Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಚಿಂತೆ

"ನನ್ನದೋಂದು
ಚಿಂತೆ
ನಿನ್ನದೋಂದು
ಚಿಂತೆ
ಚಿಂತೆ, ಚಿಂತೆ ಸೇರಿ
ಆಯೀತೋಂದು
ದೊಡ್ಡ ಸಂತೆ
ಆ ಸಂತೆಯಲ್ಲಿ
ಚಿಂತೆಗಳೆಂಬ
ಕಂತೆಗಳನ್ನು
ಜನರು ಕೊಳ್ಳಲಾಗದೆ
ಸುಮ್ಮನೆ ಕುಳಿತ್ತಿದ್ದಾರಂತೆ"

ಹರೀಶ್ ನಾಯಕ ಎಂ
ಕಡಬ

- Harish

27 Jan 2017, 12:49 pm

ಮೂಕನ ಮಾಡಯ್ಯ ಎನನು.....!!!

ನಾ ಮಾಡಿರುವ ತಪ್ಪು ಎನ್ನ ಅರಿವಿಗೆ ಬಾರದಾಗಿದೆ...
ದಾರಿ ಹುಡುಕುವ ಕಣ್ಣುಗಳು ಸೋತು ಸುಣ್ಣವಾಗಿವೆ...
ಅರಿವೇ ಇಲ್ಲದ ಈ ಜಗದೊಳು ನಾ ಏನ ಹುಡುಕಲಿ....
ಕಲ್ಪನೆಗೂ ನಿಲುಕದ ನಿಲವು ನನ್ನದಾಗಿದೆ...
ಅಸತ್ಯದ ಕೂಪದೊಳು ಮಿಂದು ಬದುಕು ಅರ್ಥಹೀನವಾಗಿದೆ..
ಗತಿ ನೀನೇ ಎನಗಿಂದು ಬಾಳು ಬೆಳಗಲು ..
ದಯೆ ತೋರಿ ಒಮ್ಮೆ ಒಲಿದು ಬಾರಯ್ಯ
ಓ ಶಿವನೇ ಎನ್ನ ಮೂಕನ ಮಾಡಯ್ಯ...!!

- ನಮಿತ ಗಟ್ಟಿ

27 Jan 2017, 12:05 pm

ಪ್ರೀತಿ ನೀ ಶಾಶ್ವತನಾ.?

ಖಾಲಿ ಖಾಲಿ ಏಕಾಂತ

ಈ ನನ್ನ ಮೌನಗಳು,

ಮಾತಾಡುವ ನೀರೀಕ್ಷೆಗಳು,
ಅಂದು ನಸು ನಕ್ಕು ಪಿಸುಗುಟ್ಟಿದ
ಪಿಸುಮಾತುಗಳ ಕಚಗುಳಿ
ಇನ್ನು ನನ್ನೆದೆಯಲ್ಲಿದೆ.

ಹೇಯ್ ಹುಡುಗಿ ನಾ ಒಂಟಿಯಲ್ಲ ಕಣೇ
ನೀ ಬಿಟ್ಟುಹೋದ ನಿನ್ನ ಬೇಡಗಳು
ಇನ್ನು ನನ್ನ ಜೊತೆಯಲ್ಲೇ ಜೊತೆಯಾಗಿವೆ..........

ಒಲವೇ ನೀನೆಲ್ಲಿರುವೆ.....!!!!!!!

ಪ್ರೀತಿ ನೀ ಶಾಶ್ವತನಾ...

- ಧನು

27 Jan 2017, 01:27 am

ನಿನ್ನವರೇ

" ನಿನ್ನವರೇ ನಿನಗಿಲ್ಲ "

" ಸಂಬಂದ ಸುಳಿವಿಲ್ಲ "

" ಪ್ರೀತಿ ಪ್ರೇಮದ ಮಾತು "

" ಕ್ಯೆಗೆಟುಕದ ತುತ್ತು "

" ಮತ್ತೇನು ಉಳಿದಿಹುದು "

" ಮೂಢ ನಿನಗಿಲ್ಲಿ "

" ಅವರವರ ಬದುಕಿಗೆ "

" ಆಟದ ಗೋಂಬೆ ನೀನಿಲ್ಲಿ "

ಮಂಜು

- ಮಂಜುM

26 Jan 2017, 07:02 pm

ಗೆಳತಿ..

