Kannada Poems
Deprecated: Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಇಚ್ಚಿಸಿದ್ದು ಸಿಗಲಿಲ್ಲ ಅಂದ್ರೆ
ಅದರ ಉಪಯೋಗ ಇಲ್ಲ ಅಂದುಕೊಂಡು ಸುಮ್ಮನೇ ಇರಬೇಕು
ಯಾಕೆಂದರೆ ..
ಅದನ್ನು ಪಡೆಯುವ ಆತುರದಲ್ಲಿ
ತುಂಬಾನೇ ಕಳೆದುಕೊಂಡು ಬಿಡ್ತೀವಿ..
- basavarajsirnayakpreethu
20 Jan 2017, 02:23 pm
ಸಹನೆ ಅಂದ್ರೆ ಮೌನವಾಗಿರುವುದಲ್ಲ
ಮೌನ ಅಂದ್ರೆ ಎಲ್ಲವನ್ನು ಸಹಿಸಿಕೊಳ್ಳವುದಲ್ಲ.
- basavarajsirnayakpreethu
20 Jan 2017, 02:20 pm
ಅಜ್ಞಾನದ ಪೊರೆ ಹರಿದು
ಸುಜ್ಞಾನದ ತೆನೆ ಬೆಳೆದು..
ಸಮೃದ್ಧಿ ನೆಲೆಗೊಂಡು
ಭರವಸೆಯ ನಾಳೆಗಳು ನಮ್ಮದಾಗಲಿ..
- basavarajsirnayakpreethu
20 Jan 2017, 02:19 pm
ಜನರು ಮೆಚ್ಚುವ ಅಂದ
ನಿಮ್ಮಲ್ಲಿದ್ದರೆ ಸಾಲದು
ಎಲ್ಲಾರು ಮೆಚ್ಚುವ ಮನಸು ಇರಬೇಕು .
ಸಾವಿರ ಅಂದವಾದ ಮುಖಗಲಿಗಿಂತ
ಒಂದು ಅಂದವಾದ ಮನಸು ಸಾಕು
ಜೀವನ ಸಂತೋಷವಾಗಿ ಸಾಗಲು .
- ಚುಕ್ಕಿ
20 Jan 2017, 12:08 pm
ನೀನು ಸಿಕ್ಕ ಮೇಲೆ ನನಗೆ
ಬೇಸರವೆoಬ ಪದ ಮರೆತೋಗಿತ್ತು .
ನಿನ್ನ ಸನಿಹದಲ್ಲಿ ಕೂತಾಗ
ಕಣ್ಣೀರೆ ಕನ್ಮರೇಯಾಗೀತ್ತು.
ನಿನ್ನ ನಗುವಿನಲ್ಲಿ ನನ್ನ ಪ್ರಪಂಚವೇ
ಸಾವಿರ ಸ್ವರಗಳ ಸಂಗೀತವಾಗಿತ್ತು .
ಆದರೆ ನೀನಿಲ್ಲದೆ ನನ್ನ ಮನಸು
ಬೇಸರದ ಬಂದನದಲ್ಲಿ ಮೌನವಾಗಿತ್ತು .
- ಚುಕ್ಕಿ
20 Jan 2017, 11:15 am
ಕಷ್ಟವ ಕಳೆವ ನೀನೆ ಬಂಧು
ಹಿಂದು ಮುಂದು ಎಂದೂ ಬೆಂದು
ನೀನಿಲ್ಲಿರುವೆ ಎಂದೈತಂದು
ಕಂಡ ಕನಸು ನನಸಾಗುವುದೆಂದು
ಕಾಣದೆ ನಿನ್ನ ಅರಸಿ ನೊಂದು
ಬಲವಿಲ್ಲದ ಬರಿಗೈಲಿ ನಿಂದು
ಬೇಡುವೆ ನಾ ನಿನ್ನೆದುರಲಿ ನಿಂದು
ಕರುಣಿಸಿ ಎನ್ನ ಕಾಯಬೇಕೆಂದು
ಎಲ್ಲಿರುವೆ ನೀ ಎಲ್ಲಿರುವೆ
- Kumara.C
20 Jan 2017, 08:26 am
ವಿಶ್ವಾಸದ ಮರಳಲ್ಲಿ
ನಂಬಿಕೆಯ ಅಡಿಯಲ್ಲಿ
ಒಲವಿನ ಗುಬ್ಬಚ್ಚಿ ಗೂಡ ಕಟ್ಟಿ
ಬಾಳಲಿ ಕಾದಿರುವೆ, ಸಾಗರ ತೀರದಿ
ಕೊಚ್ಚಿಹೊಗುವ ಅಲೆಗಳ ಹೊರತು...
ಕೆದರಿ ರಾಶಿ ಮರಳು,
ತಟ್ಟಿ ತಟ್ಟಿ ಬೆಸೆದೆ ಭಾವಗಳ
ಒಲವ ಸೂರಲಿ ,ಬಿಸಿಲ ಬೇಗೆಯಲಿ
ಕೊಚ್ಚಿಹೊಗುವ ಅಲೆಗಳ ಹೊರತು...
ಎದೆಯ ಕನಸುಗಳ ಎಳೆಯಾಗಿ ಹೊಸೆದೆ
ಎಳೆ ಎಳೆಯಲ್ಲಿ ಪ್ರೀತಿಯ ಬೆಸೆದೆ
ಭಾವತರಂಗದಲಿ ತೇಲುತಾ ,
ಕೊಚ್ಚಿಹೊಗುವ ಅಲೆಗಳ ಹೊರತು...
