Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನೀನಿಲ್ಲದೆ ಯಾನ ಓ ಹೃದಯವೆ, ತ

ನೀ ನನ್ನ ಪಯಣ , ನೀನೇ ನನ್ನ ಗಮ್ಯ
ನೀನಿಲ್ಲದೆ ಯಾನ ಓ ಹೃದಯವೆ, ತೀರದು
ನೀ ನನ್ನ ದೇವತೆ
ನನ್ನೆಲ್ಲಾ ಪ್ರಾರ್ಥನೆಯಲಿ ನೀ ಬೆರೆತೆ
ನೀನಿಲ್ಲದೆ ಯಾನ ಓ ಹೃದಯವೆ, ತೀರದು

ನನ್ನ ಬಿಗಿದಪ್ಪಿದೆ ನೀನಿಲ್ಲದ ಕೊರತೆ
ನನ್ನೆಲ್ಲಾ ಕೊರತಗೆ ನೀ ಒರತೆ
ಯತ್ನಿಸಿರುವೆ ನಾ ಇಂದು
ತಕ್ಕವನಾಗಿರಲು ನಿನಗೆ ಎಂದೆಂದು
ನೀನಿಲ್ಲದೆ ಯಾನ ಓ ಹೃದಯವೆ, ತೀರದು

ಈ ನನ್ನ ಆತ್ಮ , ನನ್ನೀ ದೇಹ
ನನ್ನಲ್ಲಿ ನಲಿದಿಲ್ಲ ನಿನ್ನಲ್ಲಿ ನಲಿದಷ್ಟು
ನಿನ್ನ ಕೊಡುಗೆ, ನೋವಾದರೂ ಸರಿ
ನಿಂನ್ನಿಂದ ಸಿಕ್ಕರೆ, ಅದು ಉಡುಗರೆಯೇ ನನಗೆ

ಅಲೆದಿರುವೆ ಸಾಗರದಿ, ಅರಸುತಾ ನಿನ್ನ ನೆಲೆಯ
ನನ್ನೆಲ್ಲಾ ಕೊರತಗೆ ನೀ ಒರತೆ
ಈ ಬಾಳಲಿ ಸಿಗುವೆಯಾ, ಮರುಜನ್ಮಕೆ ಕಾಯಲಾ ?
ನೀನಿಲ್ಲದೆ ಯಾನ ಓ ಹೃದಯವೆ, ತೀರದು‌

ಅರಿತೆ, ನಿನ್ನಯ ಸಾಂಗತ್ಯದಿ
ಈ ಜೀವ ಅರಳುವುದು
ನೀನಿಲ್ಲದೆ ಬಾಳುವ ಪರಿ
ನನ್ನೀ ಹೃದಯಕೆ ತಿಳಿಯದು‌

ನಿನ್ನೆಡೆ ನನ್ನ ಒಲವು ಆಗಸದಷ್ಟು
ತಿಳಿಯದ ಹಾಗೆ ನೀನಿರುವೆಯಾ
ಗಮನವು ಗಮ್ಯವ ತಿಳಿಯದಾಗಿದೆ
ಒಬ್ಬೊಂಟಿಯ ಯಾನವಿದು

ಯಾನವು ಸುಂದರ, ಅನಂತ ನಿನ್ನೆಡಗೆ
ನನ್ನೆಲ್ಲಾ ಕೊರತಗೆ ನೀ ಒರತೆ
ಅಪೂರ್ಣ ಆದರೂ, ನನ್ನ ಒಲವು ನಿತ್ಯ ಸತ್ಯ
ನೀನಿಲ್ಲದೆ ಯಾನ ಓ ಹೃದಯವೆ, ತೀರದು‌

...
* Ae Dil Hai Mushkil *
song translation.

- Indushekar Chinivar

29 Jan 2017, 09:15 am

ಸದಾ ನಗುತಿರುವ ನೀವು...