ನನ್ನ ಉಸಿರಾಟದ ಈ ತಿರುವಿನಲ್ಲಿ
ನೀ ಸಿಕ್ಕೆ ಗೆಳತಿಯಾಗಿ
ಭರವಸೆ ಮೂಡಿಸಿ ಬದುಕಿನಲ್ಲಿ
ಅರಳಿದೆ ನನ್ನೆದೆಯ ಸುಮವಾಗಿ

ಇರುಳಲ್ಲಿ ನಲಿದೆ ಕನಸಾಗಿ
ಹಗಲಲ್ಲಿ ಮೂಡಿದೆ ನನಸಾಗಿ
ಇಹಪರ ಮರೆತೆ ನಿನ್ನೊಲವ ಮಡಿಲಲ್ಲಿ
ಕಾಣದ ಆ ದೇವರ ಕಾಣುತಾ ನಿನ್ನಲ್ಲಿ

ಸಂತಸದ ಕ್ಷಣಗಳ ಮರಳಿಸಿದೆ
ಬಾಳ ಕತ್ತಲ ಸೀಳುತಾ ನೀ‌ ನಸುನಗುತಾ
ಬದುಕ ಪುಟಗಳ ನೀ ತುಂಬಿದೆ
ಒಲವ ಶಾಯಿಯಲಿ ಬರೆಯುತಾ...

- Indushekar Chinivar

26 Jan 2017, 06:51 pm

ಮತ್ತೊಮ್ಮೆ ಹುಟ್ಟಿ ಬಾ.....ಓ

ಯಾರೂ ಕಾಣದ ಸುಂದರ ಕನಸೊಲು ಬಂದವ ನೀನು....
ಮಮತೆಯ ಕಡಲೊಲು ಮಿಂದು ಬಂದಷ್ಟು ಸಂತೋಷ ...
ವರ್ಣನೆಗೆ ನಿಲುಕದಷ್ಟು ಹೆಜ್ಜೆಗಳ ಹಾದಿ..
ಮನವೀಗ ಮರುಳಾಗಿದೆ ನಿನ್ನ ಮಧುರ ಧ್ವನಿಗೆ...
ಕನಸಲ್ಲೂ ಪರಿತಪಿಸುವಂತಾಗಿದೆ ಆ ನಿನ್ನ ಹೆಸರಿಗೆ....
ಕೈ ಹಿಡಿದು ನಡೆಸುವೆಂದುಕೊಂಡೆ ಆದರೆ ಮನವ ಮುರಿದು ಹೋದೆ.....
ಧರೆಗಿಳಿದು ಬಂದ ದೇವರೆಂದುಕೊಂಡೆ ಆದರೆ ವರ ನೀಡದೆ ಮೂಕನಾಗಿಬಿಟ್ಟೆ...
ಗೋಗರಿಯುವ ಹೃದಯ ನನ್ನದಲ್ಲ, ಕೇಳಿಸಿಕೊಳ್ಳುವ ಮನಸ್ಸು ನಿನಗಿಲ್ಲ ...
ಬಿಟ್ಟು ಹೋದ ದಾರಿಯ ಕಾಯುವುದು ತಪ್ಪಿಲ್ಲ..
ಕಣ್ಣೀರಿನ ಮಳೆಯೂ ಇಳೆಯ ತನಿಸಿಲ್ಲ....
ಮೌನ ಮುರಿದು ಮಾತಾಡಿದರೂ ನೀ ಸುಮ್ಮನಿರುವೆ....
ಕಾಯುವೆನು ನೀ ಬರುವ ದಾರಿಯನು...
ಮತ್ತೊಮ್ಮೆ ಹುಟ್ಟಿ ಬರುವೆಯಾ... ಓ ಮನಸೇ ಕೇಳುವೆಯಾ ......!!

- ನಮಿತ ಗಟ್ಟಿ

26 Jan 2017, 05:33 pm

ನೀನಿಲ್ಲದೆ...

