Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ನಿನ್ನ ಕಂಡ ಕ್ಷಣ

ಎಂದು ನಿನ್ನ ಕಂಡೆನೂ
ಹಾಳ ಆಯಿತು ಮನಸು
ಯಾವ ಗಳಿಗೆಯಲ್ಲಿ ಹೃದಯ
ಪ್ರೀತಿಯ ಸವಿಯುಂಡಿತು
ದುರಾಯಿತು ಎಲ್ಲ ನನ್ನಿಂದ
ಕಾಣುತ್ತಿದೆ ಎಲ್ಲಡೆ ನಿನ್ನದೇ ಬಿಂಬ!

ನೂರು ಕನಸು, ನೂರು ಮನಸು
ನೂರು ನೂಟಗಳ ಹಿಂದೆ
ಓಡುತ್ತಿದ್ದ ನನ್ನ ಹೃದಯ
ನಿಂತ ನೀರಾಯಿತು ನಿನ್ನ ಕಂಡ ಕ್ಷಣದಿಂದ!

ನೂರು ಮಾತು, ನೂರು ದಾರಿ
ನೂರು ಹೃದಯಗಳ ಹಿಂದೆ
ಓಡುತಿದ್ದ ನನ್ನ ಹೃದಯ
ಚಲಿಸದ ಮಾಡವಾಯಿತು ನಿನ್ನ ಕಂಡ ಕ್ಷಣದಿಂದ!

ಇನ್ನು ಯಾರು ತಡೆದರೆನು
ಯಾರು ಏನು ಅಂದರೇನು
ಲಜ್ಜೆ ಬಿಟ್ಟು ಹೇಳುವೆ ಇಂದು ಗೆಳತಿ
ನಿನ್ನ ಪ್ರಿತಿಸುವೆ ನಾನು ಎಂದು!

- ಕುಮಾರ ಸಿದ್ದರಾಜ

29 Jan 2017, 07:13 pm

ಬರವಸೆ..

ಬರವಸೆಗಳ ಕಟ್ಟೆ ಹೊಡೆದುಹೊಯ್ತು
ಕಂಡ ಕನಸುಗಳು ವ್ಯರ್ಥವಾಹಿತು
ಮಾತುಗಳಿಗೆ ಲಗಾಮು ಹಾಕಿದಾಯ್ತು
ಇನ್ನೂ ಹೇಳಲು, ಕೇಳಲು ಏನಿಲ್ಲವಾಯ್ತು

- preethi

29 Jan 2017, 06:59 pm

ಮರಿದುಂಬಿ

ಕಲ್ಪನೆಯ ಲೋಕದೊಳಗೆ ಮರಿದುಂಬಿಯಾಗು
ನಿನಗಾಗಿ ಒಂದು ಮೊಗ್ಗು ಕಾದಿಹುದು ಅಲ್ಲಿ
ಹಲವು ಮೊಗ್ಗು ಅಲ್ಲ
ನಿನಗಾಗಿ ಒಂದು ಮೊಗ್ಗು ಕಾದಿಹುದು ಅಲ್ಲಿ..

- preethi

29 Jan 2017, 06:42 pm

ಎರಡು ಮುಖದ ಬಾಲೆ

ಎರಡು ಮುಖದ ಬಾಲೆ
ಏನು ನಿನ್ನ ಲೀಲೆ
ಉಳ್ಳವರು ಮೇಲೆ ಮೇಲೆ
ಬಡವರು ನಿನ್ನ ಕಾಲ ಧೂಳೆ

--------- ಹೊ.ಮ.ನಾ

- raj

29 Jan 2017, 06:29 pm

ಪುಸ್ತಕ

ನಿಜ ಜೀವನ ಕಥೆ ಪುಸ್ತಕ
ಬಡ ಜೀವಿಗಳ ವ್ಯಥೆ ಪುಸ್ತಕ .
ಹರಿದು ಹೋಗುವ ಹಾಳೆಯ ಮೇಲೆ
ಬರೆದ ಅಕ್ಷರಗಳಾದರೂ
ರಕ್ಷಿಸಿದರೆ ಮಹಾ ಗ್ರಂಥ ಪುಸ್ತಕ .

ಗಣ್ಯ ವ್ಯಕ್ತಿಗಳ ಚರಿತೆ ಪುಸ್ತಕ
ರಾಜ ಮಹಾ ರಾಜರ ಪಾಲನೆಯ
ಸಾರಾoಶ ಪುಸ್ತಕ.
ವೀರಾಧಿ ವೀರರ ಪರಾಕ್ರಮ ಹೊರಟ ಪುಸ್ತಕ.

