Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಕನವರಿಕೆ

ಜಗವನೆ ಮರೆಸಿದೆ ನೀನು
ಅಂದು ಪ್ರೀತಿಯ ತಂದು
ಇಂದೇಕೆ ನೀನಾದೆ ಮರಿಚಿಕೆ
ಪ್ರೀತಿ ಸಿಗದ ಮನಸಿಗೆ ಕನಸೆ ಕನವರಿಕೆ

- Shiva

17 Jan 2017, 08:30 pm

ಹೆಜ್ಜೆ ಗುರುತು

ನನ್ನ ಹೆಜ್ಜೆಯ ಗುರುತು ಸಾಗುತಿವೆ
ನದಿ ದಡದಲ್ಲಿ ಜೀವವಿಲ್ಲದ ಮರುಳಿನ ಮೇಲೆ
ನಿನ್ನ ಸೇರಲೆoದು .
ನನ್ನ ಮನಸು ಅಲೆಗಳ ಜೊತೆ ಗಗನದೆಡೆಗೆ
ಹಾರುತ್ತಿದೆ ನಕ್ಷತ್ರಗಳ ನಡುವೆ ನಿನ್ನ ಹುಡುಕಲೇನ್ಡು.

- ಚುಕ್ಕಿ

17 Jan 2017, 07:28 pm

ನೀನಾದೆ ನಾನು

ನೀನು ಎoಬ ಪದದಿಂದ ಪರಿಚಯವಾಗಿ
ನಾವು ಎoಬ ಮಾತಾಗಿ ಉಳಿದುಬಿಟ್ಟೆ .
ಪ್ರೀತಿ ಎoಬ ಭಾವದಿoದ ಮೊದಲಾಗಿ
ನನ್ನ ಉಸಿರಿಗೆ ಹೆಸರಾಗಿ ಬೆಳೆದು ಬಿಟ್ಟೆ .

- ಚುಕ್ಕಿ

17 Jan 2017, 04:54 pm

ಕಣ್ಣೀರ ಕುಂಚದಿ ಗೀಚಿದ ಕವನ

ಈ ನೆನಪುಗಳು,
ಇಂದು ಎದುರಾಗಿ ನಾಳೆ ಮರೆಯಾಗಿ ಮುಂದೆ
ಕೊನೆಯಾಗುವುದೇನೋ ಎಂಬ ಭೀತಿ.

ಈ ಪ್ರೀತಿಯು,‌‍‌‌‌‌‌
ಇಂದು ಜೂತೆಯಾಗಿ ನಾಳೆ ವ್ಯಥೆಯಾಗಿ ಮುಂದೆ
ದುರಂತ ಕಥೆಯಾಗುವುದೇನೊ ಎಂಬ ಭೀತಿ.

ಈ ಕನಸು,
ಇಂದು ನನಸಾಗಿ ನಾಳೆ ಸೊಗಸಾಗಿ ಮುಂದೆ
ಬಿರುಸಾಗುವುದೇನೊ ಎಂಬ ಭೀತಿ.

ಈ ನೋವು,
ಇಂದು ಹತ್ತಿರವಾಗಿ ನಾಳೆ ಎತ್ತರವಾಗಿ ಮುಂದೆ
ಚಿರವಾಗುವುದೇನೊ ಎಂಬ ಭೀತಿ.

ಈ ವಿರಹ,
ಇಂದು ಸೆರೆಯಾಗಿ ನಾಳೆ ಸಮರವಾಗಿ ಮುಂದೆ
ಸೋಲಾಗುವುದೇನೊ ಎಂಬ ಭೀತಿ.

ಈ ಹೃದಯ,
ಇಂದು ಹಸಿಯಾಗಿ ನಾಳೆ ಹುಸಿಯಾಗಿ ಮುಂದೆ
ಹತವಾಗುವುದೇನೊ ಎಂಬ ಭೀತಿ.

ಈ ಮನಸು,
ಇಂದು ಕದಡಿ ನಾಳೆ ಮುದುಡಿ ಮುಂದೆ
ಮಡಿಯುವುದೇನೊ ಎಂಬ ಭೀತಿ.

ಈ ಸಮಯ,
ಇಂದು ಸಿಹಿಯಾಗಿ ನಾಳೆ ಕಹಿಯಾಗಿ ಮುಂದೆ
ವಿಷವಾಗುವುದೇನೊ ಎಂಬ ಭೀತಿ.

