Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಅಂಗೀಕಾರ

ನಿನ್ನ ಪ್ರೀತಿಯನ್ನು ಯಾವ ರೀತಿಯು
ನನಗೆ ತಿಳಿಸಬೇಡ ಕೇವಲ
ನಿನ್ನ ಅಂಗೀಕಾರ ತಿಳಿಸು ಸಾಕು
ನಮ್ಮಿಬ್ಬರ ಕಡೇಯಿoದಲು
ನಾನೆ ಪ್ರೀತಿಸುತ್ತೇನೆ.......!!!!!

- ಚುಕ್ಕಿ

19 Jan 2017, 07:50 pm

ಕಣ್ಣ ನೋಟ

ಕಣ್ಣೆರಡು ನನಗೆ ಇದ್ದರೂ
ನಾ ನಿನ್ನ ಕಾಣದಾದೆ
ಆದರೂ.......................

ನನ್ನೆರಡು ಕಣ್ಣುಗಳು
ಕಾಣುತಿವೆ ನಿನ್ನನ್ನು
ಅದು ನೋಟದಲ್ಲಲ್ಲ......

ನನ್ನಂತರಂಗದ ಭಾವನೆಯಲಿ....

- ಪಿ.ಜಿ.ಜ್ಯೋತಿ

19 Jan 2017, 06:30 pm

ನೀ ಮಾಡಿದ ತಪ್ಪಿಗೆ ನನಗೆ ಶಿಕ

ಪರಿಚಯವಾದದ್ದು ನೀನು
ಪ್ರೀತಿಯ ತಿಳಿಸಿದ್ದು ನೀನು
ಕ್ಷಮೆ ಕೇಳಿದ್ದು ನೀನು
ದೂರವಾದೆ ನೀನು .

ಮೌನಿಯಾದೆ ನಾನು
ಮನಸು ಕೊಟ್ಟೆ ನಾನು
ತಿಲಿಯಲಿಲ್ಲ ನೀನು
ದೂರವಾದೆಯೇನು.

- ಚುಕ್ಕಿ

19 Jan 2017, 06:22 pm

ಅಭಿನಂದನೆ

ನಿನ್ನ ಹಂಬಲಿಸಿ ಹಂಬಲಿಸಿ
ಧರೆಗೆ ಜಾರಿದ
ಕಂಬನಿಯ ಅಳಿಸಿದ
ಸಂಜೆಯ
ಈ ತುಂತುರು ಮಳೆಗೆ
ನನ್ನ ಅಭಿನಂದನೆ...........

- ಪಿ.ಜಿ.ಜ್ಯೋತಿ

19 Jan 2017, 06:13 pm

ನೆನಪು

ನೆನಪಿನ ಸಂತೆಯಲ್ಲಿ
ಬರೀ ನೆನಪುಗಳದೇ
ಮಾರಾಟ.....................

ನಾ ಮಾರ ಹೊರಟಿರೋ
ನಿನ್ನ ನೆನಪ
ಕೊಂಡುಕೊಳ್ಳುವ
ಮನಸಿದೆಯೇ ನಿನಗೆ......

- ಪಿ.ಜಿ.ಜ್ಯೋತಿ

19 Jan 2017, 06:10 pm

ಸಾಕೆನ್ನುವ ಒಲವು

ಸಾಕು ಸಾಕೆನ್ನುವ ಒಲವ
ಬೇಕೆಂದಿದೆ ಭಾವ!!
ಬೇಡಿಕೆಯ ಮುಂದಿಟ್ಟು
ಕೊರಗುತಿದೆ ಜೀವ!!

ಎದೆಯಲ್ಲಿ ಉಕ್ಕಿದೆ
ವಿರಹದ ಲಾವ!!
ತಡೆಯಲು ಆಗದೇ
ಒಂಟಿತನದ ಕಾವ!!

ಸಾಕು ಸಾಕೆಂದರೂ
ದೊರೆಯತ್ತಿರುವ ನೋವ!!
ನಾ ಕಾಣಬೇಕಿದೆ
ಆ ನೋವುಗಳ‌ ಸಾವ!!

- ಪಿ.ಜಿ.ಜ್ಯೋತಿ

19 Jan 2017, 05:37 pm

ತೂಕ

ಅತಿ ಭಾರ ಈ ಶರೀರ
ಊಟವಿಲ್ಲ -ನಿದ್ದೆಯಿಲ್ಲ
ಸಣ್ಣ ಆಗಬೇಕೆoಬ ಆಸೆ ಬಿಟ್ಟರೆ.

ಅತ್ತು ಅತ್ತು ಮನಸಿನ
ಬಾರ ಜಾಸ್ತಿಯಾಗುವುದು ಬಿಟ್ಟರೆ
ದೇಹದ ಭಾರ ಇಳಿಯುತ್ತಿಲ್ಲ .

ಇದೇ ನನ್ನ ದುರಂತ ಎಂದುಕೊಳ್ಳುವಷ್ಟರಲ್ಲಿ
ಆಯಿತೊoದು ಅದ್ಬುತ .
ಒಂದು ದಿನ ನನ್ನ ತೂಕ ನೋಡಿದ್ರೆ
ಆಯಿತದು ಅರವತ್ತು.

ನಗು ಚಿಮ್ಮುತಿತ್ತು ನನ್ನ ಮನಸು
ಅತ್ತು ಅತ್ತು ........!!!!!!

- ಚುಕ್ಕಿ

19 Jan 2017, 05:31 pm

ಪ್ರೀತಿ

ಮನ‌‌ಸು ಮನಸು ಬೆಸೆಯುವ
ನೋಟ ನೋಟ ಸೇರುವ
ಶಾಂತಿ ನೀತಿ ರೀತಿ ಕಲಿಸುವ
ನಿಶ್ಕಲ್ಮಶ ಒಲವು ಬರಿಸುವ
ರೂಪವೆ ಪ್ರೀತಿ

- ಗೌಡಕಲರ್ಪುಲ್

19 Jan 2017, 05:27 pm

ಕವನ

ಮನಸಲ್ಲಿ ಒಂದು ಯೋಚನೆ
ದಿನಕ್ಕೊಂದು ಕಲ್ಪನೆ
ಏನೇನೋ ಭಾವನೆ
ಚಿತ್ರಿಸಲಾಗದ ಚಿಂತನೆ
ಇದೆ ಈ ಜೀವನದ ಯಾತನೆ...

- shwetha

19 Jan 2017, 04:31 pm

..... *(ಪ್ರಕೃತಿ)*.....

ಒಮ್ಮೆ ನಿನ್ನ ನಗಿಸಿದರು
ಒಮ್ಮೆ ನೋಯಿಸಿದರು
ಒಮ್ಮೆ ನಿನ್ನ ಕಾಡಿಸಿದರು
ಒಮ್ಮೆ ನಿನ್ನ ಮುದ್ದಿಸಿದರು
ಒಮ್ಮೆ ನಿನ್ನ ಜೊತೆ ಮರೆತರು
ಒಮ್ಮೆ ನಿನ್ನಲ್ಲೇ ಬೆರೆತಿರುವೆ
ಪ್ರತಿಯೊಮ್ಮೆಯು ನಿತ್ಯ ಹಸಿರು
ಅದುವೇ ನಮ್ಮ ಪ್ರೀತಿಯ ಉಸಿರು.....

- shwetha

19 Jan 2017, 04:23 pm