ಪ್ರಾಚೀನ ಕಥೆಗಳ, ಪ್ರಸ್ತೂತ ಸಮಾಜಗಳ
ಪರಿಪೂರ್ಣ ವರ್ನನೇ ಪುಸ್ತಕ .
ಇದು ನನ್ನ ಕವಿತೆಗಳ ಪುಸ್ತಕ .✏✏✏

- ಚುಕ್ಕಿ

29 Jan 2017, 06:19 pm

ಸ್ನೇಹ

ಸ್ನೇಹವೇ ಬದುಕ ಸುಲಭವಾಗಿಸುವ ಜಗದಲ್ಲಿನ ಅತಿ ವಿಸ್ಮಯ,
ಎಂದೆಂದೂ ಕೊನೆಯಾಗದಿರಲಿ ಈ ಸುಂದರ ಬಂಧನ, ಇದಕ್ಕೆಂದೆಂದು ಇರಲಿ ಆ ದೇವರ ಅಭಯ,
ನೋವ ಮರೆಸಿ, ನಗುವ ಕಲಿಸಿ, ಮನವ ಕುಣಿಸಿ ಮಾಡುತಿಹುದು ಜಗವ ತನ್ಮಯ,

ದೂರದರೇನು ತನುವು, ಹೆಚ್ಚಾದರೇನು ಅಂತರ
ಸೋಲದಿರಲಿ ಮನಸುಗಳು, ಬಾಡದಿರಲಿ ಕನಸುಗಳು
ಎಂದೆಂದೂ ಮಿಡಿಯುತಿರಲಿ ಮನಸು,
ಬಯಸುತ ನಲ್ಮೆಯ ಸ್ನೇಹದ ಬಾಹುಬಂದನ,
ಸ್ನೇಹದ ಪರಿಧಿಯೊಳಗೆ ಎಲ್ಲರು ಸಮಾನ,
ಎಂದೆಂದೂ ಮೂಡದಿರಲಿ ಅಸಮಾಧಾನ,
ಕೊನೆಯಾಗದಿರಲಿ ಮಾತು ಮನಸ್ಸುಗಳ ಮಿಲನ,
ಎಂದೆಂದೂ ಸ್ನೇಹಕ್ಕಿರಲಿ ಎಲ್ಲರ ಅಭಿಮಾನ,
ಮತ್ತೆ ಮತ್ತೆ ಸೇರುತಿರಲಿ, ಕನಸಿನ ಬದುಕ ಹೊಸೆದು,
ಮತ್ತದೇ ಹಳೆಯ ಮುಗ್ಧ ನಗುವ ಹರಸಿ, ಬಯಸುತ ನಲ್ಮೆಯ ಸ್ನೇಹದ ಬಂಧನ

- ಶ್ರೀಕಾವ್ಯ

29 Jan 2017, 02:47 pm

ಪ್ರೀತಿ

ನಿನ್ನಲ್ಲಿ ಹುಟ್ಟಿದ ಪ್ರೀತಿ
ನನ್ನಲ್ಲಿ ಇಂದಿಗೂ ಜೀವಂತವಾಗಿದೆ .
ಮೊದಲ ಪ್ರೀತಿ ಮಣ್ಣಲ್ಲಿ ಸೇರುವವರೇಗೂ
ಮೆರೆಯುವುದಕ್ಕೆ ಆಗುವುದಿಲ್ಲ...!!

ಪ್ರೀತಿಗೆ ಏನು ಗೊತ್ತು ಈ ನೋವು
ಅದು ಯಾರನ್ನಾದರು ಪ್ರೀತಿಸಿದ್ದರೆ
ತಿಲಿಯುತಿತ್ತೇನೋ ....!!!

ಹೇಗೆ ತಾನೇ ತಿಲಿಯಲು ಸಾಧ್ಯಾ ಬಿಡಿ
ಪ್ರೀತಿಗೆ ಜನನ ಬಿಟ್ಟರೆ ಮರನವಿಲ್ಲವಲ್ಲ...!!

- ಚುಕ್ಕಿ

29 Jan 2017, 10:52 am

ಮಗವಿನ ಯಕ್ಷ ಪ್ರಶ್ನೆಗಳು

"ಅಪ್ಪ ಅಮ್ಮ ಬೇರೆ ಜಾತಿ
ನಾನು ಯಾವ ಜಾತಿ?"
ಪುಟ್ಟ ಕಂದನ ಪ್ರಶ್ನೆಗೆ
ಹೀನ ವ್ಯಕ್ತಿಗಳು ಹೇಳುತ್ತಾರೆ
ದೇವಾಲಯ ಗಂಟೆ ಬಾರಿಸಿದಂತೆ
ಮೇಲೆ -ಕೀಳು ಜಾತಿ.

