Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಮಾರಣ

ಓ ಮರಣವೇ
ನೀನೆಷ್ಟು ಕ್ರೂರಿ?
ಜೀವಿಗಳಿಗಿಲ್ಲ ನಿನ್ನ ಕರುಣೆ
ನೀನೆಂಥ ಮಾರಿ?
ನಿನ್ನಿಂದ ತಪ್ಪಿಲ್ಲ ಯಾರಿಗೂ ಬವಣೆ

ನಿನಗೇಕಿಷ್ಟು ಹಸಿವು ?
ಸಾಲುತ್ತಿಲ್ಲವೇ ನಿನಗೆ ಜೀವಿಗಳಾ ಗಣಿ
ಸದಾ ನಿನಗೇಕೆ ಗೆಲುವು ?
ನಾವಲ್ಲವೇ ನಿನ್ನ ಲಾವಣಿ

ನಿನಗೇಕಿಷ್ಟು ಒಲವು ?
ಅಲ್ಪಪ್ರಾಣ ಮಹಾಪ್ರಾಣಗಳೆಲ್ಲ ನಿನ್ನುಸಿರು
ನೀನಲ್ಲವೆ ಮಸಣದಾ ಹೂವು
ಕೇಳಿದರೆ ಭಯ ನಿನ್ನ್ಹೆಸರು

ನಿನಗೇಕಿಷ್ಟು ತವಕ ?
ಸ್ವರ್ಗಕ್ಕೆ ಕರೆಯುವ ಹಂಬಲ
ಬಿಡಿಸುವೆ ಭವ ಬಂಧನವ
ಪ್ರಾಣಸಂಕಟದಿ ಆಡಂಬೊಲ

ನಿನಗೇಕಿಷ್ಟು ಅವಸರ ?
ಅರಿಯದೆ ಬರುವೆ ನೀ ಬಾಳ ಕಾತರ
ಅರ್ಥವಾಗದೇಕೆ ಜೀವನ ಸಾರ?
ಪ್ರೀತಿ ಮಧುರ ತ್ಯಾಗ ಅಮರ !

- ಚಂದ್ರಶೇಖರ ಹೆಗಡೆ

09 Jan 2017, 12:44 am

ಗೆಳೆಯ

ಗೆಳೆಯ,
ಹೊಳೆಯ ದಂಡೆಯ ಮೇಲಿನ
ನೀರಲ ಹಣ್ಣು ತಿಂದ ನೆನಪು
ಊರ ಮುಂದಿನ ಹೊಲದಿ
ಪೆರಲ ಹಣ್ಣು ತಿಂದ ನೆನಪು
ಹಳ್ಳದ ದಂಡ್ಯಾಗ
ಜೇನು ಬಿಡಿಸಿ ತಿಂದ ನೆನಪು
ಗೌಡರ ಹೊಲದಾಗ ಮಾವು
ಕದ್ದ ತಿಂದ ನೆನಪು
ಎಂತಹ ಚಂದಿತ್ತ ಬಾಲ್ಯ
ಸಣ್ಣ ಸಣ್ಣ ಸಾಫಲ್ಯ
ಕಳಕೊಂಡಿವಿ ನಾವು ಬಾಳ
ಉಳಕೊಂಡಿದ್ದು ಹಿಡಿ ದೂಳ
ಆ ಕಾಲ ಹೋಯ್ತು
ಈಗ ಓಡತೈತಿ ಜಗತ್ತು
ಮರತ ಮನಸಿನ ಕಿಮ್ಮತ್ತ.

- ಭರತಕುಮಾರ

- bharatakumar

08 Jan 2017, 11:14 pm

ಉಳಿಸು ಕಣೆ.. ನನ್ನ ಪ್ರೀತಿಯ

ಉಳಿಸು ಕಣೆ.. ನನ್ನ ಪ್ರೀತಿಯ..

ಗೆಳತೀ.. ಮರೆಯಾದೆ ನೀನು..
ಮರಳಿ ಬರಬಾರದೇ…?
ತುಡಿತದೆದೆಯ ಬಡಿತದಲೂ
ತಡವರಿಸುವ ಕನಸಲೂ
ದೇಹದ ಸಕಲ ನರ ನಾಡಿಯಲೂ
ತುಂಬಿರುವೆ ನೀನು

ಹೆಸರಿಲ್ಲದೆ ಅಳಿದು ಹೋದ ಬಂಧವಿದು
ಹೊಸ ಹೆಸರ ಕೊಡಬೇಕು..
ಆ ಹೆಸರ ನಾ ಕೂಗಿ ಕರೆಯಲು
ಓ ಎನುತ ನೀನೋಡಿ ಬರಬೇಕು

ನಿನ್ನ ಸೆಳೆತವಿರದ ಕ್ಷಣವಿಲ್ಲ
ನಿನ್ನ ನೆನಪಿರದ ದಿನವಿಲ್ಲ..
ನಿನ್ನ ಮರೆತು ಬದುಕುವ
ಕ್ಷಣಗಳ ಕಲ್ಪನೆಯೂ ನನಗಿಲ್ಲ

ಬತ್ತಿದೆ ನನ್ನೆದೆಯ ಮಾತು
ಬಿಕ್ಕಳಿಸುತಿದೆ ಹೃದಯ
ಅಳಿವು ಉಳಿವು ನಿನ್ನಲ್ಲಿದೆ
ಉಳಿಸು ಕಣೆ.. ನನ್ನ ಪ್ರೀತಿಯ
ಅಲ್ಲ ನನ್ನ ಜೀವವ.. ಜೀವನವ..!

