ನೋವಿನಲೆಗಳು ಏರುತಲೇರುತ
ನನ್ನ ಕಣ್ಣನಾಗಿಸಿದೆ ಕಡಲ
ಆ ಕಡಲೊಳು ತುಂಬಿಹುದು
ವಿರಹದಿ ಮೂಡಿದ ಕಣ್ಣ ಸಲಿಲ
ಆ ಸಲಿಲದ ಕಣಕಣದೊಳು ತುಂಬಿದೆ
ನಿನ್ನ ಸೇರಲಾಗದ ಮನದ ತುಮುಲ
ಬರಿಯ ನಿನ್ನದೇ ನೆನಪುಗಳು
ನನ್ನ ಮನದ ತುಂಬೆಲ್ಲಾ
ನೀ ಬಿಟ್ಟು ಹೋದರು ಬದುಕಿರುವುದಕೆ
ಮೆಚ್ಚಬೇಕಿದೆ ನನ್ನ ಮನೋಬಲ
ಹೊರಗೆ ಬದುಕಿದ್ದರೂ ಒಳಗೆ ಸಾಯುತಿರುವೆ
ಕ್ಷಣವುರುಳಿ ಕ್ಷಣ ಬಂದ ಪ್ರತೀ ಸಲ
ನೀನಿಲ್ಲದ ಈ ಬದುಕು
ತುಂಬಾನೆ ಜಟಿಲ
ಮನದೊಳಗೆ ಇನ್ನೂ ಪ್ರತಿಧ್ವನಿಸುತಿದೆ
ನಿನ್ನ ನಗು ಮಾಡಿ ಹೋದ ಗದ್ದಲ
ಇನ್ನುಳಿದಿರುವುದೂಂದೇ ನನ್ನ ಬಾಳಲಿ
ನಿನ್ನ ಕೊನೆಯ ಬಾರಿ ನೋಡಬೇಕೆನ್ನುವ ಹಂಬಲ
ಓ ನನ್ನ ಪ್ರೀತಿಯ ಗೆಳೆಯ
ಆಗಬಾರದೆ ನೀ ನಲ್ಮೆಯ ಒಡೆಯ
ಪ್ರತಿ ಕ್ಷಣ ಕಂಡಾಗ ನಿನ್ನ ನಯನ
ಪ್ರೀತಿಯ ಹೊಳೆಯಲ್ಲಿ ತೇಲಾಡಿತು ನನ್ನೀ ಮನ
ನಿನ್ನ ಹೃದಯದೊಳಗೆ ಸೆರಲೆಂದು ನಾ ಬಂದೆ
ಮನನೊಂದು ಕಣ್ಣೀರಿನ ಹೊಳೆಯಲಿ ನಾ ಬಿದ್ದೆ
ನಿನ್ನ ಸೇರೊ ಭರದಲ್ಲಿ ನನ್ನೆ ನಾ ಮರೆತು ಹೋದೆ