Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಹೇಳದ ಹಳೆಯ ಕ್ಷಣ (ಓ ಹೃದಯಾ ♡ ಕೇಳಿದೆಯಾ)

ಇಪ್ಪತ್ತೆರಡು ವರ್ಷಗಳ ಹಿಂದೆ
ನೀ ನನ್ನ ಜೀವನದಲಿ ಬಂದೆ
ಏರುಪೇರಾಗಿತ್ತು ನನ್ನೆದಯೆ ಬಡಿತ
ನಿನ್ನ ನಗುವ ಕಂಡು…
ಅಂದು ನಿನ್ನ ನೋಡಿ ನಾ ನಕ್ಕೆ
ನನ್ನ ನೋಡಿ ನೀ ನಕ್ಕೆ
ಅಂದೇ ನಮ್ಮಿಬ್ಬರ ಕಣ್ಣಗಳ
ಮಿಲನವಾಯಿತು
ನಿನ್ನ ಮುಗ್ಧ ಮನಸ್ಸು
ಆ ಕೆಂದುಟಿಯ ನಗು
ಏನೋ ಹೇಳ ಹೊರಟಿರುವ
ಮೀನಿನಂತಹಾ ನಿನ್ನ ಕಣ್ಣುಗಳು
ಇವೆಲ್ಲವುಗಳಿಂದ ನಾ
ನಿನ್ನ ಬಳಿಗೆ ಆಕರ್ಷಿತನಾದೆ
ನಿನಗೇನೋ ಹೇಳಬೇಕೆಂದು
ನನ್ನ ಮನ ಹಂಬಲಿಸಿತು
ನಿನಗೆ ಹೇಳುವ ದಾರಿಗಳನು
ನಾ ಹುಡುಕಿದ್ದೆ ನೂರು
ನನ್ನ ಮನದ ಹಂಬಲ ಹೇಳದೆ
ನೊಂದಿತ್ತು ಈ ಮನ
ನಿನ್ನ ಮೌನದ ಮಾತೊಂದು ಕಂಡು
ಆ ಮಾತಿನಲ್ಲಿ ನಿನ್ನ ಒಲವನ್ನು ಕಂಡು
ಹಗಲಿರುಳು ನಿದ್ದೆ ಬಾರದೆ
ಚಡಪಡಿಸುತಿತ್ತು ಈ ಮನ
ನಿನ್ನ ಕಂಡಾಗಲೆಲ್ಲ
ಈ ಮನದಲ್ಲಾಗುವ ರೋಮಾಂಚನ..
ಪುಸ್ತಕದ ಕೊನೆಯ ಪುಟದಲಿ
ನಿನ್ನ ಹೆಸರನು ನನ್ನ ಹೆಸರೊಡನೆ
ಕೂಡಿಸಿ ಬರೆದು ನನ್ನ ಪ್ರೇಮಕೆ
ಮುನ್ನುಡಿ ಬರೆದ ಕ್ಷಣ..
ಅದೆಷ್ಟೇ ನಿನ್ನ ನೋಡಿದರೂ
ನಿನ್ನ ಹಿಂಬಾಲಿಸುವದು
ಬಿಡದ ಆ ನನ್ನ ತುಂಟತನ..
ಬಚ್ಚಿಕೊಂಡು ನಿನ್ನ ಮುದ್ದು ನಗುವ
ನೋಡುವ ಹುಚ್ಚುತನ..
ಕಂಡರು ನನ್ನ ಕಾಣದಂತೆ
ಹಿಂತಿರುಗಿ ನೀ ನೋಡಿ ನಗುವ
ಒಲವಿನ ಕಣ್ಣು ಮುಚ್ಚಾಲೆ ಆಟ
ಆ ಆಟದಲಿ ನಮ್ಮ ಮನಸಿನ
ಭಾವನೆಗಳು ವಿನೂತನ..
ನಿನ್ನೊಡನೆ ಅನುಭವಸಿದ ಕ್ಷಣ
ಹೇಳಲಾಗದೆ ಹೇಳಿರುವೆ ಇಂದು
ಹೇಳದ ಹಳೆಯ ಕ್ಷಣಗಳನು..
ಪದಗಳಲಿ ಗೀಚಿದೆನು ಕವನ ರೂಪದಲಿ
ನಗುತ ನಿನ್ನ ನೆನೆಯುತಾ ಪ್ರತಿದಿನ… 