ಹಗಲಲಿ ಹಾಡಿದೆ, ನಲಿದೆ
ದಣಿದೆ ,ಧಣಿಯಾದೆ
ಮನದ ಪದಕೆ ದನಿಯಾಗುತಾ
ಇರುಳಲಿ ಅರಳಿದೆ, ನರ್ತಿಸಿದೆ
ಚುಕ್ಕಿ ಚಂದ್ರಮರ ಕೂಡೆ
ಕನಸಿನ ಕೊಡೆ ಹಿರಿಯುತಾ
ಕೊಚ್ಚಿಹೊಗುವ ಅಲೆಗಳ ಹೊರತು...
ಎದೆಗೂಡಲ್ಲಿ ಬೆಚ್ಚನೆ ಭಾವಯಾನ
ನವಿರು ಸಂವೇದನೆಯ ಆಲಾಪನ
ಪುಟ್ಟ ಪುಟ್ಟ ಆಸೆಗಳ ಪೊಟ್ಟಣ
ನನ್ನೀ ಪ್ರೇಮ ಪಟ್ಟಣ
ಜೋಪಾನ ಮಾಡಬೇಕಿದೆ ಇದ ನಾ
ಕೊಚ್ಚಿಹೊಗುವ ಅಲೆಗಳ ಹೊರತು...
- Indushekar Chinivar
20 Jan 2017, 07:32 am
ಕಣ್ಣ ರೆಪ್ಪೆ ಮುಚ್ಚದೇನೇ
ಪುಟ್ಟದೊಂದು ಗೂಡಿನಲ್ಲಿ
ಜೋಡಿ ಹಕ್ಕಿಯಂತೆ ನಾವು
ಪ್ರಣಯ ಗೀತೆ ಹಾಡಿ ನಲಿವ!!
ಕತ್ತಲಿಗೆ ಬೇಲಿ ಹಾಕಿ
ಸುತ್ತಲೂ ದೀಪ ಹಚ್ಚಿ
ನಡುವೆ ಕುಳಿತು ನಿನ್ನ ಅಂದ
ನೋಡುತ್ತ ಮೈಯ ಮರೆವೆ!!
ಓಡುತ್ತಿರುವ ಜಿಂಕೆಯ
ಬೆನ್ನಟ್ಟ ಹೋಗಿ ಒಮ್ಮೆ
ಕಾಲಿಗೆ ಗೆಜ್ಜೆ ಕಟ್ಟಿ
ಸಂಬ್ರಮಿಸಿದಂತೆ ಈ ಪ್ರೀತಿ!!
ಬೊಗಸೆಯಲಿ ಮಂಜಿನ ಹನಿಯ
ಬಚ್ಚಿಟ್ಟು ತಂದು ಇನಿಯ
ಸಿಂಧೂರ ತಿಲಕವಾಗಿ
ನೀನಿಡು ಒಮ್ಮೆ ಸಾಕು!!
ಹೃದಯದಲಿ ನಿನ್ನಯ ಹೆಸರ
ಬರೆದಿಹುದು ನನ್ನಯ ಉಸಿರು
ಇರಬೇಕು ನೀನು ಎಂದೂ
ನನ್ನ ಜೊತೆಯಲಿ
ಪ್ರತಿ ಯುಗ ಯುಗದಲಿ!!
- ಪಿ.ಜಿ.ಜ್ಯೋತಿ
20 Jan 2017, 03:46 am
ಪ್ರೇಮವನ್ನೇ ಸುಳ್ಳಾಗಿಸಿ
ಪ್ರೀತಿ ಔತಣ ಬಡಿಸಿದ ಅಪ್ಪ
ನಂಬಿಕೆ,ಮಮಕಾರ
ವಿಶ್ವಾಸದ ಬೆರಳಲ್ಲಿ ನಡೆಸಿದ ಅಪ್ಪ
ಬೆಳೆವ ಮಾತಿಗಿಂತ
ಮೌನವೇ ಲೇಸೆಂದು ಬದುಕಿದ ಅಪ್ಪ
ಕಡಲ ಒಡಲಾಳದಲ್ಲಿ ಬವಣೆಯಿ
ದ್ದರೂ ಮುತ್ತಂತೆ ಬದುಕಿದ ಅಪ್ಪ
ಮನದ ಕೋಣೇಲಿ ತಿಮಿರ
ವಿದ್ದರೂ ಬೆಳಗು ಮೂಡಿಸಿದ ಅಪ್ಪ
ತಾರೆಯಂತೆ ಮಿನುಗಿ
ಹೇಳದೆ ಮರೆಯಾದ ಅಪ್ಪ......
ಸ್ಮರಣೆ ಬಂದರೆ ಮನಕೆ
ಕಣ್ ಪನಿ ಮಿಡಿವುದಲ್ಲ ಅಪ್ಪ....
- ನಕ್ಷtra
19 Jan 2017, 10:46 pm
ಸ್ನೇಹದ ಮಧುರತೆಯ ಸವಿಯಲು
ನನ್ನೆಲ್ಲ ನೋವು ಮರೆಯಲು
ನಿಮ್ಮ ಸವಿ ಸನಿಹವ ಪಡೆಯಲು
ಕಾತುರದಿಂದ ಕಾಯುತಿರುವೆ
ನಿಮಗಾಗಿ ನಿಮ್ಮ ಸ್ನೇಹಕ್ಕಾಗಿ...
- chinmayi
19 Jan 2017, 10:02 pm