Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಪ್ರತಿ ಘಳಿಗೆ

ಕಾಡಿಸುತಿದೆ ಪ್ರತಿ ಘಳಿಗೆ ನಿನ್ನ ನೆನಪು
ಪ್ರೀತಿಯ ಮಾತೊಂದನು
ಕೇಳಲು ಈ ಹೃದಯ ಕಾದಿದೆ..
ಎಲ್ಲಿರುವೆ ನೀ ಮನಸೇ
ಅದೆಷ್ಟು ಕಾಡಿಸುವೆ ಇನ್ನು ಕಾಣದೆ…
ಸದ್ದಿಲ್ಲದೇ ಈ ಮನವ ಕದ್ದೊಯ್ದೆ 
ನಿನ್ನೊಡನೆ ಒಮ್ಮೆ ಮಾತನಾಡಲು
ಈ ಹೃದಯ ಕಾದಿದೆ…
ನಿದ್ದೆಯು ಕಾಣೆಯಾಗಿದೆ 
ಪ್ರತಿಕ್ಷಣ ನಿನ್ನ ಕಾಣಲು ಬಯಸಿದೆ..
ನಿನ್ನ ಇಂಪಾದ ಧ್ವನಿ ಕೇಳಲು
ಈ ಜೀವ ಕಾಯುತಿದೆ 
ನಿನ್ನ ತುಂಟ ನಗು
ಈ ಹೃದಯವನು ಕೆಣಕುತಿದೆ…
ನಿನ್ನ ನೆನದು ನೆನದು
ನಾನಿಲ್ಲಿ ಒದ್ದಾಡುತಿರುವೆ
ನಿನ್ನಲ್ಲಿ ಈ ಹೃದಯ ಬಂಧಿಯಾಗಿದೆ 
ನಿನ್ನ ಪ್ರೀತಿಯನ್ನ ಈ ಮನ ಬಯಸುತಿದೆ
ನಿನ್ನ ನೋಡದೆ ಚಡಪಡಿಸುತಿದೆ
ಹೇಗೆ ಇರಲಿ ನಿನ್ನಿಂದ ದೂರ
ನೀ ಇಲ್ಲದೆ ಈ ಜೀವ ಏಕಾಂಗಿಯಾಗಿದೆ...

- Pb

30 Jan 2017, 03:54 pm

ಓ ಮನಸೇ ನೀ ಯಾಕೆ ಹೀಗೆ..??

ಬರಿದಾಗಿದೆ ಈ ಮನವು ನೀನಿಲ್ಲದೆ
ಕನಸು ಮಾಯವಾಗಿದೆ ನೀನಿಲ್ಲದೆ ...
ನೀ ನಡದ ದಾರಿಯೆಲ್ಲವೂ ಖಾಲಿ ಖಾಲಿ
ತೂಗುವವರಿಲ್ಲದೆ ಮಣ್ಣು ಹಿಡಿದಿದೆ ಜೋಕಾಲಿ..
ನಿನಗಾಗಿ ನಾ ಬರೆದ ಪತ್ರಗಳೆಷ್ಟೋ
ನಿನ್ನ ದಾರಿ ಕಾದ ದಿನಗಳೆಷ್ಟೋ...
ಮರಳು ದಂಡೆಯ ಮೇಲೆ ಕೆತ್ತಿದ ಆ ನಿನ್ನ ಹೆಸರು
ವರುಷ ಉರುಳಿದರೂ ಇನ್ನೂ ಆ ನೆನಪು ಹಚ್ಚ ಹಸಿರು....
ನೀ ಮಾತಾಡದೆ ಮೌನಿಯಾದೆ ಪರವಾಗಿಲ್ಲ
ನಿತ್ಯ ನಿನ್ನ ದಾರಿ ಕಾಯುವುದು ನಿಂತಿಲ್ಲ..
ನೀ ಕೈ ಹಿಡಿದು ನಡೆದ ದಾರಿಗಳು ಕಾಣಿಸುತ್ತಿವೆ
ನಿನ್ನ ನೆನಪುಗಳನ್ನು ಮತ್ತೆ ಮತ್ತೆ ನೆನಪಿಸುತ್ತಿವೆ....
-ನಮಿತ ಗಟ್ಟಿ

