Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಹೇ ಅಮು
ನಿನ್ನ ಪ್ರೀತಿಯ ಮೋಡಿಗೆ
ನಾ
ಬಿದ್ದೆ ಬಲೆಗೆ
ಸಿಲುಕಿದ ಮೀನಿನ ಹಾಗೇ
ಸೋತು ಹೋಯ್ತು
ಚಲುವೇ ನನ್ನ ಮನಸ್ಸು
ನಿನ್ನ ಅಂದ ಕಂಡಾಗ ಮಾತ್ರ ಈ ರೀತಿ ಆಗುತ್ತದೆ ಅಮು....... ಕಿ........
- Kiran Raj
13 Jan 2017, 11:58 pm
ಕತ್ತಲೆಯಿಂದ ಹಣತೆ ಔಚಿತ್ಯ ತಿಳಿವುದು
ಬೆಳಕಿನಿಂದಲೇ ಲೋಕದ ತಿಮಿರ ಅಳಿವುದು
ಲೇಖಕನಿಗೆ ಲೇಖನಿಯೇ ಹಣತೆ
ಕಲಾವಿದನಿಗೆ ಕುಂಚವೇ ಪಣತಿ
ಅಜ್ಞಾನದ ಅಂಧತೆಯಲ್ಲಿ ಮುಳುಗಿದ
ಲೋಕಕೆ ಜ್ಞಾನದಾವಳಿ..
ಹಣತೆ ಬೆಳಗುತ್ತಿದೆ,ಉರಿಯುತ್ತಿದೆ
ಮನುಜ ಉರಿಯುತ್ತಿರುವ,ಬೆಳಗುತ್ತಿಲ್ಲ
ಓ ಮನುಜ ಕುಲವೇ ಉರಿಯುವುದನ್ನು ನಿಲ್ಲಿಸು,ಬೆಳಗುವುದನ್ನು ಬೆಳೆಸು..
ಅದುವೇ ಹಣತೆಯ ಮಹಾದಾನ.......
- ನಕ್ಷtra
13 Jan 2017, 11:03 pm
ಓ ಮನುಜ ನೀ ಬಲು ದುಷ್ಟ ನಿಜ
ದೇವರೆಂಬ ಹೆಸರಿನಲ್ಲಿ ಮಾಡುವೆ ಬರೀ ಅಸಹಜ
ನೋವನುಂಡು ಬರುವುದು ಪಾಮರ ವ್ರಜ
ಅವರನ್ನು ಕಿತ್ತು ಕೊಲ್ಲುವೆಯಲ್ಲಾ ನೀ ಎಷ್ಟು ಸಾಚಾ
ಮಠ ಮಂದಿರಗಳಲ್ಲಿ ನಿಮ್ಮದೇ ಕಾರುಬಾರು
ಕಾಣಿಕೆಯ ರೂಪದಿ ಭಕ್ತರನು ವಂಚಿಸುವ ದರ್ಬಾರು
ಆಚಾರವಿಲ್ಲದ ಅನಾಚಾರದ ಅಡಿಯಲ್ಲಿ
ಶುದ್ಧ ದೇವನು ಇರಲು ಎಡೆಯುಂಟೆ ಅಲ್ಲಿ?
- Kumara.C
13 Jan 2017, 10:46 pm
ಹ್ರುದಯಾನೆ ಕೊಡುವೆ ನಿನಗೆ
ನಾನೆನು ಕೇಳದೆ ಕೊಡುಗೆ
ಎಂದಿಗೂ ಮನದಲ್ಲಿ ಉಳಿವ
ಪ್ರೀತಿ ನೀಡೆನಗೆ……
ಚೆಂದದ ಒಲುಮೆಗೆ
ಮೌನವ ಮುರಿಯುತ
ಮಾತಾಡುವುದು ಒಂದೆ ಬಾಕಿ…..
ಸಣ್ಣ ಆಸೆಯೂ
ನಿನ್ನ ನೋಡಲು
ಬಂದು ಹೋಗೆಯಾ ಒಮ್ಮೆ ಕನಸಲಿ…..
ನಿನ್ನ ಕಂಡರೆ
ಹಾಡೂ ನಿಲ್ಲದೂ
ನನ್ನ ಹಾಡಲಿ ನಿಂದೆ ಗುಂಗಿದೆ……
- Sharath kumar G
13 Jan 2017, 10:28 pm
ಸವಿ ಇರಲಿ ನುಡಿಯಲಿ
ನಗು ಇರಲಿ ಮೊಗದಲಿ
ಬಾರದಿರಲಿ ನಮ್ಮ ನಡುವೆ ಅಂತರ
ಸ್ನೇಹ ಇರಲಿ ನಿರಂತರ.....
- chinmayi
13 Jan 2017, 10:22 pm
ಮನಸೆಂಬ ಪುಟ್ಟ ಗಿಡವು
ಪುಟ್ಟಿಹುದು ಬೆಟ್ಟದಲ್ಲಿ
ತಾವಿಲ್ಲ, ತನುವಿಲ್ಲ ಆಸರೆಗೆ
ತನ್ನವರೆಂಬುವರಿಲ್ಲ.