ನಾನು ಜೇನು ಸವಿದಂತೆ
ಹಾಲು ಕುಡಿದಂತೆ
"ನೀನು ಧರಿಸಿದ ಬಟ್ಟೆ
ಅಪ್ಪನ ತರಹದ ಇದ್ದರೆ
ಅಪ್ಪನ ಜಾತಿ
ಅಮ್ಮನ ತರಹ ಇದ್ದರೆ
ಅಮ್ಮನ ಜಾತಿ"

"ನನ್ನನ ಏಕೆ ದೇವಾಲಯಕ್ಕೆ ಸೇರಸಲ್ಲ?"
"ದೇವಾಲಯದ ಹೊರಗಿರುವ ದೇವರು ನೀನು
ನಿನ್ನ ಪ್ರಕಾಶಮಾನ ಶಕ್ತಿಗೆ ಹೆದರಿ
ಅವರು ತಲೆ ಬಗ್ಗಿಸಿ ದೂರದಾಚೆ ಓಡವರು"

ಪುಟ್ಟ ಕಂದನು ಬಾಲ ಕೃಷ್ಣನಂತೆ ನಗುತಾ
"ಆಟಕ್ಕೆ ಸೇರಿದಂತೆ ತಡೆಯವರು"
ಕಣ್ಣಿಗೆ ಕಳ್ಳಿ ಹಾಲು ಹಾಕಿದಂತೆ
"ಪೈಪೋಟಿ ಎದುರಿಸಲು ತಾಕತ್ತವಿಲ್ಲದವರು
ನಿನ್ನ ದೂಡವರು"

"ಬರಿ ಮೈಯಲ್ಲಿ
ಒಪ್ಪತು ಊಟದಲ್ಲಿ
ಗುಡಿಸಲಿನಲ್ಲಿ
ಊರಿನಾಚೆಯಲ್ಲಿ
ಬದುಕುವರ ನಾವು ಏಕೆ?"

'ಸಾಯುಕ್ಕೆ ಮುಂಚೆ ನಾವು ಆಚೆಗೆ
ಸತ್ತ ನಂತರ ಬರುವರು ನಮ್ಮ ಕಡೆಗೆ'
ಮನಸ್ಸಿನಲ್ಲಿ ಒಣ ಕೆಮ್ಮುನಂತೆ ಗೊಣಗಿದೆ.

"ಶಿವನ ಭಕ್ತರು ನಾವು
ಪಾಪಿಗಳು ಅವರು
ಪಾಪದ ಕೊಡ ತುಂಬಿದ ಮೇಲೆ
ನಮ್ಮ ಹತ್ತಿರ ಬರವರು"

ಪುಟ್ಟ ಕಂದನಿಗೆ ಅರ್ಥವಾಗಲಿಲ್ಲಾ
"ಓದಿ ಬುದ್ದಿವಂತನಾಗೋಣ
ಇಲ್ಲಿ ಸ್ವರ್ಗ ನಿರ್ಮಾಣ ಮಾಡೋಣ
ಗಬ್ಬ ನಾತ ಗಾಳಿ ಬರದಂತೆ ತಡೆಯೋಣ
ಅಂದಕಾರ ಆಚಾರ - ವಿಚಾರ ಬಿಡೋಣ
ಹೊಸ ಜೀವನ - ವಿಜ್ಞಾನ ಕಲಿಯೋಣ
ನಿಜವಾದ ಮಾನವರಾಗಿ ಬದಕೋಣ"

ಪುಟ್ಟ ಕಂದ ದಿಟ್ಟಸಿ ನನ್ನನ ನೋಡತಿತ್ತು
ಅದು ಕತ್ತೆ ಮುಂದೆ ಕಿನ್ನರಿ ಬಾರಿಸುವಂತಿತ್ತು.

- Shinan

29 Jan 2017, 10:19 am

ನೀನಿಲ್ಲದೆ ಯಾನ ಓ ಹೃದಯವೆ, ತ

ನೀ ನನ್ನ ಪಯಣ , ನೀನೇ ನನ್ನ ಗಮ್ಯ
ನೀನಿಲ್ಲದೆ ಯಾನ ಓ ಹೃದಯವೆ, ತೀರದು
ನೀ ನನ್ನ ದೇವತೆ
ನನ್ನೆಲ್ಲಾ ಪ್ರಾರ್ಥನೆಯಲಿ ನೀ ಬೆರೆತೆ
ನೀನಿಲ್ಲದೆ ಯಾನ ಓ ಹೃದಯವೆ, ತೀರದು