- ನಮಿತ ಗಟ್ಟಿ

30 Jan 2017, 02:51 pm

ಕುಂಚ

ಕನಸಿಲ್ಲದ ಕಣ್ಣು ತೆರೆದಿದೆ ಇಂದು
ಬಿಂದುವಾಗಿ ಮೌನ ಮುರಿದಿದೆ
ಜಾರಿ ಹೋಗುವ ಬಣ್ಣಗಳನು
ಕುಂಚದಿ ಹಿಡಿಯುವ ಬಯಕೆ ಮೂಡಿದೆ..

- preethi

30 Jan 2017, 02:13 pm

ನೋವು

ನೋವು ನೋವಾಗಿರಲಿ
ಪ್ರೇಶ್ನೆ ಪ್ರೇಶ್ನೆಗಳಾಗಿರಲಿ ಬಿಡು ಗೆಳೆಯಾ
ಸುಳ್ಳು ನೆಪ ಸಮರ್ಥನೆಗಳ ನೆಪದಲಿ
ಅವುಗಳ ಉತ್ತರ ಕ್ರಿಯೆ ಆಗೋದು ಬೇಡ..

- preethi

30 Jan 2017, 01:04 pm

ಪ್ರೀತಿಸು

ಗೆಳತಿ

ನೀನೆಂದರೆ ನನಗೆ ಬಲು ಪ್ಯಾರಿ

ಹೋಗೊಣ ಬೈಕ್ ಸವಾರಿ

ಸುತ್ತೊಣ ಬಾ ಬೆಂಗಳೂರ ಕೇರಿ

ತಿನ್ನಲು ಕೊಡಿಸುವೆ ಪಾನಿ ಪುರಿ

ಸ್ಯಾರಿ ಊಟ್ಟು ನೀನಾಗು ಭಾರತ ನಾರಿ

ಎಚ್ಚರವೇ ನಾರಿ

ನಾ ನಿನ್ನ ಬಲು ಮೆಚ್ಚಿರುವೆ ವಯ್ಯಾರಿ

ನೀನಾಗು ಆದರ್ಶ ನಾರಿ

ಆಗೋಣ ಅಂದ್ರೆ ಮ್ಯಾರಿ

ನಿನ್ನಮ್ಮ ಆಗ್ತಾರೆ ಮಾರಿ

ನೀ ಎಂದಿಗೂ ನನಗೆ ಹೇಳಬೇಡ ಸಾರಿ

ನೀನಿಲ್ಲದೆ ನನಗಿಲ್ಲ ದಾರಿ

ಪ್ರೀತಿಸು ಕರುಣೆ ತೋರಿ 

- ರಾಜೇಶ್

30 Jan 2017, 11:27 am

ಮೌನ

ಯಾರು ಇಲ್ಲದ ಊರಿದು
ಯಾತಕ್ಕಾಗಿ ನಿರ್ಮಿತಗೊoಡಿರುವುದು..?

ಮಾತೆoಬ ರಾಜನಿಲ್ಲದ ಅರಮನೆ ಇದು
ನಿಶಬ್ದವೆoಬ ಸೇವಕರಿಂದ ತುoಬಿರುವುದು..?

ಒಂಟಿಯಾಗಿದ್ದವರೆ ಇಲ್ಲಿ ರಾಜರು,
ರಾಣಿಗಳು ನಿಶಬ್ದವೆoಬ ಸೇವಕರಿಂದ
ಸೇವೆ ಪಡೇಯುವವರು ......!!!!!!

