Kannada Poems
Deprecated : Creation of dynamic property my_pagination::$conn is deprecated in
/home4/airpoiy2/kannadakavana/pagination.php on line
41
ಈ ಸಮಯದಿ ನನ್ನ ಹೃದಯದಿ
ನಿನ್ನ ವಿಯೂಗವೇ ವಿಷಾದವು.
ಈ ಇರುಳಲಿ ನೋವಿನಾ ನೆರಳಲಿ
ನಿನ್ನ ನೆನಪೆ ಸಾವಿಗೆ ನೆಪವು.
ಈ ಕಣ್ಣಲಿ ಸುರಿವ ಕಂಬನಿಯಲಿ
ನಿನ್ನ ಅಂದವೇ ಹನಿಯ ಪ್ರತಿ ಕಣವು.
ಈ ಮನದಲಿ ಹೂಬನದಲಿ
ನಿನ್ನ ಅಗಲಿಕೆಯೇ ಬಳ್ಳಿಗಳ ಬಳಲಿಕೆಯು.
ಈ ಮಬ್ಬಲಿ ನನ್ನ ಕಣ್ಣಬಾನಲಿ
ಆವಿಯಾದ ಕಂಬನಿಯೇ ಕಾಣದ ಕಾದಂಬನಿಯು(ಮೋಡ).
ಈ ನಡುರಾತ್ರಿಯಲಿ ಸುಡು ಮೌನದಲಿ
ಕಡು ಕತ್ತಲೆಯೇ ಎದೆಯ ಆಳದಲೂ.
ಈ ಕವಲಿನಲಿ ಪ್ರೀತಿಯ ಅಮಲಿನಲಿ
ನಾನಾಯ್ದ ದಾರಿಯೇ ನನ್ನ ಪಾಲಿನ ಗೋರಿಯು.
ಈ ದುಃಖದಲಿ ನನ್ನ ಪಕ್ಕದಲಿ
ಮೂಡಿದ ನೆರಳೇ ನನ್ನ ನಿಜವೈರಿಯು.
ಈ ಯೋಚನೆಗಳ ಸುಳಿಯಲಿ ಯಾತನೆಯ ವಿರಹದಲಿ
ನಿನ್ನಾ ಕನಸುಗಳೇ ಕುದಿಯುತಿಹ ಕುಲುಮೆಯು.
ಈ ಪ್ರೀತಿಯ ಸೋಲಲಿ ಈ ರೀತಿಯ ಸಾವಲಿ
ನಿನ್ನ ಸಂತೋಷವೇ ನನ್ನ ಕೊನೆ ಅಭಿಲಾಷೆಯು.
-ಭಗ್ನ ಪ್ರೇಮಿ ಶಶಿ ಕಿರಣ
- ಅಕವಿ
15 Jan 2017, 12:39 pm
ನಿನ್ನನ್ನು ನೋಡಿದೆ ಅಂದು ಮೊಗ್ಗಾಗಿ,
ನಿನ್ನನ್ನು ಕುರಿತು ಯೋಚಿಸಿದೆ ಅಂದು ಹೂವಾಗಿ,
ನಿನ್ನನ್ನು ಪ್ರೀತಿಸಿದೆ ಅಂದು ಸುಗಂಧವಾಗಿ,
ಆದರೆ ನಿನ್ನನ್ನು ಅರಿತೆ ಇಂದು ನೀ ಬಾಡಿದ ಹೂ ಎಂದು......
( ಶರಣು)
- sharanu
15 Jan 2017, 12:26 pm
ಸುವಾಸನೆಯಾಗು ಶ್ರೀಗಂಧದಡಿ
ದಡವಾಗು ಸಾಗರದಡಿ
ಮುತ್ತಾಗು ಸಮುದ್ರದಡಿ
ದುಂಭಿಯಾಗು ಪರಿಮಳದಡಿ
ಮಗುವಾಗು ಕರುನಾಡ ತಾಯಿಯ ಮಡಿಲದಡಿ.....