- Pb

08 Jan 2017, 08:03 am

ಕಳೆದ ಇರಳು

ಇಬ್ಬನಿಯು ಸರಿದಿದೆ
ಸೂರ್ಯನ ಕಾಂತಿಗೆ
ಮೊಗ್ಗು ಅರಳಿದೆ
ಹಕ್ಕಿಗಳ ಇಂಚರಕ್ಕೆ
ಭೂಮಿ ನಡುಗಿದೆ.
ದಿನನಿತ್ಯದ ಕಾರ್ಯ
ವೈಪಲ್ಲ್ಯಗಳು
ಎಂದಿನಂತೆ ಜರುಗಿದೆ.
ಮಲ್ಲು..

- mallu

08 Jan 2017, 07:39 am

ನೀ ಇಲ್ಲದ ಈ ಬದುಕು (ಓ ಹೃದಯಾ

ಕಾಣುವ ಕನಸೆಲ್ಲ ನನಸಾಗದು
ಆದರು ಕಾಣುವೆ ಕನಸೊಂದು
ಒಲವೇ ನೀ ಇರುವೆ ದೂರ
ಮನಬಿಚ್ಚಿ ಹೇಳುವೇ
ಮನಸಿನ ಬಾವನೆಗಳು ನೂರು
ನಿನ್ನ ನೆನಪಿನಲ್ಲೆ ಕಟ್ಟಿಕೊಂಡಿರುವೆ
ಸವಿ ನೆನಪುಗಳ ತೇರು
ಬಯಸುತಿದೆ ಮನ ನಿನ್ನ ಜೊತೆ
ಕಳೆದು ಹೋದ ಕ್ಷಣಗಳನು
ನೀ ಇಲ್ಲದೆ
ಏಕಾಂಗಿಯಾಗಿದೆ ಈ ಮನ
ಬದುಕು ಬೇಡೆವೆನಿಸಿದೆ
ನೀನಿಲ್ಲದೆ ಓ ನನ್ನ ಚಿನ್ನ
ಮರೆಯದು ಈ ನನ್ನ ಮನ
ನಿನ್ನಿಂದ ನಾ ಅಗಲಿದ ದಿನ
ಹೀಗೆ ಮಾಡುವ ಬದಲು
ಕೊಂದು ಬಿಡಬೇಕಿತ್ತು ನನ್ನ
ಸಹಿಸಲಾರೆ ನನ್ನುಸಿರೆ
ನೀನಿಲ್ಲದ ಈ ನೋವನ್ನ‌
ನೀ ಇಲ್ಲದ ಈ ಬದುಕನ್ನ !! 

- Pb

08 Jan 2017, 07:16 am

ಹನಿ...

ಮಂಜಲಿ ಮಿಂದ ಇಳೆಯ
ಹೂಕಣ್ಗಳ ಮುದ್ದಿಸಿ‌,
ತಾ ಕೆಂಪೆರುತಾ ರವಿ
ಒಲವಲಿ ಶುಭೋದಯ
ಕೋರಿದ ಮುಂಜಾವು...

- Indushekar Chinivar

08 Jan 2017, 06:44 am

ಹನಿ...

ತಾರೆಗಳು
ಬಾನಂಗಳದಿ
ಹಸೆ ಚುಕ್ಕಿ ಇಟ್ಟ ಇರುಳು...

- Indushekar Chinivar

07 Jan 2017, 11:02 pm

ಭಾವನೆ

ನಿನ್ನ ಕಾಣುವ ಹಂಬಲದಿಂದ
ನಿನ್ನ ಕನುಸಗಳೆಲ್ಲಾ
ನನ್ನದೇಯ ಅಂತರಂಗದಲ್ಲಿ
ಹುದುಗಿ, ನಿನ್ನ ಭಾವನೆಗಳು
ಕಣ್ಣ ತುಂಬಾ ತುಂಬಿದೆ,
ಬರಡು ಭುಮಿಯಲ್ಲಿ
ಮಳೆಯು ಬಿದ್ದಂತೆ.
ಮಲ್ಲು..