ಈ ಪ್ರೀತಿಯ ಬಿರು ಮಳೆಯಲಿ
ಈ ಭೀತಿಯ ಸಿಡಿಲು ಗುಡುಗಲಿ
ಈ ಫಜೀತಿಯ ಬಿರುಗಾಳಿಯಲಿ
ಸಿಕ್ಕ ಭಗ್ನ ಪ್ರೇಮಿ ಇವನು.....

--ಇಂತಿ ಅಂತು ದೇವದಾಸ್ ಆದ ಶಶಿ ಕಿರಣ

- ಅಕವಿ

17 Jan 2017, 02:11 pm

ಬಾಳ ಸಿಂಧೂರ

ಮಲ್ಲಿಗೆಯ ಮೈಯ್ಯವಳೆ ಒಳ್ಳೊಳ್ಳೆ ಬಟ್ಟೆಯನು ಉಟ್ಟು ನಲಿದಾಡುತಿರುವವಳೆ ಮುಖವೆಲ್ಲ ಮುಂಗಾರು ಮನವೆಲ್ಲ ಮಂದಾರ ನೀ ಬಂದು ನಿಂತರೆ ಖುಷಿ ಅಲೆಯ ಸಾಗರ ಕನಸಲ್ಲಿ ಕಾಡುವ ಕನಸಿನ ಕನ್ಯೆಯಿವಳು ಮರೆಯಾದರೂ ಮುತ್ತಿಟ್ಟ ನೆನಪು ಉಳಿಸಿರುವವಳು ಮನಸ್ಸಿಗೆ ಬಂದು ಮನೆಗೂ ಕಾಲಿಟ್ಟಿರುವವಳೆ ಮದುವೆಯಾದ ಮರುಕ್ಷಣವೇ ಹರ್ಷದ ಮಳೆಯನ್ನು ಸುರಿದವಳೆ ನಿನ್ನ ಮೊಗ ಬಾಡಿದರೆ ಭವ ದುಃಖ ಸಾಗರ ನೀ ನಕ್ಕು ನಲಿದರೆ ಈ ಬಾಳು ಬಂಗಾರ ಏಕೆಂದರೆ ನೀ ನನ್ನ ಬಾಳ ಸಿಂಧೂರ

- Tirumalarao

17 Jan 2017, 01:21 pm

ಕಾಣದ ಒಲವೇ....

ಕಾಣದ ಒಲವೇ ಕೇಳೆ
ನಿನಗಾಗಿ ಬರೆದಿರುವೆ ಈ ಕವನ
ಓ ಒಲವೇ ....
ನಿನ್ನ ಮತ್ತೆ ಸೇರುವುದೆಂದು..?
ನೀನೆಲ್ಲಿರುವೆ ನನ್ನ ಚೆಲುವೆ
ಕೂತಲ್ಲಿ ನಿಂತಲ್ಲಿ ಕನಸಲ್ಲಿ ನನಸಲ್ಲಿ 
ಎಲ್ಲೆಲ್ಲೂ ನಿನ್ನ ನೆನಪುಗಳೆ
ನನ್ನ ಕಾಡುತಿವೆಯಲ್ಲ 
ಕಾಣದಂತೆ ನೀ ಏಕೆ ಹೀಗೆ 
ಮರೆಯಾಗಿ ಕುಳಿತಿರುವೆ
ಏನೆಂದು ತಿಳಿಸಲಿ ಒಲವೇ
ನನ್ನ ಮನದ ಹಂಬಲವ  
ಕಳೆಯ ಬಯಸಿದೆ ಮನಸ್ಸು
ನಿನ್ನೊಡನೆ ಒಂದು ಭವ್ಯ ಸಂಜೆಯ
ನಿನ್ನೆದೆಗೆ ಒರಗಿ ನನ್ನೆದೆಯ
ಬಡಿತವ ಕೇಳಬೇಕೆನಿಸಿದೆ
ಜಗವನೆಲ್ಲ ಮರೆತು ನಿನ್ನ
ಸೇರುವ ಆಸೆಯಾಗಿದೆ.. 
ನನ್ನೆದೆಯ ಮಿಡಿತಗಳಿಗೆ
ನೀ ಬಡಿತವಾಗಿ
ನಿನ್ನೊಳಗೆ ನೀನಿರದೆ
ನನ್ನೊಳಗೆ ನೀ ಸೇರು..
ನಿನ್ನಿಂದ ನಾ ಎಂದಿಗೂ
ದೂರಾಗದಂತೆ
ನನ್ನಲ್ಲಿ ಬೆರೆತು ನನ್ನೊಳಗೆ
ನೀನಾಗು, ನಿನ್ನೊಳಗೆ ನಾನಾಗಿ
ಮತ್ತೆ ಸೇರುವಾಸೆ ನಿನ್ನಲಿ
ಜಗವನು ಮರೆಯುವಾಸೆ
ನಮ್ಮಿಬ್ಬರ ಮಿಲನದಲಿ...!