(ಶರಣು)
- sharanu
15 Jan 2017, 12:20 pm
ಹೆಣ್ಣಿನ ಜೀವನದಲ್ಲಿ ಎರಡಕ್ಷರದ ಪ್ರಾಮುಖ್ಯತೆ
ಹುಟ್ಟು ಎಂಬ ಎರಡಕ್ಷರದ ಒಂದು
ಮಗು ಎಂಬ ಎರಡಕ್ಷರದ
ಶಾಲೆ ಎಂಬ ಎರಡಕ್ಷರಕ್ಕೆ ಸೇರಿ
ಗುರು ಎಂಬ ಎರಡಕ್ಷರದಿ0ದ
ವಿದ್ಯೆ ಎಂಬ ಎರಡಕ್ಷರ ಕಲಿತು
ಙಾನ ಎಂಬ ಎರಡಕ್ಷರ ಪಡೆದು
ತಾರುಣ್ಯದಲ್ಲಿ ಪ್ರೀತಿ ಎಂಬ ಎರಡಕ್ಷರದ ಜೊತೆ
ಲಗ್ನ ಎಂಬ ಎರಡಕ್ಷರದಿ0ದ
ಪ್ರೀತಿ ಎಂಬ ಎರಡಕ್ಷರ ಹೊಂದಿ
ಮಗು ಎಂಬ ಎರಡಕ್ಷರ ಪಡೆದು
ತಾಯಿ ಎಂಬ ಎರಡಕ್ಷರ ಬಿರುದನ್ನು ಹೊಂದಿ.....
- shwetha
15 Jan 2017, 12:05 pm
ನಿನ್ನ ನೋವು ನಿನಗೆ ಗೊತ್ತಾದರೆ
ನೀನು ಬದುಕಿದ್ದೀಯ ಎಂದು,,
ಪರರ ನೋವು ನಿನಗೆ ಗೊತ್ತಾದರೆ
ನೀನು ಮನುಷ್ಯನಾಗಿದ್ದೀಯ ಎಂದು,,
ನಿನ್ನ ನಂಬಿಕೆಗಳು ನಿನ್ನನ್ನು ಉತ್ತಮ ವ್ಯಕ್ತಿ,
ಎಂದು ಹೇಳುವುದಿಲ್ಲ ಆದರೆ
ನಿನ್ನ ನಡತೆ ಅದನ್ನು ತೀರ್ಮಾನಿಸುತ್ತದೆ,,
ಬಿ.ಹೆಚ್.ಕೆಂಪೇಗೌಡ
- ಬಿ.ಹೆಚ್.ಕೆಂಪೇಗೌಡ
15 Jan 2017, 11:09 am
ನಾನು ಸೋತಿಲ್ಲ ಬದಲಾಗಿ,
ಸಾದಿಸಬಹುದಾದ ಸಾವಿರ ದಾರಿಯನ್ನ
ಕಂಡುಕೊಂಡೆ,ನೆರವು ನೀಡುವ ಹೃದಯ,
ಇದ್ದವನಿಗಷ್ಟೆ ಟೀಕಿಸುವ ಹಕ್ಕು ಇರುತ್ತದೆ,
ಮನುಷ್ಯ ದೈವಿಕ ಸೌಂದರ್ಯದ ಕನ್ನಡಿ,
ಬಿ.ಹೆಚ್.ಕೆಂಪೇಗೌಡ
- ಬಿ.ಹೆಚ್.ಕೆಂಪೇಗೌಡ
15 Jan 2017, 10:48 am
ಸರಿದು ಹೋದ ಚಂದ್ರ
ಬರಲಾರನೆ ಮತ್ತೆ ಇರುಳಿಗೆ.
ಒಡೆದು ಹೋದ ಹೃದಯ
ಕೊಡಲಾರದೆ ಮತ್ತೆ .