ನಿನ್ನ ಮೊಗವ ಕಾಣದೆ....
ಕತ್ತಲಿನಲ್ಲಿರುವನು ಸೂರ್ಯ ಮೋಡದಲಿ ಮರೆಯಾಗಿ,
ನಿನ್ನ ಪಾದ ಚುಂಬನವಿಲ್ಲದೆ....
ಸೌಂದರ್ಯ ಕಳೆದುಕೊಂಡು ಬರಡಾಗಿದೆ ಈ ಭೂಮಿ,
ನಿನ್ನ ಸ್ಪರ್ಶಕ್ಕಾಗಿ ಉಸಿರು ಬಿಗಿ ಹಿಡಿದು....
ಕಾದು ಕುಳಿತಿದೆ ಸದ್ದಿಲ್ಲದೆ ಈ ಗಾಳಿ,
ನಿನ್ನ ಭೇಟಿಗಾಗಿ ಕಾದು,ಕಾದು....
ಸ್ಥಬ್ಧವಾಗಿ ನಿಂತಿದೆ ಸಾಗರ,
ಸಾಗರದ ಅಲೆಗಳ ಮೂಲಕ ನೀರಿಲ್ಪದೆ
ಬಾಯಾರಿ ಬಳಲಿದೆ ತೀರದ ಮರಳು,
ನನ್ನ ಪ್ರೀತಿ ಒತ್ತಟ್ಟಿಗಿರಲಿ....
ಆ ಸೂರ್ಯ, ಈ ಭೂಮಿ,ಗಾಳಿ ಪ್ರಕೃತಿ ನಿನ್ನ
ಮೇಲಿಟ್ಟಿರುವ ಪ್ರೀತಿಗಾದರೂ ನೀನು ಬರುವೆಯಾ?.

- ಮುತ್ತು

26 Jan 2017, 04:35 pm

ಹಿಂತಿರುಗಿ ಒಮ್ಮೆ ಬಾರ

ಒಲವಿನ ಘಂಟೆ ಬಾರಿಸಿ ಹೊಂಟೆ
ಏತಕೇ ನೀ ಬಹುದೂರ!!
ಪ್ರೀತಿಯ ನಾದ ಮೊಳಗುತಲಿಹುದು
ಹಿಂತಿರುಗಿ ಒಮ್ಮೆ ಬಾರ!!

ಹೃದಯದ ಕೂಗು ಕೇಳದೆ ನಿನಗೆ
ಅರಿಯದೇ ಹೊರಟೆ ಏತಕೆ ಹೀಗೆ!!
ನೋಟದಿ ನೀನು ಸರಿಯುವ ಮುನ್ನ
ಹಿಂತಿರುಗಿ ಒಮ್ಮೆ ಬಾರ!!

ನೆನಪಿನ ಬುತ್ತಿ ತಾ ಸೆರೆಯಾಗಿ
ಕರಗುತಲಿಹುದು ಕಂಬನಿಯಾಗಿ!!
ನಾ ಕಾದಿರುವೆ ನಿನ್ನ ಒಲವಿಗಾಗಿ
ಹಿಂತಿರುಗಿ ಒಮ್ಮೆ ಬಾರ!!

- ಪಿ.ಜಿ.ಜ್ಯೋತಿ

26 Jan 2017, 11:44 am

ಕನಸು

ಸಾಯುವ ಮನಸ್ಸಾಗಿದೆ,
ಮನಸ್ಸಿಗೆ ಏನಾಗಿದೆ ಎಂದು,
ಕೇಳಬಾರದೆ.
ಕಣ್ಣು ಮುಚ್ಚಿರುವೆ,
ಕನಸಲೆ ಬಂದು ಹೊಗಬಾರದೆ...
#ಕನಸಿನ ಹುಡುಗಿ

- ತೇಜಸ್

26 Jan 2017, 11:37 am

ಪುಣ್ಯ ಭೂಮಿ

ಇದು ಏಕ ಪುಣ್ಯ ಭೂಮಿ
ಇದು ನನ್ನ ತಾಯಿ ನಾಡು
ಭಾರತ ನನ್ನ ಭಾರತ
ಧೀರರ ಜನನಿ ಭಾರತ!!

ಇದೊಂದು ಭವ್ಯ ನಾಡು
ಇದರಲ್ಲಿ ನಮ್ಮ ಬೀಡು
ಸಾಗುವ ನಾವು ಸಾಗುವ
ಈ ದೇಶದ ಕೀರ್ತಿ ಸಾರುತ!!

ನಾಡ ಗುಡಿಯ ಹಣತೆ ನಾವು
ವೀರತನದಿ ಉರಿಯಬೇಕು
ಬೆಳಗುವ ನಾವು ಬೆಳಗುವ
ಈ ದೇಶದ ಅಭಿಮಾನವ!!

ಅಂದು ಇಂದು ಎಂದೆಂದೂ ಒಂದು
ಜಾತಿ ಭೇದ ನಮಗಿಲ್ಲವೆಂದು
ಬಾಳುವ ನಾವು ಬಾಳುವ
ಈ ದೇಶಕೆ ಒಳ್ಳೆ ಪ್ರಜೆಯಾಗಿ
ಬದುಕುವ!!

- ಪಿ.ಜಿ.ಜ್ಯೋತಿ

26 Jan 2017, 11:29 am