ಬದುಕಿದು ಕಗ್ಗತ್ತಲ ನೀರವ ಮೌನ
ಯಾರಿಗೂ ಕಾಣದ ಕತ್ತಲಲ್ಲಿ ಕಣ್ಣೀರದೇ ಧ್ಯಾನ
ನಗುವಾಗಲು ಅನುಭವಕೆ ಬಾರದು ಸಂತಸ
ಅತ್ತಾಗಲು ದೂರಾಗವು ಕಂಡ ನೋವುಗಳು, ವಿಪರ್ಯಾಸ
ಕತ್ತಲಲಿ ಕಣ್ಣ ನೀರು ಜಾರುತಿದೆ ಕೆನ್ನೆಯ ಸವರಿ
ಅದು ಕೂಡ ಉಳಿಸುತಿದೆ ಮತ್ತಷ್ಟು ನೆನಪುಗಳ
ಕೆನ್ನೆಯ ಮೇಲೆ ತಾ ಜಾರಿದ ಕುರುಹ ಉಳಿಸಿ
ತಲೆದಿಂಬಿಗೂ ಭಯವೇನೋ ಸುರಿವ ಮಹಾಪೂರ ಮಳೆಗೆ ಹೆದರಿ
ನಗುವಾಗಲು ಕಾಡುವುದು ಮನಸೆಂಬ ಮಾಯೆ
ಕಣ್ಣಂಚಲಿ ತಂದು ನಿಲ್ಲಿಸುವುದು ನೋವಿನ ಛಾಯೆ
ಬಾಗಿ ನಗುತಿರಲು ತುಟಿಗಳು, ತುಂಬಿ ಬಂದಿವೆ ಕಣ್ಣುಗಳು
ಒರೆಸಲು ಚಾಚಿ ಬಂದರು ಕೈಗಳು,
ಏನೋ ಬಿತ್ತು ಕಣ್ಣಿಗೆ ಎಂದು ನುಡಿದಿವೆ ನಗುವ ತುಟಿಗಳು.
ಮನಸ್ಸಿದು ಅಳುಕಿ ಅಳುತಿದೆ ಕ್ಷಣಕ್ಷಣವೂ
ಮತ್ತೆ ಮತ್ತೆ ಕಾಣುತ್ತಿರುವ ಸೋಲುಗಳ ನೆನೆದು
ಸಾವಿಗೂ ದೂರ ನೋವು ಕಂಡ ಮನಸುಗಳು
ಕಾಣದೆ ದಾರಿ ಮತ್ತೆ ಮತ್ತೆ ಬದುಕುತಿವೆ ನಂಬಿ ನಾಳೆಗಳಲಿ ಕಾಣಬಹುದು ಬಾಳ ಬೆಳಗುವ ಕಿರಣಗಳು.
ನಾ ಒಡಲಲ್ಲೆ ಇದ್ದೇನೆ ಎಂದಾಗ ಖುಷಿಪಟ್ಟಳು..ಒಡಲಲ್ಲೆ ಬಗೆ-ಬಗೆಯ ತಿಂಡಿ-ತಿನಿಸುಗಳನ್ನು ತಿನಿಸಿದಳು..
ತಾನು ಈಗ ಎರಡು ಹೃದಯದ ಒಂದೇ ದೇಹ ಎಂದು ಸಂತೋಷಪಟ್ಟಳು...
ನಾ ಉದರದಲ್ಲೆ ಒದ್ದರೂ,ಹೊಡೆದು-ಒದ್ದಾಡಿದರು ಸಹಿಸಿಕೊಂಡಳು..
ಭೂಮಿಗೆ ನಾ ಬರುವ ಮುಂಚೆಯೇ ಪ್ರೀತಿಸುತ್ತಿದ್ದಳು..
ಭೂಮಿಗೆ ಬಂದ ಮೇಲೆಯೂ ಪ್ರೀತಿಸುತ್ತಿರುವಳು..
ಭೂಮಿ ಬಿಟ್ಟು ಹೋದ ಮೇಲೆಯೂ ಪ್ರೀತಿಸುವಳು...
ಅವಳೇ ಅವ್ವ. ..ಅವ್ವನೇ ಎಲ್ಲಾ. .
ಅವಳಿಲ್ಪದಿದ್ದರೆ ಏನೂ ಇಲ್ಲಾ..
ಅರಳಲಿ ಕನ್ನಡ
ಜನಮನ ವನದಲಿ
ಗೀತೆಯಾಗಲಿ ಕನ್ನಡ
ಗಾಯಕರ ಕೊರಳಲಿ
ಮಂತ್ರವಾಗಲಿ ಕನ್ನಡ
ಮಕ್ಕಳ ನಾಲಿಗೆಯಲಿ
ಮಾತೆಯಾಗಲಿ ಕನ್ನಡ
ನಾಡಿವಾಸಿಗಳ ಮನದಲಿ
ಬೆಳಗಲಿ ಕನ್ನಡ
ಸರ್ವರ ಹೃದಯ ದೇಗುಲದಲಿ!
_________________________
ಬಸವಪ್ರಿಯ