- mallu

07 Jan 2017, 06:40 pm

ಇಬ್ಬನಿ

ಹೂವಿನ ಮೇಲೆ ಕುಳಿತ ಇಬ್ಬನಿ ನಾನು
ಬಿಸಿಲು ಬಂದರೆ ನಾ ಸಾಯುವೆ
ನೀ ಸತ್ತರೆ ಅದೆ ಬಿಸಿಲಿಗೆ ನಾ ಬಾಡುವೆ....

- chinmayi

07 Jan 2017, 04:13 pm

ಚಂದ್ರಮ

ಮಧುಚಂದ್ರಮ ಮಾಲೆ
ನಿನ್ನ ಮೊಗದಲ್ಲಿ ಬೆಳದಿಂಗಳ ಮಾಲೆ,
ನನ್ನ ಕನಸುಗಳ ಹೊತ್ತೊಯ್ಯುವ
ಯೌವನದ ಸಾಲೆ,
ಬಣ್ಣಿಸಲಾಗದ ಪದಗಳ ಸಾಲೆ..
ಮಲ್ಲು...

- mallu

07 Jan 2017, 03:54 pm

ಬಾಲ್ಯ

ಕಳೆದು ಹೋದೆ ನೀನು
ಮರಳಿ ಬಾರೆಯೇನು?
ಇನ್ನೆಲ್ಲಿ ಹುಡುಕಲಿ ನಾನು
ಮತ್ತೆ ಸಿಗಬಾರದೇನು?

ಅಲ್ಲಿ
ನಾವಾಡಿದ ಜೂಟಾಟ
ಪ್ರೀತಿಯ ಮರಕೋತಿ ಆಟ
ಆಗಸಕಾರಿದ ಗಾಳಿಪಟ
ಒಲವಿನ ಆ ನೋಟ
ಕೆಳೆಯರೊಡನೆ ಒಡನಾಟ
ಗುರುಗಳಿಂದ ಕಲಿತ ಪಾಠ

ಅಲ್ಲಿ ಇತ್ತು ನಲ್ಮೆ ನಲಿವು
ಕಾಣಲಿಲ್ಲ ಎಲ್ಲಿಯೂ ನೋವು
ಎಷ್ಟು ಚೆನ್ನ ನಿನ್ನ ಚೆಲುವು
ಅದಕೆಯೇ ನಿನ್ನಲ್ಲಿ ಒಲವು

ಎಷ್ಟು ಸುಂದರ ನೀನು
ನಿನ್ನ ಸವಿ ಹಾಲ್ಜೇನು
ಎನ್ನಲ್ಲಿ ಅಮರ ನೀನು
ನಗುತಿರಲಿ ಭೂಮಿ ಬಾನು

ಕಳೆದು ಹೋದೆ ನೀನು
ಮರಳಿ ಬಾರೆಯೇನು?

- Kumara.C

07 Jan 2017, 02:55 pm

ಇಸ್ಟ ಕಸ್ಟ =ಅನಿಷ್ಠ

ಬದುಕು ಕಟ್ಟಿಕೂಳ್ಳುವುದು
ಎಲ್ಲರಿಗೂ ಇಸ್ಟ,
ಬದುಕಿನ ನಸ್ಟ ತುಂಬಿಕೂಳ್ಳುವುದು
ಸ್ವಲ್ಪ ಕಸ್ಟ,
ಇಸ್ಟಗಳ ನಡುವೆ ಕಸ್ಟಗಳ ತಂದಾಗ
ಬದುಕಾಗುವುದು ಕನಿಷ್ಠ,
ಭಾವನೆಗಳ ಮಟ್ಟ ತಿಳಿಯದಾದರೆ
ಬದುಕುವುದೇ ಕಸ್ಟ,
ಬದುಕುವುದ ಕಲಿಯದಿದ್ದರೆ
ಮಾನವನೇ ಅನಿಷ್ಠ!

- ರಾಜೇಶ್ ಎ.ಎಸ್

07 Jan 2017, 01:25 pm