- ಚುಕ್ಕಿ

29 Jan 2017, 11:11 pm

ಅಂತರಂಗದ......ತೋಟ

ಅರೆಕ್ಷಣವೂ ಬಿಟ್ಟೂ ಬಿಡದ ಹಲಸಿನ
ಮೇಣದ ರೀತಿ ಎನ್ನ ಕವಿತೆ
ಬಾಳ ವದ್ರಾವಕ ಸಂಗತಿಗಳಲ್ಲಿ ನೀ
-ಉದ್ರೇಕವಲ್ಲ ,ಬದಲು ಭಾವ -ಚೈತನ್ಯ

ನಿನ್ನ ತೋಳ ಆಸರೆಯಲ್ಲಿ
ಅಕ್ಕರೆಯ ತುಂತುರು,ಮಮತೆಯ ತಂಬೆಲರು,ಚಂದ್ರನ ಆವರಿಸಿರುವ ತಾರೆಗಳಂತೆ, ನನ್ನ-ನಿನ್ನ ಭಾವ
ಬೆಳಕು ಮಿಡಿವ ಸಂತೆ

ಅಜ್ಜಿಯ ತಲೆ ನೇವರಿಕೆಯಂತೆ
ನಿನ್ನ ಆರೈಕೆಪರ ಮೌನ ರಾಗವು
ಸುಮಧುರ ಚೇತೋಹಾರಿ ಪದಗಳಲ್ಲಿ
ಮರುಕಳಿಸುವವೇ ?ನಡೆದ ಕಹಿ ಸ್ಮರಣೆಗಳು

ಗಗನ ಚುಕ್ಕಿ-ಭರಚುಕ್ಕಿಯಂತೆ
ನಮ್ಮ ಸಂವಾದ ವೈಖರಿಯು
ನಾನು ಹೊಂಬಿಸಿಲು,ನೀ ಹೊಂಗೆ ನೆರಳು
ಜೀವ ಮರಳಿದಂತೆ ನನಗೆ ನೀನಿತ್ತ ಭರವಸೆ


ಸಾಕಲ್ಲವೇ ನಿನ್ನ ಕಳಕಳಿ ,ನನಗೆ
ಉತ್ಸಾಹ -ಉಲ್ಲಾಸ ಒಟ್ಟುಗೂಡಿ
ಶತಕವಾದಂತೆ...‌‌‌‌

- ನಕ್ಷtra

29 Jan 2017, 10:34 pm

ಕಣ್ಣೀರು

ಕನ್ನಿoದ ಜಾರಿ ಬೀಳುವ
ಹನಿ ಕೇಳುವುದು ನಿನ್ನನ್ನು
ನಿನಗಾಗಿ ನಾ ನೆಲ ಸೇರುತ್ತಿರುವೇನು
ನನಗಾಗಿ ನೀ ಬಾಳುವೆಯಾ ಎಂದು.

ದುಃಖದಿoದ ನನ್ನನ್ನು ವ್ಯರ್ಥ ಮಾಡಬೇಡ
ಸಂತೋಷದಿoದ ನನ್ನನ್ನು ಲೋಕಕ್ಕೆ
ಪರಿಚಯಿಸು ಎಂದು.........!!!!!!!!!!!!!!!!!!

- ಚುಕ್ಕಿ

29 Jan 2017, 10:15 pm

ಸಿರಿ ಕವನ

ಮನೋರಾಡಿಯ ಮಂಥನದಿಂ
ಭಾವಗಳು ಬಸುರಾಗಿ
ಕಲ್ಪನಾ ಲೋಕವರಳಿ
ಭಾಷೆಯ ಬಣ್ಣ ಬಳಿದು
ಸತ್ವಪದ ಲಾಲಿತ್ಯದಿ
ಅಲಂಕಾರಗೊಂಡ
ಸಿರಿಯಕ್ಷರಗಳ
ನುಡಿ ತೋರಣವದು
ಕವನ
------------- ಹೊ.ಮ.ನಾ

- raj

29 Jan 2017, 09:59 pm

ಬಾಳ್ವೆ

ಮೌನವು ಚಂದ ಹೆಣ್ಣಿಗೆ,
ದುಡಿಮೆಯು ಚಂದ ಗಂಡಿಗೆ,
ಹೆಣ್ಣು ಗಂಡು ಒಬ್ಬರನ್ನೊಬ್ಬರು,
ಅರಿತಾಗ ಚಂದ ಬಾಳ್ವೆಯು..








ಲಕ್ಷ್ಮಿ,ಆರ್,ರಾಯದುರ್ಗ.

- laxmi

29 Jan 2017, 08:51 pm