ಮನುಷ್ಯತ್ವ ಇಲ್ಲದ ಬಿಸಿಲಿಗೆ ಒಣಗಿ
ಕಳ್ಳ ಕೂಟದ ವಂಚನೆಗೆ ನಡುಗಿ
ಬಾಯಾರಿ ಬೆಂಡಾಗಿ ಬಳಲಿದರೂ
ಪ್ರೀತಿಯ ಹನಿ ನೀರಿಲ್ಲ.
ಜಿನುಗಿದಂತೆ ಆಗೊಮ್ಮೆ ಈಗೊಮ್ಮೆ
ಎಲ್ಲಿಂದಲೋ ಹನಿ ನೀರು
ಇದ್ದೀತು ಯಾರದೋ ಕಣ್ಣೀರು
ದೊಡ್ಡ ಮಳೆಗೆ ಕಾದ ಗಿಡಕೆ ಬೇಜಾರು.
ಸುಂದರ ಕಾರ್ಮೋಡಗಳು ಓಡಿವೆ ಎತ್ತಲೋ
ಕಾದಿಹನೇನೋ ಅವಕ್ಕೆ ಇನಿಯ
ಮುತ್ತಿಕ್ಕಲು...
ಕಾದಿರುವ ಗಿಡಕ್ಕಿಲ್ಲ ಮಳೆ ಹನಿಯ ಸ್ನಾನ
ಕಾಡಿಲ್ಲದಾ ಮೇಡಲ್ಲಿ ಒಂಟಿ ಗಿಡದ ಧ್ಯಾನ.
- ಶ್ರೀಗೋ.
13 Jan 2017, 05:36 pm
ಮನಸ್ಸು ಕಸದ ತೊಟ್ಟಿಯಲ್ಲ,
ದ್ವೇಷ,ಅಸೂಯೆ,ಮಚ್ಚರ ತುಂಬಿಕೊಳ್ಳಲು..
ಅದು ಪ್ರೀತಿ,ಮಮಕಾರ, ಸಹಕಾರ
ತುಂಬಬೇಕಿರುವ ಹೂ ಬುಟ್ಟಿ.......
- ನಕ್ಷtra
13 Jan 2017, 04:37 pm
ದುಡ್ಡಿದ್ದವನೇ ದೊಡ್ಡಪ್ಪ;
ದುಡ್ಡಿಲ್ಲಾಂದ್ರೆ ಚಿಕ್ಕಪ್ಪ
ದುಡ್ಡಿದ್ರೆ ಇಂದ್ರ ಚಂದ್ರ ದೇವೇಂದ್ರ,
ದುಡ್ಡಿಲ್ಲಾಂದ್ರೆ ನೀಚ ಕಡುಮೂರ್ಕ,
ದುಡ್ಡಿದ್ರೇ ಮುದುಕನಿಗೂ ಮದುವೆ
ದುಡ್ಡಿಲ್ಲಾಂದ್ರೆ ಕವಡೇ ಕಿಮ್ಮತ್ತೂ ಇರೋಲ್ಲಾ,
ಬಿ.ಹೆಚ್.ಕೆಂಪೇಗೌಡ
- ಬಿ.ಹೆಚ್.ಕೆಂಪೇಗೌಡ
13 Jan 2017, 01:20 pm
ಮಾನವ ಜನ್ಮ ಒಂದು ಜೀವನದ ಸಂತಿ
ಜೀವನದುದ್ದಕ್ಕೂ ಇರಬೇಕು ಮಾಸದ ಕಾಂತಿ
ಅಂದಾಗ ಜೀವನದ ಬಂಡಿ ಇರುವುದು ಶಾಂತಿ
ಎಲ್ಲರೂ ಕುಶಿಯಿಂದಾ ಆಚರಿಸೋಣ ಸಂಕ್ರಾಂತಿ
ಸಂಕ್ರಾಂತಿಯ ಶುಭಾಶಯಗಳು ಗೆಳೆಯರೆ
=dev=
- j s
13 Jan 2017, 01:19 pm
ಹಸುಗಳು ಇರಬೇಕು ಮನೆಯಲ್ಲಿ,
ಸಸಿಗಳು ಇರಬೇಕು ಹೊಲದಲ್ಲಿ,
ಋಷಿಗಳು ಇರಬೇಕು ಆಶ್ರಮದಲ್ಲಿ,
ಶಿಷುಗಳು ಬೆಳೆಯಬೇಕು ಶರಣರ ಸಂಗದಲ್ಲಿ,
ಬಿ.ಹೆಚ್.ಕೆಂಪೇಗೌಡ
- ಬಿ.ಹೆಚ್.ಕೆಂಪೇಗೌಡ
13 Jan 2017, 12:48 pm