ಜೀವನ ನಗುವಿನ ಉಯ್ಯಾಲೆಯಾಗಲು ಪ್ರೀತಿ ಸ್ನೇಹದ ಸರಪಳಿಯ ಬಂಧನವಿರಬೇಕು,
ಬದುಕು ಅರ್ಥಪೂರ್ಣವಾಗಲು ಮಾನವೀಯ ಮೌಲ್ಯಗಳ ಅರಿವಿರಬೇಕು,
ಜನ್ಮವು ಸಾರ್ಥಕವಾಗಲು ನಿಸ್ವಾರ್ಥ ಸೇವೆಯ ಪುಷ್ಪ ಮಾಲೆಯ ಧರಿಸಬೇಕು,
ಸಾಧನೆಯ ಗೋಪುರವೇರಲು ಸೂಕ್ಷ್ಮಮತಿಯ ಕಠಿಣ ಪರಿಶ್ರಮದ ಸಮಯೋಚಿತ ಜ್ಞಾನವಿರಬೇಕು,
ಎಲ್ಲ ಗುಣ ಗೌರವಗಳಿಗೆ ಪಾತ್ರವಾಗಲು ಅಹಂಕಾರದ ಅಂಧಛಾಯೆಯನ್ನು ದೂರವಿರಿಸಬೇಕು,
ಭೂಮಿಯ ಮೇಲಿನ ಈ ಬಣ್ಣದಾಟ ಮುಗಿದಾಗಲು ಜನ ನಿನ್ನ ಸ್ಮರಿಸಲು ಪರೋಪಕಾರದ ಪರಮ ಸೇವೆಯ ನೀ ಮಾಡಿರಬೇಕು...
ಅವಳು ನನ್ನವಳು ಎಂದಿತು ಸೂರ್ಯ
ನಿದ್ದೆ ಮಂಪರಿನಲ್ಲಿದ್ದ ಚಂದಿರ ಕೋಪಗೊಂಡಿತು..
ಸಾಕು ಸುಮ್ಮನಿರು ನೀನು ಬಳಿ ಬಂದರೆ ಆಕೆ ಸುಟ್ಟು ಹೋಗುವಳು ,ಆಕೆ ನನ್ನ ಸ್ವತ್ತು..
ಆಗ ಆರ್ಭಟಿಸುತ ತನ್ನ ಕೆನ್ನಾಲಿಗೆಯನು ಚಾಚುತ್ತ ರವಿ ಭುಸುಗುಟ್ಟಿದ..
ನಿನಗೆಲ್ಲೋ ತಲೆಕೆಟ್ಟಿರಬೇಕು ಸುಮ್ಮನೆ ಅರಚುತ್ತಿರುವೆ ಎಂದಿತು ರವಿ..
ನನ್ನನ್ನು ಸುಮ್ಮನೆ ಜರಿಯುವುದು ನಿನಗೆ ತರವಲ್ಲ ಓ ದಿವಾಕರನೇ....
ನಮ್ಮಿಬ್ಬರಲಿ ಯಾರು ಶ್ರೇಷ್ಟರೆಂಬುದನು ಆಕೆಯಲ್ಲಿ ಕೇಳೋನವೆಂದಾಗ ರವಿ ಸಮ್ಮತಿಸಿದ...
ಓ ಭುವನ ಸುಂದರಿ ಕೇಳುವಂತವಳಾಗು,ನಿನಗೆ ಯಾರು ಬೇಕೆಂದು ನೀನೇ ಹೇಳು...
ಆಗ ನಾಚಿಕೊಳ್ಳುತ್ತಾ ಬಳುಕುತ್ತಾ ಬಂದ ಪೃಥ್ವಿ ಹೀಗಂದಳು ..
ನೀವಿಬ್ಬರೂ ನನ್ನೆರಡು ಕಣ್ಣುಗಳಂತೆ.. ರವಿ ಇಲ್ಲದೆ ನಾನಿಲ್ಲ ..ನಾನಿಲ್ಲದೆ ನೀ ಇದ್ದೂ ಅರ್ಥವಿಲ್ಲ ಓ ಕಲಾನಿಧಿಯೇ...
ನಾವು ಮೂವರೂ ಒಂದೇ ದೋಣಿಯಲ್ಲಿ
ಪ್ರಯಾಣಿಸುತ್ತಿರುವವರು..
ಒಬ್ಬರಿಲ್ಲದೆ ಮತ್ತೊಬ್ಬರು ಇರಲಾರೆವು...
ರವಿ ಮುನಿಸಿಕೊಂಡರೆ ನನ್ನ ಉಸಿರು ನಿಂತಂತೆ... ನೀನಿರದೆ ನಾ ಬದುಕಿದ್ದು ಸತ್ತಂತೆ...
ನೀವಿರದ ಈ ಜಗದೊಳು ನಾ ಕಾಣ ಬಯಸುವುದಾದರೂ ಏನನ್ನು...
ನನಗಾಗಿ ನಿಮ್ಮಿಬ್ಬರ ಭಾಂದವ್ಯ ಹಳಿ ತಪ್ಪುವುದು ಸರಿಯಲ್ಲ ...
ಜೊತೆಯಾಗಿ ಬಂದವರು ನಾವು,ಜೊತೆಯಾಗಿಯೇ ಬಾಳಬೇಕಾದವರು ನಾವು ಎನ್ನುತ ಪೃಥ್ವಿ ಕಣ್ಣೀರು ಹಾಕಿತು....
ಮನ: ಕರಗಿದ ಚಂದ್ರ-ಸೂರ್ಯ ಇಬ್ಬರೂ ಇಳೆಯಲ್ಲಿ ಕ್ಷಮೆ ಕೇಳಿದರು...
ತರುವಾಯ ತಮ್ಮ ನಿತ್ಯದ ಕಾರ್ಯದಲಿ ನಿರತರಾದರು...
ಸೂರ್ಯ ಅಸ್ತಂಗತನಾದ,ಚಂದ್ರ ಮೋಡದ ಹಿಂದೆ ಮರೆಯಾದ...!!!
ರವಿಯ ಉದಯವನು ಕಾಯುತಿದ್ದವು
ಹಳದಿ ಹೂವಿನ ಮೊಗ್ಗು ಗಳು
ಮುಚ್ಚಿದವು ಅದನು ಪತ್ರ ಗಳು
ಎಸಳುಗಳು ಅರಳಿದವು ದಿನಕರನ ಆಗಮನಕೆ
ಬಂಗಾರದ ಗೊಂಚಲುಗಳು ಮರದ ರೆಂಬೆಗಳಲಿ
ತೂಗುತ್ತಿದಂತೆ ಕಾಣುತ್ತಿದ್ದುವು
ಸೌಂದರ್ಯವ ಲೋಕ್ಕಿತ್ತು
ತನ್ನಲ್ಲಾದ ಕರ್ಮವ ಮಾಡಿ
ದಿನದ ಜೀವನವ ಮುಗಿಸಿ
ಬಾಡಿ ಉದುರಿದವು ಅರಳಿದ ಹೂವು.