೆ ತಾತ್ಸಾರ
ಹಕ್ಕಿಗಳು ಕೂಗುತಿಹುದು
ನಿನಗೆ ಬಹಿಷ್ಕಾರ
ಮಣ್ಣಿಗೇಕೋ ಬೇಡವಾಗಿದೆ
ನಿನ್ನ ಜೊತೆಗಿನ ಸ್ನೇಹ
ಮುಗಿಲಿಗೇಕೋ ತಿಳಿಯದು
ನಿನ್ನ ಹೊರಹಾಕುವ ಮೋಹ

ಮೋಡ ಕವಿದ ಭಾವನೆ
ಮಳೆ ಬರುವ ಸೂಚನೆ
ಗುಡುಗು ಸಿಡಿಲುಗಳ ಆರ್ಭಟವಿಲ್ಲ
ಮಿಂಚಿನ ಸುಳಿವೂ ಇಲ್ಲ

ಬತ್ತಿದ ಭೂಮಿಗೂ ಇಲ್ಲ
ನಿನ್ನ ಮೇಲೆ ಒಲವು
ಹೊತ್ತಿ ಉರಿಯುತಿಹ ಬೆಂಕಿಗೂ ಇಲ್ಲ
ನಿನ್ನಿಂದಾಗುವ ಸೋಲಿನ ಭಯವು
ನಿನ್ನೊಡಲಲ್ಲಿ ನೆಲೆನಿಲ್ಲಲು
ಕಾಮನಬಿಲ್ಲಿಗೆ ಬಿಗುಮಾನ
ನಿನ್ನ ಮಡಿಲಲ್ಲಿ ಕುಣಿದಾಡಲು
ತಂಗಾಳಿಗೆ ಅವಮಾನ
ತನ್ನ ಸ್ಥಾನವ ನಿನಗೆ
ತ್ಯಜಿಸಲು ಸಿದ್ದವಾಗಿದೆ ಗಗನ
ನಿನ್ನ ಬರುವಿಕೆಯ ಕಂಡು
ಹೆದರಿದಂತಿದೆ ಭುವನ
ಮುದುಡಿಹೋಗುವ ಯೋಚನೆ ಮಾಡಿದೆ ಹೂಗಳು
ನಿನ್ನ ಸ್ಪರ್ಶಕೆ ಹೆದರುತ
ನಿನ್ನ ಆರ್ಭಟವ ಸಹಿಸಲಾಗದೆ
ಸೂರ್ಯ ಕಿರಣಗಳಾಗಿವೆ ವ್ಯಥಿತ

ಇಷ್ಟು ದಿನ
ನನ್ನ ಮನ ನಿನ್ನ ಬರುವಿಕೆಯನ್ನೇ ಬಯಸಿದೆ
ಆದರಿಂದು
ನಿನಗಾಗಿ ಕಾದುಕಾದು ಹೃದಯ ಕೊರಗಿ ಕೆಂಡವಾಗಿದೆ
ನೀನೆ ಹೇಳು
ನನ್ನ ಈ ನಿರೀಕ್ಷೆಗೆ ನಿನ್ನೀ ಉಪೇಕ್ಷೆ ಸರಿಯಾದುದೇ?

- ಅಕವಿ

06 Feb 2017, 10:46 pm

ಕನ್ನಡ ನಾಡು

ಕನ್ನಡ ನಾಡಿದು ನಲ್ಮೆಯ ಈ ನೆಲ
ಶತ ಶತಮಾನದ ಪುಣ್ಯದ ದೇಗುಲ!!
ನೆಚ್ಚಿನ ಬೀಡಿದು ಮಮತೆಯ ಆಗರ
ತಪಸ್ಸಿಗೆ ದೊರೆತ ಪುಣ್ಯವೇ ಈ ಫಲ!!

ಮಡಿಲಲಿ ಸಲಹುವ ತಾಯಿಯು ಈ ನೆಲ
ಬದುಕಲು ಕಲಿಸಿದ ತಂದೆಯು ಈ ನೆಲ!!
ಜೋಗುಳ ಹಾಡಿದ ಲಾಲಿಯ ಈ ಸ್ವರ
ತೊದಲುವ ಭಾಶೆಯು ಸುಂದರ ಸುಂದರ!!

ಕನ್ನಡ ಮಣ್ಣಲಿ ನಮ್ಮಯ ಈ ಬಲ
ಬಳುವಳಿಯಾಗಿ ದೊರೆತಿಹ ಈ ಛಲ!!
ಕನ್ನಡ ನಾಡಲಿ ಜನಿಸಿದ ನಾವು
ಧೀರರು ಎಂಬ ನುಡಿಯದು ಸುಂದರ!!

- ಪಿ.ಜಿ.ಜ್ಯೋತಿ

06 Feb 2017, 09:03 pm

ಸಮಯವಿಲ್ಲ

ಸಂತೋಷದ ನೂರಾರು ಕ್ಷಣಗಳು ಜೊತೆಗಿದ್ದರು
ಅವನ್ನ ಅನುಭವಿಸಿ ನಲಿಯಲು ಸಮಯವಿಲ್ಲ
ದಿನ ರಾತ್ರಿ ಎನ್ನದೆ ಓಡುವ ಈ ಜಗದಲ್ಲಿ
ನಮ್ಮ ಬದುಕನ್ನ ಒಮ್ಮೆ ತಿರುಗಿ ನೋಡಲು ಸಮಯವಿಲ್ಲ !