ನನ್ನ ಬಿಗಿದಪ್ಪಿದೆ ನೀನಿಲ್ಲದ ಕೊರತೆ
ನನ್ನೆಲ್ಲಾ ಕೊರತಗೆ ನೀ ಒರತೆ
ಯತ್ನಿಸಿರುವೆ ನಾ ಇಂದು
ತಕ್ಕವನಾಗಿರಲು ನಿನಗೆ ಎಂದೆಂದು
ನೀನಿಲ್ಲದೆ ಯಾನ ಓ ಹೃದಯವೆ, ತೀರದು

ಈ ನನ್ನ ಆತ್ಮ , ನನ್ನೀ ದೇಹ
ನನ್ನಲ್ಲಿ ನಲಿದಿಲ್ಲ ನಿನ್ನಲ್ಲಿ ನಲಿದಷ್ಟು
ನಿನ್ನ ಕೊಡುಗೆ, ನೋವಾದರೂ ಸರಿ
ನಿಂನ್ನಿಂದ ಸಿಕ್ಕರೆ, ಅದು ಉಡುಗರೆಯೇ ನನಗೆ

ಅಲೆದಿರುವೆ ಸಾಗರದಿ, ಅರಸುತಾ ನಿನ್ನ ನೆಲೆಯ
ನನ್ನೆಲ್ಲಾ ಕೊರತಗೆ ನೀ ಒರತೆ
ಈ ಬಾಳಲಿ ಸಿಗುವೆಯಾ, ಮರುಜನ್ಮಕೆ ಕಾಯಲಾ ?
ನೀನಿಲ್ಲದೆ ಯಾನ ಓ ಹೃದಯವೆ, ತೀರದು‌

ಅರಿತೆ, ನಿನ್ನಯ ಸಾಂಗತ್ಯದಿ
ಈ ಜೀವ ಅರಳುವುದು
ನೀನಿಲ್ಲದೆ ಬಾಳುವ ಪರಿ
ನನ್ನೀ ಹೃದಯಕೆ ತಿಳಿಯದು‌

ನಿನ್ನೆಡೆ ನನ್ನ ಒಲವು ಆಗಸದಷ್ಟು
ತಿಳಿಯದ ಹಾಗೆ ನೀನಿರುವೆಯಾ
ಗಮನವು ಗಮ್ಯವ ತಿಳಿಯದಾಗಿದೆ
ಒಬ್ಬೊಂಟಿಯ ಯಾನವಿದು

ಯಾನವು ಸುಂದರ, ಅನಂತ ನಿನ್ನೆಡಗೆ
ನನ್ನೆಲ್ಲಾ ಕೊರತಗೆ ನೀ ಒರತೆ
ಅಪೂರ್ಣ ಆದರೂ, ನನ್ನ ಒಲವು ನಿತ್ಯ ಸತ್ಯ
ನೀನಿಲ್ಲದೆ ಯಾನ ಓ ಹೃದಯವೆ, ತೀರದು‌

...
* Ae Dil Hai Mushkil *
song translation.

- Indushekar Chinivar

29 Jan 2017, 09:15 am

ಸದಾ ನಗುತಿರುವ ನೀವು...

ಮನಸಿನಾಳದಿ ಇಣುಕಿ ನೋಡಿದರೆ
ಕಾಣುವುದು ಬರಿ ನೋವು
ಆದರೂ ಸಹಾ ಎಲ್ಲವ ಮರೆತು
ಸದಾ ನಗುತಿರುವ ನೀವು

ನಿಮ್ಮ ಜೊತೆಯೆ ನೆಡೆದು ಬಂದವರು
ತಿರುಗಿ ನೋಡದೆ ಮುಂದೆ ಸಾಗಿದವರು
ಎದುರಲಿ ಹೊಗಳಿ ಹಿಂದೆ ಜರಿಯುವವರು
ಜೊತೆಯಲಿದ್ದು ಇಲ್ಲದವರು.

ದೂರವಾದವರು ಮತ್ತೆ ಬರುವರು
ಕೆಲವರು ಮಾತ್ರ ಮರಳಿ ಬಾರರು
ಇರವ ಜನರು ಬೆಳೆಯಲು ಬಿಡರು
ಬಾರದ ಜನರು ಸದಾ ಹರಸುತಿಹರು

ಏಳು ಬೀಳ ಕಂಡುಕೊಂಡವರು
ಏನೇ ಬಂದರು ಮುಂದೆ ಸಾಗುವರು
ಇಂದು ಇವರು ನಾಳೆ ಅವರು
ಸದಾ ಜೊತೆಯಲೆ ಉಳಿವಕೆಲವರು

(ಸತೀಶ್ ಹುಳಿಯಾರ್)

- Satish Huliyar

29 Jan 2017, 08:47 am