ಮನಸಿನಾಳದಿ ಇಣುಕಿ ನೋಡಿದರೆ
ಕಾಣುವುದು ಬರಿ ನೋವು
ಆದರೂ ಸಹಾ ಎಲ್ಲವ ಮರೆತು
ಸದಾ ನಗುತಿರುವ ನೀವು

ನಿಮ್ಮ ಜೊತೆಯೆ ನೆಡೆದು ಬಂದವರು
ತಿರುಗಿ ನೋಡದೆ ಮುಂದೆ ಸಾಗಿದವರು
ಎದುರಲಿ ಹೊಗಳಿ ಹಿಂದೆ ಜರಿಯುವವರು
ಜೊತೆಯಲಿದ್ದು ಇಲ್ಲದವರು.

ದೂರವಾದವರು ಮತ್ತೆ ಬರುವರು
ಕೆಲವರು ಮಾತ್ರ ಮರಳಿ ಬಾರರು
ಇರವ ಜನರು ಬೆಳೆಯಲು ಬಿಡರು
ಬಾರದ ಜನರು ಸದಾ ಹರಸುತಿಹರು

ಏಳು ಬೀಳ ಕಂಡುಕೊಂಡವರು
ಏನೇ ಬಂದರು ಮುಂದೆ ಸಾಗುವರು
ಇಂದು ಇವರು ನಾಳೆ ಅವರು
ಸದಾ ಜೊತೆಯಲೆ ಉಳಿವಕೆಲವರು

(ಸತೀಶ್ ಹುಳಿಯಾರ್)

- Satish Huliyar

29 Jan 2017, 08:47 am

ಮನದಾಸೆಯ ಮೊಗ್ಗುಗಳ ಹರಡಿರುವೆ

ಮನದಾಸೆಯ ಮೊಗ್ಗುಗಳ ಹರಡಿರುವೆ
ನೀ ನಡೆವ ಹಾದಿಯಲಿ‌‌
ನಿನ್ನ ಮೃದು ಪಾದವ ತಾಕಿ
ಅರಳಲಿ, ನಲಿಯಲಿ

ಕನಸುಗಳ ಬಿತ್ತಿರುವೆ
ಆಗಸದಿ ಚುಕ್ಕಿಗಳಾಗಿ
ನಿನ್ನ ಕಣ್ಬೆಳಕು ಸೋಕಿ
ಬೆಳಗಲಿ, ನನಸಾಗಲಿ

ಎದೆಯ ಭಾವಗಳ
ಪೋಣಿಸಿರುವೆ ಸರವಾಗಿ
ಧರಿಸು ನೀ ಒಲವಲಿ
ಎನ್ನ ಬಾಳು ಧನ್ಯವಾಗಲಿ
ಈ ಜನ್ಮ ಸಾರ್ಥಕವಾಗಲಿ...

- Indushekar Chinivar

28 Jan 2017, 10:56 pm

ಯಕ್ಷಧ್ರುವ

ಜೀವನವು ಕಲೆಯೆಂದು
ಕಲೆಯಲ್ಲಿ ಜೀವನವಕಂಡ
ಬಡನೊಂದ ಕಲಾವಿದರ
ಯಕ್ಷಪ್ರಶ್ನೆಯ ಉತ್ತರ
ಬಾಳಿನಾಸೆರೆ ಯಕ್ಷಧ್ರುವ

ಇದುವರೆಗೆ ಮಾಡಿರದ
ಇದುವರೆಗೆ ತೋರಿರದ
ಅದಮ್ಯ ಪ್ರೀತಿಯನು
ನಿಷ್ಕಳಂಕ ಸೇವೆಯನು
ತೋರಿಹುದು ಮಾಡಿಹುದು
ಚೆಲ್ಲಿಹುದು ಬೆಳಕನು
ಧ್ರುವ ತಾರೆಯಂತೆ

ಈದಿನವು ಸುಬ್ಬನು ನಕ್ಕಿರಬಹುದು
ಆತ್ಮವುಪಡೆದಿರಬಹುದು ಮುಕ್ತಿಯನು
ನಿನಗಿದೋ ಅರ್ಪಿಸುವೆ ತರ್ಪಿಸುವೆ
ಸಮರ್ಪಿಸುವೆ ಯಕ್ಷಗಾನದ ವೈಭವವನು

- ಅರುಣ್. ಕೆ. ಗಟ್ಟಿ. ಕಾಪಿಕಾಡ್

28 Jan 2017, 07:39 pm

ಬಾಳೊಂದು ಬಂಗಾರ....