- Pb

17 Jan 2017, 11:11 am

ನಮ್ಮೊಲವು

ಆಕೆ ತುಂತುರು ಧಾರೆ.
ನಾ ಚುರುಕು ಬಿಸಿಲು.
ನಮ್ಮ ಒಲವು; ಅದು ಕಾಮನಬಿಲ್ಲು.

- Ugnil

17 Jan 2017, 10:59 am

ಇದು ಕೇವಲ ಪ್ರೀತಿ ಮತ್ತಿನ್ನೇ

ನಿನ್ನ ರೂಪವ ಕಂಡು ನಾ
ಆಕರ್ಷಿತಳಾಗಲಿಲ್ಲ

ನಿನ್ನ ಸೌಂದರ್ಯ ನೋಡಿ ನಾ
ಮೋಹಿಸಲಿಲ್ಲ

ನಿನ್ನ ಆಕಾರ ನೋಡಿ ನಾ
ಮೈ ಮರೆಯಲಿಲ್ಲ

ಆದರೂ ನಿನ್ನಲಿ ನಾ
ಕಳೆದುಹೋದೆನಲ್ಲ

ಏಕೆಂಬ ಪ್ರಶ್ನೆಗೆ ನನ್ನಲಿ ಉತ್ತರವಿಲ್ಲ
ಆದರೆ ನಾ ನಿನಗೊಲಿದ ಕ್ಷಣ ಮರೆಯಲಾಗೊಲ್ಲ
ಅದನು ಮರೆತದ್ದೆ ಆದರೆ
ನನ್ನ ಜೀವನಕೆ ಅರ್ಥವಿರುವುದಿಲ್ಲ..................

ಇದು ನೀನೆ ಬರೆದ ಕವಿತೆ ಆದರಿಂದು ನನ್ನ ಜೀವನದಲ್ಲಿ ಈ ಕವಿತೆ ಮಾತ್ರ ಉಳಿದಿದೆ ಬರೆದವಳು ನೀನೆ ಇಲ್ಲವಲ್ಲ.....ಏಕಿಷ್ಟು ಕಾಯಿಸುವೆ...... ನಿನ್ನ ಇನ್ನೂಂದು ಕವಿತೆಗೆ ಮನ ಹಾತೊರೆಯುತ್ತಿದೆ ....ಎಂದು ಬರೆಯುವೆ ದಯವಿಟ್ಟು ತಿಳಿಸು
- ಇಂತಿ ನಿನ್ನ ಸದಾ ವಿರಹಿ ಶಶಿ ಕಿರಣ

- ಅಕವಿ

17 Jan 2017, 09:12 am

ಇದೂ ಒಂದು ಸಮಸ್ಯೆ ನಾ...?

ನನಗಿದ್ದ ದೊಡ್ಡ ಚಿಂತೆ
ನಾ ಚೆಂದವಿಲ್ಲೆಂದು...
ಕೆಲವೊಮ್ಮೆ ಅನಿಸುದು
ನನ್ನ ಸ್ವರ ಹಾಗಿಲ್ಲೆಂದು....
ಒಮ್ಮೊಮ್ಮೆ ನನಗೆ ಮಾತ್ರ
ಸಮಸ್ಯೆ ಎಂದನಿಸುವುದು...

ನಾ ನೊಮ್ಮೆ ಕಂಡೆ
ಮುಖ ಸುಟ್ಟುಕೊಂಡವನನ್ನು
ಮಾತೇ ಬರದ ಮೂಗನನ್ನು
ಅನಿಸಿತು ಸಮಸ್ಯೆನೇ ಅಲ್ಲ
ನನದು ಅವರ ಮುಂದೆ

- AsiddeeqN

16 Jan 2017, 10:45 pm

ಸ್ನೇಹ....

ಅರಿಯದ ಪ್ರೀತಿ , ಮರೆಯದ ಸ್ನೇಹ ,
ಅಳಿಸಿ ಹೋಗುವ ಈ ಪುಸ್ತಕದಲ್ಲಿ ! ಏನೆಂದು
ಬರೆಯಲಿ !
ಆದರೂ ಬರೆಯುತ್ತೇನೆ !
"ಸ್ನೇಹ"ವೆಂಬ ಎರಡಕ್ಷರ ಅಮರವಾಗಲಿ.....

................?

- ravi king

16 Jan 2017, 09:53 pm