ಕಂಗಳು ತುಂಬಿ ತುಳುಕುತಿವೆ ನಿದ್ದೆಯಿಂದ
ಆದರೆ ನಿದ್ದೆ ಮಾಡಲು ಸಮಯವಿಲ್ಲ
ಎದೆಯ ತುಂಬ ತುಂಬಿವೆ ನೋವುಗಳು
ಅವುಗಳ ಮರೆಯಲು ಅಳಬೆಕು, ಆದ್ರೆ ಸಮಯವಿಲ್ಲ !

ತಾಯಿ ಹೇಳಿದ ಲಾಲಿಯ ಹಾಡು ನೆನಪಿದೆ
ಆ ತಾಯಿಯನ್ನ ಅಮ್ಮಾ ಎಂದು ಕರೆಯಲು ಸಮಯವಿಲ್ಲ
ಸಂಬಂಧಗಳನ್ನು ಸಂಕೋಲೆ ಎಂದು ದೂರದ ನನಗೆ
ಆ ಸಂಬಂಧಗಳನ್ನು ಉಳಿಸಿಕೊಳ್ಳಲು ಸಮಯವಿಲ್ಲ !

ಪೈಪೋಟಿಯ ಪ್ರಪಂಚದಲ್ಲಿ, ದುಡ್ಡಿಗಾಗಿ ಎಲ್ಲರ ಓಟ
ಓಡಿ ಓಡಿ ಉಸಿರು ನಿಲ್ಲುವಂತಾದರು, ವಿಶ್ರಾಂತಿಗೆ ಸಮಯವಿಲ್ಲ
ಬೇರೆಯವರು ಮಾಡಿದ ಉಪಕಾರಕ್ಕೆ ಪ್ರತ್ಯೋಪಕಾರ ಹಾಗಿರಲಿ
ಇಂದು ನಮಗೆ ಕನಸು ಕಾಣಲಿಕ್ಕೊ ಸಮಯವಿಲ್ಲ !

ನೀನೇ ಹೇಳು ಜೀವನವೇ
ಈ ಜೀವನದಲ್ಲಿ ಮುಂದೆನಾಗುವುದು ಎಂದು
ಪ್ರತಿ ಕ್ಷಣ ಸಾಯುತ್ತಿರುವವರಿಗೆ
ಬದುಕುವದಕ್ಕೊ ಸಮಯವಿಲ್ಲ !

- ಕುಮಾರ ಸಿದ್ದರಾಜ

06 Feb 2017, 08:28 pm

ಕಳ್ಳಿ ನೀನು

ಹ್ರದಯಲ್ಲೇನೋ ಸಂಗೀತ ಕೇಳಿದಂತಿದೆ, ಸಾಹಿತ್ಯಕೆ ನೀನೆ ಪಲ್ಲವಿ ಹಾಡಿದಂತಿದೆ..
ಕನಸಿಗೆ ನಾಚಿಕೆಯ ಪರದೆ ಎಳೆದಂತೆ
ಕದ್ದು ನಸುನಕ್ಕ ನೆನಪು ನೂರ ಒಂದಿದೆ......

- PSK

06 Feb 2017, 08:15 pm

ಗೆಳತಿ

ಕಿಲ ಕಿಲ ನಗೋನು ಬಂದಾಗ...
ಕಣ್ಣೀರ ಓರೆಸಿದೋನ ಮರಿಬೇಡ.
ಗೆಳತಿ.. ಗೆಳತಿ.. ಗೆಳತಿ..
ನೀ ಬದಲಾಗಬೇಡ..
ನನ್ನ ಗೆಳತಿ.. ಗೆಳತಿ..
ಮಧ್ಯ ಬಂದೋನ ನಂಬಬೇಡ
ಮೊದಲು ಬಂದೋನ ಮರಿಬೇಡ.
ಗೆಳತಿ.. ಗೆಳತಿ.. ಗೆಳತಿ..
ನೀ ಬದಲಾಗಬೇಡ..
ನನ್ನ ಗೆಳತಿ.. ಗೆಳತಿ..
ಹೊಸದು ಬರಿ ನಾಜೂಕ.
ಹಳೆದು ಜೀವನದುದ್ದಕ್ಕ.
ಗೆಳತಿ.. ಗೆಳತಿ.. ಗೆಳತಿ..
ನೀ ಬದಲಾಗಬೇಡ..
ನನ್ನ ಗೆಳತಿ.. ಗೆಳತಿ..

- Ananth

06 Feb 2017, 06:11 pm

ಚಿಂತಿಸದಿರು......

ತಕ್ಕ ಸುಂಕವಕಟ್ಟಿ ಶತಕೋಟಿ ಕುಡಿಡಬಹುದುˌ ಅಂಜದಿರು ||
ಎಷ್ಟು ಕುಡಿಟ್ಟರೇನು?ˌ ಸತ್ತಾಗ
ಹಿಂದೆ ಬರುವದಿಲ್ಲ ˌ ಚಿಂತಿಸದಿರು!.
ಪಿ ani

- ಪಿ ಅನಿ...

06 Feb 2017, 02:48 pm