- arun c sankannavar

08 Jan 2017, 09:24 pm

ಕವಿತೆ

ಕರೆದರೆ ಬರದು ಕಲಕಿದರೆ ಕರಗದು ಭಾವಗಳ ಮಥಿಸಿ ಮನಸುಗಳ ಮೇಳೈಸಲು ಹೊಟ್ಟೆಯ ಒಳಗಿನ ಮಗು ಹುಟ್ಟಿ ಬರುವಂತೆ ಮೊಟ್ಟೆಯೊಡೆದು ಮರಿ ತಾನು ಬರುವಂತೆ ನನ್ನ ಎದೆಯೊಳಗಿಂದ ಒಲವಿನಿಂದೊಡಗೂಡಿ ಓಡೋಡಿ ಬಂದಿದೆ ನನ್ನ ಕವಿತೆ ಸುಮಾತನಯ

- Tirumalarao

08 Jan 2017, 05:48 pm

ನೆನಪುಗಳು

ಸೋಲುತಿದೆ ಈ ನನ್ನ ಮನ.
ನಿನ್ನ ಪ್ರೀತಿ ಎದರು.
ಮರೆಯಬೆಕೆಂದರು ಮರಕಳಿಸುತ್ತಿವೆ
ಆ ನಿನ್ನ ನೆನಪುಗಳು..
ಮಲ್ಲು

- mallu

08 Jan 2017, 01:50 pm

ಕನಸು ನನಸು ಮನಸು

ಬೇಸರದಿ ಇರಲು ಮನಸ್ಸು ಕಣ್ಣಿಗೆ ಕಾಣದು ಕನಸು
ಕಂಡಾ ಕನಸು ಆಗದು ನನಸು
ಆದರು ಕೇಳುವುದಿಲ್ಲ ಮನಸ್ಸು
ಮತ್ತೇಕೆ ನಾವು ಕಾಣುವದು ಕನಸು

- bhanu

08 Jan 2017, 01:17 pm

ಬರವಣಿಗೆ

ಬರೆಯತ್ತಿಹನು ನಿನ್ನ ಕಂಡ
ಮರು ಕ್ಷಣದಿಂದ,
ಅದು ಕವನ ಕವಿತೆ ಗಳಾಗಿ
ಹೊರಹೊಮ್ಮುತಿವೆ.
ನಾ ನಿನ್ನ ಬಣ್ಣಿಸಲು
ಆ ಸೊರ್ಯ ಚಂದ್ರ,
ಆಕಾಶ ನಕ್ಷತ್ರಗಳೆ ಮರೆತು
ಹೋಗಿವೆ.
ಪ್ರಕೃತಿ ನಿನ್ನ ಸೌಂದರ್ಯಕ್ಕೆ
ಮನಸೋತ,
ತಂಗಾಳಿಯಂತೆ ನಿನ್ನ ಸುತ್ತ
ಸುತ್ತುತಿದೆ, ನಿನ್ನಂದವ ಕಾಪಾಡಲು..
ಮಲ್ಲು...

- mallu

08 Jan 2017, 01:06 pm

ನಿನ್ನ ನೆನಪಾದರೆ... ಬಿಸಿಲಲ್

ನಿನ್ನ ನೆನಪಾದರೆ... ಬಿಸಿಲಲ್ಲೂ ತಂಗಾಳಿಯ ತಂಪು...
ನೀ ಜೊತೆಯಿದ್ದರೆ... ಮರುಭೂಮಿಯಲ್ಲೂ ಮಲ್ಲಿಗೆಯ ಕಂಪು...

- arun c sankannavar

08 Jan 2017, 12:46 pm

ಕನಸ್ಸಲ್ಲಿ ಮಾತ್ರ..!

ಕನಸ್ಸಲ್ಲಿ ಮಾತ್ರ..!

ಕನಸು ಅಂದರೇನು
ಕೇಳಿದ್ದೆ ನಾನು
ಇಂದು ಕಣ್ಣು ಮುಚ್ಚಲು ನಿನ್ನ ಮನಸ್ಸಲ್ಲಿ
ಮೂಡುವ ಮೊಗ
ನಾಳೆ ನಿನ್ನ ಕನಸು ಎಂದಿದ್ದಳು ಅವಳು
ನಿಜ..!
ಇಂದು ಅವಳು ನನ್ನವಳು!
ಕೇವಲ ಕನಸ್ಸಲ್ಲಿ ಮಾತ್ರ..!

- arun c sankannavar

08 Jan 2017, 12:46 pm

ನಲ್ಮೆಯ ನಲ್ಲೆ

ಓ ನನ್ನ ನಲ್ಲೆ
ನೀ ಸನಿಹ ನಿಲ್ಲೆ
ನುಡಿ ಒಂದು ಸೊಲ್ಲೆ
ಪಿಸು ಮಾತಿನಲ್ಲೆ
ಒಂದೆ ನೋಟದಲ್ಲೆ
ನನ್ನ ಸೆಳೆದೆಯಲ್ಲೆ
ನಾ ನಿನ್ನ ಬಲ್ಲೆ
ಅದಕಾಗಿ ಬರೆದೆ ಈ ಓಲೆ

- Kumara.C

08 Jan 2017, 11:55 am