ಜೀವನ ನಗುವಿನ ಉಯ್ಯಾಲೆಯಾಗಲು ಪ್ರೀತಿ ಸ್ನೇಹದ ಸರಪಳಿಯ ಬಂಧನವಿರಬೇಕು,
ಬದುಕು ಅರ್ಥಪೂರ್ಣವಾಗಲು ಮಾನವೀಯ ಮೌಲ್ಯಗಳ ಅರಿವಿರಬೇಕು,
ಜನ್ಮವು ಸಾರ್ಥಕವಾಗಲು ನಿಸ್ವಾರ್ಥ ಸೇವೆಯ ಪುಷ್ಪ ಮಾಲೆಯ ಧರಿಸಬೇಕು,
ಸಾಧನೆಯ ಗೋಪುರವೇರಲು ಸೂಕ್ಷ್ಮಮತಿಯ ಕಠಿಣ ಪರಿಶ್ರಮದ ಸಮಯೋಚಿತ ಜ್ಞಾನವಿರಬೇಕು,
ಎಲ್ಲ ಗುಣ ಗೌರವಗಳಿಗೆ ಪಾತ್ರವಾಗಲು ಅಹಂಕಾರದ ಅಂಧಛಾಯೆಯನ್ನು ದೂರವಿರಿಸಬೇಕು,
ಭೂಮಿಯ ಮೇಲಿನ ಈ ಬಣ್ಣದಾಟ ಮುಗಿದಾಗಲು ಜನ ನಿನ್ನ ಸ್ಮರಿಸಲು ಪರೋಪಕಾರದ ಪರಮ ಸೇವೆಯ ನೀ ಮಾಡಿರಬೇಕು...

- Irayya Mathad

28 Jan 2017, 03:37 pm

ಜಾತಿಯ ಜಾತಕವೇಕೆ?

ಜಾತಿಗಿಲ್ಲಿ ಜಾಗವಿಲ್ಲ ಜಗಳವೆಂಬ ಜಂತುವಿಲ್ಲ
ಜಾತಿಕುಲಗಳ ಕಪಟ ನೀತಿಯ ಕುಪಿತ ಭಾವವಿಲ್ಲ
ಪ್ರೀತಿಯೆಂಬ ಮಂತ್ರದಿಂದ ಜಗದೀಶ್ವರನ ಗೆಲ್ಲಲು ಜಾತಿಯೆಂಬ ವಿಘ್ನವಿಲ್ಲ
ನಿನ್ನಾತ್ಮನಲ್ಲಿ ಒಂದಾತ್ಮನಾಗುವ ಸರ್ವರಿಗೂ ಜಾತಿಯ ಸೊಂಕಿಲ್ಲ ಸರ್ವೇಶ್ವರ..

- Irayya Mathad

28 Jan 2017, 10:34 am

ನೋವು

ಈ ಪ್ರಪಂಚದಲ್ಲಿ ಅತೀ ಹೆಚ್ಚಿನ
ನೋವೆoದರೆ ನಿಮ್ಮ ಕಣ್ಣಿoದ
ಜಾರುತ್ತಿರುವ ಕಣ್ಣೀರನ್ನು
ನಿಲ್ಲಿಸಲು ನಗುತ್ತಿರುವುದು .