ನಿನ್ನಿಂದ ಹಾಳದ ಈ ಜೀವ
ಮತ್ತೆ ನಿಟ್ಟುಸಿರು ಬಿಡಲಾರದೆ,
ಭಾವಕ್ಕೆ ಭಾವ ಜೀವಕ್ಕೆ ಜೀವ
ಮನಸಿನ ಪುಟಗಳಲ್ಲಿ ನಿನ್ನದೆ
ನಿನ್ನದೆ ಹೃದಯ ಗಾನ
ಮತ್ತೆ ಅಳಿಸಲಾಗದೆ ಆ
ನಿನ್ನ ಹಳೆಯ ಪುಟಗಳ
ಮದುರ ಭಾವನೆಯ...
- mallu
15 Jan 2017, 08:51 am
ನಂಬಿಕೆ ಹರಡಲಿ....
ವಿಶ್ವಾಸ ಬೆಳಗಲಿ...
ದ್ವೇಷವೆಂಬ ಕತ್ತಲು ಸರಿದು,
ಪ್ರೀತಿಯೆಂಬ ಬೆಳಕು ಹರಿಯಲಿ...
ಸಹೋದರತೆ ಹರಡಲಿ...
ವಾತ್ಸಲ್ಯತೆ ಬೆಳಗಲಿ...
ಜಾತಿ ಬೇದವೆಂಬ ಕತ್ತಲು ಸರಿದು,
ಮಾನವೀಯತೆಯ ಬೆಳಕು ಹರಿಯಲಿ...
ಧರ್ಮ ಹರಡಲಿ...
ನ್ಯಾಯಬೆಳಗಲಿ...
ಭ್ರಷ್ಟತೆಯೆಂಬ ಕತ್ತಲು ಸರಿದು,
ಅಭಿವೃದ್ಧಿಯ ಬೆಳಕು ಹರಿಯಲಿ...
ಆತ್ಮವಿಶ್ವಾಸ ಹರಡಲಿ...
ಆಶಾಜ್ಯೋತಿ ಬೆಳಗಲಿ...
ಅಜ್ಞಾನವೆಂಬ ಕತ್ತಲು ಸರಿದು,
ಜ್ಞಾನವೆಂಬ ಬೆಳಕು ಹರಿಯಲಿ...
- chinmayi
15 Jan 2017, 08:46 am
ಅವಳನ್ನು ಮೆಚ್ಚಲು ನಾ ಹಾಕಿದೆ
ಕಲರ್ ಕಲರ್ ಬಟ್ಟೆ....
ಅವಳಿಗಾಗಿ ಜಿಮ್ ಗೆ ಹೋಗಿ ಮಾಡಿದೆ
ಕಲ್ಲಿನಂತಹ ರೆಟ್ಟೆ.....
ಆದರೆ ಅವಳು ಹೂವಿನಿ0ದ ಹೂವಿಗೆ
ಹಾರುವ ಬಣ್ಣದ ಚಿಟ್ಟೆ.....
ಕೊನೆಗೂ ನನ್ನ ಕೈ ಗಿಟ್ಟಳು
ಆಲ್ಯೂಮಿನಿಯಂ ತಟ್ಟೆ.....
- shwetha
15 Jan 2017, 08:02 am
ಪ್ರಾಣಕ್ಕಿಂತ
ಹೆಚ್ಚಾಗಿ
ಪ್ರೀತಿಸಿದ್ದಕ್ಕೆ
ಪ್ರತಿಯಾಗಿ ನೀ
ಮುಳ್ಳಮೇಲೆ
ನಡೆಸಿ ನನ್ನ
ಮುಗುಳ್ನಗುತ್ತ
ಮನಸಾರೆ
ಕಣ್ತುಂಬ ನೋಡಿ
ಸಂಭ್ರಮಿಸುತ್ತಿರುವೆಯಲ್ಲವೇ.
- Sachin Shrushti
15 Jan 2017, 06:56 am