ನೀ ಎಂದು ಬಂದು
ಸೇರುವೆ ನನ್ನ ಮನಸ್ಸನ್ನ
ನಿನ್ನ ಮಡಿಲಲ್ಲಿ ಮಗುವಂತೆ
ಮಲಗಿಕೊಳ್ಳುವ ಆಸೆ
ನನ್ನ ಹೃದಯಾಂತರದಲಿ ನಿನ್ನ
ಪ್ರೀತಿಯನ್ನು ಉಳಿಸಿಕೊಳ್ಳುವ ಆಸೆ
ನಿನ್ನ ನೆನಪಲ್ಲೆ ನಾ ಸತ್ತರು ಓ ಒಲವೇ
ಬರಬೇಡ ನೀ ನನ್ನ ನೋಡಲು
ಯಾಕೆಂದರೆ.....
ಮತ್ತೆ ಜೀವ ಬರಬಹುದು..
ನಿನ್ನ ನೆರಳು ನನಗೆ ಸೋಕುವ ಮುನ್ನ..
ಬಂದ ಜೀವಕೆ ಮತ್ತೆ ನೋವಾಗಹುದು
ಕಾಡಿಸುತಿದೆ ಒಲವೇ ನಿನ್ನ ನೆನಪು..
ಹೋಗಬಾರದೆ ನನ್ನ ಈ ಜೀವ..
ಬದುಕು ಒಂದು
ಆಸೆ ನೂರು...
ಕೊಟ್ಟು ನೊಡು
ಸೇವೆ ಮಾಡು....
ಆಪೆಕ್ಷೆ ಬೇಡಾ
ಅಸೂಹೆ ಬೇಡಾ...
ಒಂದಾಗಿ ಬದುಕೊಣ
ಒಂದಾಗಿ ಬೆಳೆಸೊಣ
ಈ ಬದುಕು ಅಥ೯ ಪೂಣ೯ವೆಂದೆನಿಸಿಕೊಳ್ಳೊಣಾ...
ರೂಪಾ
(ಬಾವನೆಗೆ ಬರವಣಿಗೆಯ ರೂಪಾ)
ಮೌನದ ದಾರಿಯಲಿ
ಒಂಟಿಯಾಗಿ ನಾನಿರಲು
ಜೊತೆಯಾದಳು ನನ್ನ
ಒಂಟಿತನ ದೂರ ಮಾಡಲು
ಕೈ ಹಿಡಿದು ನಡೆದಳು
ಜೊತೆ ಜೊತೆಯಲಿ ಅವಳು
ಹೀಗೆ ಅನುಕ್ಷಣ
ಪ್ರತಿದಿನ ಸಾಗುತಿರಲು
ನಮ್ಮಿಬ್ಬರಲಿ ಪ್ರೀತಿ
ಮೂಡಿ ನನ್ನುಸಿರಾದಳು
ತಿಳಿಯದೆ ಒಮ್ಮಲೆ ದೂರವಾದಳು
ಉಳಿಯಿತು ನನ್ನ ಜೊತೆ
ಅವಳ ಸವಿ ಸವಿ ನೆನಪುಗಳು
ಅವುಗಳ ಜೊತೆಗೆ
ಜೀವನ ಸಾಗುತಿರಲು
ಕಣ್ಣೀರು ಹನಿಯಾಗಿ
ಕರಗಿತು ನನ್ನ ಕನಸುಗಳು
ಮನದಲ್ಲಿ ಉಳಿದಿತ್ತು
ನೂರಾರು ಭಾವನೆಗಳು.
ಆ ಭಾವನೆಗಳೇ ಇಂದು
ನಾ ಬರೆದ ಕವನಗಳು
ಈ ಕವನದಲಿ ಪ್ರೀತಿಯಾಗಿ
ಉಳಿದಿರುವಳು ಅವಳು
ಅವಳಿಗಾಗಿ ನಾ
ಕಾಯಬಲ್ಲೆ ನೂರು ಜನುಮಗಳು.