- ಚುಕ್ಕಿ

27 Jan 2017, 10:50 pm

ನoಬದಿರು ಯಾರನ್ನು

ನಿನ್ನ ನೆರಳುಕೂಡ ಕತ್ತಲಾದ ಮೇಲೆ
ನಿನ್ನ ಬಿಟ್ಟು ಹೋಗುತ್ತೆ .
ಯಾರನ್ನು ನಮ್ಮಬೇಡ ಎಂದು
ನಿನಗೆ ತಿಳಿಸುತ್ತೆ .

ಯಾರಿಗೂ ನಿನ್ನ ಮನಸ್ಸಿನಲ್ಲಿ
ಪ್ರತ್ಯೇಕ ಸ್ಥನವನ್ನು ಕೊಡಬೇಡ .
ಏಕೆoದರೇ ಅವರ ಸ್ವಭಾವದಲ್ಲಿ
ಚಿಕ್ಕ ಬದಲಾವಣೆಯೂ ನಿಮ್ಮನ್ನು ನೋಯಿಸುತ್ತೆ .

ಅದರಿoದ ನೀವು ಅವರನ್ನು
ನಿಂದಿಸುವುದಿಲ್ಲ .
ಅದಕ್ಕೆ ಬದಲಾಗಿ ನೀವೇ
ನರಳುತ್ತಿರ.

- ಚುಕ್ಕಿ

27 Jan 2017, 10:28 pm

ಚಂದಿರ ನೀನೆಷ್ಟು ಸುಂದರ

ಓ ಚಂದಿರ,
ಹುಣ್ಣಿಮೆಯ ಹಣೆಯಲಿ
ಕಂಗೂಳಿಸುತ್ತಿರುವ ಸಿಂಧೂರವು ನೀನು.

ಆಕಾಶದ ಮಡಿಲಲ್ಲಿ
ಮಲಗಿರುವ ಪುಟ್ಟ ಕಂದನು ನೀನು.

ತಂಗಾಳಿಯ ಸವಿಗಾನದಲಿ
ಇಣುಕಿರುವ ಪದಗಳು ನೀನು.

ಸಾಗರದೆದೆಯ ಕನ್ನಡಿಯಲಿ
ಪ್ರತಿಫಲಿಸುತ್ತಿರುವ ಚೆಲುವ ನೀನು.

ಅಲೆಗಳ ಅಂತರಂಗದಲ್ಲಿ
ವಿರಹವೆಬ್ಬಿಸುವ ನಲ್ಲನು ನೀನು.

ತಾರೆಗಳ ಮನದಲ್ಲಿ
ಪ್ರೀತಿ ಜಿನುಗಿಸುವ ರಸಿಕನು ನೀನು.

ಕೆಂದಾವರೆಯ ತುಟಿಗಳಲಿ
ಮೂಡಿದ ಮಂದಹಾಸವು ನೀನು.

ಪೃಥ್ವಿಯ ಕೂರಳಲಿ
ಹೊಳೆಯುತಿರುವ ಮುತ್ತಿನ ಹಾರವು ನೀನು.

ಜೀವರಾಶಿಯ ಕಂಗಳಲಿ
ಬೆಳಕ ಚಿಮ್ಮಿಸುವ ಇರುಳ ಸೂರ್ಯನು ನೀನು.

- ಅಕವಿ

27 Jan 2017, 09:38 pm

ಒಮ್ಮೆ ತಿರುಗಿ ನೋಡು

" ಒಮ್ಮೆತಿರುಗಿ ನೋಡು ಹುಡುಗಿ "

" ಯಾಕೆ ನೋಡ ಬಾರದೇ "

" ನಿನ್ನಕಣ್ಣ ಕಾಂತಿಯಿಂದ "

" ನನ್ನ ಹ್ರದಯ ಬೀಗಿದೆ "

" ದಿನವೂ ನಿನ್ನ ಕಣ್ಣನೋಟ "

" ಕಣ್ಣನೆದುರು ಬರುತಿದೆ "

" ಒಂದು ಮಾತು ಕೇಳಲೇನು "

" ನನ್ನ ವರಿಸಬಾರದೇ "

ಮಂಜು

- ಮಂಜುM

27 Jan 2017, 07:15 pm